ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Meizu 6T ಸ್ಮಾರ್ಟ್ ಫೋನ್

|

ಬೇಡಿಕೆಗಳಿಗೆ ಅನುಗುಣವಾಗಿ ಮಾರುಕಟ್ಟೆಗೆ ಲಗ್ಗೆ ಇಡುವ ಸ್ಮಾರ್ಟ್ ಫೋನ್ ಗಳ ಪಟ್ಟಿಗೆ ಮತ್ತೊಂದು ಫೋನ್ ಇಂದು ಸೇರ್ಪಡೆಗೊಂಡಿದೆ. ಎಸ್ ಹೌದು. ಚೀನಾ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಫೋನ್ Meizu 6T ಬಿಡುಗಡೆಗೊಂಡಿದೆ. ಕಪ್ಪು, ಕೆಂಪು ಮತ್ತು ಗೋಲ್ಡ್ ಮೂರು ಕಲರ್ ಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. ಇದು ತೆಳುವಾದ ಅಂಚಿನ ಡಿಸ್ಪ್ಲೇ ಹೊಂದಿದ್ದು, ಡುಯಲ್ ಕ್ಯಾಮರಾ ಸೆಟ್ ಅಪ್ ಇದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ Meizu 6T ಸ್ಮಾರ್ಟ್ ಫೋನ್

ಚೀನಾ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ?

3ಜಿಬಿ RAM ಮತ್ತು 32 ಜಿಬಿ ಆನ್ ಬೋರ್ಡ್ ಸ್ಟೋರೇಜ್ ಕೆಪಾಸಿಟಿ ಇರುವ ಮೊಬೈಲಿಗೆ 799CNY( ಹೆಚ್ಚು ಕಡಿಮೆ 8500 ರುಪಾಯಿ) ಇದೆ. ಇನ್ನು 4ಜಿಬಿ RAM ಮತ್ತು 32 ಜಿಬಿ ಆನ್ ಬೋರ್ಡ್ ಸ್ಟೋರೇಜ್ ಕೆಪಾಸಿಟಿ ಇರುವ ಮೊಬೈಲಿಗೆ 999CNY( ಹೆಚ್ಚು ಕಡಿಮೆ 10,600 ರುಪಾಯಿ) ಬೆಲೆ ಇದೆ. ಮತ್ತು 4ಜಿಬಿ RAM ಮತ್ತು 32 ಜಿಬಿ ಆನ್ ಬೋರ್ಡ್ ಸ್ಟೋರೇಜ್ ಕೆಪಾಸಿಟಿ ಇರುವ ಮೊಬೈಲಿಗೆ ಇಂಟರ್ನಲ್ ಸ್ಟೋರೇಜ್ ಇರುವ ಫೋನಿನ ಬೆಲೆಯು CNY1,099( ಹೆಚ್ಚು ಕಡಿಮೆ 11,600 ರುಪಾಯಿ) ಯಾಗಿದೆ. ಜೂನ್ 1 ನೇ ತಾರೀಕಿನಿಂದ ಇದರ ಸೇವ್ ಚೀನಾದಾದ್ಯಂತ ಆರಂಭವಾಗಲಿದೆ. ಇತರೆ ಮಾರುಕಟ್ಟೆಗಳಲ್ಲಿ ಯಾವ ವೇರಿಯಂಟ್ ನ ಫೋನ್ ಗಳನ್ನು ಬಿಡುಗಡೆಗೊಳಿಸಲಾಗುತ್ತೆ ಮತ್ತು ಅದರ ಬೆಲೆ ಎಷ್ಟಿರುತ್ತೆ ಎಂಬ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Meizu 6T ವೈಶಿಷ್ಟ್ಯಗಳ ಹೀಗಿವೆ..

ಎರಡು ನ್ಯಾನೋ ಸಿಮ್ ಗಳನ್ನು ಹಾಕಬಹುದು. Android 7.0 Nougat ಜೊತೆಗೆ Flyme OS 6.2 ನಲ್ಲಿ ಮೊಬೈಲ್ ರನ್ ಆಗುತ್ತೆ. 5.7-ಇಂಚಿನ ಹೆಚ್.ಡಿ + (720x1440 ಪಿಕ್ಸಲ್) ಡಿಸ್ಪ್ಲೇ ಇದ್ದು18:9 ಅನುಪಾತದ ಮತ್ತು 450 nits ಪ್ರತಿಭೆಯನ್ನೊಳಗೊಂಡಿದೆ.octa-core MediaTek MT6750 ಸಾಕೆಟ್, Mali T860 GPUನೊಂದಿಗೆ ಸೇರಿಕೊಂಡಿದೆ ಮತ್ತು ಅಪ್ ಟು 4ಜಿಬಿ RAM ಸ್ಪೀಡ್ ಇದೆ..

