ಹೊಸ VR ಹೆಡ್‌ಸೆಟ್ ಡೆಮೋ ವೀಡಿಯೋ ಶೇರ್‌ ಮಾಡಿದ ಮಾರ್ಕ್‌ ಜುಕರ್‌ ಬರ್ಗ್‌!

|

ಮೆಟಾವರ್ಸ್‌ ಜಗತ್ತಿನ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ವಾಸ್ತವ ಜಗತ್ತಿನಲ್ಲಿ ವರ್ಚುವಲ್‌ ಜಗತ್ತಿನ ಅನುಭವ ಹೇಗಿರಲಿದೆ ಎನ್ನುವ ಕುತೂಹಲ ಕೂಡ ಎಲ್ಲರನ್ನು ಸೆಳೆಯುತ್ತಿದೆ. ಇದರ ನಡುವೆ ಮೆಟಾವರ್ಸ್‌ಗಾಗಿ ಹಲವು ಯೋಜನೆಗಳನ್ನು ತರುವುದಾಗೆ ಮೆಟಾ ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದರು. ಇದೀಗ ಮಾರ್ಕ್‌ಜುಕರ್‌ ಬರ್ಗ್‌ ಮೆಟಾವರ್ಸ್‌ಗಾಗಿ ಹೊಸ ಹೆಡ್‌ಸೆಟ್‌ ಪರಿಚಯಿಸಲು ಮುಂದಾಗಿದ್ದಾರೆ. ಈ ಹೆಡ್‌ಸೆಟ್‌ ಹೇಗಿರಲಿದೆ ಎನ್ನುವ ಡೆಮೋ ವೀಡಿಯೋವನ್ನು ಶೇರ್‌ ಮಾಡಿದ್ದಾರೆ.

ಮಾರ್ಕ್‌ ಜುಕರ್‌ ಬರ್ಗ್‌

ಹೌದು, ಮಾರ್ಕ್‌ ಜುಕರ್‌ ಬರ್ಗ್‌ "ಪ್ರಾಜೆಕ್ಟ್ ಕ್ಯಾಂಬ್ರಿಯಾ" ಎಂಬ ಕೋಡ್ ನೇಮ್ ಇರುವ ಹೆಡ್‌ಸೆಟ್‌ ಬಗ್ಗೆ ಶಾರ್ಟ್‌ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹೆಡ್‌ಸೆಟ್‌ ಉನ್ನತ-ಮಟ್ಟದ VR ಹೆಡ್‌ಸೆಟ್ ಆಗಿದ್ದು, ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ಕಿರಿ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ಫೇಸ್‌ಬುಕ್ ವೀಡಿಯೊ "ದಿ ವರ್ಲ್ಡ್ ಬಿಯಾಂಡ್" ಎಂಬ ಡೆಮೊವನ್ನು ಒಳಗೊಂಡಿದೆ. ಹೆಡ್‌ಸೆಟ್ ಫುಲ್‌-ಕಲರ್‌ ಪಾಸ್‌ಥ್ರೂ ಕ್ಯಾಮೆರಾಗಳ ಸಹಾಯದಿಂದ ಹೇಗೆ ಮರ್ಜ್‌ ರಿಯಾಲಿಟಿ ಅನುಭವವನ್ನು ನೀಡುತ್ತದೆ ಅನ್ನೊದನ್ನು ಕಾಣಬಹುದಾಗಿದೆ. ಇನ್ನುಳಿದಂತೆ ಈ ವೀಡಿಯೋದಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವರ್ಚುವಲ್‌

ವರ್ಚುವಲ್‌ ಜಗತ್ತಿನ ಅನುಭವವನ್ನು ನೀಡುವ ಹೊಸ ಹೆಡ್‌ಸೆಟ್‌ ಬಗ್ಗೆ ಮೆಟಾ ಸಂಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌ ಡೆಮೋ ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಈ ಹೆಡ್‌ಸೆಟ್‌ ರಿಯಲ್‌ ಮತ್ತು ವರ್ಚುವಲ್ ಪ್ರಪಂಚಗಳನ್ನು ವಿಲೀನಗೊಳಿಸಲು ಸಹಾಯ ಮಾಡುತ್ತದೆ. ಇನ್ನು ಈ ಹೆಡ್‌ಸೆಟ್ ಕಂಪನಿಯ ಪ್ರೆಸೆನ್ಸ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತದೆ. ಆದರೆ, ಹೆಡ್ ಸೆಟ್ ಅನ್ನು ಜಾಣತನದಿಂದ ಮರೆಮಾಚುವ ಮೂಲಕ ಇದೆಲ್ಲವನ್ನೂ ಮಾಡಲಾಗುತ್ತದೆ. ಇನ್ನು ಪ್ರಾಜೆಕ್ಟ್ ಕ್ಯಾಂಬ್ರಿಯಾ ಟೀಸರ್ ವೀಡಿಯೊವು ಹೆಡ್‌ಸೆಟ್ ಹೇಗಿರುತ್ತದೆ ಎಂಬುದರ ಬಗ್ಗೆ ಬೆಳಕನ್ನು ಚೆಲ್ಲಿದೆ. ಇದು "ಉನ್ನತ-ಮಟ್ಟದ ವಿಆರ್ ಅನುಭವ" ಆಗಿರುತ್ತದೆ, ಆದ್ದರಿಂದ, ಇದರ ಬೆಲೆಯು ಕೂಡ ಉನ್ನತ ಮಟ್ಟದಲ್ಲಿರಲಿದೆ.

ಮಾರ್ಕ್‌ ಜುಕರ್‌ಬರ್ಗ್

ಇನ್ನು ಈ ಡೆಮೊ ವೀಡಿಯೋವನ್ನು ಮಾರ್ಕ್‌ ಜುಕರ್‌ಬರ್ಗ್ ಶೇರ್‌ ಮಾಡಿದ್ದಾರೆ. ಇದರಲ್ಲಿ ಸ್ವತಃ ತಾವೇ ಹೆಡ್‌ಸೆಟ್‌ ಅನ್ನು ಧರಿಸಿ ವರ್ಚುವಲ್‌ ಜಗತ್ತಿನ ಕಾರ್ಟೂನ್ ಪಾತ್ರದೊಂದಿಗೆ ಸಂವಹನ ನಡೆಸುವುದನ್ನು ಇದರಲ್ಲಿ ಕಾಣಬಹುದು. ವಾಸ್ತವ ಪ್ರಪಂಚದೊಂದಿಗೆ ವರ್ಚುವಲ್ ಪ್ರಪಂಚವನ್ನು ಹೇಗೆ ಅತಿಕ್ರಮಿಸಬಹುದು ಅನ್ನೊದನ್ನ ಇದರಲ್ಲಿ ನೋಡಬಹುದಾಗಿದೆ. ಈ ಹೆಡ್‌ಸೆಟ್ ಕೇವಲ ಗೇಮಿಂಗ್‌ಗಾಗಿ ಅಲ್ಲ, ವರ್ಚುವಲ್‌ ಜಗತ್ತಿನಲ್ಲಿ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡುವುದಕ್ಕೆ ಇದನ್ನು ಬಳಸಬಹುದು.

ಮೆಟಾ

ಮೆಟಾ ಕಂಪೆನಿ ಆಕ್ಯುಲಸ್ ಕ್ವೆಸ್ಟ್ 2 ಗೆ ಹೋಲಿಸಿದರೆ "ಪ್ರಾಜೆಕ್ಟ್ ಕ್ಯಾಂಬ್ರಿಯಾ" ಹೆಡ್‌ಸೆಟ್ ಹೆಚ್ಚು ಸುಧಾರಿತ ತಂತ್ರಜ್ಞಾನಗಳೊಂದಿಗೆ ಬರುತ್ತದೆ. ಹೆಡ್‌ಸೆಟ್‌ನ ಪಾಸ್‌ಥ್ರೂ ಕ್ಯಾಮೆರಾಗಳು ಕಪ್ಪು ಮತ್ತು ಬಿಳಿ ಕಲರ್‌ ಛಾಯೆಗಳನ್ನು ಮಾತ್ರ ತೋರಿಸುತ್ತವೆ. ಈ ಹೆಡ್‌ಸೆಟ್‌ನ "ಫೋಟೋರಿಯಾಲಿಸ್ಟಿಕ್" ಅಲ್ಲದಿದ್ದರೂ, ಇದು ಯೋಗ್ಯ ಗುಣಮಟ್ಟ ಮತ್ತು ಕಡಿಮೆ ಜರ್ರಿಂಗ್ ಎಂದು ಹೇಳಲಾಗುತ್ತದೆ. ಅಲ್ಲದೆ ಪ್ರೆಸೆನ್ಸ್ ಪ್ಲಾಟ್‌ಫಾರ್ಮ್‌ನ ಪ್ರಿವ್ಯೂ ವೀಡಿಯೊ ಕೂಡ ಇದೆ, ಇದು ಕ್ವೆಸ್ಟ್ 2 ಹೆಡ್‌ಸೆಟ್ ನಡುವಿನ ವ್ಯತ್ಯಾಸವನ್ನು ನೋಡಬಹುದು. ಇನ್ನು ಪ್ರೆಸೆನ್ಸ್ ಪ್ಲಾಟ್‌ಫಾರ್ಮ್‌ನ ಅನುಭವ ಮುಂಬರುವ ಹೆಡ್‌ಸೆಟ್‌ಗೆ ಸೀಮಿತವಾಗಿರುವುದಿಲ್ಲ. ಇದನ್ನು ಇನ್ನು ಹೆಚ್ಚಿನ ಡೆವಲಪರ್‌ಗಳು ಪ್ರಯತ್ನಿಸವುದಕ್ಕೆ ಅವಕಾಶ ನೀಡಲು ಮೆಟಾ ಕಂಪೆನಿ ಶೀಘ್ರದಲ್ಲೇ ಅಪ್ಲಿಕೇಶನ್ ಲ್ಯಾಬ್‌ನಲ್ಲಿ ಬಿಡುಗಡೆ ಮಾಡಲು ಪ್ಲಾನ್‌ ಮಾಡಿದೆ.

Best Mobiles in India

English summary
Meta CEO Mark Zuckerberg Tests upcoming VR Headset

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X