ಮೋಟೋ ಇ ಸೆಕೆಂಡ್ ಜನರೇಶನ್ ಮಾರ್ಚ್ 10 ಕ್ಕೆ ಬಿಡುಗಡೆ

Written By:

3ಜಿ ಬೆಂಬಲವಿರುವ ಮೋಟೋ ಇ ಸ್ಮಾರ್ಟ್‌ಫೋನ್ ಅನ್ನು ಮೋಟೋರೋಲಾ ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಲಭ್ಯವಾಗಿದ್ದು ಮಾರ್ಚ್ 10 ಕ್ಕೆ ಕಂಪೆನಿಯು ಮೋಟೋ ಇ ಸೆಕೆಂಡ್ ಜನರೇಶನ್ ಫೋನ್ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ.

ಮೋಟೋ ಇ ಸೆಕೆಂಡ್ ಜನರೇಶನ್ ಮಾರ್ಚ್ 10 ಕ್ಕೆ ಬಿಡುಗಡೆ

ಮೋಟೋ ಇ (ಸೆಕೆಂಡ್ ಜನರೇಶನ್) 4.5 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳಾಗಿವೆ. ಇದು ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಸಂರಕ್ಷಣೆಯನ್ನು ಪಡೆದುಕೊಂಡಿದ್ದು 1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಮತ್ತು 400 MHz ಅಡ್ರೆನೊ 302 ಜಿಪಿಯುವನ್ನು ಫೋನ್‌ನಲ್ಲಿ ಪಡೆದುಕೊಂಡಿದೆ. 1 ಜಿಬಿ RAM ಡಿವಸ್‌ನಲ್ಲಿದ್ದು ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿ ಮತ್ತು ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

ಮೋಟೋ ಇ ಸೆಕೆಂಡ್ ಜನರೇಶನ್ ಮಾರ್ಚ್ 10 ಕ್ಕೆ ಬಿಡುಗಡೆ

ಇನ್ನು ಫೋನ್ ದಪ್ಪ 12.3 ಎಮ್‌ಎಮ್ ಆಗಿದ್ದು, ತೂಕ 145 ಗ್ರಾಮ್‌ಗಳಾಗಿದೆ. ಇನ್ನು ಫೋನ್ 5 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಹೊಂದಿದ್ದರೆ, ವಿಜಿಎ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ ಲಾಲಿಪಪ್ 5.0 ವನ್ನು ಫೋನ್ ಹೊಂದಿದೆ.

ಮೋಟೋ ಇ ಸೆಕೆಂಡ್ ಜನರೇಶನ್ ಮಾರ್ಚ್ 10 ಕ್ಕೆ ಬಿಡುಗಡೆ

ಸಂಪರ್ಕ ಅಂಶಗಳತ್ತ ಗಮನಿಸಿದಾಗ ಇದು ಡ್ಯುಯಲ್ ಸಿಮ್ ಅನ್ನು ಒಳಗೊಂಡಿದ್ದು, 3ಜಿ, ವೈಫೈ, ಬ್ಲ್ಯೂಟೂತ್ ಅನ್ನು ಒಳಗೊಂಡಿದೆ. ಎಫ್‌ಎಮ್ ರೇಡಿಯೊ, 2390mAh ಬ್ಯಾಟರಿಯನ್ನು ಡಿವೈಸ್ ಪಡೆದುಕೊಂಡಿದೆ. ಬೆಲೆಯನ್ನೂ ಕಂಪೆನಿ ಇನ್ನೂ ಬಹಿರಂಗಪಡಿಸಿಲ್ಲ.

English summary
This article tells about Moto E (2nd Gen) to be Launched on March 10.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot