ಫೇಸ್ ಬುಕ್ ಗೆ ಮೈಕ್ರೋಸಾಫ್ಟ್ So.cl ಸವಾಲು

Posted By: Varun
ಫೇಸ್ ಬುಕ್ ಗೆ ಮೈಕ್ರೋಸಾಫ್ಟ್ So.cl ಸವಾಲು

ಕೊನೆಗೂ ಮೈಕ್ರೋಸಾಫ್ಟ್ ಕಂಪನಿ ಫೇಸ್ ಬುಕ್ ಸಾಮಾಜಿಕ ಜಾಲತಾಣಕ್ಕೆ ಚಾಲೆಂಜ್ ಮಾಡಿದೆ. ಸಾಫ್ಟ್ ವೇರ್ ಜಗತ್ತಿನ ದಿಗ್ಗಜ ಮೈಕ್ರೋಸಾಫ್ಟ್ ತನ್ನ ವಿಂಡೋಸ್ ತಂತ್ರಾಂಶದಿಂದ ಏಕಸ್ವಾಮ್ಯತೆ ಹೊಂದಿದ್ದು, ಅದೇ ಯಶಸ್ಸನ್ನು ಇಂಟರ್ನೆಟ್ ಕ್ಷೇತ್ರದಲ್ಲೂ ವಿಸ್ತರಿಸಲು ಹಲವಾರು ಬಾರಿ ಪ್ರಯತ್ನ ಪಟ್ಟಿದೆ. ಅದು ಇಂಟರ್ನೆಟ್ ಎಕ್ಸಪ್ಲೋರರ್ ವೆಬ್ ಬ್ರೌಸರ್ ಇರಬಹುದು, ಗೂಗಲ್ ರೀತಿಯ ಸರ್ಚ್ ಎಂಜಿನ್ ಆದ ಬಿಂಗ್ ಇರಬಹುದು, ಜಿಮೇಲ್ ರೀತಿಯ ಇಮೇಲ್ ಸೇವೆ msn ಇರಬಹುದು.ಆದರೆ ಈ ರೀತಿ ಹಲವಾರು ಪ್ರಯತ್ನಗಳನ್ನು ಮಾಡಿದರೂ ಮೈಕ್ರೋಸಾಫ್ಟ್ ತಾನು ಅಂದುಕೊಂಡಂತೆ ಅದರಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ.

ಈಗ ಸಾಮಾಜಿಕ ಜಾಲತಾಣಗಳ ಯುಗವಾಗಿರುವುದರಿಂದ ಅದರಲ್ಲೂ ಒಂದು ಕೈ ನೋಡೋಣ ಎಂದು ಸಜ್ಜಾಗಿರುವ ಮೈಕ್ರೋಸಾಫ್ಟ್, ಫೇಸ್ ಬುಕ್ ಗೆ ಸವಾಲು ಹಾಕಲು ತನ್ನದೇ ಆದ So.cl (ಸೋಶಿಯಲ್ ಎಂದು ಕರೆಯಬೇಕು) ಎಂಬ ಸಾಮಾಜಿಕ ಜಾಲತಾಣವನ್ನು ಶುರು ಮಾಡಿದೆ.

ತನ್ನ ಕಂಪನಿಯ FUSE ಲ್ಯಾಬ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ So.cl ವೆಬ್ಸೈಟ್ ನೋಡಲು ಫೇಸ್ ಬುಕ್ ಅಥವಾ ಟ್ವಿಟರ್ ನಂತೆ ಕಾಣದಿದ್ದರೂ ನೋಡಲು ಸುಂದರವಾಗಿದ್ದು ಕಡಿಮೆ ಫೀಚರುಗಳನ್ನು ಹೊಂದಿದೆ. ಆದರ್ ಫೇಸ್ ಬುಕ್ ನಂತೆ ಚಾಟಿಂಗ್, ವೀಡಿಯೋ ಶೇರಿಂಗ್, ಹಾಗು ಬಿಂಗ್ ಉಪಯೋಗಿಸಿಕೊಂಡು ನಿಮಗೆ ಬೇಕಾದ ವಿಷಯದ ಬಗ್ಗೆ ಸರ್ಚ್ ಮಾಡುವ ಆಪ್ಷನ್ ಹೊಂದಿದೆ. ಪ್ರಾಯೋಗಿಕ ಹಂತವಾಗಿರುವುದರಿಂದ ಜಾಸ್ತಿ ಫೀಚರುಗಳನ್ನು ಅಳವಡಿಸಲಾಗಿಲ್ಲ ಎಂದು ಕಂಪನಿ ಹೇಳಿದೆ.

ನೀವೂ ಈ So.cl ತಾಣವನ್ನು ಒಂದು ಬಾರಿ ಟ್ರೈ ಮಾಡಿ ನೋಡಲು ಫೇಸ್ ಬುಕ್ ಇಲ್ಲವೆ ವಿಂಡೋಸ್ ಲೈವ್ ಖಾತೆ ಇರಬೇಕು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot