ಭಾರತದಲ್ಲಿ MSI ನಿಂದ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಸರಣಿ ಬಿಡುಗಡೆ!

|

ಇಂದಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕರು ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಎಂಎಸ್‌ಐ ಕಂಪೆನಿ ಕೂಡ ಒಂದಾಗಿದೆ. ಗೇಮಿಂಗ್‌, ಕ್ರಿಯೇಟರ್‌ ಮತ್ತು ಬ್ಯುಸಿನೆಸ್‌ ಲ್ಯಾಪ್‌ಟಾಪ್‌ಗಳಿಗೆ ಪ್ರಸಿದ್ಧಿ ಪಡೆದಿರುವ ಎಂಎಸ್‌ಐ ಕಂಪೆನಿ ಭಾರತದಲ್ಲಿ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಸರಣಿ ಲಾಂಚ್‌ ಮಾಡಿದೆ. ಈ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು 12 ನೇ ತಲೆಮಾರಿನ ಇಂಟೆಲ್‌ ಹೆಚ್‌ ಸರಣಿಯ ಪ್ರೊಸೆಸರ್‌ಗಳನ್ನು ಹೊಂದಿವೆ.

MSI

ಹೌದು, MSI ಕಂಪೆನಿ ಭಾರತದಲ್ಲಿ ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ ಸರಣಿಯನ್ನು ಪರಿಚಯಿಸಿದೆ. ಈ ಸರಣಿ ಟೈಟಾನ್ GT77, ರೈಡರ್ GE77 HX/67 HX, ರೈಡರ್ GE77 HX/67 HX, ವೆಕ್ಟರ್ GP76 HX/66 HX ಲ್ಯಾಪ್‌ಟಾಪ್‌ಗಳನ್ನು ಒಳಗೊಂಡಿದೆ. ಇನ್ನು ಈ ಸರಣಿಯ ಲ್ಯಾಪ್‌ಟಾಪ್‌ಗಳ ಆರಂಭಿಕ ಬೆಲೆ 2,79,990ರೂ.ಗಳಿಂದ ಪ್ರಾರಂಭವಾಗಲಿದೆ. ಈ ಲ್ಯಾಪ್‌ಟಾಪ್‌ಗಳ CPU ಕಾರ್ಯಕ್ಷಮತೆಯಲ್ಲಿ 100% ವರೆಗೆ ಹೆಚ್ಚಳವನ್ನು ಮಾಡಲಾಗಿದೆ ಎಂದು ಎಂಎಸ್‌ಐ ಕಂಪನಿ ಹೇಳಿಕೊಂಡಿದೆ.

ಗೇಮಿಂಗ್

ಇನ್ನು ಈ ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ನಲ್ಲಿ ವಿಶ್ವದ ಮೊದಲ ಸ್ಯಾಮ್‌ಸಂಗ್ ಡಿಸ್‌ಪ್ಲೇ QHD 240Hz OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಹೆಚ್ಚಿನ ರೆಸಲ್ಯೂಶನ್ ಮತ್ತು ರಿಫ್ರೆಶ್ ರೇಟ್‌ ಅನ್ನು ಸಮತೋಲನಗೊಳಿಸುತ್ತದೆ. ಅಲ್ಲದೆ ಸೂಪರ್-ಲೋ ರೆಸ್ಪಾನ್ಸ್‌ ಟೈಂ ಅನ್ನು ಸಹ ನೀಡಲಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳಲ್ಲಿ ಡೆಸ್ಕ್‌ಟಾಪ್‌ ಕ್ಯಾಲಿಬರ್‌ ಕಾರ್ಯಕ್ಷಮತೆಯನ್ನು ಕೂಡ ಗಮನಿಸಬಹುದು. ಇನ್ನುಳಿದಂತೆ ಈ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೈಟಾನ್ GT77

