ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಸರ್ಪೇಸ್‌ ಲ್ಯಾಪ್‌ಟಾಪ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಸಾಫ್ಟ್‌ವೇರ್‌ ದೈತ್ಯ ಎನಿಸಿಕೊಂಡಿರುವ ಮೈಕ್ರೋಸಾಫ್ಟ್‌ ತನ್ನ ಸರ್ಫೇಸ್‌ ಲ್ಯಾಪ್‌ಟಾಪ್‌ ಸರಣಿ ಮೂಲಕ ಗುರುತಿಸಿಕೊಂಡಿದೆ. ಈಗಾಗಲೇ ಸರ್ಫೇಸ್‌ ಸರಣಿಯಲ್ಲಿ ಅನೇಕ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹೊಸದಾಗಿ ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 9 ಮತ್ತು ಸರ್ಫೇಸ್ ಲ್ಯಾಪ್‌ಟಾಪ್ 5 ಅನ್ನು ಲಾಂಚ್‌ ಮಾಡಿದೆ. ಇದರಲ್ಲಿ ಮೈಕ್ರೋಸಾಫ್ಟ್‌ ಸರ್ಫೇಸ್ ಪ್ರೊ 9 ಲ್ಯಾಪ್‌ಟಾಪ್‌ 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಕಂಪೆನಿ ಹೊಸದಾಗಿ ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 9 ಮತ್ತು ಸರ್ಫೇಸ್ ಲ್ಯಾಪ್‌ಟಾಪ್ 5 ಬಿಡುಗಡೆ ಮಾಡಿದೆ. ಇನ್ನು ಸರ್ಫೇಸ್ ಲ್ಯಾಪ್‌ಟಾಪ್ 5 ಎರಡು ಡಿಸ್‌ಪ್ಲೇ ಮಾದರಿಗಳ ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ಬೇಸ್‌ ಮಾಡೆಲ್‌ 13.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 60W ಚಾರ್ಜಿಂಗ್‌ಗೆ ಬೆಂಬಲವನ್ನು ನೀಡಲಿದ್ದು, HD ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸರ್ಫೇಸ್ ಪ್ರೊ 9 ಲ್ಯಾಪ್‌ಟಾಪ್‌

ಸರ್ಫೇಸ್ ಪ್ರೊ 9 ಲ್ಯಾಪ್‌ಟಾಪ್‌

ಸರ್ಫೇಸ್ ಪ್ರೊ 9 ಲ್ಯಾಪ್‌ಟಾಪ್‌ ಪ್ರೊಸೆಸರ್‌ಗಳ ನಡುವೆ ಆಯ್ಕೆಯನ್ನು ನೀಡಲಿದೆ. ಇದು ಥಂಡರ್‌ಬೋಲ್ಟ್‌ನೊಂದಿಗೆ ಇಂಟೆಲ್ ಇವೊ ಪ್ಲಾಟ್‌ಫಾರ್ಮ್‌ನಲ್ಲಿ ಬಿಲ್ಟ್‌ ಮಾಡಲಾದ 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ವರ್ಧಿತ ಕ್ಯಾಮೆರಾ ಮತ್ತು ಆಡಿಯೊ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಲಾಂಗ್‌ ಬ್ಯಾಟರಿಯನ್ನು ಹೊಂದಿದ್ದು, ಇಡೀ ದಿನದ ಅವಧಿ ಬ್ಯಾಟರಿ ಬಾಳಿಕೆ ನೀಡಲಿದೆ ಎಂದು ಹೇಳಲಾಗಿದೆ.

ಕಂಪ್ಲೀಟ್‌

ಸರ್ಫೇಸ್ ಪ್ರೊ 9 ಲ್ಯಾಪ್‌ಟಾಪ್‌ ಹೊಸ AI ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಕಂಪ್ಲೀಟ್‌ ನ್ಯೂ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (NPU) ಅನ್ನು ಒಳಗೊಂಡಿದೆ. ಇದರಿಂದ ಈ ಲ್ಯಾಪ್‌ಟಾಪ್‌ನ ಕಾರ್ಯದಕ್ಷತೆ ಹಿಂದಿನ ಲ್ಯಾಪ್‌ಟಾಪ್‌ಗಳಿಗಿಂತ ಹೆಚ್ಚಿನ ಕಾರ್ಯಕ್ಷಮತೆ ಹೊಂದಿದೆ. ಅದರಲ್ಲೂ ಈ ಲ್ಯಾಪ್‌ಟಾಪ್‌ ಪ್ರತಿ ಸೆಕೆಂಡಿಗೆ 15 ಟ್ರಿಲಿಯನ್‌ಗಿಂತಲೂ ಹೆಚ್ಚು ಲೆಕ್ಕಾಚಾರಗಳನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಲ್ಯಾಪ್‌ಟಾಪ್‌ನಲ್ಲಿನ NPU ವಿಂಡೋಸ್ ಸ್ಟುಡಿಯೋ ಎಫೆಕ್ಟ್‌ಗಳ ಮೂಲಕ ನ್ಯೂ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಇನ್ನು ಮೈಕ್ರೋಸಾಫ್ಟ್ ಸರ್ಫೇಸ್ ಪ್ರೊ 9 ಆರಂಭಿಕ ಬೆಲೆ $999 (82,150ರೂ) ಆಗಿದೆ.

ಸರ್ಫೆಸ್‌ ಲ್ಯಾಪ್‌ಟಾಪ್ 5 ಫೀಚರ್ಸ್‌ ಹೇಗಿದೆ?

ಸರ್ಫೆಸ್‌ ಲ್ಯಾಪ್‌ಟಾಪ್ 5 ಫೀಚರ್ಸ್‌ ಹೇಗಿದೆ?

ಸರ್ಫೇಸ್ ಲ್ಯಾಪ್‌ಟಾಪ್ 5 ಲ್ಯಾಪ್‌ಟಾಪ್‌ ಎರಡು ಡಿಸ್‌ಪ್ಲೇ ರೂಪಾಂತರದ ಆಯ್ಕೆಗಳಲ್ಲಿ ಬರಲಿದೆ. ಇದರ ಬೇಸ್‌ ಮಾಡೆಲ್‌ 13.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2256×1504 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ನ ಹೈ ಎಂಡ್‌ ಮಾಡೆಲ್‌ 15 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2496×1664 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಥಂಡರ್ಬೋಲ್ಟ್ 4 ಅನ್ನು ನೀಡಲಿದೆ. ಈ ಲ್ಯಾಪ್‌ಟಾಪ್‌ನಲ್ಲಿ ಇಂಟೆಲ್ ಇವೊ ಸಾಧನವಾಗಿ ಸಹ-ಎಂಜಿನಿಯರಿಂಗ್ ಮತ್ತು ಪರಿಶೀಲಿಸಲಾಗಿದೆ. ಇನ್ನು ಸರ್ಫೇಸ್ ಲ್ಯಾಪ್‌ಟಾಪ್ 5 ಲ್ಯಾಪ್‌ಟಾಪ್‌ ಡಾಲ್ಬಿ ಅಟ್ಮೋಸ್‌-ಸಕ್ರಿಯಗೊಳಿಸಿದ ಸ್ಪೀಕರ್‌ಗಳು, 60W ಚಾರ್ಜಿಂಗ್ ಬೆಂಬಲ, HD ಕ್ಯಾಮೆರಾ, Wi-Fi 6 ಮತ್ತು ಬ್ಲೂಟೂತ್ 5.1 ಅನ್ನು ಒಳಗೊಂಡಿದೆ. ಪೋರ್ಟ್‌ಗಳ ಆಯ್ಕೆಗಳಲ್ಲಿ ಥಂಡರ್‌ಬೋಲ್ಟ್ 4 ಜೊತೆಗೆ USB-C, ಸಿಂಗಲ್ USB-A ಮತ್ತು 3.5mm ಆಡಿಯೋ ಜ್ಯಾಕ್ ಬೆಂಬಲಿಸಲಿದೆ. ಪ್ರಸ್ತುತ ಸರ್ಫೇಸ್ ಲ್ಯಾಪ್‌ಟಾಪ್ 5 ಬೇಸ್‌ ಮಾಡೆಲ್‌ ಆಯ್ಕೆಗೆ $999 (82,150ರೂ) ಬೆಲೆಯನ್ನು ಹೊಂದಿದೆ.

Best Mobiles in India

English summary
Microsoft Surface Pro 9, Surface Laptop 5 with 5G launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X