ಮೈಕ್ರೋಮ್ಯಾಕ್ಸ್‌ನಿಂದ ಹೊಸ ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ

By Shwetha
|

ಜಗತ್ತಿನಲ್ಲಿರುವ ಅಸಂಖ್ಯ ಸ್ಮಾರ್ಟ್‌ಫೋನ್ ಕಂಪೆನಿಗಳಲ್ಲಿ ಕೇವಲ ಕೆಲವೇ ಕೆಲವು ವೇರೇಬಲ್ ಮಾರುಕಟ್ಟೆಯನ್ನು ಪ್ರವೇಶಿಸಿ ತಮ್ಮ ಉತ್ಪನ್ನಗಳನ್ನು ಪ್ರಚಾರಪಡಿಸುತ್ತಿವೆ. ಈಗಾಗಲೇ ತನ್ನ ಗ್ಯಾಲಕ್ಸಿ ಗೇರ್ ವಾಚ್, ಗೇರ್ 2 ಮತ್ತು ಗೇರ್ ಫಿಟ್ ಸಾಧನಗಳಿಂದ ಮಾರುಕಟ್ಟೆಯನ್ನು ಆಳುತ್ತಿರುವ ಸ್ಯಾಮ್‌ಸಂಗ್ ಬಳಕೆದಾರರ ಕಣ್ಮಣಿ ಎಂದೆನಿಸಿದೆ.

ಇದೇ ಸಮಯದಲ್ಲಿ ತಾನೇನು ಕಡಿಮೆಯಿಲ್ಲ ಎಂದೆಂಬಂತೆ ಸೋನಿ ಕೂಡ ತನ್ನ ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿದ್ದು, ಮಾರುಕಟ್ಟೆಯಲ್ಲಿ ಇದು ಅಷ್ಟೇನೂ ಮೋಡಿ ಮಾಡಿಲ್ಲ. ಆದರೆ ಈ ವರ್ಷ ಭಾರತೀಯ ಆಧಾರಿತ ಸ್ಮಾರ್ಟ್‌ಫೋನ್ ದಿಗ್ಗಜ ಮೈಕ್ರೋಮ್ಯಾಕ್ಸ್ ಕೂಡ ವೇರಿಯೇಬಲ್ ಕೇತ್ರಕ್ಕೆ ಕೈ ಹಾಕಿದೆ. ಹೊಸದಾಗಿ ನೇಮಕಗೊಂಡಿರುವ ಕಂಪೆನಿ ಅಧ್ಯಕ್ಷ ಸಂಜಯ್ ಕಪೂರ್ ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂದರ್ಶನವೊಂದರಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ವೇರಿಯೇಬಲ್ ಕ್ಷೇತ್ರದಲ್ಲೂ ಮೈಕ್ರೋಮ್ಯಾಕ್ಸ್ ಮೋಡಿ

ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ ಆಚೆಗೂ ಮೈಕ್ರೋಮ್ಯಾಕ್ಸ್ ತನ್ನ ಸಾಧನೆಯನ್ನು ವಿಸ್ತರಿಸಲು ಬಯಸಿದ್ದು ಸ್ಮಾರ್ಟ್‌ವಾಚ್ ಕ್ಷೇತ್ರದಲ್ಲಿ ತನ್ನ ಮೋಡಿಯನ್ನು ಬೀರಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದವರು ತಿಳಿಸಿದ್ದಾರೆ. ಪ್ರವೇಶ, ಸಂಗ್ರಹಣೆ, ಅಂಕಿ ಅಂಶಗಳು, ಅಪ್ಲಿಕೇಶನ್ ಮತ್ತು ವಿಷಯ ಈ ಐದು ಅಂಶಗಳೂ ನಮ್ಮ ಹೊಸ ವೇರಿಯೇಬಲ್‌ನ ಮುಖ್ಯ ಅಡಿಪಾಯಗಳಾಗಿದ್ದು ಈ ಐದಕ್ಕೂ ತಕ್ಕುದಾದ ನ್ಯಾಯವನ್ನು ಒದಗಿಸಿ ನಮ್ಮ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿದೆ ಎಂದವರು ತಿಳಿಸಿದ್ದಾರೆ.

ಯಾವ ರೀತಿಯ ವೇರಿಯೇಬಲ್ ಅನ್ನು ಕಂಪೆನಿ ಲಾಂಚ್ ಮಾಡಲು ಹೊರಟಿದೆ ಎಂಬುದು ಇನ್ನೂ ತಿಳಿದು ಬರದಿದ್ದು ಆದರೆ ಇದೊಂದು ಸ್ಮಾರ್ಟ್‌ವಾಚ್ ಎಂಬುದು ಖಾತ್ರಿಯಾಗಿದೆ. ರಷ್ಯಾದಲ್ಲೂ ಕೂಡ ತನ್ನ ಮಾರುಕಟ್ಟೆ ಜಾಲವನ್ನು ಪ್ರಾರಂಭಿಸಿರುವ ಮೈಕ್ರೋಮ್ಯಾಕ್ಸ್ ಟಾಪ್ ಸ್ಥಾನಕ್ಕೇರುವ ಎಲ್ಲಾ ಲಕ್ಷಣಗಳನ್ನು ತನ್ನ ಮುಂದಿಟ್ಟುಕೊಂಡಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X