ಡುಯಲ್ ಹಿಂಭಾಗದ ಕ್ಯಾಮರಾವು 13-ಮೆಗಾಪಿಕ್ಸಲ್ ಪ್ರೈಮರಿ ಸೋನಿ IMX278 RGB ಸೆನ್ಸರ್ ನ ಜೊತೆಗೆ f/2.2 ದ್ಯುತಿರಂದ್ರ ಮತ್ತು 2-ಮೆಗಾಪಿಕ್ಸಲ್ ಸೆಕೆಂಡರಿ ಸೆನ್ಸರ್ ನ ಜೊತೆಗೆ f/2.0 ದ್ಯುತಿರಂದ್ರವನ್ನು ಒಳಗೊಂಡಿದೆ. ಮುಂಭಾಗದಲ್ಲಿ , 8-ಮೆಗಾಪಿಕ್ಸಲ್ ಕ್ಯಾಮರಾ ಸೆನ್ಸರ್ ಜೊತೆಗೆ f/2.0 ದ್ಯುತಿರಂದ್ರವಿದೆ.. Face AE ಟೆಕ್ನಾಲಜಿ ಮತ್ತು ArcSoft Beauty algorithm ವೈಶಿಷ್ಟ್ಯವನ್ನು ಫೋನ್ ಒಳಗೊಂಡಿದೆ.

Meizu ವಿನಲ್ಲಿ 32ಜಿಬಿ ಮತ್ತು 64ಜಿಬಿ ಆನ್ಬೋರ್ಡ್ ಸ್ಟೋರೇಜ್ ಅವಕಾಶವನ್ನು ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಹಿಗ್ಗಿಸಿಕೊಳ್ಳಬಹುದಾಗಿದ್ದು 128 ಜಿಬಿವರೆಗೆ ಅವಕಾಶವಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 4G VoLTE, ವೈಫೈ 802.11 a/b/g/n, ಬ್ಲೂಟೂತ್ v4.1, GPS/ A-GPS, ಮತ್ತು ಮೈಕ್ರೋ-ಯುಎಸ್ ಬಿ ಹಾಕಲು ಅವಕಾಶವಿದೆ. ಆಂಬಿಯಂಟ್ ಲೈಟ್ ಸೆನ್ಸರ್, ಡಿಜಿಟಲ್ ಕಂಪಾಸ್, ಗ್ರಾವಿಟಿ ಸೆನ್ಸರ್, ಮತ್ತು ಗೈರೋಸ್ಕೋಪ್ ಗಳು ಇನ್ ಬಿಲ್ಡ್ ಆಗಿವೆ.. ಹಿಂಭಾಗದಲ್ಲಿ mTouch ಬೆರಳಚ್ಚು ತಂತ್ರಜ್ಞಾನವಿದೆ. ಇದರಲ್ಲಿ 3300mAh ಬ್ಯಾಟರಿ ಇದ್ದು ಒಟ್ಟು ಸ್ಮಾರ್ಟ್ ಫೋನ್ ನ ತೂಕ ಮತ್ತು ಅಳತೆ ಕ್ರಮವಾಗಿ 145 ಗ್ರಾಂ ಮತ್ತು 152.3x73x8.4ಎಂಎಂ ಆಗಿದೆ.

ವಿಂಡೋಸ್ ನಲ್ಲಿ ಬೇಕಿಲ್ಲದ ಫೈಲ್ ಗಳನ್ನು ಡಿಲೀಡ್ ಮಾಡುವುದು ಹೇಗೆ..?ವಿಂಡೋಸ್ ನಲ್ಲಿ ಬೇಕಿಲ್ಲದ ಫೈಲ್ ಗಳನ್ನು ಡಿಲೀಡ್ ಮಾಡುವುದು ಹೇಗೆ..?

Best Mobiles in India

Read more about:
English summary
Meizu 6T with a dual camera setup launched for Rs 8,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X