ಈ ವರ್ಷ 5.3 ಬಿಲಿಯನ್‌ ಫೋನ್‌ಗಳು ಇ- ವೇಸ್ಟ್‌! ಇದರಿಂದಾಗುವ ಅಪಾಯವೇನು?

|

ನಮ್ಮ ಕೈಗೆ ಹೊಸ ಸ್ಮಾರ್ಟ್‌ಫೋನ್‌ ಬರುವುದೇ ತಡ ಹಳೆ ಫೋನ್‌ ಮನೆಯ ಮೂಲೆ ಸೇರಲಿದೆ. ಹೀಗೆ ಪ್ರತಿಯೊಬ್ಬರೂ ಕೂಡ ಹೊಸ ಫೋನ್‌ ಕೊಮಡ ನಂತರ ಹಳೆ ಫೋನ್‌ ಬಳಸುವುದುಕ್ಕೆ ಹೋಗುವುದೇ ಇಲ್ಲ. ಅದರ ಬಗ್ಗೆ ಚಿಂತಿಸುವುದು ಕೂಡ ಇಲ್ಲ. ಆದರೆ ಅದರ ಬಗ್ಗೆ ಚಿಂತಿಸಬೇಕಾದ ಕಾಲ ಸನ್ನಿಹಿತವಾಗಿದೆ. ಏಕೆಂದರೆ ದೇಶದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಇ-ವೇಸ್ಟ್‌ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ತಜ್ಞರ ಪ್ರಕಾರ ಈ ವರ್ಷ ಸರಿಸುಮಾರು 5.3 ಬಿಲಿಯನ್ ಸ್ಮಾರ್ಟ್‌ಫೋನ್‌ಗಳ ಇ-ವೇಸ್ಟ್‌ ಆಗಲಿದೆ ಎನ್ನಲಾಗಿದೆ.

ತಜ್ಞರು

ಹೌದು, ದಿನದಿಂದ ದಿನಕ್ಕೆ ಇ-ವೇಸ್ಟ್‌ ಪ್ರಮಾಣ ಹೆಚ್ಚಾಗುತ್ತಿರುವುದಾಗಿ ತಜ್ಞರು ಎಚ್ಚರಿಸಿದ್ದಾರೆ. ಹೊಸ ಡಿವೈಸ್‌ಗಳನ್ನು ತಂದ ನಂತರ ಹಳೆ ಡಿವೈಸ್‌ಗಳ ಬಳಕೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಆದರೆ ಇ-ವೇಸ್ಟ್‌ ಅನ್ನು ರಿ ಸೈಕ್ಲಿಂಗ್‌ ಮಾಡುವುದು ಕೂಡ ಸಾಧ್ಯವಿಲ್ಲದಿರುವುದರಿಂದ ಇದರ ಪ್ರಮಾಣ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಹಾಗಾದ್ರೆ ಇ-ತ್ಯಾಜ್ಯದಲ್ಲಿ ಯಾವೆಲ್ಲಾ ಡಿವೈಸ್‌ಗಳ ಪ್ರಮಾಣ ಹೆಚ್ಚಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇ-ತ್ಯಾಜ್ಯ

ಹೆಚ್ಚಾಗುತ್ತಿರುವ ಇ-ತ್ಯಾಜ್ಯದ ಬಗ್ಗೆ ಸಮಿಕ್ಷೆಯೊಂದು ಆಘಾತಕಾರಿ ಮಾಹಿತಿ ಹೊರಹಾಕಿದೆ. ಅದರಂತೆ ಗ್ರಾಹಕರು ಹೆಚ್ಚಾಗಿ ಸಂಗ್ರಹಿಸುವ ಸಣ್ಣ ಪ್ರಾಡಕ್ಟ್‌ಗಳಲ್ಲಿ ಮೊಬೈಲ್ ಫೋನ್ 4 ನೇ ಸ್ಥಾನದಲ್ಲಿದೆ. ಇನ್ನು ಸಮೀಕ್ಷೆ ನಡೆಸಿರುವ WEEE ಫೋರಮ್‌ನ ಸದಸ್ಯರು ಜೂನ್‌ನಿಂದ ಸೆಪ್ಟೆಂಬರ್, 2022 ರವರೆಗೆ ಸಮೀಕ್ಷೆ ಮಾಡಿದ್ದಾರೆ. ಅಲ್ಲದೆ ಈ ಸಮೀಕ್ಷೆಯ ರಿಸ್ಟಲ್‌ ಅನ್ನು UN ಇನ್‌ಸ್ಟಿಟ್ಯೂಟ್ ಫಾರ್ ಟ್ರೈನಿಂಗ್ ಅಂಡ್ ರಿಸರ್ಚ್ (UNITAR) ಸಸ್ಟೈನಬಲ್ ಸೈಕಲ್ಸ್ (SCYCLE) ಪ್ರೋಗ್ರಾಂ ಏಕೀಕರಿಸಿದೆ.

ಇ-ತ್ಯಾಜ್ಯ

ಈ ವರ್ಷ ಸಣ್ಣ ಇ-ತ್ಯಾಜ್ಯ ವಸ್ತುಗಳ ಮೇಲೆ ಗಮನಹರಿಸಿದ್ದೇವೆ. ಏಕೆಂದರೆ ಮನೆಗಳಲ್ಲಿ ಬಳಕೆಯಾಗದ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಬೇರೆ ವಸ್ತುಗಳಾಗಿದ್ದರೆ ಅದನ್ನು ಕಸದ ತೊಟ್ಟಿಗೆ ಸೀದಾ ಎಸೆದು ಬಿಡುತ್ತಾರೆ. ಆದರೆ ಎಲೆಕ್ಟ್ರಾನಿಕ್ಸ್‌ ಡಿವೈಸ್‌ಗಳನ್ನು ಎಸೆಯುವವರ ಸಂಖ್ಯೆ ಕಡಿಮೆ. ಎಸೆದರೂ ಕೂಡ ಅದು ರಿಸೈಕ್ಲಿಂಗ್‌ ಆಗುವುದಿಲ್ಲ. ಇದರಿಂದ ವಾತಾವರಣದಲ್ಲಿ ಇ-ತ್ಯಾಜ್ಯದ ಪ್ರಮಾಣ ಜಾಸ್ತಿಯಾಗಿದೆ ಎಂದು WEEE ಫೋರಮ್‌ನ ಡೈರೆಕ್ಟರ್ ಜನರಲ್ ಪ್ಯಾಸ್ಕಲ್ ಲೆರಾಯ್ ಹೇಳಿದ್ದಾರೆ.

ಬಿಲಿಯನ್

ಇ-ವೇಸ್ಟ್‌ ಪ್ರಮಾಣದಲ್ಲಿ ಮೊಬೈಲ್ ಫೋನ್‌ಗಳ ಒಟ್ಟು ಜಾಗತಿಕ ಸ್ಟಾಕ್ ಸುಮಾರು 16 ಬಿಲಿಯನ್ ಆಗಿದೆ. ಅದರಲ್ಲೂ 2022 ರಲ್ಲಿ ಸೆಲ್ ಫೋನ್‌ಗಳು, ಎಲೆಕ್ಟ್ರಿಕ್ ಟೂತ್‌ಬ್ರಶ್‌ಗಳು, ಟೋಸ್ಟರ್‌ಗಳು ಮತ್ತು ಕ್ಯಾಮೆರಾಗಳಂತಹ ಸಣ್ಣ EEE ವಸ್ತುಗಳು ಪ್ರಪಂಚದಾದ್ಯಂತ ಉತ್ಪಾದನೆಯಾಗುವ ಅಂದಾಜು ಒಟ್ಟು 24.5 ಮಿಲಿಯನ್ ಟನ್‌ನಷ್ಟಿದೆ ಎಂದು ಹೇಳಲಾಗಿದೆ. "ಈ ಸಾಧನಗಳು ಹೊಸ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಗಾಳಿ ಟರ್ಬೈನ್‌ಗಳು, ಎಲೆಕ್ಟ್ರಿಕ್ ಕಾರ್ ಬ್ಯಾಟರಿಗಳು ಅಥವಾ ಸೌರ ಫಲಕಗಳಂತಹ ಇತರ ಉಪಕರಣಗಳ ಉತ್ಪಾದನೆಯಲ್ಲಿ ಬಳಸಬಹುದಾಗಿದೆ. ಅದರೂ ಕೂಡ ಇ- ತ್ಯಾಜ್ಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ.

