'ದ್ರೋಣಿ' ಕ್ಯಾಮೆರಾ ಡ್ರೋನ್‌ ಅನಾವರಣ ಮಾಡಿದ MS ಧೋನಿ; ರೈತರಿಗೆ ಹೇಗೆ ನೆರವಾಗಲಿದೆ?

|

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇತ್ತೀಚಿಗೆ ಹೊಸದಾಗಿ 'ದ್ರೋಣಿ' (Droni) ಹೆಸರಿನ ಡ್ರೋನ್‌ ಅನ್ನು ಬಿಡುಗಡೆ ಮಾಡಿದ್ದಾರೆ. ಪ್ರಮುಖ ಡ್ರೋನ್ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ಗರುಡಾ ಏರೋಸ್ಪೇಸ್ ಸಂಸ್ಥೆಯು ತಯಾರಿಸಿದ ಈ ಡ್ರೋನ್ ಸಾಕಷ್ಟು ಸುಧಾರಿತ ಫೀಚರ್ಸ್‌ಗಳನ್ನು ಒಳಗೊಂಡು ಮಾರುಕಟ್ಟೆಗೆ ಪ್ರವೇಶಿಸಿದೆ.

ಡ್ರೋನ್

ಹೌದು, ಇತ್ತೀಚಿಗೆ ಚೆನ್ನೈನಲ್ಲಿ ನಡೆದ ಜಾಗತಿಕ ಡ್ರೋನ್ ಎಕ್ಸ್‌ಪೋದಲ್ಲಿ ಹೊಸ ದ್ರೋಣಿ (Droni) ಎಂಬ ಕ್ವಾಡ್‌ಕಾಪ್ಟರ್ ಗ್ರಾಹಕ ಕ್ಯಾಮೆರಾ ಡ್ರೋನ್ ಅನ್ನು ಪ್ರದರ್ಶಿಸಲಾಯಿತು. ಇನ್ನು ಈ ದ್ರೋಣಿ ಡ್ರೋನ್ ಬ್ಯಾಟರಿ ಚಾಲಿತ ಡ್ರೋನ್ ಆಗಿದ್ದು, ಈ ಡ್ರೋನ್ ಕಣ್ಗಾವಲು (surveillance) ಗುರಿಯನ್ನು ಹೊಂದಿದೆ.

ಕೀಟನಾಶಕ

ಗರುಡಾ ಏರೋಸ್ಪೇಸ್‌ ಕೃಷಿ ಕೀಟನಾಶಕ ಸಿಂಪರಣೆ, ಸೌರ ಫಲಕ ಸ್ವಚ್ಛಗೊಳಿಸುವಿಕೆ, ಕೈಗಾರಿಕಾ ಪೈಪ್‌ಲೈನ್ ತಪಾಸಣೆ, ಮ್ಯಾಪಿಂಗ್, ಸಮೀಕ್ಷೆ, ಸಾರ್ವಜನಿಕ ಪ್ರಕಟಣೆಗಳು ಮತ್ತು ವಿತರಣಾ ಸೇವೆಗಳಿಗೆ ಡ್ರೋನ್ ಪರಿಹಾರಗಳನ್ನು ನೀಡಲು ಪ್ರಯತ್ನಿಸಿರುವ ಕಂಪನಿಯಾಗಿದೆ. ಮಹೇಂದ್ರ ಸಿಂಗ್ ಧೋನಿ ಅವರು ಗರುಡಾ ಏರೋಸ್ಪೇಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಡ್ರೋನ್

ಇನ್ನು ಗರುಡಾ ಏರೋಸ್ಪೇಸ್‌ ಕಂಪನಿಯು ಹೊಸ ಡ್ರೋನ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಹಾಕಿಲ್ಲ. ಅಲ್ಲದೇ ಈ ಡ್ರೋನ್‌ನ ಬೆಲೆ ಮತ್ತು ಫೀಚರ್ಸ್‌ಗಳ ಬಗ್ಗೆಯೂ ಸಹ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ ಕಂಪನಿಯು ಈ ವರ್ಷದ ನಂತರ ಬಿಡುಗಡೆಯ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ.

ಕಿಸಾನ್ ಡ್ರೋನ್

ಹಾಗೆಯೇ ಎಕ್ಸ್‌ಪೋದಲ್ಲಿ ಕಂಪನಿಯು 'ಕಿಸಾನ್ ಡ್ರೋನ್' (Kisan Drone) ಎಂಬ ಮತ್ತೊಂದು ಡ್ರೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಇದು ರೈತರಿಗೆ ನೆರವಾಗಲು ಅಭಿವೃದ್ಧಿಪಡಿಸಲಾಗಿದೆ ಮತ್ತು ದಿನಕ್ಕೆ 3 ಎಕರೆ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು ಈ ಡ್ರೋನ್ ಸಹಾಯಕ ಎನಿಸಲಿದೆ. ರೈತರಿಗೆ ಸಹಾಯಕ ಎನಿಸುವ ಕೆಲವು ಅಪ್ಲಿಕೇಶನ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೃಷಿ ಕಿಸಾನ್ (Krishi Kisan)

ಕೃಷಿ ಕಿಸಾನ್ (Krishi Kisan)

ಕೃಷಿ ಕಿಸಾನ್ ಆಪ್ ರೈತರಿಗಾಗಿ ರೂಪಿಸಲಾಗಿದೆ. ಈ ಆಪ್‌ನಲ್ಲಿ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಬಗ್ಗೆ, ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಹಾಗೆಯೇ ರೈತರಿಗೆ ಬೆಳೆಗಳ ಬಗ್ಗೆ, ಬೀಜ ಬಿತ್ತುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜಿಯೋ-ಫೆನ್ಸಿಂಗ್ ಹಾಗೂ ಜಿಯೋ ಟ್ಯಾಗಿಂಗ್ ಕುರಿತಾಗಿಯು ಅಗತ್ಯ ನೆರವು ನೀಡಲಿದೆ.

ಕಿಸಾನ್ ಸುವಿಧಾ (Kisan Suvidha)

ಕಿಸಾನ್ ಸುವಿಧಾ (Kisan Suvidha)

ಕಿಸಾನ್‌ ಸುವಿಧಾ ಅಪ್ಲಿಕೇಶನ್ ಅನ್ನು ಭಾರತ ಸರ್ಕಾರದಿಂದ ಅಭಿವೃದ್ಧಿಪಡಿಸಿ ಅನಾವರಣ ಮಾಡಲಾಗಿದೆ. ಈ ಆಪ್‌ನಲ್ಲಿ ರೈತರಿಗೆ ಪ್ರಸ್ತುತ ಮತ್ತು ಮುಂದಿನ 5 ದಿನಗಳ ಹವಾಮಾನದ ಮಾಹಿತಿಯನ್ನು ನೀಡಲಾಗುತ್ತದೆ. ಸ್ಥಳೀಯ ಡೀಲರ್‌ಗಳು, ಮಾರುಕಟ್ಟೆ, ಕೃಷಿ ಸಲಹೆಗಾರರ ಬಗ್ಗೆ, ಕೃಷಿ ರಕ್ಷಣೆ, ಐಪಿಎಮ್‌ ಪ್ರಯೋಗಗಳನ್ನು ರೈತರಿಗೆ ನೇರವಾಗಿ ನೀಡುತ್ತದೆ.

ಕೃಷಿ ಮಿತ್ರ (Krishi Mitra)

ಕೃಷಿ ಮಿತ್ರ (Krishi Mitra)

ಕನ್ನಡದಲ್ಲಿಯೇ ಲಭ್ಯವಿರುವ ಆಪ್ ಇದಾಗಿದೆ. ವಿವಿಧ ಪತ್ರಿಕೆಗಳಲ್ಲಿ ಬರುವ ಕೃಷಿ ಸಂಬಂಧಿತ ವರದಿಗಳನ್ನು ನೀಡುತ್ತದೆ. ನಿಮ್ಮ ಪಹಣಿಯನ್ನು ಹುಡುಕುವ ಆಯ್ಕೆ ನಿಡಲಾಗಿದೆ. ಹವಾಮಾನ ವರದಿಯನ್ನು ಸಹ ಈ ಆಪ್ ನೀಡುತ್ತಿದ್ದು, ಪ್ರಸ್ತುತ ಮಾರುಕಟ್ಟೆ ದರವನ್ನು ರೈತರಿಗೆ ನೀಡುತ್ತದೆ. ಅದಲ್ಲದೇ ಕೃಷಿ ಇಲಾಖೆಯ ಪ್ರಮುಖ ಕಚೇರಿಗಳ ಹಾಗೂ ಎಪಿಎಂಸಿಗಳ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡಿದ್ದು, ರೈತರಿಗೆ ನೆರವಾಗುತ್ತದೆ.

Mಕಿಸಾನ್ ಆಪ್‌ (MKisan Application)

Mಕಿಸಾನ್ ಆಪ್‌ (MKisan Application)

Mಕಿಸಾನ್ ಆಪ್‌ನಲ್ಲಿ ಬಳಕೆದಾರರು ಪೋರ್ಟಾಲ್‌ಗೆ ನೋಂದಣಿಯಾಗದೆ ಕೃಷಿ ತಜ್ಞರು, ವಿವಿಧ ಸರ್ಕಾರಿ ಅಧಿಕಾರಿಗಳಿಂದ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಭಾರತದಲ್ಲಿ Mಕಿಸಾನ್ ಪೋರ್ಟಾಲ್ ಕೃಷಿ ಬಗೆಗಿನ ಅನೇಕ ಮಾಹಿತಿಯನ್ನು ನೀಡುತ್ತದೆ. ಈ ಆಪ್‌ನ್ನು ಕೃಷಿ ಮಂತ್ರಾಲಯದ ರಾಷ್ಟ್ರೀಯ ವಿದ್ಯುನ್ಮಾನ ಆಡಳಿತ ಯೋಜನೆ (NeGP-A) ಅಭಿವದ್ಧಿಪಡಿಸಿದೆ.

Best Mobiles in India

English summary
MS Dhoni launches made-in-India Droni camera drone for farming solutions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X