ಮೆಟಾ ಸಂಸ್ಥೆಯಿಂದ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಹೊಸ ಅಪ್ಡೇಟ್‌ ಪ್ರಕಟ!

|

ಮೆಟಾ ಕಂಪೆನಿ ಫೇಸ್‌ಬುಕ್‌ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಈ ಹೊಸ ಅಪ್ಡೇಟ್‌ನಲ್ಲಿ ಆಡಿಯೊ ಫೀಚರ್ಸ್‌, ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌ ಮತ್ತು ಇತರ ಫೀಚರ್ಸ್‌ಗಳಿಗಾಗಿ ಸ್ಪ್ಲಿಟ್ ಪಾವತಿ ಪೇಮೆಂಟ್‌ ಫೀಚರ್ಸ್‌ ಅನ್ನು ಮೆಟಾ ಕಂಪೆನಿ ಘೋಷಣೆ ಮಾಡಿದೆ. ಸದ್ಯ ಮೆಟಾ ಕಂಪೆನಿ ಘೋಷಣೆ ಮಾಡಿರುವ ಕೆಲವು ಫೀಚರ್ಸ್‌ಗಳು ಆರಂಭಿಕ ಹಂತದಲ್ಲಿ US ಪ್ರೇಕ್ಷಕರಿಗೆ ಲಭ್ಯವಿರುತ್ತವೆ ಎನ್ನಲಾಗಿದೆ.

ಅಪ್ಲಿಕೇಶನ್‌

ಹೌದು, ಮೆಸೆಂಜರ್‌ ಅಪ್ಲಿಕೇಶನ್‌ ಹೊಸ ಅಪ್ಡೇಟ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳು ಮೆಸೆಂಜರ್‌ ಪ್ಲಾಟ್‌ಫಾರ್ಮ್‌ ಸೇರಲಿವೆ. ಇನ್ನು ಮೆಟಾ ತನ್ನ ಹೊಸ ಫೀಚರ್ಸ್‌ಗಳ ಬಗ್ಗೆ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದೆ. ಅಲ್ಲದೆ ಐಒಎಸ್‌ ಅಥವಾ ಆಂಡ್ರಾಯ್ಡ್‌ ಫೋನ್ ಬಳಸುವ ಪ್ರತಿಯೊಬ್ಬರಿಗೂ ಮೆಸೆಂಜರ್‌ನಲ್ಲಿ ಸ್ಪ್ಲಿಟ್ ಪೇಮೆಂಟ್ಸ್‌ಅನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದೆ. ಹಾಗಾದ್ರೆ ಮೆಸೆಂಜರ್‌ ಸೇರಿದ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಪ್ಲಿಟ್ ಪೇಮೆಂಟ್ಸ್ ಫೀಚರ್ಸ್‌

ಸ್ಪ್ಲಿಟ್ ಪೇಮೆಂಟ್ಸ್ ಫೀಚರ್ಸ್‌

ಸ್ಪ್ಲಿಟ್ ಪೇಮೆಂಟ್ಸ್ ಫೀಚರ್ ಹೆಸರೇ ಸೂಚಿಸುವಂತೆ ನಿಮ್ಮ ಬಿಲ್‌ ಅನ್ನು ವಿಭಜಿಸುವುದಕ್ಕೆ ಇದು ಸಹಕಾರಿಯಾಗಲಿದೆ. ಈ ಫೀಚರ್ಸ್‌ ಮೂಲಕ ನೀವು ಪ್ರತಿಯೊಬ್ಬ ವ್ಯಕ್ತಿಯು ನೀಡಬೇಕಾದ ಮೊತ್ತವನ್ನು ಕಸ್ಟಮೈಸ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಇನ್ನು ಈ ಫೀಚರ್ಸ್‌ ಅನ್ನು ಬಳಸುವುದಕ್ಕೆ ಬಳಕೆದಾರರು ಗ್ರೂಪ್‌ ಚಾಟ್‌ನಲ್ಲಿ + ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಅಲ್ಲದೆ ಪೇಮೆಂಟ್ಸ್‌ ಟ್ಯಾಬ್ ಅನ್ನು ಆಯ್ಕೆ ಮಾಡುವ ಮೂಲಕ ಸ್ಟಾರ್ಟ್‌ ಬಟನ್ ಅನ್ನು ಟ್ಯಾಪ್ ಮಾಡಬಹುದು. ಇಲ್ಲಿ ನೀವು ಪಾವತಿ ವಿವರಗಳನ್ನು ದೃಢೀಕರಿಸಬಹುದು ಮತ್ತು ರಿಕ್ವೆಸ್ಟ್‌ ಕಳುಹಿಸಬಹುದು.

