Subscribe to Gizbot

ವೊಡಾಫೋನ್ ಚಂದ್ರನಲ್ಲಿ '4ಜಿ ನೆಟ್​ವರ್ಕ್' ಸ್ಥಾಪಿಸುತ್ತಿರುವುದು ಏಕೆ ಗೊತ್ತಾ?

Written By:

ಭೂಮಿಯ ಉಪಗ್ರಹ ಚಂದ್ರನಲ್ಲಿಯೂ 4ಜಿ ನೆಟ್​ವರ್ಕ್ ಸ್ಥಾಪಿಸಲು ನೋಕಿಯಾ ಸಹಯೋಗದಲ್ಲಿ ವೊಡಾಫೋನ್ ಜರ್ಮನಿ ಯೋಜನೆಯೊಂದನ್ನು ರೂಪಿಸಿದೆ.!! ಮುಂದಿನ ವರ್ಷವೇ ಈ ಯೋಜನೆಯನ್ನು ಸಾಕಾರಗೊಳಿಸಲು ನಿಶ್ಚಯಿಸಲಾಗಿದ್ದು, ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯೊಂದನ್ನಿಡಲು ವೊಡಾಫೋನ್ ಮುಂದಾಗಿದೆ.!!

ಹೌದು, ಭೂಮಿಯ ಮೇಲೆ ಎಷ್ಟೋ ಭಾಗದಲ್ಲಿ ಈಗಲೂ ಸಹ ಸರಿಯಾದ 2G ಡೇಟಾ ಕೂಡ ಲಭ್ಯವಿಲ್ಲ. ಆದರೆ, ಚಂದ್ರನ ಮೇಲೆ ವೊಡಾಫೋನ್ 4G ನೆಟ್‌ವರ್ಕ್ ಸ್ಥಾಪಿಸಲು ಹೊರಟಿರುವುದು ಸಾಮಾನ್ಯರಿಗೆ ಕುತೋಹಲವನ್ನು ಉಂಟು ಮಾಡಿದೆ.! ಚಂದ್ರನಲ್ಲಿ ಡೇಟಾವನ್ನು ಬಳಕೆ ಮಾಡುವವರು ಯಾರು ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ.!!

ವೊಡಾಫೋನ್ ಚಂದ್ರನಲ್ಲಿ '4ಜಿ ನೆಟ್​ವರ್ಕ್' ಸ್ಥಾಪಿಸುತ್ತಿರುವುದು ಏಕೆ ಗೊತ್ತಾ?

ಆದರೆ ಚಂದ್ರನಲ್ಲಿ 4ಜಿ ನೆಟ್​ವರ್ಕ್ ಸ್ಥಾಪಿಸುತ್ತಿರುವುದು ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಒಂದು ಅತ್ಯುತ್ತಮ ಸಾಧನೆಯಾಗಲಿದ್ದು, ಹಾಗಾದರೆ, ಚಂದ್ರನಲ್ಲಿ 4ಜಿ ನೆಟ್​ವರ್ಕ್ ಸ್ಥಾಪಿಸುವಿದಕ್ಕೆ ಕಾರಣವೇನು? ಚಂದ್ರನಲ್ಲಿ 4ಜಿ ನೆಟ್​ವರ್ಕ್ ಸ್ಥಾಪಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಚಂದ್ರನಲ್ಲೂ 4ಜಿ ನೆಟ್​ವರ್ಕ್!!

ಚಂದ್ರನಲ್ಲೂ 4ಜಿ ನೆಟ್​ವರ್ಕ್!!

ವೊಡಾಫೋನ್ ಜರ್ಮನಿ ಟೆಲಿಕಾಂ ಪ್ರಖ್ಯಾತ ಮೊಬೈಲ್ ತಯಾರಕಾ ಬ್ರ್ಯಾಂಡ್ ನೋಕಿಯಾ ಕಂಪೆನಿ ಸಹಯೋಗದಲ್ಲಿ ಚಂದ್ರನ ಮೇಲೆ 4ಜಿ ನೆಟ್​ವರ್ಕ್ ತರಲು ಮುಂದಾಗಿದೆ. ಚಂದ್ರನಲ್ಲಿಗೆ ಕಳುಹಿಸಲಾಗಿರುವ ನಾಸಾದ ರೋವರ್​ನಿಂದ ಮಾಹಿತಿ ಸಂಗ್ರಹಿಸಲು ಅನುಕೂಲವಾಗುವಂತೆ ಚಂದ್ರನಲ್ಲಿ 4ಜಿ ನೆಟ್​ವರ್ಕ್ ತರುವ ಯೋಜನೆಯನ್ನು ರೂಪಿಸಲಾಗುತ್ತಿದೆ.!!

1800 ಮೆಗಾರ್ಹ್ಜಟ ಫ್ರೀಕ್ವೆನ್ಸಿ!!

1800 ಮೆಗಾರ್ಹ್ಜಟ ಫ್ರೀಕ್ವೆನ್ಸಿ!!

ಚಂದ್ರನಲ್ಲಿಗೆ ಕಳುಹಿಸಲಾಗಿರುವ ನಾಸಾದ ರೋವರ್​ನಿಂದ ಮಾಹಿತಿ ಸಂಗ್ರಹಿಸಲು ವೊಡಾಫೋನ್ 1800 ಮೆಗಾರ್ಹ್ಜಟ ಫ್ರೀಕ್ವೆನ್ಸಿ ಬ್ಯಾಂಡ್​ನ ನೆಟ್​ವರ್ಕ್ ಅನ್ನು ಚಂದ್ರನ ಮೇಲೆ ಸ್ಥಾಪಿಸುತ್ತಿದೆ. ಮೆಗಾರ್ಹ್ಜಟ ಫ್ರೀಕ್ವೆನ್ಸಿ ಬ್ಯಾಂಡ್​ನ ನೆಟ್​ವರ್ಕ್ ಮೂಲಕ ಚಂದ್ರನಿಂದ ಹೈ ಡಿಫಿನೇಷನ್ ಲೈವ್​ಸ್ಟ್ರೀಮ್ ಪ್ರಸಾರ ಸಾಧ್ಯವಾಗಲಿದೆ.!!

ಚಂದ್ರನಲ್ಲಿ ನೆಟ್‌ವರ್ಕ್ ಸ್ಥಾಪಿಸುವುದು ಹೇಗೆ?

ಚಂದ್ರನಲ್ಲಿ ನೆಟ್‌ವರ್ಕ್ ಸ್ಥಾಪಿಸುವುದು ಹೇಗೆ?

ಬರ್ಲಿನ್​ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪಿಟಿ ಸೈಂಟಿಸ್ಟ್ ಹಾಗು ನೋಕಿಯಾ ಬೆಲ್ ಲ್ಯಾಬ್ಸ್ ಸಿದ್ಧಪಡಿಸಿರುವ ಹಗುರ ಮೊಬೈಲ್ ನೆಟ್​ವರ್ಕ್ ಉಪಕರಣವನ್ನು ಅಮೆರಿಕದ ಫ್ಲಾರಿಡಾದಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಉಡಾಯಿಸಿ ಚಂದ್ರನಲ್ಲಿಗೆ ಕಳುಹಿಸಲಾಗುತ್ತಿದೆ.!!

ನೋಕಿಯಾ ಸಹಯೋಗ ಏಕೆ?

ನೋಕಿಯಾ ಸಹಯೋಗ ಏಕೆ?

ವೊಡಾಫೋನ್ ಸ್ಥಾಪಿಸಲಿರುವ 1800 ಮೆಗಾರ್ಹ್ಜಟ ಫ್ರೀಕ್ವೆನ್ಸಿ ಬ್ಯಾಂಡ್​ನ ನೆಟ್​ವರ್ಕ್ ಮೂಲಕ ಚಂದ್ರನಿಂದ ಹೈ ಡಿಫಿನೇಷನ್ ಲೈವ್​ಸ್ಟ್ರೀಮ್ ಪ್ರಸಾರ ಸಾಧ್ಯವಾಗಲಿದೆ. ರೋವರ್ ಸಂಗ್ರಹಿಸುವ ಮಾಹಿತಿಯನ್ನು ನೋಕಿಯಾದ ಉಪಕರಣ ಬಳಸಿ ವೊಡಾಫೋನ್ ನೆಟ್​ವರ್ಕ್ ಮೂಲಕ ಸಂಗ್ರಹಿಸಲಾಗುತ್ತದೆ.!!

ಮಹತ್ವದ ಹೆಜ್ಜೆಯಾಗಲಿದೆ!!

ಮಹತ್ವದ ಹೆಜ್ಜೆಯಾಗಲಿದೆ!!

ಬಾಹ್ಯಾಕಾಶದಲ್ಲಿ ಸ್ಥಾಪಿಸಲಾಗುವ ಮೊದಲ 4ಜಿ ನೆಟ್​ವರ್ಕ್ ಇದಾಗಲಿದ್ದು, ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಲಿದೆ.ರೋವರ್ಸ್​ನ ಕಾರ್ಯಾಚರಣೆಯಲ್ಲಿ ಸಂಗ್ರಹವಾಗುವ ವೈಜ್ಞಾನಿಕ ದತ್ತಾಂಶ ಮತ್ತು ವರದಿಗಳನ್ನು ಕ್ಷಣದಲ್ಲೇ ಪಡೆಯುವುದರಿಂದ ಭವಿಷ್ಯದಲ್ಲಿ ಬಾಹ್ಯಾಕಾಶ ಅಧ್ಯಯನಕ್ಕೆ ಸಹಕಾರಿಯಾಗಲಿದೆ.!!

ಓದಿರಿ:ವಿಶ್ವದ ಮೊದಲ ಮೊಬೈಲ್ 5G ಚಿಪ್‌ಸೆಟ್ ಬಿಡುಗಡೆ!!..ಡೇಟಾ ಸ್ಪೀಡ್ ಎಷ್ಟು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The moon will get its first mobile phone network in 2019, enabling high-definition streaming from the lunar landscape back to earth. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot