ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಬರಲಿದ್ದಾಳೆ ಗೂಗಲ್‌ನ 'ಮೀನಾ'!

|

ಸದ್ಯ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಸಿರಿ, ಗೂಗಲ್ ಅಸಿಸ್ಟಂಟ್, ಅಲೆಕ್ಸಾ, ವಾಯಿಸ್‌ ಅಸಿಸ್ಟಂಟ್ ಸೇವೆಗಳು ಟ್ರೆಂಡಿಂಗ್‌ನಲ್ಲಿವೆ. ಈ ವಾಯಿಸ್‌ ಅಸಿಸ್ಟಂಟ್ ಸೌಲಭ್ಯಗಳಲ್ಲಿ ಬಳಕೆದಾರರು ಹವಾಮಾನ ಮಾಹಿತಿ ತಿಳಿಯಬಹುದು, ನ್ಯೂಸ್ ಕೇಳಬಹುದು, ಇಷ್ಟ ಮ್ಯೂಸಿಕ್ ಪೇ ಮಾಡು ಅಂದರೇ ಪೇ ಆಗುತ್ತದೆ. ಆದರೆ ಗೂಗಲ್ ಈಗ ಹೊಸದೊಂದು ಹೆಜ್ಜೆ ಇಟ್ಟಿದ್ದು, ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿದೆ.

ಟೆಕ್ ದೈತ್ಯ ಗೂಗಲ್

ಹೌದು, ಟೆಕ್ ದೈತ್ಯ ಗೂಗಲ್ ಸಂಸ್ಥೆಯು ಮಾನವ ಸ್ನೇಹಿ ಸಂಭಾಷಣೆಗಾಗಿ 'ಮೀನಾ' ಹೆಸರಿನ ಚಾಟ್ ಆಪ್ ಅಭಿವೃದ್ಧಿ ಪಡೆಸಿದೆ. ಮೀನಾ ಆಪ್ ಪೂರ್ವ ತರಬೇತಿ ಪಡೆದ ಮಲ್ಟಿ-ಟರ್ನ್ ಚಾಟ್‌ಬೋಟ್ ಆಗಿದ್ದು, ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುವಂತೆ ಗೂಗಲ್ ಸಂಶೋಧಕರ ತಂಡ ಈ ಅಪ್ಲಿಕೇಶನ್ ಅನ್ನು ರೂಪಿಸಿಲಾಗಿದೆ ಎಂದು ಗೂಗಲ್ ರೀಸರ್ಚ್‌ನ ಸೀನಿಯರ್ ಇಂಜನಿಯರ್ ಡೇನಿಯಲ್ ಆದಿವರ್ದನ ಹೇಳಿದ್ದಾರೆ. ಮೀನಾ ಚಾಟ್ ಅಪ್ ಬಗ್ಗೆ ಇನ್ನಷ್ಟು ಕುತೂಹಲಕಾರಿ ಮಾಹಿತಿ ಬಗ್ಗೆ ತಿಳಿಯಲು ಮುಂದೆ ಓದಿರಿ.

ಯಾರಿದು ಮೀನಾ?

ಯಾರಿದು ಮೀನಾ?

ಮೀನಾ ಎನ್ನುವುದು ಗೂಗಲ್ ಅಭಿವೃದ್ಧಿ ಪಡೆಸಿರುವ ಹೊಸ ಚಾಟ್ ಆಪ್ ಆಗಿದೆ. ಮಹಿಳೆಯ ಹೆಸರಿನಿಂದ ಕರೆಯಲ್ಪಟ್ಟಿರುವ ಈ ಆಪ್ ಬಳಕೆದಾರರ ಪ್ರಶ್ನೆಗಳಿಗೆ ಆಟೋಮ್ಯಾಟಿಕ್ ಆಗಿ ಉತ್ತರಿಸುತ್ತದೆ. AI-ಕೃತಕ ತಂತ್ರಜ್ಞಾನ ಆಧಾರಿತವಾಗಿ ಕಾರ್ಯನಿರ್ವಹಿಸುವ ಈ ಆಪ್ ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ತಕ್ಷಣಕ್ಕೆ ಉತ್ತರಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

40 ಬಿಲಿಯನ್ ಶಬ್ದಗಳ ಸಂಗ್ರಹ

40 ಬಿಲಿಯನ್ ಶಬ್ದಗಳ ಸಂಗ್ರಹ

ಮೀನಾ ಆಪ್ 2.6 ಬಿಲಿಯನ್ ಪ್ಯಾರಾಮೀಟರ್ ಹೊಂದಿದ್ದು, ಇತರೆ ಸಂಸ್ಥೆಗಳ ಚಾಟ್‌ಬೋಟ್‌ ಆಪ್‌ಗಳಿಗೆ ಹೋಲಿಸಿದರೆ ತ್ವರಿತವಾಗಿ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಆಪ್‌ನಲ್ಲಿ ಸುಮಾರು 40 ಬಿಲಿಯನ್ ಶಬ್ದಗಳ ಸಂಗ್ರಹ ಮಾಡಲಾಗಿದೆ ಹಾಗೂ 341GB ಸಾಮರ್ಥ್ಯದ ಸಂಗ್ರಹದಷ್ಟು ಅಗತ್ಯ ಟೆಕ್ಟ್ಸ್‌ ಮಾಹಿತಿಯನ್ನು ಇನ್‌ಬಿಲ್ಟ್‌ ಶೇಖರಿಸಲಾಗಿದೆ.

ಮೀನಾ ಆಪ್ ಲಭ್ಯತೆ

ಮೀನಾ ಆಪ್ ಲಭ್ಯತೆ

ಗೂಗಲ್‌ ಸಂಸ್ಥೆಯ ಹೊಸ ಮೀನಾ ಚಾಟ್‌ಬೋಟ್ ಆಪ್‌ ಇನ್ನು ಓಪೆನ್ ಸೋರ್ಸ್‌ನಲ್ಲಿ ಲಭ್ಯವಿಲ್ಲ. ಆದರೆ ಅತೀ ಶೀಘ್ರದಲ್ಲೇ ಮೀನಾ ಅಪ್ಲಿಕೇಶನ್ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಇತರೆ ಚಾಟ್‌ಬೋಟ್‌ ಆಪ್‌ಗಳು

ಇತರೆ ಚಾಟ್‌ಬೋಟ್‌ ಆಪ್‌ಗಳು

ಗೂಗಲ್‌ನ AI ಆಧಾರಿತ ಮೀನಾ ಚಾಟ್‌ಬೋಟ್‌ನಂತೆ ಇತರೆ ಸಂಸ್ಥೆಗಳು ಚಾಟ್ ಆಪ್ ಹೊಂದಿವೆ. ಅವುಗಳಲ್ಲಿ ಮುಖ್ಯವಾಗಿ ಮೈಕ್ರೋಸಾಫ್ಟ್‌ ಸಂಸ್ಥೆಯು XiaoIce ಹೆಸರಿನ ಚಾಟ್‌ಬೋಟ್ ಆಪ್ ಹೊಂದಿದ್ದು, 30 ಬಿಲಿಯನ್ ಸಂಭಾಷಣೆಗಳನ್ನು ಪಡೆದಿದೆ. ಈ ಆಪ್‌ಗೆ ಚೀನಾ, ಜಪಾನ, ಭಾರತ, ಇಂಡೊನೆಷ್ಯಾ ಮತ್ತು ಯುಎಸ್‌ ಸೇರಿದಂತೆ ಒಟ್ಟು 200 ಮಿಲಿಯನ್ ಬಳಕೆದಾರರು ಇದ್ದಾರೆ ಎಂದು 2018ರಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಮೈಕ್ರೋಸಾಫ್ಟ್ ತಿಳಿಸದೆ.

Best Mobiles in India

English summary
The team trained the chatbot with around 40 billion words and 341GB of text data which also includes social media conversations. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X