ಟೆಲಿಕಾಂ ಅಲ್ಲೋಲಕಲ್ಲೋಲ..399 ರೂ.ಜಿಯೋ ಆಫರ್ ಇನ್ನು 150 ರೂ.ಗೆ ಸಿಗಲಿದೆ!?

ಜಿಯೋಗೆ ಭಾರಿ ಅನುಕೂಲವಾಗುವಂತಹ ಬದಲಾವಣೆಯೊಂದು ಟೆಲಿಕಾಂನಲ್ಲಿ ನಡೆದಿದೆ.!!

|

ಜಿಯೋಗೆ ಭಾರಿ ಅನುಕೂಲವಾಗುವಂತಹ ಬದಲಾವಣೆಯೊಂದು ಟೆಲಿಕಾಂನಲ್ಲಿ ನಡೆದಿದೆ.!! ಹೌದು, ಟೆಲಿಕಾಂ ಸಂಸ್ಥೆಗಳ 'ಅಂತರ ಸಂಪರ್ಕ ಬಳಕೆ ಶುಲ್ಕ'ವನ್ನು (ಇಂಟರ್ ಕನೆಕ್ಟ್) ಟ್ರಾಯ್ ಶೇ. 57ರಷ್ಟು ಇಳಿಸಿ ಆದೇಶ ಹೊರಡಿಸಿದ್ದು, ಇದರಿಂದ ಟೆಲಿಕಾಂನಲ್ಲಿ ಮತ್ತೆ ಅಲ್ಲೋಲಕಲ್ಲೋಲವಾಗುವ ಸಂಭವವಿದೆ.!!

ಒಂದು ಕಂಪೆನಿ ಬಳಕೆದಾರ ಇನ್ನೊಂದು ಕಂಪೆನಿ ಬಳಕೆದಾರನಿಗೆ ಕರೆ ಮಾಡಿದರೆ, ಪ್ರತಿ ಕರೆಗೆ ಕರೆ ಮಾಡಿದ ಕಂಪೆನಿ ಕರೆಹೋದ ಕಂಪೆನಿಗೆ ಒಂದು ನಿಮಿಷಕ್ಕೆ 14 ಪೈಸೆ ಹಣವನ್ನು ನೀಡಬೇಕಿತ್ತು. ಈ ಹಣವನ್ನು 'ಅಂತರ ಸಂಪರ್ಕ ಬಳಕೆ ಶುಲ್ಕ ಎಂದು ಕರೆಯುತ್ತಿದ್ದರು. ಇದೀಗ ಇದರ ಬೆಲೆ ಭಾರಿ ಕಡಿಮೆಯಾಗಿದೆ.!!

ಹಾಗಾದರೆ, 'ಅಂತರ ಸಂಪರ್ಕ ಬಳಕೆ ಶುಲ್ಕ ಕಡಿಮೆಯಾದ್ದರಿಂದ ಟೆಲಿಕಾಂನಲ್ಲಿ ಆಗಬಹುದಾದ ಬದಲಾವಣೆ ಏನು? ಇದರಿಂದ ಜಿಯೋ ಆಫರ್‌ಗಳ ಬದಲಾವಣೆ ಆಗಲಿದೆಯಾ? ಇದು ಜಿಯೋಗಾಗಿಯೇ ಮಾಡಿದ ಪ್ಲಾನ್ ಇರಬಹುದು ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪ್ರಸ್ತುತ ಶುಲ್ಕ ಎಷ್ಟು?

ಪ್ರಸ್ತುತ ಶುಲ್ಕ ಎಷ್ಟು?

ಒಂದು ನಿಮಿಷಕ್ಕೆ 14 ಪೈಸೆಯಷ್ಟಿದ್ದ 'ಅಂತರ ಸಂಪರ್ಕ ಬಳಕೆ ಶುಲ್ಕ' ಇದೀಗ ಕೇವಲ ಪೈಸೆಗೆ ಇಳಿಯಲಿದೆ.!! ಕೆಲವು ತಿಂಗಳ ಹಿಂದಷ್ಟೆ ಅಂತರ ಸಂಪರ್ಕ ಬಳಕೆ ಶುಲ್ಕವನ್ನು ಪೂರ್ಣವಾಗಿ ತೆಗೆದುಹಾಕುವುದಾಗಿ ಹೇಳಿದ್ದ ಟ್ರಾಯ್, ಪೂರ್ಣವಾಗಿ ತೆಗೆಯದಿದ್ದರೂ ಬಹುತೇಕ ಕಡಿಮೆ ಮಾಡಿ ಆದೇಶ ಹೊರಡಿಸಿದೆ.!!

ಅಕ್ಟೋಬರ್ 1 ರಿಂದ ಜಾರಿ.!!

ಅಕ್ಟೋಬರ್ 1 ರಿಂದ ಜಾರಿ.!!

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಹೇಳಲಾಗಿರುವ ಈ ಆದೇಶ ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಎಂದು ಟ್ರಾಯ್ ತಿಳಿಸಿದೆ.!! ಅಂದರೆ ಇನ್ನೊಮದು ತಿಂಗಳಿನಲ್ಲಿ ಏರ್‌ಟೆಲ್ ಒಂದನ್ನು ಬಿಟ್ಟು, ಜಿಯೋ ಸೇರಿದಂತೆ ಇನ್ನೆಲ್ಲಾ ಟೆಲಿಕಾಂ ಕಂಪೆನಿಗಳ ಬೆಲೆಗಳು ಇಳಿಯುತ್ತವೆ.!!

ಜಿಯೋಗೆ ವರದಾನ!!

ಜಿಯೋಗೆ ವರದಾನ!!

ಅಂತರ ಸಂಪರ್ಕ ಬಳಕೆ ಶುಲ್ಕ'ವನ್ನು ಇಳಿಸಿದ್ದರಿಂದ ಡೇಟಾದಾತ ಜಿಯೋಗೆ ವರದಾನವಾಘಿದೆ.!! ಉಚಿತ ಕರೆ ನೀಡಿದ್ದ ಜಿಯೋಗೆ ಪ್ರತಿಕಾಲ್‌ಗೆ 14 ಪೈಸೆಯನ್ನು ಇತರ ಟೆಲಿಕಾಂಗಳಿಗೆ ನೀಡುತ್ತಿದ್ದು ಹೆಚ್ಚು ಭಾರ ಎನಿಸಿತ್ತು.!! ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ಆದೇಶದಿಂದ ವಾರ್ಷಿಕವಾಗಿ 3,800 ಕೋಟಿ ರೂ. ಹಣ ಜಿಯೋಗೆ ಉಳಿಯಲಿದೆ.!!

150 ರೂಪಾಯಿಗೆ ಜಿಯೋ ಆಫರ್!!

150 ರೂಪಾಯಿಗೆ ಜಿಯೋ ಆಫರ್!!

ವಾರ್ಷಿಕವಾಗಿ 3,800 ಕೋಟಿ ರೂ.ಗೂ ಹೆಚ್ಚು ಹಣದ ಉಳಿಕೆಯಿಂದ ಪ್ರಸ್ತುತ ಆಫರ್‌ಗೆ ಶೇಕಡ ಲೆಕ್ಕ ಹಾಕಿದರೆ ಜಿಯೋ ಕೇವಲ 150 ರೂಪಾಯಿಗಳಿಗೆ ಮೂರು ತಿಂಗಳು ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ನೀಡಬಹುದಾಗಿದೆ.!! ಇದು ಅಂಬಾನಿಯ ಮೇಲೆ ನಿಂತಿದೆ.!!

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಏರ್‌ಟೆಲ್ ಬಿಟ್ಟು ಎಲ್ಲಾ ಟೆಲಿಕಾಂಗಳ ಬೆಲೆ ಕಡಿಮೆ!!

ಏರ್‌ಟೆಲ್ ಬಿಟ್ಟು ಎಲ್ಲಾ ಟೆಲಿಕಾಂಗಳ ಬೆಲೆ ಕಡಿಮೆ!!

