ಮೀಡಿಯಾಟೆಕ್‌ನಿಂದ ಹೊಸ ಪ್ರೊಸೆಸರ್‌ ಬಿಡುಗಡೆ! ದಕ್ಷತೆ ಹೇಗಿದೆ ಗೊತ್ತಾ?

|

ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ಪ್ರೊಸೆಸರ್‌ ಸಾಮರ್ಥ್ಯವನ್ನು ಎಲ್ಲರೂ ಗಮನಿಸುತ್ತಾರೆ. ಸ್ಮಾರ್ಟ್‌ಫೋನ್‌ಗಳ ಕಾರ್ಯದಕ್ಷತೆ ಗುರುತಿಸುವಲ್ಲಿ ಪ್ರೊಸೆಸರ್‌ಗಳ ಸಾಮರ್ಥ್ಯ ಬಹುಮುಖ್ಯವಾಗುತ್ತದೆ. ಇದೇ ಕಾರಣಕ್ಕೆ ಟೆಕ್‌ ವಲಯದಲ್ಲಿ ಹಲವು ಕಂಪೆನಿಗಳು ವಿಭಿನ್ನ ಮಾದರಿಯ ಪ್ರೊಸೆಸರ್‌ಗಳನ್ನು ಲಾಂಚ್‌ ಮಾಡಿವೆ. ಇದರಲ್ಲಿ ಮೀಡಿಯಾಟೆಕ್‌ ಕಂಪೆನಿ ಅತ್ಯುತ್ತಮ ಪ್ರೊಸೆಸರ್‌ಗಳಿಗೆ ಪ್ರಸಿದ್ಧಿ ಪಡೆದುಕೊಂಡಿದೆ. ಸದ್ಯ ಇದೀಗ ಹೊಸದಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಚಿಪ್‌ಸೆಟ್ ಅನ್ನು ಪರಿಚಯಿಸಿದೆ.

ಮೀಡಿಯಾಟೆಕ್‌

ಹೌದು, ಮೀಡಿಯಾಟೆಕ್‌ ಕಂಪೆನಿ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್‌ ಲಾಂಚ್‌ ಮಾಡಿದೆ. ಈ ಪ್ರೊಸೆಸರ್‌ 5G ಸಂಪರ್ಕವನ್ನು ಬೆಂಬಲಿಸಲಿದೆ. ಅಲ್ಲದೆ ಇದು ಮುಂಬರುವ ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ನಲ್ಲಿರುವ ಸಾಧ್ಯತೆಯಿದೆ. ಇನ್ನು ಈ ಪ್ರೊಸೆಸರ್‌ ಅನ್ನು TSMC ಯ 6nm ಪ್ರಕ್ರಿಯೆಯನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಇದು ನಾಲ್ಕು ಆರ್ಮ್ ಕಾರ್ಟೆಕ್ಸ್-A78 ಪ್ರೊಸೆಸರ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೀಡಿಯಾ

ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್ 3GHz ವರೆಗೆ ಕಾರ್ಯನಿರ್ವಹಿಸುವ 'ಅಲ್ಟ್ರಾ-ಕೋರ್', 2GHz ವರೆಗಿನ ಆಪರೇಟಿಂಗ್ ಫ್ರಿಕ್ವೆನ್ಸಿಯೊಂದಿಗೆ ಆರ್ಮ್ ಕಾರ್ಟೆಕ್ಸ್-A55 ಪ್ರೊಸೆಸರ್‌ ಹೊಂದಿದೆ. ಇದರಲ್ಲಿ ನಾಲ್ಕು ದಕ್ಷತೆಯ ಕೋರ್‌ಗಳು ಮತ್ತು 9-ಕೋರ್ ಆರ್ಮ್ ಮಾಲಿ GPUಯನ್ನು ಒಳಗೊಂಡಿದೆ. ನೀವು ಈ ಪ್ರೊಸೆಸರ್‌ ಅನ್ನು 16GB ವರೆಗೆ 4266Mbps LPDDR4x RAM ಮತ್ತು UFS 3.1 ಪ್ರಕಾರದ ಸ್ಟೋರೇಜ್‌ನೊಂದಿಗೆ ಜೋಡಿಸಬಹುದು.

ಮೀಡಿಯಾಟೆಕ್‌

ಈ ಪ್ರೊಸೆಸರ್‌ ಮೀಡಿಯಾಟೆಕ್‌ ಹೈಪರ್‌ ಇಂಜಿನ್‌ 5.0 ನಿಂದ ಬೆಂಬಲಿತವಾಗಿದೆ. ಇನ್ನು ಗೇಮಿಂಗ್-ಸಂಬಂಧಿತ ಆಪ್ಟಿಮೈಸೇಶನ್‌ಗಳಂತಹ ವಿಶೇಷವಾದ AI-VRS, Wi-Fi ಮತ್ತು ಬ್ಲೂಟೂತ್ ಹೈಬ್ರಿಡ್ 2.0, ಜೊತೆಗೆ ಬ್ಲೂಟೂತ್‌ LE Audio ಟೆಕ್ನಾಲಜಿ ಹೊಂದಿದೆ. ಇನ್ನು ಕ್ಯಾಮೆರಾ ಕಾರ್ಯಕ್ಷಮತೆಗೆ ಬರುವುದಾದರೆ, ಡೈಮೆನ್ಸಿಟಿ 1300 3-ಎಕ್ಸ್‌ಪೋಸರ್ ಫ್ಯೂಷನ್, AI-ಪಾನೋ ನೈಟ್ ಶಾಟ್, AI ಮಲ್ಟಿ-ಪರ್ಸನ್ ಬೊಕೆ ವಿಡಿಯೋ ಮತ್ತು ಮಲ್ಟಿ-ಡೆಪ್ತ್ ಸ್ಮಾರ್ಟ್ ಫೋಕಸ್ ವೀಡಿಯೊ ಜೊತೆಗೆ 4K HDR ವೀಡಿಯೊಗೆ ಬೆಂಬಲವನ್ನು ನೀಡುತ್ತದೆ. ಈ ಪ್ರೊಸೆಸರ್‌ 200MP ಕ್ಯಾಮೆರಾಗೆ ಬೆಂಬಲಿಸುವ ಸಾಮರ್ಥ್ಯವನ್ನು ಪಡೆದಿದೆ.

ಪ್ರೊಸೆಸರ್‌

ಇದಲ್ಲದೆ ಡೈಮೆನ್ಸಿಟಿ 1300 ಪ್ರೊಸೆಸರ್‌ ಸೂಪರ್-ಫಾಸ್ಟ್ ರಿಫ್ರೆಶ್ ರೇಟ್‌ಗೆ ಬೆಂಬಲವನ್ನು ನೀಡುತ್ತದೆ. ಅಲ್ಲದೆ ವೆಬ್‌ಪೇಜ್‌ಗಳ ಸುಗಮ ಸ್ಕ್ರೋಲಿಂಗ್, ಸೊಶೀಯಲ್‌ ಮೀಡಿಯಾ ಸ್ಟ್ರೀಮ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿನ ಅನಿಮೇಷನ್‌ಗಳಲ್ಲಿ ಸುಧಾರಿತ ಅನುಭವಗಳನ್ನು ನೀಡುತ್ತದೆ. ಜೊತೆಗೆ 2520×1080 ಪಿಕ್ಸೆಲ್‌ ರೆಸಲ್ಯೂಶನ್ ಮತ್ತು 168Hz ನ ಗರಿಷ್ಠ ರಿಫ್ರೆಶ್ ರೇಟ್‌ ಹೊಂದಿರುವ ಡಿಸ್‌ಪ್ಲೇ ಬೆಂಬಲಿಸಲಿದೆ. ಇನ್ನು ಹೊಸದಾಗಿ ಬಿಡುಗಡೆಯಾದ ಚಿಪ್‌ಸೆಟ್ ಡೈನಾಮಿಕ್, ಪರ್-ಫ್ರೇಮ್ PQ ಟ್ಯೂನಿಂಗ್, AI ದೃಶ್ಯ ಪತ್ತೆ ಮತ್ತು ಕಾಂಟ್ರಾಸ್ಟ್ ಕಂಟ್ರೋಲ್, ವರ್ಧಿತ HDR10+ ವೀಡಿಯೋ ಪ್ಲೇಬ್ಯಾಕ್ ಮತ್ತು ಹಾರ್ಡ್‌ವೇರ್-ಆಕ್ಸಿಲರೇಟೆಡ್ AV1 ಡಿಕೋಡಿಂಗ್ ಜೊತೆಗೆ AI SDR-to-HDR ಅನ್ನು ನೀಡಲಿದೆ.

ಮೀಡಿಯಾಟೆಕ್‌

ಮೀಡಿಯಾಟೆಕ್‌ ಡೈಮೆನ್ಸಿಟಿ 1300 ಪ್ರೊಸೆಸರ್‌ ಇಂಟರ್‌ಬಿಲ್ಟ್‌ 5G ಮೋಡೆಮ್‌ನೊಂದಿಗೆ ಬರಲಿದೆ. ಜೊತೆಗೆ ಇದು 5G ಎಲಿವೇಟರ್ ಮೋಡ್ ಮತ್ತು 5G HSR ಮೋಡ್ ಅನ್ನು ಸಹ ಹೊಂದಿದೆ. ಅಲ್ಲದೆ ಇದು ತಕ್ಷಣದ ಚೇತರಿಕೆಯ ಸಮಯ ಮತ್ತು ವಿಶ್ವಾಸಾರ್ಹ ವೇಗದ ವೇಗದೊಂದಿಗೆ ತಡೆರಹಿತ 5G ಅನುಭವಗಳನ್ನು ಖಚಿತಪಡಿಸುತ್ತದೆ. ಈ ಪ್ರೊಸೆಸರ್‌ ಡ್ಯುಯಲ್ VoNR ಕಾರ್ಯವನ್ನು ಸಹ ನೀಡುತ್ತದೆ ಎಂದು ಮೀಡಿಯಾಟೆಕ್‌ ಸ್ಪಷ್ಟಪಡಿಸಿದೆ. ಇದು ಟ್ರೂಲಿ ಡ್ಯುಯಲ್ 5G ಸಿಮ್ ಸಾಮರ್ಥ್ಯವನ್ನು ಬೆಂಬಲಿಸುತ್ತದೆ ಎಂದು ಮೀಡಿಯಾಟೆಕ್‌ ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
MediaTek has quietly added another chipset to its Dimensity 1000 series of system-on-chip.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X