ಫೇಸ್‌ಬುಕ್‌ನಲ್ಲಿ ಫೋಸ್ಟ್‌ ಮಾಡುವ ಮೊದಲು ಇದರ ಬಗ್ಗೆನೂ ಸ್ವಲ್ಪ ತಿಳ್ಕೊಳ್ಳಿ!

|

ಇದು ಸೊಶೀಯಲ್‌ ಮೀಡಿಯಾ ಜಮಾನ. ಕಂಡದ್ದು, ಕೇಳಿದ್ದು ಎಲ್ಲವನ್ನೂ ಫೇಸ್‌ಬುಕ್‌ನಲ್ಲಿ ಅಪ್ಡೇಟ್‌ ಮಾಡುವ ಜನ ಈಗ ಎಲ್ಲಾ ಕಡೆ ಸಿಗ್ತಾರೆ. ಅಷ್ಟರ ಮಟ್ಟಿಗೆ ಮೆಟಾ ಒಡೆತನದ ಫೇಟ್‌ಬುಕ್‌ ಜನಪ್ರಿಯ ಸಾಮಾಜಿಕ ಜಾಲತಾಣವಾಗಿ ಗುರುತಿಸಿಕೊಂಡಿದೆ. ಇನ್ನು ಫೇಸ್‌ಬುಕ್‌ನಲ್ಲಿ ಸ್ನೇಹಿತರ ಜೊತೆಗೆ ಹರಟೆ ಹೊಡೆಯುವವರಿಂದ ಹಿಡಿದು, ಪ್ರವಾಸಕ್ಕೆ ಹೊರಟ ಫೋಟೋ ಕ್ಲಿಕ್‌ ಮಾಡಿ ವಿವ್ಸ್‌ ಕೌಂಟ್‌ ಮಾಡೋ ಮಂದಿ ಕೂಡ ಇದ್ದಾರೆ. ಇದರ ನಡುವೆ ಫೇಸ್‌ಬುಕ್‌ನಲ್ಲಿ ಬ್ಯಾಡ್‌ ಕಂಟೆಂಟ್‌ ಹಾಕಿ ಬ್ಯಾನ್‌ ಆದವರೂ ಕೂಡ ಇದ್ದಾರೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಅಕೌಂಟ್‌ನಲ್ಲಿ ಬ್ಯಾಡ್‌ ಕಂಟೆಂಟ್‌ ಪೋಸ್ಟ್‌ ಮಾಡುವ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲಾಗುತ್ತದೆ. ಅದರಂತೆ ಕಳೆದ ಅಕ್ಟೋಬರ್‌ ತಿಂಗಳಲ್ಲಿ ಭಾರತದಲ್ಲಿ 29.2 ಮಿಲಿಯನ್ ಬ್ಯಾಡ್‌ ಕಂಟೆಂಟ್‌ ಅನ್ನು ತೆಗೆದುಹಾಕಿದೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ 2.7 ಮಿಲಿಯನ್‌ ಬ್ಯಾಡ್‌ ಕಂಟೆಂಟ್‌ ತೆಗೆದುಹಾಕಲಾಗಿದೆ. ಹಾಗಾದ್ರೆ ಮೆಟಾ ಕಂಪೆನಿ ಈ ಪ್ರಮಾಣದಲ್ಲಿ ಬಳಕೆದಾರರ ಕಂಟೆಂಟ್‌ ರಿಮೂವ್‌ ಮಾಡಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹೊಸ

ಭಾರತದಲ್ಲಿ ಹೊಸ ಐಟಿ ನಿಯಮಗಳು 2021 ಜಾರಿಗೆ ಬಂದ ನಂತರ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿ ನೀಡುವುದು ಕಡ್ಡಾಯವಾಗಿದೆ. ಅದರಂತೆ ಮೆಟಾ ಒಡೆತನದ ಫೇಸ್‌ಬುಕ್‌ ತನ್ನ ಅಕ್ಟೋಬರ್‌ ತಿಂಗಳ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಈ ಅಕ್ಟೋಬರ್‌ ತಿಂಗಳ ಅವಧಿಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು, ಬಳಕೆದಾರರು ಮಾಡಿರುವ ರಿಪೋರ್ಟ್‌ಗಳು, ಇದರಿಂದ ತಾವು ಅನುಸರಿಸಿದ ಕ್ರಮಗಳ ಬಗ್ಗೆ ವಿವರವನ್ನು ನೀಡಿದೆ.

ರಿಪೋರ್ಟ್‌

ಬಳಕೆದಾರರು ಮಾಡಿದ ರಿಪೋರ್ಟ್‌ ಆಧಾರದ ಮೇಲೆ ಅಕ್ಟೋಬರ್‌ ತಿಂಗಳಿನಲ್ಲಿ ಫೇಸ್‌ಬುಕ್‌ 29.2 ಮಿಲಿಯನ್ ಬ್ಯಾಡ್‌ ಕಂಟೆಂಟ್‌ ರಿಮೂವ್‌ ಮಾಡಿದೆ. ಇದು ಅಕ್ಟೋಬರ್ 1 ರಿಂದ 31ರ ವರೆಗಿನ ವರದಿಯಾಗಿದೆ. ಇದರಲ್ಲಿ ಮೆಟಾ ಕಂಪೆನಿ ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 703 ರಿಪೋರ್ಟ್‌ಗಳನ್ನು ಸ್ವೀಕರಿಸಿದೆ. ಈ ರಿಪೋರ್ಟ್‌ಗಳಲ್ಲಿ 516 ಪ್ರಕರಣಗಳ ಸಮಸ್ಯೆಯನ್ನು ಬಗೆಹರಿಸಿದೆ. ಸಮಸ್ಯೆಗಳನ್ನು ಬಗೆ ಹರಿಸುವುದಕ್ಕಾಗಿ ಬಳಕೆದಾರರಿಗೆ ಸಾಧನಗಳನ್ನು ಒದಗಿಸಿದೆ ಎಂದು ಕಂಪನಿ ಹೇಳಿದೆ.

ಫೇಸ್‌ಬುಕ್‌

ಇದಲ್ಲದೆ ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 187 ವರದಿಗಳಲ್ಲಿ, ನಾವು ನಮ್ಮ ನೀತಿಗಳ ಪ್ರಕಾರ ವಿಷಯವನ್ನು ಪರಿಶೀಲಿಸಿದ್ದೇವೆ ಎಂದು ಫೇಸ್‌ಬುಕ್‌ ಹೇಳಿದೆ. ಅದರಂತೆ ಒಟ್ಟು 120 ವರದಿಗಳ ಮೇಲೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿಕೊಂಡಿದೆ. ಉಳಿದ 67 ವರದಿಗಳನ್ನು ಪರಿಶೀಲಿಸಲಾಗಿದೆ ಆದರೆ ಕ್ರಮ ಕೈಗೊಂಡಿಲ್ಲ ಎಂದು ಮೆಟಾ ಹೇಳಿದೆ. ಇದೇ ಸಂದರ್ಭದಲ್ಲಿ ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಕೂಡ 2.7 ಮಿಲಿಯನ್‌ ಬ್ಯಾಡ್‌ ಕಂಟೆಂಟ್‌ ರಿಮೂವ್‌ ಮಾಡಿರುವುದು ವರದಿಯಾಗಿದೆ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಭಾರತೀಯ ಕುಂದುಕೊರತೆ ಕಾರ್ಯವಿಧಾನದ ಮೂಲಕ 1,377 ವರದಿಗಳನ್ನು ಸ್ವೀಕರಿಸಿದೆ. ಇದರಲ್ಲಿ 982 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಪರಿಕರಗಳನ್ನು ಒದಗಿಸಿದ್ದೇವೆ ಎಂದು ಹೇಳಿದೆ. ಇವುಗಳಲ್ಲಿ ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡುವ ಆಟೋ ಸಲ್ಯೂಶನ್‌, ಅಕೌಂಟ್‌ ಹ್ಯಾಕಿಂಗ್‌ ಪ್ರಾಬ್ಲಂ ಬಗೆಹರಿಸುವ ಮಾರ್ಗಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ ಎಂದು ಮೆಟಾ ಕಂಪೆನಿ ಹೇಳಿಕೊಂಡಿದೆ.

395

ಇದರೊಂದಿಗೆ ಇತರ 395 ರಿಪೋರ್ಟ್‌ಗಳನ್ನು ಮೆಟಾ ಕಂಪೆನಿ ತನ್ನ ನೀತಿಗಳ ಪ್ರಕಾರ ಕಂಟೆಂಟ್‌ ಅನ್ನು ಪರಿಶೀಲಿಸಿರುವುದಾಗಿ ಹೇಳಿದೆ. ಇದರಲ್ಲಿ ಒಟ್ಟು 274 ವರದಿಗಳ ಮೇಲೆ ಕ್ರಮ ಕೈಗೊಂಡಿದೆ. ಉಳಿದ 121 ವರದಿಗಳನ್ನು ಪರಿಶೀಲಿಸಲಾಗಿದೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

Best Mobiles in India

English summary
Meta took down over 29.2 million pieces of bad content for Facebook

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X