ಏರ್‌ಟೆಲ್ ಟೆಲಿಕಾಂ ಒಂದನ್ನು ಬಿಟ್ಟು ಇತರ ಎಲ್ಲಾ ಟೆಲಿಕಾಂಗಳ ಸೇವೆಗಳ ಬೆಲೆ ಬಾರಿ ಕಡಿಮೆಯಾಗಲಿದೆ.! ಇಲ್ಲಿಯವರೆಗು ಹೆಚ್ಚು ಬಳಕೆದಾರರನ್ನು ಹೊಂದಿದ್ದ ಏರ್‌ಟೆಲ್‌ಗೆ ಹಣಪಾವತಿ ಮಾಡುವ ಪ್ರಮೆಯ ಇಲ್ಲದಿದ್ದರಿಂದ ಏರ್‌ಟೆಲ್ ಬಿಟ್ಟು ಇನ್ನೆಲ್ಲಾ ಟೆಲಿಕಾಂ ಕಂಪೆನಿಗಳು ಬೆಲೆ ಕಡಿಮೆ ಮಾಡಲಿವೆ ಎನ್ನಲಾಗಿದೆ.!!

ಸಾವಿರಾರು ಕೋಟಿ ನಷ್ಟ?

ಸಾವಿರಾರು ಕೋಟಿ ನಷ್ಟ?

ಇತರ ಟೆಲಿಕಾಂ ನೆಟ್‌ವರ್ಕ್ ಗಳಿಂದ ಒಳಬರುವ ಕರೆಗಳಿಗೆ ವಿಧಿಸುತ್ತಿದ್ದ ಶುಲ್ಕವನ್ನು ಈಗ ಟ್ರಾಯ್ ಆದೇಶದಂತೆ 14 ಪೈಸೆಯಿಂದ 6 ಪೈಸೆಗೆ ಇಳಿಕೆ ಮಾಡಲೇಬೇಕಿರುವುದರಿಂದ ಏರ್‌ಟೆಲ್ ಮತ್ತು ಸರ್ಕಾರಕ್ಕೆ ವಾರ್ಷಿಕವಾಗಿ ಸಾವಿರಾರು ಕೋಟಿ ರೂ. ಆದಾಯ ಕಡಿತಗೊಳ್ಳಲಿದೆ.!!

ಸಣ್ಣಪುಟ್ಟ ಟೆಲಿಕಾಂಗೆ ವರ!!

ಸಣ್ಣಪುಟ್ಟ ಟೆಲಿಕಾಂಗೆ ವರ!!

ಏರ್‌ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳ ಹೊಡೆತದಿಂದ ತತ್ತರಿಸಿದ ಸಣ್ಣಪುಟ್ಟ ಟೆಲಿಕಾಂಗಳಿಗೆ ಈ ಆದೇಶ ವರವಾದಂತಿದೆ.! ಇನ್ನು ಸಣ್ಣಪುಟ್ಟ ಟೆಲಿಕಾಂಗಳು ದೊಡ್ಡ ಟೆಲಿಕಾಂಗಳಿಗೆ ಪಾವತಿಸಬೇಕಾದ ಮೊತ್ತ ಕಡಿಮೆಯಾಗಿರುವುದರಿಂದ ಕಡಿಮೆ ಬೆಲೆಗೆ ಸೇವೆ ನೀಡಿ ಮಾರುಕಟ್ಟೆಯಲ್ಲಿ ಅವುಗಳು ಉಳಿಯಬಹುದು.!!

<strong>ಇನ್ಮುಂದೆ ಕಳೆದ ಸಿಮ್, ಡಿಎಲ್ ಯಾವುದೇ ದಾಖಲೆ ಮತ್ತೆ ಪಡೆಯಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ!!..ಏಕೆ ಗೊತ್ತಾ?</strong>ಇನ್ಮುಂದೆ ಕಳೆದ ಸಿಮ್, ಡಿಎಲ್ ಯಾವುದೇ ದಾಖಲೆ ಮತ್ತೆ ಪಡೆಯಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ!!..ಏಕೆ ಗೊತ್ತಾ?

Best Mobiles in India

English summary
Trai has cut the inter-connect usage charges (IUC) to 6 paise per minute from 14 paise.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X