ಮಾನಸಿಕ ಆರೋಗ್ಯ ಮತ್ತು ಪ್ರಾರ್ಥನೆ ಅಪ್ಲಿಕೇಶನ್‌ ಬಳಸುವ ಮುನ್ನ ಎಚ್ಚರ!

|

ಮಾನಸಿಕ ಆರೋಗ್ಯ ಹಾಗೂ ಪ್ರಾರ್ಥನೆಗೆ ಸಂಬಂಧಿಸಿದ ಅಪ್ಲಿಕೇಶನ್‌ ಬಳಸುವವರು ಈ ಸ್ಟೋರಿಯನ್ನು ಓದಲೇಬೇಕು. ಪ್ಲೇ ಸ್ಟೋರ್‌ನಲ್ಲಿ ಸಿಕ್ಕ ಸಿಕ್ಕ ಹೆಲ್ತ್‌ ಸಂಬಂಧಿತ ಹಾಗೂ ಪ್ರೇಯರ್‌ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವ ಬಳಕೆದಾರರು ಇವುಗಳ ಬಗ್ಗೆ ಎಚ್ಚರವಹಸಿಬೇಕಾದ ಸುದ್ದಿಯೊಂದು ಹೊರಬಿದ್ದಿದೆ. ಅಂದರೆ ಮಾನಸಿಕ ಆರೋಗ್ಯ ಮತ್ತು ಪ್ರಾರ್ಥನೆ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗಿವೆ ಎಂದು ವರದಿಯಾಗಿದೆ.

ಅಪ್ಲಿಕೇಶನ್‌ಗಳು

ಹೌದು, ಮಾನಸಿಕ ಆರೋಗ್ಯ ಸಂಬಂಧಿತ ಅಪ್ಲಿಕೇಶನ್‌ಗಳು ಮತ್ತು ಪ್ರಾರ್ಥನೆಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರ ಡೇಟಾ ಸುರಕ್ಷತೆಯನ್ನು ಕಾಪಾಡುತ್ತಿಲ್ಲ ಎನ್ನಲಾಗಿದೆ. ಈ ಅಪ್ಲಿಕೇಶನ್‌ ಬಳಸುವವರ ಡೇಟಾ ಬೇರೆಯವರ ಪಾಲಿಗೆ ಸುಲಭವಾಗಿ ದೊರೆಯಲಿದೆ ಎಂದು ಮೊಜಿಲ್ಲಾದ ಸಂಶೋಧಕರು ವರದಿಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಅಪ್ಲಿಕೇಶನ್‌ಗಳ ಮೇಲೆ ಸಂಶೋಧನೆ ಮಾಡಿದ ನಂತರ ಈ ಶಾಕಿಂಗ್‌ ವರದಿ ಬಹಿರಂಗವಾಗಿದೆ. ಹಾಗಾದ್ರೆ ಆ ವರದಿಯಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಂಶೋಧಕರು

ಮೊಜಿಲ್ಲಾ ಸಂಶೋಧಕರು ಹೇಳುವಂತೆ ಟಾಕ್‌ಸ್ಪೇಸ್, ​​ಬೆಟರ್ ಹೆಲ್ತ್ ಮತ್ತು ಕಾಮ್ ಸೇರಿದಂತೆ 32 ಜನಪ್ರಿಯ ಮಾನಸಿಕ ಆರೋಗ್ಯ ಮತ್ತು ಪ್ರಾರ್ಥನೆ ಅಪ್ಲಿಕೇಶನ್‌ಗಳ ಮೇಲೆ ಅಧ್ಯಯನ ಮಾಡಲಾಗಿದೆ. ಈ ಅಪ್ಲಿಕೇಶನ್‌ ಬಳಸುತ್ತಿರುವ 29 ಬಳಕೆದಾರರ ಗೌಪ್ಯತೆ ಮತ್ತು ಡೇಟಾ ನಿರ್ವಹಣೆಯ ಬಗ್ಗೆ ಅಧ್ಯಯನ ನಡೆಸಿದ್ದು, ಇವರುಗಳ ಡೇಟಾ ಸುರಕ್ಷತೆಯನ್ನು ಕಾಪಾಡುವಲ್ಲಿ ಈ ಅಪ್ಲಿಕೇಶನ್‌ಗಳು ವಿಫಲವಾಗಿವೆ ಎನ್ನಲಾಗಿದೆ. ಅದರಲ್ಲೂ ಸ್ಟ್ರಾಂಗ್‌ ಪಾಸ್‌ವರ್ಡ್‌ಗಳು ಮತ್ತು ಸೆಕ್ಯುರಿಟಿ ಅಪ್ಡೇಟ್‌ ಅನ್ನು ನೀಡುವಲ್ಲಿ 25 ಅಪ್ಲಿಕೇಶನ್‌ಗಳು ವಿಫಲವಾಗಿವೆ ಎನ್ನಲಾಗಿದೆ.

ಅಪ್ಲಿಕೇಶನ್‌

ಮೊಜಿಲ್ಲಾ ಸೂಕ್ತ ಗೌಪ್ಯತೆ ಮತ್ತು ಸೆಕ್ಯುರಿಟಿ ಟ್ರಯಲ್ಸ್‌ ಅನುಸರಿಸದ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡುತ್ತದೆ. ಇದರಲ್ಲಿರುವ ಸಂಶೋಧಕರು 255 ಗಂಟೆಗಳ ಕಾಲ ಅಧ್ಯಯನ ನಡೆಸಿದ್ದು ಮಾನಸಿಕ ಆರೋಗ್ಯ ಮತ್ತು ಪ್ರಾರ್ಥನಾ ಅಪ್ಲಿಕೇಶನ್‌ಗಳಲ್ಲಿರುವ ದೋಷಗಳನ್ನು ಪತ್ತೆಹಚ್ಚಿದ್ದಾರೆ. ಮಾನಸಿಕ ಆರೋಗ್ಯಕ್ಕಾಗಿ ಬಳಸುವ ಅಪ್ಲಿಕೇಶನ್‌ಗಳು ನಿಮಗೆ ಮಾನಸಿಕ ನೆಮ್ಮದಿ ನೀಡುವುದಕ್ಕಿಂತ ಹೆಚ್ಚಾಗಿ ನಿಮ್ಮ ವೈಯುಕ್ತಿಕ ಡೇಟಾವನ್ನು ಕಳುವು ಮಾಡುವುದಕ್ಕೆ ಅವಕಾಶ ನೀಡುತ್ತಿವೆ.

ಸಂಶೋಧಕರು

ಮೊಜಿಲ್ಲಾದ ಸಂಶೋಧಕರು ಕೆಲವು ಅತ್ಯಂತ ಸೂಕ್ಷ್ಮ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗಲೂ, ಹೆಚ್ಚಿನ ಮಾನಸಿಕ ಆರೋಗ್ಯ ಮತ್ತು ಪ್ರಾರ್ಥನೆ ಅಪ್ಲಿಕೇಶನ್‌ಗಳು ದುರ್ಬಲ ಪಾಸ್‌ವರ್ಡ್‌ಗಳನ್ನು ಅನುಮತಿಸುತ್ತವೆ ಎಂದು ವರದಿ ಮಾಡಿದ್ದಾರೆ.ದುರ್ಬಲ ಪಾಸ್‌ವರ್ಡ್‌ಗಳು ಬಳಕೆದಾರ ಡೇಟಾವನ್ನು ಸುರಕ್ಷಿತವಾಗಿಡುವುದಿಲ್ಲ. ಇನ್ನು ಸಂಶೋಧಕರು ಬಳಕೆದಾರರನ್ನು ಚಿಕಿತ್ಸಕರೊಂದಿಗೆ ಸಂಪರ್ಕಿಸುವ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಮಾನಸಿಕ ಆರೋಗ್ಯ ಅಪ್ಲಿಕೇಶನ್‌ಗಳು ಡೇಟಾ-ಹೀರುವ ಯಂತ್ರಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗಿದೆ.

ಇದಲ್ಲದೆ

ಇದಲ್ಲದೆ ಸಂಶೋಧಕರು ಪರಿಶೀಲಿಸಿದ ಎಲ್ಲಾ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರ ಡೇಟಾವನ್ನು ಕಸಿದುಕೊಳ್ಳುತ್ತಿವೆ ಎಂದು ಸಂಶೋಧಕರು ಗಮನಿಸಿದ್ದಾರೆ. ಇವುಗಳಲ್ಲಿ ಕೆಲವು ಥರ್ಡ್-ಪಾರ್ಟಿ ಪ್ಲಾಟ್‌ಫಾರ್ಮ್‌ಗಳಿಂದ ಡೇಟಾ ಕದಿಯುತ್ತಿವೆ. ಅದರಲ್ಲೂ ಬಳಕೆದಾರರ ಫೋನ್‌ಗಳು ಅಥವಾ ಡೇಟಾ ಬ್ರೋಕರ್‌ಗಳಿಂದ ಹೆಚ್ಚುವರಿ ಡೇಟಾವನ್ನು ಕದಿಯುತ್ತಿರುವ ಕಂಡು ಬಂದಿದೆ.ಇ ಮಾದರಿಯ ಅಪ್ಲಿಕೇಶನ್‌ಗಳಿಂದ ಡೇಟಾ ಬ್ರೋಕರ್‌ಗಳು ಡೇಟಾ ಕದ್ದು ಮಾರಾಟಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಈ ಅಪ್ಲಿಕೇಶನ್‌ಗಳಲ್ಲಿ ಕನಿಷ್ಠ ಎಂಟು ಸುರಕ್ಷತಾ ಅಭ್ಯಾಸಗಳ ಕೊರತೆಯನ್ನು ಕಂಡುಹಿಡಿಯಲಾಗಿದೆ. ಅದರಲ್ಲೂ ಕೇವಲ "1" ರಿಂದ ಶುರುವಾಗ "11111111" ಮಾದರಿಯ ದುರ್ಬಲ ಪಾಸ್‌ವರ್ಡ್‌ಗಳನ್ನು ಕೂಡ ಇದು ಅನುಮತಿಸಲಿದೆ.

Best Mobiles in India

Read more about:
English summary
Mental health and prayer apps have failed at maintaining privacy and data security

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X