ಮೊಟೊ ಬಡ್ಸ್ 600 ANC ಬಿಡುಗಡೆ! ಅಚ್ಚರಿ ಎನಿಸುವ ಸೌಂಡ್‌ ಫೀಚರ್ಸ್‌!

|

ಹೊಸ ವರ್ಷದ ಆರಂಭದಲ್ಲಿ ಅನೇಕ ಕಂಪೆನಿಗಳು ತಮ್ಮ ಹೊಸ ಡಿವೈಸ್‌ಗಳನ್ನು ಅನಾವರಣಗೊಳಿಸಿವೆ. ಇದೀಗ ಮೊಟೊರೊಲಾ ಕಂಪೆನಿ ಕೂಡ ಹೊಸ ಮೊಟೊ ಬಡ್ಸ್‌ 600 ANC ಇಯರ್‌ಬಡ್ಸ್‌ ಅನ್ನು ಬಿಡುಗಡೆ ಮಾಡಿದೆ. CES 2023 ಕ್ಕಿಂತ ಮುಂಚಿತವಾಗಿಯೇ ಬಿಡುಗಡೆಯಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಈ ಇಯರ್‌ಬಡ್ಸ್‌ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು ಹೇಳಲಾಗಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ತನ್ನ ಹೊಸ ಮೊಟೊ ಬಡ್ಸ್‌ 600 ANC ಇಯರ್‌ಬಡ್ಸ್‌ ಬಿಡುಗಡೆಯಾಗಿದೆ. ಈ ಇಯರ್‌ಬಡ್ಸ್‌ ಸ್ನಾಪ್‌ಡ್ರಾಗನ್ ಸೌಂಡ್ ಫೀಚರ್ಸ್‌ನೊಂದಿಗೆ ಬರಲಿದೆ. ಇದು ತಲ್ಲೀನಗೊಳಿಸುವ ಧ್ವನಿಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಈ ಇಯರ್‌ಬಡ್ಸ್‌ ಸೌಂಡ್‌ ಮತ್ತು ಕಾಲ್‌ ಗುಣಮಟ್ಟದಲ್ಲಿ ಉತ್ತಮ ಸ್ಪಷ್ಟತೆಯನ್ನು ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗಾದ್ರೆ ಈ ಹೊಸ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೊಟೊ ಬಡ್ಸ್ 600 ANC ಫೀಚರ್ಸ್‌ ಹೇಗಿದೆ?

ಮೊಟೊ ಬಡ್ಸ್ 600 ANC ಫೀಚರ್ಸ್‌ ಹೇಗಿದೆ?

ಮೊಟೊ ಬಡ್ಸ್ 600 ANC ಇಯರ್‌ಬಡ್ಸ್‌ ವಿನ್ಯಾಸವು ಮೇಲ್ಭಾಗದಲ್ಲಿ ಸ್ವಲ್ಪ ಓರೆಯಾದ ಪಾಡ್‌ಗಳನ್ನು ಹೊಂದಿರುವ ಸ್ಟಿಮ್‌ ಅನ್ನು ಒಳಗೊಂಡಿದೆ. ಇನ್ನು ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದೆ. ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವ ಸಿಲಿಕೋನ್ ಇಯರ್‌ ಟಿಪ್ಸ್‌ ಅನ್ನು ಹೊಂದಿದೆ. ಇನ್ನು ಇದರ ಚಾರ್ಜಿಂಗ್ ಕೇಸ್ ಅಂಡಾಕಾರದ ಆಕಾರದಲ್ಲಿದ್ದು, ದುಂಡಾದ ಅಂಚುಗಳನ್ನು ಹೊಂದಿದೆ. ಈ ಇಯರ್‌ಬಡ್ಸ್‌ IPX5 ವಾಟರ್‌ ರೆಸಿಸ್ಟೆನ್ಸಿಯನ್ನು ಪಡೆದುಕೊಂಡಿದೆ.

ಮೊಟೊ ಬಡ್ಸ್‌ 600 ANC

ಮೊಟೊ ಬಡ್ಸ್‌ 600 ANC ಚಾರ್ಜಿಂಗ್ ಕೇಸ್ ಒಳಗೆ ಫಿಸಿಕಲ್‌ ಬಟನ್ ಅನ್ನು ನೀಡಲಾಗಿದೆ. ಇದನ್ನು ಇಯರ್‌ಬಡ್ಸ್‌ಗಳನ್ನು ಜೋಡಿಸುವ ಮೋಡ್‌ ಅನ್ನು ಆಕ್ಟಿವ್‌ ಮಾಡಲು ಈ ಬಟನ್‌ ಅನ್ನು ಬಳಸಬಹುದಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಮಲ್ಟಿ-ಪಾಯಿಂಟ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಇಯರ್‌ಬಡ್ಸ್‌ಗಳನ್ನು ಸಿಂಗಲ್‌ ಟೈಂನಲ್ಲಿ ಎರಡು ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು ಅನುಮತಿಸಲಿದೆ. ಜೊತೆಗೆ ಈ ಇಯರ್‌ಬಡ್ಸ್‌ ಫಾಸ್ಟ್ ಪೇರ್ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತವೆ.

ಮೊಟೊ ಬಡ್ಸ್‌ 600 ANC ಇಯರ್‌ಬಡ್ಸ್‌

ಮೊಟೊ ಬಡ್ಸ್‌ 600 ANC ಇಯರ್‌ಬಡ್ಸ್‌ ಗೂಗಲ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ. ನೀವು ಇಯರ್‌ಬಡ್ಸ್‌ ಅನ್ನು ಲಾಂಗ್‌ ಟ್ಯಾಪ್‌ ಮಾಡುವ ಮೂಲಕ ಕಾಲ್‌ ಕೂಡ ಮಾಡಬಹುದಾಗಿದೆ. ಇದರಲ್ಲಿ ಮೊನೊ ಮೋಡ್ ಸಹ ಇದೆ, ಇದು ಕೇವಲ ಒಂದು ಇಯರ್‌ಬಡ್ ಅನ್ನು ಮಾತ್ರ ಬಳಸಬೇಕು ಎಂದಾಗ ಸಹಾಯಕವಾಗಲಿದೆ. ಇದರೊಂದಿಗೆ ಈ ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ನೊಂದಿಗೆ 26 ಗಂಟೆಗಳ ಬ್ಯಾಟರಿ ಅವಧಿಯನ್ನು ಸಹ ನೀಡಲಿದೆ. ವೈರ್ಡ್ ಚಾರ್ಜಿಂಗ್‌ಗಾಗಿ ಚಾರ್ಜಿಂಗ್ ಕೇಸ್‌ನಲ್ಲಿ ನೀವು USB-C ಪೋರ್ಟ್ ಅನ್ನು ಪಡೆದಾಗ, ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಮೊಟೊರೊಲಾ ಕಂಪೆನಿಯ ಮೊಟೊ ಬಡ್ಸ್‌ 600 ANC $149 (ಅಂದಾಜು 12,300 ರೂ.)ಬೆಲೆಯಲ್ಲಿ ಬರಲಿದೆ. ಇನ್ನು ಈ ಇಯರ್‌ಬಡ್ಸ್‌ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಖರೀದಿಗೆ ಬರಲಿದೆ ಎಂದು ಹೇಳಲಾಗಿದೆ.

ಮೊಟೊರೊಲಾ

ಇದಲ್ಲದೆ ಮೊಟೊರೊಲಾ ಕಂಪೆನಿ ತನ್ನ ಜನಪ್ರಿಯ G ಸರಣಿಯ ಮುಂದಿನ ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದೇ ಸಂದರ್ಭದಲ್ಲಿ ಮೊಟೊ G 5G (2023) ಸ್ಮಾರ್ಟ್‌ಫೋನ್‌ನ ಇಮೇಜ್‌ ವಿನ್ಯಾಸ ಬಹಿರಂಗವಾಗಿದೆ. ಈ ಫೋನ್‌ ಹಿಂದಿನ ಆವೃತ್ತಿಯ ಮಾದರಿಯನ್ನೇ ಹೋಲುವಂತಿದೆಯಾದರೂ, ನವೀನ ಮಾದರಿಯ ಟೆಕ್ನಾಲಜಿ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Moto Buds 600 ANC earbuds have been launched ahead of CES 2023

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X