Subscribe to Gizbot

ಆನ್‌ಲೈನಿನಲ್ಲಿ ಬ್ಯಾಡ್ ರಿವ್ಯೂ: '850 ಕಿ.ಮೀ ಹುಡ್ಕೋಂಡು ಬಂದು ಕಸ್ಟಮರ್‌ಗೆ ಹೊಡೆದ' ಓನರ್..!

Written By:

ದಿನಕಳೆದಂತೆ ಆನ್‌ಲೈನ್ ಶಾಪಿಂಗ್ ಹೆಚ್ಚಾಗುತ್ತಿದೆ. ಪ್ರತಿಯೊಂದು ವಸ್ತುಗಳು ಇಂದು ಆನ್‌ಲೈನಿನಲ್ಲಿ ಲಭ್ಯವಿರುವುದರಿಂದ ಬಳಕೆದಾರರು ಹೆಚ್ಚು ಆನ್‌ಲೈನ್‌ ಮಾರುಕಟ್ಟೆಯನ್ನು ಖರೀದಿಗಾಗಿ ಆಶ್ರಯಿಸಿದ್ದಾರೆ. ಇದಕ್ಕದೇ ಆನ್‌ಲೈನ್‌ನಲ್ಲಿ ಆಕರ್ಷಕ ಆಫರ್ ಗಳು, ಬೆಲೆ ಕಡಿತ ಸೇರಿದಂತೆ ಎಕ್ಸ್‌ಕ್ಲೂಸಿವ್ ಸೇಲ್‌ಗಳು ನಡೆಯುತ್ತಿರುವುದರಿಂದ ಗ್ರಾಹಕರು ಹೆಚ್ಚಾಗಿ ಆನ್‌ಲೈನ್ ಮಾರುಕಟ್ಟೆಯನ್ನು ಅವಲಂಬಿಸಿದ್ದಾರೆ.

'850 ಕಿ.ಮೀ ಹುಡ್ಕೋಂಡು ಬಂದು ಕಸ್ಟಮರ್‌ಗೆ ಹೊಡೆದ' ಓನರ್..!

ಇದೇ ಮಾದರಿಯಲ್ಲಿ ಆನ್‌ಲೈನಿನಲ್ಲಿ ವಸ್ತುವನ್ನು ಖರೀಸುವ ಗ್ರಾಹಕರು ಅದರ ಕುರಿತಂತೆ ಅಲ್ಲಿಯೇ ರಿವ್ಯೂವನ್ನು ದಾಖಲಿಸುತ್ತಾರೆ. ವಸ್ತುವಿಗೆ ರೇಟಿಂಗ್ ಸಹ ನೀಡುತ್ತಾರೆ. ಇಷ್ಟವಾದರೆ, ಇಲ್ಲವೇ ವಸ್ತು ಸರಿಯಿಲ್ಲವಾದರೆ ನೇರವಾಗಿ ತಮ್ಮ ಅಭಿಪ್ರಾಯವನ್ನು ದಾಖಲಿಸುತ್ತಾರೆ. ಇನ್ನು ಮುಂದೆ ಈ ಮಾದರಿಯಲ್ಲಿ ನಿಮ್ಮ ಅಭಿಪ್ರಾಯವನ್ನು ದಾಖಲಿಸಬೇಕಾದರೆ ಎಚ್ಚರ ವಹಿಸಿ. ಕಾರಣ ಮುಂದೆ ಇದೆ ನೋಡಿ.

ಓದಿರಿ: ಬೆಂಗಳೂರಿನಲ್ಲಿ ಶೀಘ್ರವೇ ಎಲ್ಲೇಡೆ ಉಚಿತ ವೈ-ಫೈ..!! ಸದ್ಯಕ್ಕೆ ಎಲ್ಲೆಲ್ಲಿ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿವ್ಯೂ ತಂದ ಆಪತ್ತು:

ರಿವ್ಯೂ ತಂದ ಆಪತ್ತು:

ಈ ಘಟನೆ ನಡೆದಿರುವುದು ಚೀನಾದಲ್ಲಿ, ಆಲಿಬಾಬಾ ಆನ್‌ಲೈನ್‌ ಶಾಪಿಂಗ್ ತಾಣದಲ್ಲಿ ವಸ್ತುವೊಂದನ್ನು ಖರೀದಿಸಿದ ಮಹಿಳೆಯೊಬ್ಬರು, ವಸ್ತುವಿನ ಕುರಿತು ಮತ್ತು ಅದರ ಮಾರಾಟಗಾರನ ಕುರಿತು ಕೆಟ್ಟ ರಿವ್ಯೂ ನೀಡಿದಲ್ಲದೇ, ರೇಟಿಂಗ್ ಸಹ ಅತೀ ಕಡಿಮೆ ನೀಡಿದ್ದರು ಎನ್ನಲಾಗಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?
ಹುಡುಕಿಬಂದು ಹೊಡೆದ:

ಹುಡುಕಿಬಂದು ಹೊಡೆದ:

ಮಹಿಳೆಯೂ ನೀಡಿದ್ದ ಕೆಟ್ಟ ರಿವ್ಯೂ ಹಾಗೂ ರೆಟೀಂಗ್‌ನಿಂದಾಗಿ ರೀಟೆಲ್ ಮಾರಾಟಗಾರನು ಆಲಿಬಾಬಾದಲ್ಲಿ ವಸ್ತುವನ್ನು ಮಾರಾಟ ಮಾಡುವ ಅವಕಾಶವನ್ನು ಕಳೆದುಕೊಂಡ ಎನ್ನಲಾಗಿದೆ. ಇದಕ್ಕಾಗಿ ರಿವ್ಯೂ ನೀಡಿದ ಮಹಿಳೆಗೆ ಪಾಠ ಕಲಿಸಲು 850KM ದೂರದಿಂದ ಹುಡುಕಿಕೊಂಡು ಬಂದು ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಸಿಸಿಟಿವಿಯಲ್ಲಿ ಸೆರೆ:

850KM ದೂರದಿಂದ ಹುಡುಕಿಕೊಂದು ಬಂದು ಮಾರಾಟಗಾರ ಮಹಿಳೆಯ ಮೇಲೆ ದಾಳಿ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಿಂದ ಸದ್ಯ ಪೊಲೀಸರ ಅಥಿತಿಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಮುಂದೆ ಆನ್‌ಲೈನಿನಲ್ಲಿ ಬ್ಯಾಡ್ ರಿವ್ಯೂ ಬರೆಯುವ ಮುನ್ನ ಎಚ್ಚರವಹಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Customer Writes Bad Review: For Online Store, Vengeful Shop Owner Travels 850Km And Beats Her Up. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot