ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಬಳಸಲು ಹದಿಹರೆಯದವರಿಗೆ 'ಭದ್ರತೆ' ನೀಡಿದ ಮೆಟಾ!

|

ಸಾಮಾನ್ಯವಾಗಿ ಹದಿಹರೆಯದವರೂ ಹೆಚ್ಚಿಗೆ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿರುವುದು ಸಾಮಾನ್ಯ ಸಂಗತಿ. ಸ್ಮಾರ್ಟ್‌ಫೋನ್‌ ಇದ್ದಮೇಲೆ ಅದರಲ್ಲಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಅವರು ಬಳಸದೆ ಇರಲು ಸಾಧ್ಯವಿಲ್ಲ. ಆದರೆ, ಹದಿಹರೆಯದವರ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡೂ ಪ್ಲಾಟ್‌ಫಾರ್ಮ್‌ನಲ್ಲಿ ಎಷ್ಟೇ ಗೌಪ್ಯತೆ ನೀತಿಗಳಿದ್ದರೂ ಈ ಹಿಂದೆ ಕೆಲವು ಅಹಿತಕರ ಘಟನೆಗಳು ಜರುಗುತ್ತಿದ್ದವು. ಆದರೆ, ಇದಕ್ಕೆ ಇನ್ಮುಂದೆ ಮೆಟಾ ಅವಕಾಶ ನೀಡದಿರಲು ಮುಂದಾಗಿದೆ.

ಫೇಸ್‌ಬುಕ್‌

ಹೌದು, ಕಂಪೆನಿಯ ಪ್ರಕಾರ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ಫೇಸ್‌ಬುಕ್‌ ಅಕೌಂಟ್‌ ತೆರೆದಾಗ ಆಟೋಮ್ಯಾಟಿಕ್‌ ಆಗಿ ಹಲವಾರು ಗೌಪ್ಯತಾ ಸೆಟ್ಟಿಂಗ್‌ಗಳು ಅವರಿಗೆ ಲಭ್ಯವಾಗುತ್ತವೆ. ಇದರಿಂದ ಹೆಚ್ಚು ಸುರಕ್ಷತೆಯಿಂದ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಸಮಯ ಕಳೆಯಬಹುದು. ಇದಕ್ಕಾಗಿ ಮೆಟಾ ಹೊಸ ಸೌಲಭ್ಯಗಳನ್ನು ಒದಗಿಸಿದೆ.

ಅಪರಿಚಿತರಿಂದ ದೂರ ಇರಬಹುದು

ಅಪರಿಚಿತರಿಂದ ದೂರ ಇರಬಹುದು

ಇನ್ನು ಹದಿಹರೆಯದವರು ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡರೆ ಸಾಕು ಸಿಕ್ಕ ಸಿಕ್ಕವರು ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿವುದು ಸಾಮಾನ್ಯ. ಅಕಸ್ಮಾತ್‌ ಈ ಫ್ರೆಂಡ್‌ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡಿದರೆ ಮೆಸೆಜ್‌ಗಳ ಸುರಿಮಳೆಯೇ ಬರುತ್ತವೆ. ಇದು ಮಕ್ಕಳಿಗೆ ಒಂದು ರೀತಿಯ ಕೆಟ್ಟ ಅನುಭವ ಫೇಸ್‌ಬುಕ್‌ ಪ್ಲಾಟ್‌ಫಾರ್ಮ್‌ನಿಂದ ಉಂಟಾಗುತ್ತದೆ. ಹೀಗಾಗಿ ಹದಿಹರೆಯದವರು ಇನ್ಮುಂದೆ ತಮಗೆ ಯಾರೂ ಗೊತ್ತಿರುವುದಿಲ್ಲವೋ ಅಥವಾ ಅನುಮಾನಾಸ್ಪದವಾಗಿ ಕಾಣಿಸಿಕೊಳ್ಳುತ್ತಾರೋ ಅವರಿಂದ ದೂರ ಇರಬಹುದು. ಇದಕ್ಕಾಗಿ ಸೆಟ್ಟಿಂಗ್‌ನಲ್ಲಿ ಕೆಲವು ಆಯ್ಕೆಗಳನ್ನು ನೀಡಿದೆ.

ಗೌಪ್ಯತಾ ನವೀಕರಣ

ಗೌಪ್ಯತಾ ನವೀಕರಣ

ಹದಿಹರೆಯದವರಿಗೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಎದುರಾಗುವ ಅಸಭ್ಯ ವರ್ತನೆಗಳನ್ನು ತಡೆಯಲು ಮೆಟಾ ಹೊಸ ಗೌಪ್ಯತಾ ನವೀಕರಣ (privacy updates) ಗಳನ್ನು ನೀಡಿದೆ. ಹೀಗಾಗಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ ಕೆಲವು ದೇಶಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಫೇಸ್‌ಬುಕ್‌ಗೆ ಲಾಗ್‌ ಇನ್‌ ಆದರೆ ಆಟೋಮ್ಯಾಟಿಕ್‌ ಆಗಿ ಪ್ರೈವೇಟ್‌ ಸೆಟ್ಟಿಂಗ್‌ಗಳು ಕಾಣಿಸಿಕೊಳ್ಳುತ್ತವೆ.

ಶಿಫಾರಸು ಮಾಡುವುದಿಲ್ಲ

ಶಿಫಾರಸು ಮಾಡುವುದಿಲ್ಲ

ಇನ್ನು ಹದಿಹರೆಯದವರು ತಮ್ಮ ಖಾತೆಯಲ್ಲಿ ತಿಳಿಯದೇ ಇರುವ ಹಾಗೂ ಅನುಮಾನಾಸ್ಪದ ವಯಸ್ಕರಿಗೆ ಸಂದೇಶ ಕಳುಹಿಸುವುದನ್ನು ತಡೆಯುವ ವಿಧಾನಗಳನ್ನು ಪರೀಕ್ಷಿಸುತ್ತಿದೆ. ಹಾಗೆಯೇ ಪ್ಲಾಟ್‌ಫಾರ್ಮ್ ನಿಮಗೆ ತಿಳಿದಿರಬಹುದಾದ ಜನರ ಶಿಫಾರಸುಗಳನ್ನು ( People You May Know ) ಮಾಡದಿರಲು ಮುಂದಾಗಿದೆ. ಇದರಿಂದ ನೀವು ಅನಾಮಿಕ ಖಾತೆಗಳಿಂದ ಅಂತರ ಕಾಪಾಡಿಕೊಳ್ಳಬಹುದು.

ಪೋಸ್ಟ್‌

ಫೇಸ್‌ಬುಕ್‌ ಈ ಬಗ್ಗೆ ಪೋಸ್ಟ್‌ ಮಾಡಿದ್ದು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ನಿರ್ದಿಷ್ಟ ದೇಶಗಳಲ್ಲಿ18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ಫೇಸ್‌ಬುಕ್‌ಗೆ ಎಂಟ್ರಿ ಕೊಟ್ಟಾಗ ಹೆಚ್ಚು ಖಾಸಗಿ ಸೆಟ್ಟಿಂಗ್‌ಗಳಿಗೆ ಡೀಫಾಲ್ಟ್ ಆಗುತ್ತಾರೆ. ಈಗಾಗಲೇ ಪ್ಲಾಟ್‌ಫಾರ್ಮ್‌ನಲ್ಲಿರುವ ಹದಿಹರೆಯದವರಿಗೆ ಸೆಟ್ಟಿಂಗ್ ವಿಭಾಗದಲ್ಲಿ ಗೌಪ್ಯತೆಯನ್ನು ಬದಲಾಯಿಸಲು ಕೇಳುತ್ತದೆ ಎಂದು ತಿಳಿಸಿದೆ. ಇನ್ನು ಫೇಸ್‌ಬುಕ್‌ ಕೇಳುವ ಗೌಪ್ಯತೆಯ ವಿಷಯಗಳನ್ನು ಇಲ್ಲಿ ನೀಡಲಾಗಿದೆ.

ಸ್ನೇಹಿತರ ಲಿಸ್ಟ್‌

ಸ್ನೇಹಿತರ ಲಿಸ್ಟ್‌ ಅನ್ನು ಯಾರು ನೋಡಬಹುದು ಹಾಗೂ ಅನುಸರಿಸುವ ವ್ಯಕ್ತಿಗಳು, ಪುಟಗಳು ಮತ್ತು ಲಿಸ್ಟ್‌ಗಳನ್ನು ಯಾರ್ಯಾರು ನೋಡಬಹುದು, ಪ್ರೊಫೈಲ್‌ನಲ್ಲಿ ಟ್ಯಾಗ್ ಮಾಡಲಾದ ಪೋಸ್ಟ್‌ಗಳನ್ನು ಯಾರು ನೋಡಬಹುದು, ನಿಮ್ಮ ಪ್ರೊಫೈಲ್‌ನಲ್ಲಿ ಟ್ಯಾಗ್‌ ಮಾಡಲು ಮುಂದಾದಾಗ ಮೊದಲು ಟ್ಯಾಗ್ ಮಾಡಲಾದ ಪೋಸ್ಟ್‌ಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಸಾರ್ವಜನಿಕ ಪೋಸ್ಟ್‌ಗಳಲ್ಲಿ ಕಾಮೆಂಟ್ ಮಾಡಲು ಯಾರಿಗೆ ಅನುಮತಿಸಲಾಗಿದೆ ಎಂಬ ವಿಷಯಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹದಿಯರೆಯದವರು ಎಚ್ಚರಿಕೆಯಿಂದ ಫೇಸ್‌ಬುಕ್‌ ಬಳಕೆ ಮಾಡಬಹುದಾಗಿದೆ. ಜೊತೆಗೆ ಆಪ್‌ ಬಳಸುವಾಗ ಏನಾದರೂ ಅನಾನುಕೂಲತೆ ಉಂಟಾದರೆ ಕಂಪನಿಗೆ ತಿಳಿಸಲು ಇದು ಸಹಾಯಕವಾಗಲಿದೆ.

ಹದಿಹರೆಯ

ಇನ್ನು ಕಳೆದ ವರ್ಷದ ಆರಂಭದಲ್ಲಿ ಮೆಟಾ ಪಿಕ್ಚರ್ ಲಾಕ್ ಆಯ್ಕೆಯ ಬಗ್ಗೆ ಘೋಷಣೆ ಮಾಡಿತ್ತು. ಇದರಿಂದ ಹದಿಹರೆಯದವರ ಒಪ್ಪಿಗೆಯಿಲ್ಲದೆ, ಯಾರೂ ಸಹ ಅವರ ಪ್ರೊಫೈಲ್ ಮತ್ತು ಕವರ್ ಫೋಟೋಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹದಿಹರೆಯವರು ಅನಧಿಕೃತ ಖಾತೆಗಳಿಂದ ದೂರ ಇರುವಂತೆ ಮಾಡಲಾಗಿತ್ತು. ಇದರ ನಡುವೆ ಈಗ ಮತ್ತಷ್ಟು ಫೀಚರ್ಸ್‌ಗಳನ್ನು ನೀಡಿ ಅವರನ್ನು ರಕ್ಷಣಾತ್ಮಕ ವಲಯದಲ್ಲಿ ಇರಿಸಲು ಮೆಟಾ ಮುಂದಾಗಿದೆ. ಇದರೊಂದಿಗೆ ಮೆಟಾ ವಿಶೇಷ ಚಾಟ್‌ಬಾಕ್ಸ್ ಮತ್ತು ಫೋರಂ ತರಹದ ಫೀಚರ್ಸ್‌ ಅನ್ನು ಪ್ರಾರಂಭಿಸಿದ್ದು, ಅದರ ಮೂಲಕ ದೂರು ಸಲ್ಲಿಸಬಹುದು.

Best Mobiles in India

English summary
Meta introduces new privacy updates for teenagers on Instagram, Facebook.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X