Subscribe to Gizbot

'ಓಕೆ ಗೂಗಲ್' ಎಕ್ಸ್ಪರ್ಟ್ ಆಗಬೇಕೇ?? ಇಲ್ಲಿದೆ ಟಿಪ್ಸ್

By: Tejaswini P G

ಗೂಗಲ್ ಅಸಿಸ್ಟೆಂಟ್ , ವಾಯ್ಸ್ ಕಮಾಂಡ್ ಆಧಾರಿತ ಫೀಚರ್ನಿಂದ ನೀವು ಮೊಬೈಲ್ ಬಳಸುವ ರೀತಿಯನ್ನೇ ಬದಲಾಯಿಸಬಹುದು.ಒಂದೊಮ್ಮೆ ಗೂಗಲ್ ಪಿಕ್ಸೆಲ್ಗಷ್ಟೇ ಸೀಮಿತವಾಗಿದ್ದ ಗೂಗಲ್ ಅಸಿಸ್ಟೆಂಟ್ ಈಗ ಎಲ್ಲಾ ಆಂಡ್ರಾಯ್ಡ್ ಸಾಧನಗಳಿಗೂ ಲಭ್ಯವಿದೆ.

'ಓಕೆ ಗೂಗಲ್' ಎಕ್ಸ್ಪರ್ಟ್ ಆಗಬೇಕೇ?? ಇಲ್ಲಿದೆ ಟಿಪ್ಸ್

ಈಗ ಆಂಡ್ರಾಯ್ಡ್ ಮತ್ತು iOS ಎರಡರಲ್ಲೂ ಲಭ್ಯವಿರುವ "ಗೂಗಲ್ ನೌ" ಆಪ್ ಮೂಲಕ ಈ AI ವಾಯ್ಸ್ ಕಮಾಂಡ್ ಕೆಲಸ ಮಾಡುತ್ತದೆ.ಗೂಗಲ್ ಅಸಿಸ್ಟೆಂಟ್ ಸ್ಮಾರ್ಟ್ಫೋನ್ಗಳ ಜೊತೆಗೆ ಪ್ರಿ-ಇನ್ಸ್ಟಾಲ್ ಆಗಿ ಬರುತ್ತಿದ್ದು, ಇದುವೇ ಅದರ ಜನಪ್ರಿಯತೆಗೆ ಸಾಕ್ಷಿ.

ಗೂಗಲ್ ಅಸಿಸ್ಟೆಂಟ್ನಿಂದ ನಿಮ್ಮ ಸ್ಮಾರ್ಟ್ಫೋನ್ ಅನ್ನು ನಿಮ್ಮ ದೈನಂದಿನ ಅಗತ್ಯಗಳಿಗೆ ಸರಳವಾಗಿ ಬಳಸಬಹುದು. ಈ 'ಓಕೆ ಗೂಗಲ್' ಕಮಾಂಡ್ಗಳು ನಿಮಗೆ ಗೊತ್ತಿದ್ದರೆ ನೀವು ಮೊಬೈಲ್ ಬಳಕೆಯಲ್ಲಿ ಎಕ್ಸ್ಪರ್ಟ್ ಎನಿಸುವುದರಲ್ಲಿ ಸಂಶಯವಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೋ ಮಿ ಮೈ ಫೋಟೋಸ್ ಆಫ್

ಶೋ ಮಿ ಮೈ ಫೋಟೋಸ್ ಆಫ್

ಗೂಗಲ್ ಫೋಟೋಸ್ ನಿಮ್ಮ ಫೋಟೋಗಳಲ್ಲಿರುವ ಜನರನ್ನು, ಸ್ಥಳ, ವಸ್ತು ಇತ್ಯಾದಿಗಳನ್ನು ಸೂಕ್ಷ್ಮವಾಗಿ ನೋಡುವ ಇಂಟಲಿಜೆನ್ಸ್ ಹೊಂದಿದೆ.ಉದಾಹರಣೆಗೆ, ನೀವು ನಿಮ್ಮ ಬರ್ತ್ ಡೇ ಫೋಟೋಗಳನ್ನು ನೋಡಬಯಸಿದರೆ,ಕೆಲವೇ ಕ್ಷಣಗಳಲ್ಲಿ ಅದು ನಿಮ್ಮ ಫೋಟೋಗಳನ್ನೆಲ್ಲಾ ಹುಡುಕಾಡಿ ನಿಮಗೆ ಬೇಕಾದ ಫೋಟೊಗಳನ್ನು ನಿಮ್ಮ ಮುಂದಿರಿಸುತ್ತದೆ. ಇದಕ್ಕೆ ನೀವು ಹೇಳಬೇಕಾದ ಕಮಾಂಡ್ ಇಷ್ಟೇ "ಓಕೆ ಗೂಗಲ್, ಶೋ ಮಿ ಮೈ ಫೋಟೋಸ್ ಆಫ್....".

ರಿಮೈಂಡರ್ ಸೆಟ್ ಮಾಡಿ

ರಿಮೈಂಡರ್ ಸೆಟ್ ಮಾಡಿ

ಅಂಗಡಿಯಿಂದ ಹಾಲು ಖರೀದಿಸಲು ರಿಮೈಂಡರ್ ಬೇಕೇ? ಬಳಗ್ಗೆ ಆಫೀಸ್ಗೆ ಬೇಗ ಹೋಗಲು ಅಲಾರ್ಮ್ ಸೆಟ್ ಮಾಡಬೇಕೇ? ಹಾಗಾದರೆ ಗೂಗಲ್ ಅಸಿಸ್ಟೆಂಟ್ ನಿಮಗಾಗಿ 'ರಿಮೈಂಡರ್/ಅಲಾರ್ಮ್'ಗಳನ್ನು ಸೆಟ್ ಮಾಡಬಲ್ಲದು. ಗೂಗಲ್ ಅಸಿಸ್ಟೆಂಟ್ಗೆ 'ಆಡ್ ಎ ರಿಮೈಂಡರ್' ಎಂದು ಹೇಳಿ ನಿಮ್ಮ ಅಗತ್ಯಕ್ಕೆ ತಕ್ಕಂತೆ 'ರಿಮೈಂಡರ್/ಅಲಾರ್ಮ್'ಗಳನ್ನು ಸೆಟ್ ಮಾಡಿ!!

ಫ್ಲೈಟ್ ಚೆಕ್ ಮಾಡಿ

ಫ್ಲೈಟ್ ಚೆಕ್ ಮಾಡಿ

ನಿಮಗೆ ನಿಮ್ಮ ಮುಂದಿನ ಪ್ರಯಾಣ, ಬುಕಿಂಗ್ ಗಳ ಬಗ್ಗೆ ಮಾಹಿತಿ ಬೇಕೇ? ಗೂಗಲ್ ಅಸಿಸ್ಟೆಂಟ್ ನಿಮ್ಮ ಜಿ-ಮೈಲ್ ಇನ್ಬಾಕ್ಸ್ನಲ್ಲಿ ನಿಮ್ಮ ಫ್ಲೈಟ್ ರಿಸರ್ವೇಶನ್,ಹೋಟೇಲ್ ಬುಕಿಂಗ್ ಇತ್ಯಾದಿ ಮಾಹಿತಿಯನ್ನು ಹುಡುಕಿ ನಿಮಗೆ ಅಗತ್ಯ ಮಾಹಿತಿಯನ್ನು ನೀಡುತ್ತದೆ!!

ಹಾಡು ಕೇಳಿ

ಹಾಡು ಕೇಳಿ

'ಓಕೆ ಗೂಗಲ್, ಪ್ಲೇ [ಇಷ್ಟವಾದ ಹಾಡು]' ಇಷ್ಟು ಹೇಳಿದರೆ ಸಾಕು, ಗೂಗಲ್ ಅಸಿಸ್ಟೆಂಟ್ ನೀವು ಕೇಳಿದ ಹಾಡನ್ನು ನಿಮಗಾಗಿ ಪ್ಲೇ ಮಾಡುತ್ತದೆ. ಅಷ್ಟೇ ಅಲ್ಲ, ಕೇವಲ ವಾಯ್ಸ್ ಕಮಾಂಡ್ಗಳಿಂದ ಹಾಡಿನ ಪ್ಲೇಬ್ಯಾಕ್ ಮತ್ತು ವಾಲ್ಯೂಮ್ ಅನ್ನೂ ಕಂಟ್ರೋಲ್ ಮಾಡಬಹುದು.

ಕನ್ನಡದಲ್ಲಿ ಟೈಪ್‌ ಮಾಡಲು ಇದಕ್ಕಿಂತ ಆಪ್‌ ಬೇರೊಂದಿಲ್ಲ!!

ನಗೆಹನಿಗಳು

ನಗೆಹನಿಗಳು

ಜೋಕ್ ಕೇಳುವ ಮನಸಾಗಿದೆಯೇ? 'ಓಕೆ ಗೂಗಲ್, ಟೆಲ್ ಮಿ ಅ ಜೋಕ್' ಎಂದರೆ ಸಾಕು.. ಗೂಗಲ್ ಅಸಿಸ್ಟೆಂಟ್ ನಿಮಗಾಗಿ ಒಳ್ಳೆಯ ನಗೆ ಚಟಾಕಿಗಳನ್ನು ಹೇಳುತ್ತದೆ!!ಗೂಗಲ್ ಅಸಿಸ್ಟೆಂಟ್ ನ ಫನ್ ಈಸ್ಟರ್ ಎಗ್ಸ್ ಅನ್ನು ಕೂಡ ನೀವು ಎಕ್ಸ್ಪ್ಲೋರ್ ಮಾಡಬಹುದು.

ನ್ಯೂಸ್

ನ್ಯೂಸ್

ನಿಮ್ಮ ಬ್ಯುಸಿ ದಿನದ ಮಧ್ಯೆ ದಿನ ಪತ್ರಿಕೆ ಓದುವಷ್ಟು ಸಮಯ ನಿಮಗೆ ಸಿಗಲಿಕ್ಕಿಲ್ಲ..ಹೀಗಿರುವಾಗ 'ಓಕೆ ಗೂಗಲ್, ಟೆಲ್ ಮಿ ದಿ ನ್ಯೂಸ್' ಎಂದರೆ ಸಾಕು, ಜಗತ್ತಿನ ಎಲ್ಲಾ ಆಗು ಹೋಗುಗಳನ್ನು ನಿಮ್ಮ ಮುಂದಿರಿಸುತ್ತದೆ ಗೂಗಲ್ ಅಸಿಸ್ಟೆಂಟ್!ನಿಮ್ಮ ಆಯ್ಕೆಯ ಫೇವರೆಟ್ ನ್ಯೂಸ್ ವಿಭಾಗಗಳನ್ನು ಸೆಟ್ ಮಾಡುವ ಸೌಲಭ್ಯವೂ ಇಲ್ಲಿದೆ.

ಭಾಷಾಂತರ

ಭಾಷಾಂತರ

ನಿಮ್ಮ ದೈನಂದಿನ ಕೆಲಸಗಳಲ್ಲಿ ಅದೆಷ್ಟೋ ಬಾರಿ ಪದಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವ ಅಗತ್ಯ ಬರಬಹುದು.ಆಗ ನೀವು ಮಾಡಬೇಕಾದದ್ದುಇಷ್ಟೇ.. 'ಓಕೆ ಗೂಗಲ್, ಟ್ರ್ಯಾನ್ಸ್ಲೇಟ್' ಎಂದರೆ ಸಾಕು. ನಿಮಗೆ ಬೇಕಾದ ಪದ ಅಥವ ವಾಕ್ಯಗಳನ್ನು ಯಾವುದೇ ಭಾಷೆಗಾದರೂ ಅನುವಾದಿಸಿ.ಇದರೊಂದಿಗೆ ನಿಮ್ಮ ಜ್ಞಾನವೂ ಹೆಚ್ಚುತ್ತದೆ.

ಶಬ್ದಾರ್ಥಗಳು

ಶಬ್ದಾರ್ಥಗಳು

ಕೆಲವೊಂದು ಪದಗಳ ಅರ್ಥ ಗೊತ್ತಿಲ್ಲವೆ? ಅದನ್ನು ತಿಳಿಯುವ ಬಯಕೆಯೆ? 'ಓಕೆ ಗೂಗಲ್, ವಾಟ್ ಡಸ್ [...] ಮೀನ್?' ಎಂದರೆ ಸಾಕು..ಗೂಗಲ್ ಅಸಿಸ್ಟೆಂಟ್ ನಿಮಗೆ ನೀಡುತ್ತದೆ ಅದರ ಅರ್ಥ, ಅದನ್ನು ಉಚ್ಛರಿಸುವ ಬಗೆಯೊಂದಿಗೆ!!

ಶೇರ್ ಮಾರುಕಟ್ಟೆ

ಶೇರ್ ಮಾರುಕಟ್ಟೆ

'ಓಕೆ ಗೂಗಲ್,ವಾಟ್ ಇಸ್ ದಿ ಸ್ಟಾಕ್ ಪ್ರೈಸ್ ಆಫ್ [..]?' ಎನ್ನುವ ವಾಯ್ಸ್ ಕಮಾಂಡ್ನೊಂದಿಗೆ ನೀವು ತಿಳಿಯಬಹುದು ಶೇರು ಮಾರುಕಟ್ಟೆಯ ಎಲ್ಲಾ ವಿದ್ಯಾಮಾನಗಳನ್ನು.ಈ ಎಲ್ಲಾ ಮಾಹಿತಿಯೊಂದಿಗೆ ಗೂಗಲ್ ಅಸಿಸ್ಟೆಂಟ್ ನಿಮಗೆ ಶೇರು ಮಾರುಕಟ್ಟೆಯ ಸ್ಥಿತಿಗತಿಗಳನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ.

ಗೇಮ್ಸ್

ಗೇಮ್ಸ್

ತುಂಬಾ ಬೋರ್ ಆಗುತ್ತಿದೆಯೇ. ಹೇಗೆ ಸಮಯ ಕಳೆಯುವುದೆಂದು ತಿಳಿಯುತ್ತಿಲ್ಲವೆ? 'ಓಕೆ ಗೂಗಲ್, ಲೆಟ್ಸ್ ಪ್ಲೇ ಅ ಗೇಮ್' ಎನ್ನಿ. ಗೂಗಲ್ ಅಸಿಸ್ಟೆಂಟ್ ನಿಮಗೆ ನೀಡುತ್ತದೆ ನಿಮ್ಮ ಮನರಂಜಿಸುವ ಸರಳ ಗೇಮ್ಗಳನ್ನು..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
As Google Assistant is available on all the Android devices now, we have compiled a list of commands to help you in your day to day life.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot