Subscribe to Gizbot

ಆಗಸ್ಟ್ 24ಕ್ಕೆ ಮೊಟೊ X4 ಸ್ಮಾರ್ಟ್ ಫೋನ್ ಲಾಂಚ್

Written By: Lekhaka

ಮೊಟೊರೊಲಾ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದು, ಈಗ ಮತ್ತೊಂದು ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಲು ತಯಾರಿಯನ್ನು ನಡೆಸಲು ಮುಂದಾಗಿದೆ. ಇದೇ ತಿಂಗಳು 24ರಂದು ಮೆಟೊ X4 ಲಾಂಚ್ ಆಗಲಿದೆ.

ಆಗಸ್ಟ್ 24ಕ್ಕೆ ಮೊಟೊ X4 ಸ್ಮಾರ್ಟ್ ಫೋನ್ ಲಾಂಚ್

ಆಗಸ್ಟ್ 24ರಂದು ಬ್ರೆಸೆಲ್ ನ ಸಾವೊ ಪೋಲೊದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಆದರೆ ಈ ಕುರಿತು ಮೊಟೊ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.

ಆದರೆ ಮೂಲಗಳ ಪ್ರಕಾರ ಅಂದು ಮೊಟೊ X4 ಲಾಂಚ್ ಆಗಲಿದೆ ಎನ್ನಲಾಗಿದೆ. ಕಾರಣ ಈಗಾಗಲೇ ಮೊಟೊ G5S ಮತ್ತು ಮೊಟೊ G5S ಪ್ಲಸ್ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿದೆ ಹಾಗಾಗಿ ಈ ಬಾರಿ ಮೊಟೊ X4 ಲಾಂಚ್ ಆಗುವುದು ಖಂಡಿತ ಎನ್ನಲಾಗಿದೆ.

ಸಿಮ್ ನಿಮ್ಮ ಹೆಸರಿನಲ್ಲಿ ಇಲ್ಲದಿದ್ದರೆ ಆಧಾರ್ ಲಿಂಕ್ ಸಾಧ್ಯನಾ?.ಇಲ್ಲಿದೆ ಎಲ್ಲಾ ಮಾಹಿತಿ!!

ಮೊಟೊ X4 ಸ್ಮಾರ್ಟ್ ಫೋನಿನಲ್ಲಿ 5.2 ಇಂಚಿನ FHD ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಎರಡು ಬಣ್ಣಗಳಲ್ಲಿ ದೊರೆಯಲಿದೆ. ಬ್ಲೂ ಮತ್ತು ಬ್ಲಾಕ್ ಬಣ್ಣದಲ್ಲಿ . ಇದರಲ್ಲಿ ಸ್ನಾಪ್ ಡ್ರಾಗನ್ 630 ಪ್ರೋಸೆಸರ್ ಇದ್ದು, 3GB/ 32GB ಮತ್ತು 4 GB/ 64 GB ಆವೃತ್ತಿಯಲ್ಲಿ ದೊರೆಯಲಿದೆ.

ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದ್ದು, 12 + 8 MP ಕ್ಯಾಮೆರಾವನ್ನುನೀಡಲಾಗಿದೆ. ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಸೆಲ್ಫಿಗಾಗಿ ಅಳವಡಿಸಲಾಗಿದೆ. ಇದರಲ್ಲಿ 4K ವಿಡಿಯೋ ಸಹ ರೆಕಾರ್ಡ್ ಮಾಡಬಹುದಾಗಿದೆ.

ಇದಲ್ಲದೇ ಈ ಫೋನ್ ವಾಟರ್ ಮತ್ತು ಡಸ್ಟ್ ಫ್ರೂ ಆಗಿದ್ದು, 3000 mAh ಬ್ಯಾಟರಿಯನ್ನು ಕಾಣಬಹುದಾಗಿದೆ, ಇದಲ್ಲದೇ ವೇಗದ ಚಾರ್ಜಿಂಗ್ ಗಾಗಿ ಟರ್ಬೋ ಆಯ್ಕೆಯನ್ನು ನೀಡಲಾಗಿದೆ. ಇದು ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಲಿದೆ.

English summary
The Motorola Moto X4 is said to be powered by a Qualcomm Snapdragon 630 processor.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot