ತಾಯಂದಿರ ದಿನದ ಪ್ರಯುಕ್ತ ವಿಶೇಷ ಸ್ಟಿಕ್ಕರ್‌ ಪ್ಯಾಕ್‌ ಪರಿಚಯಿಸಿದ ವಾಟ್ಸಾಪ್‌!

|

ಇಂದು ಇಡೀ ವಿಶ್ವದೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗ್ತಿದೆ. ತಾಯಿಯ ಮಹತ್ವವನ್ನು ಸಾರುವ, ತಾಯಿಯ ವಾತ್ಸಲ್ಯವನ್ನು ನೆನೆಯುವ ಕೆಲಸವನ್ನು ಮಾಡಲಾಗ್ತಿದೆ. ಇನ್ನು ತಾಯಿಯ ಮಹತ್ವವನ್ನು ಸಾರುವ ಈ ದಿನದಂದು ತಮ್ಮ ತಾಯಿಯ ಜೊತೆಗೆ ಕಾಲ ಕಳೆಯಲು ಎಲ್ಲರೂ ಬಯಸುತ್ತಾರೆ. ಅಲ್ಲದೆ ವಾಟ್ಸಾಪ್‌ ಮೂಲಕ ತಾಯಿಯ ದಿನದ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ನಲ್ಲಿ ವಿಶೇಷ ದಿನಗಳಂದು ಸ್ಟಿಕ್ಕರ್‌ಗಳ ಮೂಲಕ ವಿಶ್‌ ಮಾಡುವುದು ಸಾಮಾನ್ಯ. ಇಂದು ತಾಯಂದಿರ ದಿನವಾಗಿರುವುದರಿಂದ ತಾಯಿಯ ಮಮತೆಯ ಸ್ಟಿಕ್ಕರ್‌ಗಳನ್ನು ವಾಟ್ಸಾಪ್‌ನಲ್ಲಿ ಎಲ್ಲರೂ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ನೀವು ಕೂಡ ನಿಮ್ಮ ವಾಟ್ಸಾಪ್‌ ಚಾಟ್‌ನಲ್ಲಿ ನಿಮ್ಮ ಸ್ನೇಹಿತರಿಗೆ ತಾಯಿಯ ದಿನದ ವಿಶೇಷ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡುವುದಕ್ಕೆ ಅವಕಾಶವಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ತಾಯಿಯ ದಿನಾಚರಣೆಯ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ತನ್ನ ಬಳಕೆದಾರರಿಗೆ ತಾಯಂದಿರ ದಿನದ ಪ್ರಯುಕ್ತ ವಿಶೇಷ ಸ್ಟಿಕ್ಕರ್‌ ಪ್ಯಾಕ್‌ ಅನ್ನು ಪರಿಚಯಿಸಿದೆ. ಇದಕ್ಕಾಗಿ ತನ್ನ ಬಳಕೆದಾರರಿಗೆ ಹಸಿರು ಹೃದಯದ ಎಮೋಜಿಯಲ್ಲಿ, ವಾಟ್ಸಾಪ್‌ ಟ್ವೀಟ್ ಮಾಡಿದೆ. ಎಲ್ಲಾ ತಾಯಂದಿರಿಗೆ ತಾಯಂದಿರ ದಿನದ ಶುಭಾಶಯಗಳು! ಹೊಸ "ಮಾಮಾ ಲವ್" ಸ್ಟಿಕ್ಕರ್ ಪ್ಯಾಕ್ ಈಗ ವಾಟ್ಸಾಪ್‌ನಲ್ಲಿ ಲಭ್ಯವಿದೆ ಎಂದು ಟ್ವೀಟ್‌ ಮಾಡಿದೆ. ಸದ್ಯ ವಾಟ್ಸಾಪ್‌ ಪರಿಚಯಿಸಿರುವ ''ಮಾಮಾ ಲವ್‌'' ಸ್ಟಿಕ್ಕರ್‌ ಪ್ಯಾಕ್‌ ಅನ್ನು ಬಳಸುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ವಾಟ್ಸಾಪ್‌ನಲ್ಲಿ ತಾಯಂದಿರ ದಿನದ ಸ್ಟಿಕ್ಕರ್‌ ಪ್ಯಾಕ್‌ ಬಳಸುವುದು ಹೇಗೆ?

ವಾಟ್ಸಾಪ್‌ನಲ್ಲಿ ತಾಯಂದಿರ ದಿನದ ಸ್ಟಿಕ್ಕರ್‌ ಪ್ಯಾಕ್‌ ಬಳಸುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ನಲ್ಲಿ ನಿಮ್ಮ ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ
ಹಂತ:2 ನಂತರ ನಿಮ್ಮ ಸ್ಕ್ರೀನ್‌ನಲ್ಲಿ ಕೆಳಗಿನ ಎಡಭಾಗದಲ್ಲಿರುವ ಸ್ಮೈಲಿ ಎಮೋಜಿಯ ಮೇಲೆ ಕ್ಲಿಕ್ ಮಾಡಿ
ಹಂತ:3 ಇದರಲ್ಲಿ ಸ್ಕ್ರೀನ್‌ ಕೆಳಭಾಗದಲ್ಲಿ ಕಾಣಿಸುವ ಸ್ಟಿಕ್ಕರ್ ಐಕಾನ್ ಅನ್ನು ಕ್ಲಿಕ್ ಮಾಡಿ
ಹಂತ:4 ಇದೀಗ ಪ್ಲಸ್ (+) ಚಿಹ್ನೆಯನ್ನು ನೋಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ
ಹಂತ:5 ಇದರಲ್ಲಿ ''ಮಾಮಾ ಪ್ರೀಲವ್‌'' ಸ್ಟಿಕ್ಕರ್‌ ಪ್ಯಾಕ್‌ ಕಾಣಲಿದೆ. ಇದರ ಮೇಲೆ ಡೌನ್‌ಲೋಡ್ ಬಟನ್ ಟ್ಯಾಪ್ ಮಾಡಿ
ಹಂತ:6 ಡೌನ್‌ಲೋಡ್ ಪೂರ್ತಿಯಾದ ನಂತರ ಹಸಿರು ಟಿಕ್ ಮಾರ್ಕ್ ಕಾಣಿಸುತ್ತದೆ
ಹಂತ:7 ಇದೀಗ ಚಾಟ್‌ಗೆ ಹಿಂತಿರುಗಿ ಮತ್ತು ನೀವು ಕಳುಹಿಸಲು ಬಯಸುವ ಸ್ಟಿಕ್ಕರ್‌ ಆಯ್ಕೆ ಮಾಡಿ.
ಹಂತ:8 ಒಮ್ಮೆ ನೀವು ಸ್ಟಿಕ್ಕರ್ ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ಸೆಂಡ್‌ ಮಾಡಬಹುದು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ಅಪ್ಲಿಕೇಶನ್‌ ಮಾರ್ಚ್ 1 ರಿಂದ ಮಾರ್ಚ್‌ 31 2022 ರ ನಡುವಿನ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ಮಾಸಿಕ ವರದಿಯಲ್ಲಿ ಭಾರತದ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್‌ ಮಾಡಿದೆ. ಇನ್ನು ಈ ಮಾಸಿಕ ಬಳಕೆದಾರ-ಸುರಕ್ಷತಾ ವರದಿಯು ಬಳಕೆದಾರರಿಂದ ಸ್ವೀಕರಿಸಿದ ದೂರುಗಳು ಮತ್ತು ವಾಟ್ಸಾಪ್‌ ತೆಗೆದುಕೊಂಡ ಕ್ರಮಗಳ ವಿವರಗಳನ್ನು ವರದಿ ಮಾಡಿದೆ.

ವಾಟ್ಸಾಪ್‌

ವಾಟ್ಸಾಪ್‌ ಮಾರ್ಚ್‌ ತಿಂಗಳಿನಲ್ಲಿ ಬಳಕೆದಾರರು ಮಾಡಿದ ರಿಪೋರ್ಟ್‌ ಆಧಾರದ ಮೇಲೆ 18 ಲಕ್ಷಕ್ಕೂ ಹೆಚ್ಚು ಖಾತೆಯನ್ನು ಬ್ಯಾನ್‌ ಮಾಡಿದೆ. ಬ್ಯಾನ್‌ ಆಗಿರುವ ಖಾತೆಗಳು ಕಿರುಕುಳ, ನಕಲಿ ಮಾಹಿತಿಯನ್ನು ಫಾರ್ವರ್ಡ್ ಮಾಡುವುದು, ಇತರ ಬಳಕೆದಾರರನ್ನು ವಂಚಿಸಿರುವುದು ಕಂಡುಬಂದಿದೆ.ಇದಲ್ಲದೆ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ. ವಾಟ್ಸಾಪ್‌ ಈಗಾಗಲೇ ವಾಟ್ಸಾಪ್‌ ಸಂದೇಶಗಳನ್ನು ಫಾರ್ವರ್ಡ್ ಮಾಡುವುದನ್ನು ಸೀಮಿತಗೊಳಿಸಿದೆ. ಅದರಂತೆ ನಕಲಿ ಸುದ್ದಿಗಳ ಹರಡಿರುವ ಖಾತೆಗಳನ್ನು ಬ್ಯಾನ್‌ ಮಾಡಿದೆ.

Best Mobiles in India

English summary
Mother’s Day 2022: How To Download & Send Stickers On WhatsApp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X