ವಿಶ್ವದಲ್ಲೇ ಅತಿ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಸಿಗುತ್ತಿರುವುದು ಭಾರತದಲ್ಲಿ!

|

ರಿಲಯನ್ಸ್ ಜಿಯೋ ನೀಡಿದ ಅಗ್ಗದ ಡೇಟಾ ಪ್ಯಾಕೇಜ್‌ಗಳಿಂದಾಗಿ ಇಡೀ ವಿಶ್ವದಲ್ಲೇ ಅತ್ಯಂತ ಅಗ್ಗದ ಬೆಲೆಯಲ್ಲಿ ಭಾರತೀಯರಿಗೆ ಮೊಬೈಲ್ ಡೇಟಾ ಸಿಗುತ್ತಿದೆ ಎಂದು ಇತ್ತಿಚಿನ ವರದಿಯೊಂದು ಹೇಳಿದೆ. ಜಗತ್ತಿನ ಸರಾಸರಿ ಡೇಟಾ ಬೆಲೆ 600 ರೂಪಾಯಿಗಳಾಗಿದ್ದರೆ, ಭಾರತೀಯರು ಒಂದು ಜಿಬಿ ಡೇಟಾಗೆ ಕೇವಲ 18 ರೂಪಾಯಿಗಳನ್ನು ಮಾತ್ರ ಪಾವತಿಸುತ್ತಿದ್ದಾರೆ ಎಂದು ಬೆಲೆ ಹೋಲಿಕೆ ವೆಬ್‌ಸೈಟ್ ಒಂದು ಅಧ್ಯಯನ ನಡೆಸಿ ಹೇಳಿದೆ.

ಒಟ್ಟು 230 ರಾಷ್ಟ್ರಗಳಲ್ಲಿ 6,313 ಮೊಬೈಲ್ ಡೇಟಾ ಯೋಜನೆಗಳನ್ನು ಅಧ್ಯಯನ ಮಾಡಿರುವ ಸಂಶೋಧಕರು, 43 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರೊಂದಿಗೆ ಭಾರತವು ವಿಶ್ವದಲ್ಲೇ ಅತಿಹೆಚ್ಚು ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿರುವ ಎರಡನೇ ದೇಶವಾಗಿದ್ದು, ವಿಶ್ವದಲ್ಲೇ ಅತಿ ಕಡಿಮೆ ಬೆಲೆಯಲ್ಲಿ ಮೊಬೈಲ್ ಡೇಟಾವನ್ನು ಪಡೆಯುತ್ತಿರುವ ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿರುವುದನ್ನು ವರದಿಯಲ್ಲಿ ತಿಳಿಸಲಾಗಿದೆ.

ವಿಶ್ವದಲ್ಲೇ ಅತಿ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಸಿಗುತ್ತಿರುವುದು ಭಾರತದಲ್ಲಿ!

ಅಕ್ಟೋಬರ್ 23 ಮತ್ತು ನವೆಂಬರ್ 28, 2018 ರ ನಡುವೆ ಈ ಅಧ್ಯಯನ ನಡೆದಿದ್ದು, ಮೊಬೈಲ್ ಡೇಟಾ ಪ್ಯಾಕೇಜ್‌ಗಳ ಪ್ರಕಾರ, ಭಾರತ ($0.25), ಕಿರ್ಗಿಸ್ತಾನ್ ($ 0.27), ಕಾಜಾಕಿಸ್ತಾನ್ ($ 0.49), ಉಕ್ರೇನ್ ($ 0.51) ಮತ್ತು ರುವಾಂಡಾ ($ 0.56) ದೇಶಗಳು ಅತ್ಯಂತ ಅಗ್ಗದ ಬೆಲೆಯಲ್ಲಿ ಮೊಬೈಲ್ ಡೇಟಾವನ್ನು ಪಡೆದುಕೊಳ್ಳುತ್ತಿರುವುದಾಗಿ ವರದಿ ಹೇಳಿದೆ. ಇದು ಜಾಗತಿಕ ಸರಾಸರಿ ಡೇಟಾ ಬೆಲೆಗಳಿಗಿಂತ ಅತ್ಯಂತ ಕಡಿಮೆ ಎಂಬುದನ್ನು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅಧ್ಯಯನದ ಪ್ರಕಾರ, ಇಂಗ್ಲೆಂಡಿನಲ್ಲಿ ಒಂದು ಜಿಬಿ ಮೊಬೈಲ್ ಡೇಟಾ ಬೆಲೆ $ 6.66 ಡಾಲರ್‌ಗಳಾಗಿದ್ದರೆ, ಅಮೆರಿಕಾದಲ್ಲಿ $ 12.37 ಡಾಲರ್‌ಗಳಾಗಿವೆ. ಜಿಂಬಾಬ್ವೆದಲ್ಲಿ ಮೊಬೈಲ್ ಡೇಟಾ ಪ್ಯಾಕೇಜ್‌ಗಳು ಅತಿ ಹೆಚ್ಚು ದುಬಾರಿಯಾಗಿದ್ದು, ಅಲ್ಲಿ 1 ಜಿಬಿ ಡೇಟಾವನ್ನು ಪಡೆಯಲು ಸರಾಸರಿ $ 75.20 ಡಾಲರ್ ವೆಚ್ಚವಾಗಲಿದೆ ಎಂದು ಫಲಿತಾಂಶಗಳಲ್ಲಿ ತಿಳಿಸಿದೆ. ಇವುಗಳಿಗೆ ಹೋಲಿಸಿದರೆ ಭಾರತದ ಡೇಟಾ ಬೆಲೆ ಸಾಕಷ್ಟು ದಿಗ್ಭ್ರಮೆಗೊಳಿಸುವಂತಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ವಿಶ್ವದಲ್ಲೇ ಅತಿ ಕಡಿಮೆ ದರದಲ್ಲಿ ಮೊಬೈಲ್ ಡೇಟಾ ಸಿಗುತ್ತಿರುವುದು ಭಾರತದಲ್ಲಿ!

ಭಾರತದಲ್ಲಿ ವಿಶೇಷವಾಗಿ ಯುವ ಜನಸಂಖ್ಯೆಯು ಹೆಚ್ಚಿನ ತಂತ್ರಜ್ಞಾನದ ಜಾಗೃತಿಯನ್ನು ಹೊಂದಿದ್ದು, ಪ್ರಬಲವಾದ ತಂತ್ರಜ್ಞಾನ ಅಳವಡಿಕೆ ಮತ್ತು ಅನೇಕ ಸ್ಪರ್ಧಿಗಳೊಂದಿಗೆ ಭಾರತದಲ್ಲಿ ರೋಮಾಂಚಕ ಸ್ಮಾರ್ಟ್‌ಫೋನ್ ಮಾರುಕಟ್ಟೆ ರೂಪಿತವಾಗಿದೆ. ಭಾರತದಲ್ಲಿ 4ಜಿ ಯೋಜನೆಗಳು 4ಜಿ ರೀಚಾರ್ಜ್ ಡೇಟಾ ದರಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು, ಒಂದು ಜಿಬಿ ಡೇಟಾ ಕನಿಷ್ಠ 1.41 ರೂ. ಮತ್ತು ಗರಿಷ್ಠ ರೂ 98.83 ರೂ.ಗಳಿಗೆ ಲಭ್ಯವಿದೆ ಎಂದು ವರದಿ ತಿಳಿಸಿದೆ.

Best Mobiles in India

English summary
With over 430 million smartphone users, India is the second largest smartphone market in the world after China. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X