ವಾಯ್ಸ್ ಮೆಸೇಜ್ ಫೀಚರ್

ವಾಯ್ಸ್ ಮೆಸೇಜ್ ಫೀಚರ್

ಇನ್ನು ಫೇಸ್‌ಬುಕ್ ಮೆಸೆಂಜರ್ ಶೀಘ್ರದಲ್ಲೇ ಬಳಕೆದಾರರಿಗೆ ವಾಯ್ಸ್‌ ಮೆಸೇಜ್‌ ಕಳುಹಿಸುವುದಕ್ಕೆ ಅವಕಾಶ ನೀಡಲಿದೆ. ಮೆಸೇಜ್‌ ಅನ್ನು ಕಳುಹಿಸುವ ಮೊದಲು ವಾಯ್ಸ್‌ ಮೆಸೇಜ್‌ ಪಾಸ್‌ಗೊಳಿಸುವ, ಪ್ರಿವ್ಯೂ ಮಾಡುವ, ಡಿಲೀಟ್‌ ಅಥವಾ ರೆಕಾರ್ಡ್ ಮಾಡುವುದನ್ನು ಮುಂದುವರಿಸುವುದಕ್ಕೆ ಕೂಡ ಅವಕಾಶ ನೀಡಲು ಮುಂದಾಗಿದೆ. ಇದಲ್ಲದೆ ಮೆಸೆಂಜರ್ ವಾಯ್ಸ್‌ ಮೆಸೇಜ್‌ನ ಅವಧಿಯನ್ನು ಒಂದು ನಿಮಿಷದಿಂದ 30 ನಿಮಿಷಗಳಿಗೆ ಹೆಚ್ಚಿಸಿದೆ. ಅಂದರೆ ನೀವು ಒಂದು ಹಾಡನ್ನು ವಾಯ್ಸ್‌ ಮೆಸೇಜ್‌ನಲ್ಲಿ ರೆಕಾರ್ಡ್ ಮಾಡಬಹುದು.

ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌

ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌

ಮೆಸೆಂಜರ್ ಕೂಡ ವಾಟ್ಸಾಪ್‌ ಮಾದರಿಯ ವಾಯ್ಸ್‌ ನೋಟ್‌ಗಳನ್ನು ಪಡದುಕೊಳ್ಳಲಿದೆ. ಇವುಗಳನ್ನು ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌ ನಲ್ಲಿ ಬಳಸಬಹುದು. ಅಂದರೆ ಈ ಸಂದೇಶಗಳು ವ್ಯಾನಿಶ್‌ ಮೋಡ್‌ನಲ್ಲಿ ನೋಡಿದ ತಕ್ಷಣ ಕಣ್ಮರೆಯಾಗುವಂತೆ ಮಾಡಲಾಗಿದೆ. ಇದರಿಂದ ಬಳಕೆದಾರರು ಕಣ್ಮರೆಯಾಗುತ್ತಿರುವ ಮೇಮ್‌ಗಳು, GIF ಗಳು, ಸ್ಟಿಕ್ಕರ್‌ಗಳು ಅಥವಾ ಪ್ರತಿಕ್ರಿಯೆಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇನ್ನು ಮೆಸೆಂಜರ್‌ನಲ್ಲಿ ವ್ಯಾನಿಶ್ ಮೋಡ್ ಅನ್ನು ಆನ್ ಮಾಡಲು, ಚಾಟ್ ಥ್ರೆಡ್ ಅನ್ನು ತೆರೆಯಬೇಕಾಗುತ್ತದೆ. ಇದರಲ್ಲಿ ಮೇಲಕ್ಕೆ ಸ್ವೈಪ್ ಮಾಡುವ ಮೂಲಕ ವ್ಯಾನಿಶ್‌ ಮೋಡ್‌ ಅನ್ನು ಬಳಸಬಹುದು.

ಫೇಸ್‌ಬುಕ್

ಇದಲ್ಲದೆ ಫೇಸ್‌ಬುಕ್ ಇತ್ತೀಚಿಗಷ್ಟೆ ಹೊಸದಾಗಿ ಸ್ಕ್ರೀನ್‌ಶಾಟ್ ನೋಟಿಫಿಕೇಶನ್ ಆಯ್ಕೆಯನ್ನು ಪರಿಚಯಿಸಿದೆ. ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಚಾಟ್‌ಗಳಲ್ಲಿ ಕಣ್ಮರೆಯಾಗುವ ಮೆಸೆಜ್‌ಗಳ ಸ್ಕ್ರೀನ್‌ಶಾಟ್ ಅನ್ನು ಯಾರಾದರೂ ತೆಗೆದುಕೊಂಡಾಗ ನಿಮಗೆ ತಿಳಿಸುತ್ತದೆ. ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳ ಆಯ್ಕೆ ಡೀಫಾಲ್ಟ್ ಆಗಿದೆ. ಈಗ ಬಳಕೆದಾರರು ಭದ್ರತೆ ಮತ್ತು ಗೌಪ್ಯತೆಯೊಂದಿಗೆ ಮೋಜಿನ ಸಂಭಾಷಣೆಗಳನ್ನು ಹೊಂದಲು ಈಗ GIF ಗಳು ಮತ್ತು ಸ್ಟಿಕ್ಕರ್‌ಗಳನ್ನು ಒಳಗೊಂಡಿರುತ್ತದೆ. ಇದು ಫೇಸ್‌ಬುಕ್ ಪೋಸ್ಟ್‌ಗಳು ಮತ್ತು ಇನ್‌ಸ್ಟಾಗ್ರಾಮ್ ಮೆಸೆಜ್‌ಗಳಲ್ಲಿಯೂ ಲಭ್ಯವಿದೆ. ಎನ್‌ಕ್ರಿಪ್ಶನ್ ಚಾಟ್‌ಗಳಲ್ಲಿ ಮೆಸೆಜ್‌ ಅನ್ನು ದೀರ್ಘವಾಗಿ ಒತ್ತಿ ಅಥವಾ ಪ್ರತ್ಯುತ್ತರಿಸಲು ಸ್ವೈಪ್ ಮಾಡುವ ಮೂಲಕ ನೇರವಾಗಿ ಪ್ರತಿಕ್ರಿಯೆ ನೀಡಬಹುದಾಗಿದೆ. ಇದು ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಮ್‌ ಡಿಎಮ್‌ (DM) ಗಳಲ್ಲಿ ಲಭ್ಯವಿರುವ ಮತ್ತೊಂದು ಫೀಚರ್‌ ಆಗಿದೆ.

Best Mobiles in India

English summary
Meta has rolled out interesting updates for the Facebook Messenger app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X