ಫೋನ್‌ಗಳ

ಇನ್ನು ಈ ವರ್ಷ ಭಾರತದಲ್ಲಿ 5G ಸೇವೆ ಶುರುವಾಗಿರುವುದರಿಂದ ಮುಂದಿನ ದಿನಗಳಲ್ಲಿ 5G ಫೋನ್‌ಗಳ ಬಳಕೆ ಹೆಚ್ಚಾಗಲಿದೆ. ಈಗಾಗಲೇ ಬಳಕೆದಾರರ ಕೈನಲ್ಲಿರುವ ಇತರೆ ಸ್ಮಾರ್ಟ್‌ಫೋನ್‌ಗಳು ಮನೆಯ ಮೂಲೆ ಸೇರುವುದು ಪಕ್ಕಾ ಆಗಿದೆ. ಹೀಗೆ ಬಳಕೆಗೆ ಯೋಗ್ಯವಲ್ಲ ಎಂದು ನಾವು ಎಸೆಯುವ ಡಿವೈಸ್‌ಗಳೇ ಇ-ತ್ಯಾಜ್ಯಕ್ಕೆ ಕಾರಣವಾಗ್ತಿರೋದು. ಮನೆಯ ಮೂಲೆಯಲ್ಲಿ ಸೇರಿರುವ ಹಳೆಯ ಡಿವೈಸ್‌ಗಳು ಪರಿಸರಕ್ಕೆ ಉಂಟು ಮಾಡುವ ಹಾನಿಯ ಬಗ್ಗೆ ನಾವ್ಯಾರೂ ಕೂಡ ತಲೆ ಕೆಡಿಸಿಕೊಳ್ಳದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.

ಇ-ತ್ಯಾಜ್ಯದಿಂದ ಪರಿಸರಕ್ಕೆ ಏನೆಲ್ಲಾ ಹಾನಿ ?

ಇ-ತ್ಯಾಜ್ಯದಿಂದ ಪರಿಸರಕ್ಕೆ ಏನೆಲ್ಲಾ ಹಾನಿ ?

ಇ-ತ್ಯಾಜ್ಯದಲ್ಲಿ ಸೀಸ, ಪಾದರಸ,ಆರ್ಸೆನಿಕ್‌, ಕ್ಯಾಡ್ಮಿಯಂನಂತಹ ಕ್ಯಾನ್ಸರ್‌ಕಾರಕ ಅಂಶಗಳು ಇವೆ. ಇವು ಶೇ.38ರಷ್ಟು ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿರುವುದರಿಂದ ಪರಿಸರಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತವೆ. ಅನಿಯಂತ್ರಿತ ಸುಡುವಿಕೆ, ನಿಸಂಯೋಜನೆ ಮತ್ತು ಬಿಸಾಡುವಿಕೆಯಿಂದ ಅನೇಕ ಪರಿಸರ ತೊಂದರೆಗಳು ಉಂಟಾಗುತ್ತವೆ. ಅಂತರ್ಜಲ, ವಾತಾವರಣ ಕಲುಷಿತಗೊಳ್ಳುವುದು, ಬಿಸಾಡುವುದರಿಂದ ಜಲಮಾಲಿನ್ಯ, ಸುಡುವುದರಿಂದ ವಾಯುಮಾಲಿನ್ಯ ಮತ್ತು ಸಂಸ್ಕರಣೆಯಲ್ಲಿ ಭಾಗಿಯಾಗುವ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

Best Mobiles in India

Read more about:
English summary
More than 5 billion smartphones will turn into e-waste in 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X