Subscribe to Gizbot

ಮೋಟೊರೋಲಾ ಮೋಟೋ G5S ಪ್ಲಸ್ ಬರಲಿದೆ 3 ವಿಭಿನ್ನ ಬಣ್ಣಗಳಲ್ಲಿ

By: Tejaswini P G

ಕಳೆದ ಶನಿವಾರ ಇವಾನ್ ಬ್ಲಾಸ್ ಮೋಟೊರೋಲಾ ಮೋಟೋ G5S ಮತ್ತು ಮೋಟೊರೋಲಾ ಮೋಟೋ G5S ಪ್ಲಸ್ ನ ದರವನ್ನು ಆನ್ಲೈನ್ ನಲ್ಲಿ ಸೋರಿಕೆ ಮಾಡಿದ್ದ.ಇದೀಗ ಮತ್ತೆ ಇವಾನ್ ಹೊಸ ಟ್ವೀಟ್ ಒಂದರಲ್ಲಿ ಮೋಟೋ G5S ಪ್ಲಸ್ 3 ವಿಭಿನ್ನ ಬಣ್ಣಗಳಲ್ಲಿ ಬರಲಿದೆ ಎನ್ನುವುದನ್ನೂ ಲೀಕ್ ಮಾಡಿದ್ದಾನೆ. ಮೋಟೋ G5S ಪ್ಲಸ್ ಬ್ಲಾಕ್, ರೋಸ್ ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಬರಲಿದೆ.ಈ ಕುರಿತು ಫೋಟೋವೊಂದನ್ನು ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಶೇರ್ ಮಾಡಿದ್ದಾನೆ.

ಮೋಟೊರೋಲಾ ಮೋಟೋ G5S ಪ್ಲಸ್ ಬರಲಿದೆ 3 ವಿಭಿನ್ನ ಬಣ್ಣಗಳಲ್ಲಿ

ಹಿಂದೆ ಬಂದಿದ್ದ ವರದಿಗಳ ಅನುಸಾರ ಈ ಸ್ಮಾರ್ಟ್ಫೋನ್ ನ ಹಿಂದೆ ಇರಲಿದೆ ಸರ್ಕ್ಯುಲರ್ ಡ್ಯುಯಲ್ ಕ್ಯಾಮೆರಾ ಸೆಟಪ್. ಇದರ ಕ್ಯಾಮೆರಾ ಲೆನ್ಸ್ ಜೊತೆ LEDಫ್ಲ್ಯಾಶ್ ಕೂಡ ಇದೆ.ಕ್ಯಾಮೆರಾ ಮಾಡ್ಯೂಲ್ ಮೊಬೈಲ್ ನ ಮೇಲ್ಮೈಯಿಂದ ಸ್ವಲ್ಪ ಹೊರಚಾಚಿದೆ. ಇಷ್ಟಲ್ಲದೆ ಮೋಟೋ G5S ಪ್ಲಸ್ ನಲ್ಲಿ ಹೋಮ್ ಬಟನ್ ಇದ್ದು ಅದು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಗಿ ಕೂಡ ಕೆಲಸ ಮಾಡಲಿದೆ.

ಇನ್ನು ಇದರ ವಿವರಗಳ ಬಗ್ಗೆ ಹೇಳುವುದಾದರೆ , ಮೋಟೋ G5S ಪ್ಲಸ್ 5.5 ಇಂಚ್ ಫುಲ್ HD ಸ್ಕ್ರೀನ್ ಹೊಂದಿದ್ದು 1080 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿರಲಿದೆ.ಇನ್ನು ಪ್ರಾಸೆಸರ್ ಬಗ್ಗೆ ಹೇಳುವುದಾದರೆ, ಮೋಟೋ G5S ಪ್ಲಸ್ ಕ್ವಾಲ್ಕಮ್ ಸ್ನ್ಯಾಪ್ ಡ್ರಾಗನ್ 625 ಪ್ರಾಸೆಸರ್ ಮತ್ತು 4GB RAM ನೊಂದಿಗೆ ಬರಲಿದೆ.ಇಷ್ಟಲ್ಲದೆ ಮೋಟೋ G5S ಪ್ಲಸ್ ನಲ್ಲಿ 64GB ಎಕ್ಸ್ಪಾಂಡೇಬಲ್ ಸ್ಟೋರೇಜ್ ಇರಲಿದೆ.

ಬಡ ಹೆಣ್ಣುಮಕ್ಕಳ ಮದುವೆಗೆ ಸರ್ಕಾರದಿಂದ 20 ಸಾವಿರದ ಮೊಬೈಲ್ ಗಿಫ್ಟ್!!

ಮೋಟೋ G5S ಪ್ಲಸ್ ನ ಕ್ಯಾಮೆರಾ ವಿಶಿಷ್ಟವಾಗಿದೆ. ಇದರ ಡ್ಯುಯಲ್ ಕ್ಯಾಮೆರಾ ಸೆಟಪ್ ನಲ್ಲಿ ಎರಡು 13MP ಸೆನ್ಸರ್ ಗಳು ಇರಲಿವೆ. ಇದರಲ್ಲಿ ಒಂದು RGB ಹಾಗೆಯೇ ಮತ್ತೊಂದು ಮೋನೋಕ್ರೋಮ್ ಸೆನ್ಸರ್ ಆಗಿರಲಿದೆ.

ಮೋಟೋ G5S ಪ್ಲಸ್ ಅಂಡ್ರಾಯ್ಡ್ 7.1.1 ನುಗಾಟ್ OS ಜೊತೆ ಬರಲಿದೆ. ಅಲ್ಲದೆ LEDಫ್ಲ್ಯಾಶ್ ಹೊಂದಿರುವ ಸೆಲ್ಫೀ ಕ್ಯಾಮೆರಾ, ಡಾಲ್ಬಿ ಅಟ್ಮಾಸ್ ಆಡಿಯೋ ಕೂಡ ಇರಲಿದೆ.

ಬ್ಲಾಸ್ ಹೇಳುವ ಅನುಸಾರ ಮೋಟೋ G5S ಪ್ಲಸ್ ನ ಬೆಲೆ 330 ಯೂರೋಸ್ , ಅಂದರೆ ಅಂದಾಜು ರೂ 25,000. ಆದರೆ ಈ ಬೆಲೆ ಪೂರ್ವ ಯುರೋಪಿಯನ್ ದೇಶಗಳಿಗಷ್ಟೇ ಎಂದಿದ್ದಾರೆ ಬ್ಲಾಸ್. ಭಾರತೀಯ ಮಾರುಕಟ್ಟೆಯಲ್ಲಿ ಮೋಟೋ G5S ಪ್ಲಸ್ ನ ಬೆಲೆ ಎಷ್ಟಿರಲಿದೆ ಎಂದು ಕಾದು ನೋಡಬೇಕು.

Read more about:
English summary
The Moto G5S Plus comes in three color options.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot