ಇನ್ನೇನು 2017 ಕೊನೆಗೊಳ್ಳುತ್ತಲಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ಅತೀ ಹೆಚ್ಚು ಗೂಗಲ್ ಮಾಡಲ್ಪಟ್ಟ ವಿಷಯಗಳ ಕುರಿತಾಗಿ ಹಲವಾರು ವರದಿಗಳು ಹೊರಬರುತ್ತಿವೆ.

ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಕೂಡ ಈ ವರ್ಷದ ಟಾಪ್ ಟ್ರೆಂಡಿಂಗ್ ಸರ್ಚ್ ಕ್ವೆರೀಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 'ಹೌ ಟು' ವಿಭಾಗದಲ್ಲಿ ಜನರು ಹೆಚ್ಚು ಹುಡುಕಾಡಿರುವ ಟಾಪ್ ಎರಡು ಪ್ರಶ್ನೆಗಳು ಹೀಗಿವೆ. ಅದರಲ್ಲೂ ಲಕ್ಷಾಂತರ ಭಾರತೀಯರ ನೆಮ್ಮದಿ ಕೆಡಿಸಿ ಗೂಗಲ್ ನ ಮೊರೆ ಹೊಕ್ಕುವಂತೆ ಮಾಡಿರುವ ಪ್ರಶ್ನೆ ಯಾವುದು ಗೊತ್ತೇ? ಅದೇ "ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಹೇಗೆ?" ಈ ಪ್ರಶ್ನೆಯ ನಂತರದ ಸ್ಥಾನದಲ್ಲಿರುವ ಪ್ರಶ್ನೆ "ಜಿಯೋ ಫೋನ್ ಬುಕ್ ಮಾಡುವುದು ಹೇಗೆ?". ಇದರ ನಂತರದ ಸ್ಥಾನದಲ್ಲಿದೆ " ಭಾರತದಲ್ಲಿ ಬಿಟ್ಕಾಯಿನ್ ಖರೀದಿಸುವುದು ಹೇಗೆ?" ಎನ್ನುವ ಪ್ರಶ್ನೆ.
ಸರಕಾರ ಆಧಾರ್ ಸಂಖ್ಯೆಯನ್ನು ತಮ್ಮ ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಜೋಡಿಸಿವುದು ಕಡ್ಡಾಯ ಪಡಿಸಿರುವ ಕಾರಣ ಜನರು ಕೊನೆಯ ದಿನಾಂಕದೊಳಗೆ ಈ ಕೆಲಸ ಮುಗಿಸುವ ತರಾತುರಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಆಧಾರ್ ಜೋಡಣೆಯ ವಿಧಾನದ ಕುರಿತು ತಿಳಿಯಲು ಇಂಟರ್ನೆಟ್ ನ ಮೊರೆ ಹೊಕ್ಕಿರುವುದು ಅಚ್ಚರಿಯ ವಿಷಯವೇನಲ್ಲ.
ಇನ್ನು ರಿಲಯೆನ್ಸ್ ಜಿಯೋಫೋನ್ ಕುರಿತು ಹೇಳುವುದಾದರೆ ಭಾರತದಲ್ಲಿ ಲಾಂಚ್ ಆಗಿರುವ ಮೊದಲ 4ಜಿ ವೊಲತೆ ಫೀಚರ್ ಫೋನ್ ಇದಾಗಿದೆ. ಅಲ್ಲದೆ ಇದರ ಕಡಿಮೆ ದರ ಮತ್ತು ವಾಯ್ಸ್ ಕಮಾಂಡ್ ಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇದರ ವಿಶೇಷತೆಯಾಗಿದೆ.ಆಗಸ್ಟ್ 24ರಂದು ಪ್ರಾರಂಭವಾದ ಮೊದಲ ಹಂತದ ಬುಕಿಂಗ್ ನಲ್ಲಿ 6 ಮಿಲಿಯನ್ ಗೂ ಅಧಿಕ ಬುಕಿಂಗ್ ಗಳನ್ನು ಕಂಡ ಜಿಯೋಫೋನ್ ದಾಖಲೆಯನ್ನೇ ಸೃಷ್ಟಿಸಿತು.
ಎಂದೂ ಒಡೆಯದ ಹಾಗೂ ಒಡೆದರೂ ಸ್ವತಃ ಗುಣಪಡಿಸಿಕೊಳ್ಳುವ ಮೊಬೈಲ್ ಡಿಸ್‌ಪ್ಲೇ!!
ಇಷ್ಟು ಭಾರೀ ಸಂಖ್ಯೆಯ ಬುಕಿಂಗ್ ಗಳನ್ನು ಗಮನಿಸಿದರೆ ಬಹಳಷ್ಟು ಗ್ರಾಹಕರು ಜಿಯೋಫೋನ್ ಬುಕ್ ಮಾಡುವ ವಿಧಾನ, ಬುಕಿಂಗ್ ನ ಸ್ಟೇಟಸ್ ನೋಡುವ ವಿಧಾನಗಳನ್ನು ತಿಳಿಯಲು ಇಂಟರ್ನೆಟ್ ನ ಸಹಾಯ ಪಡೆದಿದ್ದರೆ ಆಶ್ಚರ್ಯವೇನಿಲ್ಲ.
ಜಿಯೋಫೋನ್ ರೂ 0 ಬೆಲೆಗೆ ಕೈಗೆ ಸಿಗಲಿರುವುದೇ ಇದರ ಪ್ರಮುಖ ಆಕರ್ಷಣೆಯಾಗಿದೆ. ಜಿಯೋಫೋನ್ ಖರೀದಿಸುವವರು ರೂ 1500 ಸುರಕ್ಷತಾ ಠೇವಣಿ ಇರಿಸ ಬೇಕಾಗಿದ್ದು ಕೆಲವು ನಿಯಮಗಳು ಮತ್ತು ಷರತ್ತುಗಳ ಅನುಸಾರ 3 ವರ್ಷಗಳ ನಂತರ ಈ ಮೊತ್ತವನ್ನು ಗ್ರಾಹಕರಿಗೆ ಮರುಪಾವತಿಸಲಾಗುತ್ತದೆ.
ಉದಾಹರಣೆಗೆ ಮೂರು ವರ್ಷಗಳ ಕಾಲ ಕಡಿಮೆಯೆಂದರೆ ರೂ 1500 ಗಳ ರೀಚಾರ್ಜ್ ಮಾಡಬೇಕು ಮೊದಲಾದ ಷರತ್ತುಗಳು ಇವೆ. ಈ ಪೈಕಿ ರೂ 500 ಅನ್ನು ಪ್ರಿ-ಬುಕಿಂಗ್ ನ ಸಂದರ್ಭದಲ್ಲಿ ಪಾವತಿಸಿದರೆ ಉಳಿದ ರೂ 1000 ವನ್ನು ಜಿಯೋಫೋನ್ ನ ಡೆಲಿವರಿಯ ಸಂದರ್ಭದಲ್ಲಿ ಪಾವತಿಸಬೇಕಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.