ಮೊಟೊ G32 ಲಾಂಚ್‌ ಆಯ್ತು! ಮುಂದೆ ಬರಲಿರುವ ಮೊಟೊ ಫೋನ್‌ಗಳು ಯಾವುವು?

|

ಮೊಟೊರೊಲಾ ಕಂಪೆನಿಯ ಬಹುನಿರೀಕ್ಷಿತ ಮೊಟೊ G32 ಸ್ಮಾರ್ಟ್‌ಫೋನ್‌ ಇಂದು ಭಾರತಕ್ಕೆ ಎಂಟ್ರಿ ನೀಡಿದೆ. ತನ್ನ ವಿಶೇಷ ಫೀಚರ್ಸ್‌ ಹಾಗೂ ವಿನ್ಯಾಸದ ಕಾರಣಕ್ಕೆ ಈ ಸ್ಮಾರ್ಟ್‌ಫೋನ್‌ ಸ್ಮಾರ್ಟ್‌ಫೋನ್‌ ಪ್ರಿಯರ ಗಮನ ಸೆಳೆದಿದೆ. ಅದರಲ್ಲೂ ಈ ಸ್ಮಾರ್ಟ್‌ಫೋನ್‌ ಥಿಂಕ್‌ಶೀಲ್ಡ್ ಸೆಕ್ಯುರಿಟಿ ಸಲ್ಯೂಶನ್‌ ಅನ್ನು ಒಳಗೊಂಡಿರುವುದು ಪ್ರಮುಖ ಹೈಲೈಟ್‌ ಆಗಿದೆ. ಇದರ ಬೆನ್ನಲ್ಲೇ ಮೊಟೊರೊಲಾ ಕಂಪೆನಿ ಮುಂದಿನ ದಿನಗಳಲ್ಲಿ ಪರಿಚಯಿಸಲಿರುವ ಸ್ಮಾರ್ಟ್‌ಫೋನ್‌ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಮೊಟೊರೊಲಾ

ಹೌದು, ಮೊಟೊರೊಲಾ ಕಂಪೆನಿ ಶೀಘ್ರದಲ್ಲೇ ಲಾಂಚ್‌ ಮಾಡಲಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಮುಂಬರುವ ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಹೇಗಿರಲಿದೆ? ಅವುಗಳ ವಿಶೇಷತೆ ಏನು ಎಂಬೆಲ್ಲಾ ಪ್ರಶ್ನೆಗಳು ಕಾಡೋದು ಸಹಜ. ಸದ್ಯ ಮೊಟೊರೊಲಾ ಕಂಪೆನಿ ಶೀಘ್ರದಲ್ಲೇ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವುದಕ್ಕೆ ಸಿದ್ಧತೆ ನಡೆಸಿದೆ. ಇದರಲ್ಲಿ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಒಳಗೊಂಡ ಸ್ಮಾರ್ಟ್‌ಫೋನ್‌ ಕೂಡ ಸೇರಿರುವುದು ವಿಶೇಷ. ಹಾಗಾದ್ರೆ ಮೊಟೊರೊಲಾ ಕಂಪೆನಿ ಸದ್ಯದಲ್ಲೇ ಪರಿಚಯಿಸಲಿರುವ ಸ್ಮಾರ್ಟ್‌ಫೋನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೊಟೊರೊಲಾ ರೇಜರ್‌ 2022

ಮೊಟೊರೊಲಾ ರೇಜರ್‌ 2022

ಮೊಟೊರೊಲಾ ರೇಜರ್‌ 2022 ಸ್ಮಾರ್ಟ್‌ಫೋನ್‌ 6.7 ಇಂಚಿನ ಮಡಿಸಬಹುದಾದ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ನೀಡಲಿದೆ ಎನ್ನಲಾಗಿದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಹೊರಭಾಗದಲ್ಲಿ 2.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಇದು ಸ್ನಾಪ್‌ಡ್ರಾಗನ್‌ 8+ Gen 1 Soc ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ ಎಂದು ಅಂದಾಜಿಸಲಾಗಿದೆ. ಈ ಪ್ರೊಸೆಸರ್ ಅನ್ನು ಒಳಗೊಂಡಿರುವ ವಿಶ್ವದ ಮೊದಲ ಫೊಲ್ಡೆಬಲ್‌ ಸ್ಮಾರ್ಟ್‌ಫೋನ್‌ ಎನ್ನುವ ಖ್ಯಾತಿಯನ್ನು ಕೂಡ ಗಳಿಸಿದೆ. ಹಾಗೆಯೇ 18GB RAM ಮತ್ತು 512GB ಇಂಟರ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿರಲಿದೆ. ಎರಡನೇ ಕ್ಯಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಬಲವನ್ನು ಪಡೆದಿರಲಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲದೆ ಎಂದು ಅಂದಾಜಿಸಲಾಗಿದೆ. ಜೊತೆಗೆ 3500mAh ಸಾಮರ್ಥ್ಯದ ಡ್ಯುಯಲ್-ಸೆಲ್ ಬ್ಯಾಟರಿಯನ್ನು ಒಳಗೊಂಡಿದೆ. ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ ಎಂದು ಅಂದಾಜಿಸಲಾಗಿದೆ.

ಮೊಟೊ X30 ಪ್ರೊ

ಮೊಟೊ X30 ಪ್ರೊ

ಇನ್ನು ಮಟೊರೊಲಾ ಕಂಪೆನಿಯ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಮೊಟೊ X30 ಪ್ರೊ ಕೂಡ ಒಂದಾಗಿದೆ. ಅದರಲ್ಲೂ ಈ ಸ್ಮಾರ್ಟ್ಫೋನ್‌ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಹೊಂದಿರಲಿದೆ ಅನ್ನೊದು ಇನ್ನಷ್ಟು ಹೈಪ್‌ ಕ್ರಿಯೆಟ್‌ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.73 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಫುಲ್‌ ಇಮೇಜ್ ರೆಸಲ್ಯೂಶನ್ ಅನ್ನು ಕ್ರಾಪ್ ಮಾಡುವ ಅಥವಾ ಸ್ಕೇಲ್ ಮಾಡುವ ಅಗತ್ಯವಿಲ್ಲದೇ 8K ವೀಡಿಯೊಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಿದೆ. ಜೊತೆಗೆ 60 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿರಲಿದೆ ಎನ್ನಲಾಗಿದೆ.

ಮೊಟೊ S30 ಪ್ರೊ

ಮೊಟೊ S30 ಪ್ರೊ

ಮೊಟೊರೊಲಾ ಕಂಪೆನಿ ಸದ್ಯದಲ್ಲೇ ಪರಿಚಯಿಸಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮೊಟೊ S30 ಪ್ರೊ ಫೋನ್‌ ಕೂಡ ಸೇರಿದೆ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದೆ. ಇದು ಸ್ನಾಪ್‌ಡ್ರಾಗನ್ 888+ SoC ಪ್ರೊಸೆಸರ್‌ ಬಲವನ್ನು ಪಡೆದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 4,270mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,68W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.

ಸ್ಮಾರ್ಟ್‌ಫೋನ್‌ಗಳ

ಇನ್ನು ಈ ಸ್ಮಾರ್ಟ್‌ಫೋನ್‌ಗಳ ಬೆಲೆ ವಿವರಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್‌ಗಳು ಇದೇ ಆಗಸ್ಟ್‌ 11ರಂದು ಚೀನಾದಲ್ಲಿ ಬಿಡುಗಡೆಯಾಗಲಿವೆ ಎಂದು ಹೇಳಲಾಗಿದೆ. ಆದರೆ ಜಾಗತಿಕ ಮಾರುಕಟ್ಟೆ ಹಾಗೂ ಭಾರತದಲ್ಲಿ ಬಿಡುಗಡೆ ದಿನಾಂಕ ಇನ್ನು ಬಹಿರಂಗವಾಗಿಲ್ಲ. ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೆಲವೇ ದಿನಗಳ ನಂತರ ಭಾರತಕ್ಕೆ ಎಂಟ್ರಿ ನೀಡುವ ಸಾಧ್ಯತೆ ಇದೆ.

Best Mobiles in India

English summary
Motorola Razr 2022 is teased to feature a 6.7-inch OLED inner display with 144Hz refresh rate, HDR10+ support, and DC dimming.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X