ಟೈಟಾನ್ GT77

ಟೈಟಾನ್ GT77 ಲ್ಯಾಪ್‌ಟಾಪ್‌ 17.3-ಇಂಚಿನ UHD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120 Hz ರಿಫ್ರೆಶ್‌ ರೇಟ್‌ ಅನ್ನು ಪಡೆದಿದೆ. ಇದು 12ನೇ ತಲೆಮಾರಿನ ಇಂಟೆಲ್‌ ಕೋರ್‌ i9 12900HX ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 128GB DDR5 RAM ಮೆಮೊರಿ ಮತ್ತು 32TB ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದನ್ನು ನಾಲ್ಕು NVMe M.2 SSD ಗಳವರೆಗೆ ಕಾನ್ಫಿಗರ್ ಮಾಡಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಎನ್‌ವಿಡಿಯಾ ಜಿಪೋರ್ಸ್‌ RTX 3080Ti ಗ್ರಾಫಿಕ್ಸ್‌ ಕಾರ್ಡ್‌ ಅನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ತನ್ನ ಕೂಲರ್ ಬೂಸ್ಟ್ ಟಿಟಿಯನ್ ಟೆಕ್ನಾಲಜಿಯಿಂದ ಗಮನ ಸೆಳೆದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಕ್ಲಾಸ್-ಲೀಡಿಂಗ್ ಚೆರ್ರಿ MX ಅಲ್ಟ್ರಾ ಲೋ ಸ್ವಿಚ್‌ನೊಂದಿಗೆ ಮೆಕ್ಯಾನಿಕಲ್ ಕೀಬೋರ್ಡ್‌ ನೊಂದಿಗೆ ಬರಲಿದೆ. ಇದರ ಬೆಲೆ 5,26,990ರೂ.ಆಗಿದೆ.

ರೈಡರ್ GE77 HX/67 HX

ರೈಡರ್ GE77 HX/67 HX

ರೈಡರ್ GE77 HX/67 HX ಲೈನ್‌ ಆಪ್‌ ಲ್ಯಾಪ್‌ಟಾಪ್‌ 17.3 ಇಂಚಿನ UHD ಡಿಸ್‌ಪ್ಲೇ ಆಯ್ಕೆಯನ್ನು ಹೊಂದಿದೆ. ಇದು 120Hz ರಿಫ್ರೆಶ್‌ ರೇಟ್‌ ಅನ್ನು ಹೊಂದಿದೆ. ಹಾಗೆಯೇ 17.3 ಇಂಚಿನ QHD ಡಿಸ್‌ಪ್ಲೇ ಆಯ್ಕೆಯನ್ನು ಕೂಡ ಹೊಂದಿದೆ. ಈ ಡಿಸ್‌ಪ್ಲೇ 240Hz ರಿಫ್ರೇಸ್‌ ರೇಟ್‌ ನಿಡಲಿದೆ.ಇ ನ್ನು ಈ ಲ್ಯಾಪ್‌ಟಾಪ್‌ 16 ಕೋರ್ ಇಂಟೆಲ್ HX ಪ್ರೊಸೆಸರ್ ಅನ್ನು ಹೊಂದಿದೆ. ಇದು 150W MTP ಸಂಸ್ಕರಣಾ ಶಕ್ತಿಯನ್ನು ನೀಡುತ್ತದೆ. ಈ ಲ್ಯಾಪ್‌ಟಾಪ್‌ನ ಬೆಲೆ 2,85,990ರೂ.ಗಳಿಂದ ಆರಂಭವಾಗಲಿದೆ.

ವೆಕ್ಟರ್ GP76 HX/66 HX

ವೆಕ್ಟರ್ GP76 HX/66 HX

ವೆಕ್ಟರ್ GP ಸರಣಿಯು ಗೇಮಿಂಗ್, ಇಂಜಿನಿಯರಿಂಗ್ ಅಥವಾ ವೈಜ್ಞಾನಿಕ ಕಂಪ್ಯೂಟಿಂಗ್‌ ಅನ್ನು ಗುರಿಯಾಗಿಸಿ ಕೊಂಡಿದೆ. ಈ ಸರಣಿಯ ಲ್ಯಾಪ್‌ಟಾಪ್‌ಗಳು ಕೂಲರ್ ಬೂಸ್ಟ್ 5 ತಂತ್ರಜ್ಞಾನವನ್ನು ಪಡೆದುಕೊಂಡಿವೆ. ಈ ಇವುಗಳನ್ನು ಇಂಟೆಲ್‌ನ 12ನೇ Gen Core i9 12900HX ಪ್ರೊಸೆಸರ್‌ವರೆಗೆ ಕಾನ್ಫಿಗರ್ ಮಾಡಬಹುದು. ಈ ಲ್ಯಾಪ್‌ಟಾಪ್‌ಗಳು 64GB DDR5 RAM ಅನ್ನು ಹೊಂದಿವೆ.

