ಫೇಸ್ ಬುಕ್ ಒಡೆಯನ ಬೆತ್ತಲೆ ಚಿತ್ರ ಲೀಕ್

Posted By: Varun
ಫೇಸ್ ಬುಕ್ ಒಡೆಯನ ಬೆತ್ತಲೆ ಚಿತ್ರ ಲೀಕ್

19 ನೇ ವಯಸ್ಸಿಗೇ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣವನ್ನ ಶುರು ಮಾಡಿ ವಿಶ್ವದಾದ್ಯಂತ, ಕಿರಿಯರು ದೊಡ್ಡವರೆನ್ನದೆ ಯಾವುದೇ ವಯಸ್ಸಿನ ಮಿತಿಯಿಲ್ಲದೆ ಬಳಸಲ್ಪಡುವ ಹಾಗೆ ಮಾಡಿ ಬಿಲಿಯಾಧಿಪತಿಯಾಗಿರುವ ಮಾರ್ಕ್ ಜುಕರ್ ಬರ್ಗ್ ನ ಅರೆ ಬೆತ್ತಲೆ ಫೋಟೋ ಒಂದು ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.

ಫಿಲಂ ಸ್ಟಾರ್ ಗಳು, ಕ್ರೀಡಾಪಟುಗಳು, ಸೋಷಿಯಲೈಟ್ ಗಳು ಎಲ್ಲಿ ಸುತ್ತುತ್ತಾರೆ, ಯಾರ ಜೊತೆ ಸುತ್ತುತ್ತಾರೆ,ಏನೇನು ಮಾಡುತ್ತಾರೆ ಎಂಬ ಕುತೂಹಲ ಸಾಮಾನ್ಯವಾಗಿ ಜನರಿಗೆ ಇರೋದ್ರಿಂದ ಇಂಟರ್ನೆಟ್ ನಲ್ಲಿ ಯಾವುದಾದರೂ ಸುದ್ದಿ ಇಲ್ಲವೆ ಫೋಟೋ, ವೀಡಿಯೋಗಳು ತೇಲಾಡುತ್ತವೆ.

ಈಗ ಮಾರ್ಕ್ ಜುಕರ್ ಬರ್ಗ್ ತನ್ನ ಕಂಪನಿಯ ಪ್ರಾಡಕ್ಟ್ ಮ್ಯಾನೇಜರ್ ಜಸ್ಟಿನ್ ಶಾಫರ್ ನ ಮದುವೆಯ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದಾಗ ಈ ಚಿತ್ರವನ್ನು ತೆಗೆಯಲಾಗಿದ್ದು, ಫೋಟೋ ತೆಗೆದ ಹಲವು ಕ್ಷಣಗಳಲ್ಲೇ ವೈರಲ್ ಆಗಿ ಹರಿದಾಡಿದ ಅದು ಈಗ ಸುದ್ದಿ ಮಾಡುತ್ತಿದೆ.

ಜುಕರ್ ಬರ್ಗ್ ಇದರ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿಲ್ಲವಾದರೂ ಫೇಸ್ ಬುಕ್ ಪ್ರೈವೆಸಿ ಸೆಟ್ಟಿಂಗ್ಸ್ಉಪಯೋಗಿಸದೆ ಅಪ್ಲೋಡ್ ಮಾಡಿದ್ದೆ ಇದಕ್ಕೆ ಕಾರಣ ಅಂತಾ ಜನ ಆಡಿಕೊಳ್ಳುವಂತಾಗಿದೆ.

Please Wait while comments are loading...
Opinion Poll

Social Counting