ಲ್ಯಾಪ್‌ಟಾಪ್‌

ಇನ್ನು ಲ್ಯಾಪ್‌ಟಾಪ್‌ ಬಳಕೆದಾರರಿಗೆ ಆಗಾಗ ಕಾಡುವ ಪ್ರಮುಖ ಸಮಸ್ಯೆ ಎಂದರೆ ಲ್ಯಾಪ್‌ಟಾಪ್‌ ಇದಕ್ಕಿದಂತೆ ಹೆಚ್ಚು ಬಿಸಿಯಾಗುವುದು. ಇಂತಹ ಸನ್ನಿವೇಶದಲ್ಲಿ ಲ್ಯಾಪ್‌ಟಾಪ್‌ ಬಳಸುವುದಕ್ಕೆ ಸಾಧ್ಯವಾಘುವುದಿಲ್ಲ. ನೀವು ಒಂದೇ ಸಮಯದಲ್ಲಿ ಅನೇಕ ಟ್ಯಾಬ್‌ಗಳನ್ನು ಅಪ್ಲಿಕೇಶನ್‌ಗಳನ್ನು ತೆರೆದರೆ ಲ್ಯಾಪ್‌ಟಾಪ್‌ ಬಿಸಿಯಾಗುವ ಅನುಭವ ಬರಲಿದೆ. ಇಂತಹ ಸಮಯದಲ್ಲಿ ನಿಮ್ಮ ಲ್ಯಾಪ್‌ಟಾಪ್‌ ಅನ್ನು ರಕ್ಷಿಸುವುದಕ್ಕೆ ಮೊದಲ ಅಧ್ಯತೆ ನೀಡಬೇಕಾಗುತ್ತದೆ.

ಲ್ಯಾಪ್‌ಟಾಪ್‌ಗಳು

ಲ್ಯಾಪ್‌ಟಾಪ್‌ಗಳು ಏಕಾಏಕಿ ಬಿಸಯಾಗುವುದಕ್ಕೆ ಮುಖ್ಯ ಕಾರಣ ನಾವು ಅನೇಕ ಅಪ್ಲಿಕೇಶನ್‌ಗಳನ್ನು ತೆರೆಯುವುದು ಆಗಿದೆ. ಇದಲ್ಲದೆ ಲ್ಯಾಪ್‌ಟಾಪ್‌ಗಳು ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳಿಗಿಂತ ಕಡಿಮೆ ಸಾಂದ್ರತೆಯನ್ನು ಹೊಂದಿರುತ್ತವೆ. ಆದರಿಂದ ಲ್ಯಾಪ್‌ಟಾಪ್‌ನಲ್ಲಿರುವ ಎಲ್ಲಾ ಯೂನಿಟ್‌ಗಳು ಕಡಿಮೆ ಸ್ಥಳಾವಕಾಶವನ್ನು ಹೊಂದಿರುತ್ತವೆ. ಇದೇ ಕಾರಣಕ್ಕೆ ನೀವು ಹೆಚ್ಚಿನ ಕಂಪ್ಯೂಟಿಂಗ್ ಪವರ್‌ ಅಗತ್ಯವಿರುವ ಪಂಕ್ಷನ್‌ಗಳನ್ನು ನೀವು ಶುರುಮಾಡಿದರೆ ಲ್ಯಾಪ್‌ಟಾಪ್‌ ಬಿಸಿಯಾಗಲು ಶುರುವಾಗಲಿದೆ.

ಲ್ಯಾಪ್‌ಟಾಪ್‌

ಇದಲ್ಲದೆ ಲ್ಯಾಪ್‌ಟಾಪ್‌ ಬಳಸುವಾಗ ಯಾವುದೇ ಕಡೆಯಿಂದಲೂ ಗಾಳಿ ಬೀಸದ ಕಡೆ ಇರಿಸಿದರೆ, ಗಾಳಿಯ ಹರಿವನ್ನು ಕಡಿಮೆ ಮಾಡುವ ಹಾಸಿಗೆ, ದಿಂಬು ಅಥವಾ ಅಸಮವಾದ ಮೇಲ್ಮೈಯಲ್ಲಿ ನಿಮ್ಮ ಲ್ಯಾಪ್‌ಟಾಪ್ ಬಳಸುತ್ತಿದ್ದರೆ ಲ್ಯಾಪ್‌ಟಾಪ್‌ ಬಿಸಿಯಾಗಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ ಮೇಲಿನ ಧೂಳು, ಕೊಳಕು ಮತ್ತು ಕೂದಲು ನಿಮ್ಮ ಲ್ಯಾಪ್‌ಟಾಪ್‌ನ ಫ್ಯಾನ್‌ಗೆ ಅಡ್ಡಿಯಾಗಬಹುದು, ಇದರಿಂದಾಗಿ ಡಿವೈಸ್‌ ಕೂಲ್‌ ಆಗುವ ಬದಲು ಹೀಟ್‌ ಆಗಬಹುದು. ಹಾಗೆಯೇ ಹಳೆಯ ಬ್ಯಾಟರಿಯಿಂದಾಗಿಯೂ ಲ್ಯಾಪ್‌ಟಾಪ್‌ ಬಿಸಿಯಾಗಲಿದೆ.

ಲ್ಯಾಪ್‌ಟಾಪ್‌ ಓವರ್‌ಹೀಟ್‌ ಆದಾಗ ಕಂಡುಬರುವ ಲಕ್ಷಣಗಳು

ಲ್ಯಾಪ್‌ಟಾಪ್‌ ಓವರ್‌ಹೀಟ್‌ ಆದಾಗ ಕಂಡುಬರುವ ಲಕ್ಷಣಗಳು

* ಬೇಸಿಕ್‌ ವರ್ಕ್‌ ನಿರ್ವಹಿಸಲು ನಿಮ್ಮ ಲ್ಯಾಪ್‌ಟಾಪ್ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
* ಅಪ್ಲಿಕೇಶನ್‌ಗಳು ಮತ್ತು ಪಂಕ್ಷನ್‌ ವರ್ಕ್‌ ಆಗುವುದು ಸ್ಥಗಿತಗೊಳ್ಳುತ್ತದೆ.
* ನಿಮ್ಮ ಮೌಸ್ ಅಥವಾ ಕೀಬೋರ್ಡ್‌ನಂತಹ ಲ್ಯಾಪ್‌ಟಾಪ್ ಟೂಲ್ಸ್‌ ರಿಯಾಕ್ಟ್‌ ಮಾಡುವುದು ಸ್ಟಾಪ್ ಆಗಲಿದೆ.
* ನಿಮ್ಮ ಲ್ಯಾಪ್‌ಟಾಪ್ ಇದ್ದಕ್ಕಿದ್ದಂತೆ ಶಟ್‌ಡೌನ್ ಆಗುತ್ತದೆ.
* ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುತ್ತಿದೆ ಎಂದು ಎಚ್ಚರಿಸುವ ಅನಿರೀಕ್ಷಿತ ದೋಷ ಸಂದೇಶಗಳು ಕಾಣಿಸಿಕೊಳ್ಳುತ್ತವೆ.

ನಿಮ್ಮ ಲ್ಯಾಪ್‌ಟಾ ಹೀಟ್‌ ಆದಾಗ ಮೊದಲಿಗೆ ಲ್ಯಾಪ್‌ಟಾಪ್ ಅನ್ನು ಆಫ್ ಮಾಡಿ. ಕಾರ್ಡ್ಸ್‌ ಅನ್‌ಪ್ಲಗ್ ಮಾಡಿ ಮತ್ತು ಬ್ಯಾಟರಿಯನ್ನು ತೆಗೆದುಹಾಕಿ ಲ್ಯಾಪ್‌ಟಾಪ್‌ ಬಿಸಿ ತಣ್ಣಗೆ ಆಗುವ ತನಕ ಆನ್‌ ಮಾಡಬಾರದು. ಹೀಗೆ ಮಾಡುವ ಮೂಲಕ ಲ್ಯಾಪ್‌ಟಾಪ್‌ಗೆ ಹಾನಿಯಾಗುವುದನ್ನು ತಪ್ಪಿಸಬಹುದು.

Best Mobiles in India

English summary
MSI has launched new Raider, Vector and Titan series laptops in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X