2023ಕ್ಕೆ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಸೌಂಡ್‌ ಮಾಡೋದು ಪಕ್ಕಾ!

|

ಕಳೆದ ಒಂದು ವರ್ಷದಲ್ಲಿ ಅನೇಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇದರಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಸಿಕ್ಕಾಪಟ್ಟೆ ಸದ್ದು ಕೂಡ ಮಾಡಿವೆ. ಅದರಂತೆ 2023ರ ಪ್ರಾರಂಭದಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸಿದ್ದವಾಗಿವೆ. ಈ ಮೂಲಕ ಹೊಸ ವರ್ಷ ಶುರುವಾಗ್ತಿದ್ದ ಹಾಗೇ ಟೆಕ್‌ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಲು ತಯಾರಿ ನಡೆಸಿವೆ. ಇದಲ್ಲದೆ 2023ರಲ್ಲಿ ಇನ್ನು ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗೋದು ಪಕ್ಕಾ ಆಗಿವೆ.

ಸ್ಮಾರ್ಟ್‌ಫೋನ್‌

ಹೌದು, 2022ಕ್ಕಿಂತ 2023 ರಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗೋದು ಪಕ್ಕಾ ಆಗಿದೆ. ಇದರಿಂದ ಸ್ಮಾರ್ಟ್‌ಫೋನ್‌ ತಂತ್ರಜ್ಞಾನದಲ್ಲಿ ಕೂಡ ಹೊಸ ಬದಲಾವಣೆ ಆಗುವ ಸಾಧ್ಯತೆಯಿದೆ. ಇನ್ನು ಭಾರತದಲ್ಲಿ 2023ರ ಅಂತ್ಯಕ್ಕೆ ಎಲ್ಲೆಡೆ 5G ನೆಟ್‌ವರ್ಕ್‌ ಲಭ್ಯವಾಗುವುದರಿಂದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಕಾಣಬಹುದಾಗಿದೆ. ಹಾಗಾದ್ರೆ 2023ರಲ್ಲಿ ನಾವು ನಿರೀಕ್ಷಿಸಬಹುದಾದ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್‌ 11

ಒನ್‌ಪ್ಲಸ್‌ 11

2023 ರಲ್ಲಿ ಬಿಡುಗಡೆಯಾಗಲಿರುವ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್‌ 11 ಕೂಡ ಒಂದಾಗಿದೆ. ಮೊದಲಿಗೆ ಚೀನಾದಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್‌ಫೋನ್‌ ಫೆಬ್ರವರಿಯಲ್ಲಿ ಭಾರತದಲ್ಲಿ ಲಾಂಚ್‌ ಆಗಲಿದೆ. ಈಗಾಗಲೇ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 7 ರಂದು ಅನಾವರಣಗೊಳ್ಳುವುದು ಅಧಿಕೃತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್‌ ಹೊಂದಿರುವ ಒನ್‌ಪ್ಲಸ್‌ ಬ್ರ್ಯಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ಐಫೋನ್ 15

ಐಫೋನ್ 15

ಎಂದಿನಂತೆ 2023ರಲ್ಲಿ ಆಪಲ್‌ ಕಂಪೆನಿಯಿಂದ ಹೊಸ ಐಫೋನ್‌ ಬಿಡುಗಡೆ ಖಚಿತವಾಗಿದೆ. ಆದರೆ ಈ ವರ್ಷ ಬಿಡುಗಡೆಯಾಗಿರುವ ಐಫೋನ್ 14 ಮಾದರಿಗಿಂತ ಭಿನ್ನವಾಗಿ ಐಫೋನ್ 15 ಎಂಟ್ರಿ ನೀಡಲಿದೆ. ಅದರಲ್ಲೂ ಐಫೋನ್ 15 ಕಡಿಮೆ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಯಾಕಂದ್ರೆ ಐಫೋನ್ 14 ಬೆಲೆಯ ಕಾರಣಕ್ಕೆ ಜನಪ್ರಿಯತೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಐಫೋನ್ 15 ಸರಣಿ ಐಫೋನ್ 14 ಗಿಂತ ಕಡಿಮೆ ಬೆಲೆಯಲ್ಲಿ ಬರುವ ಸಾದ್ಯತೆಯಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿ ಫೆಬ್ರವರಿ 1, 2023 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ S23, ಗ್ಯಾಲಕ್ಸಿ S23 ಪ್ಲಸ್‌ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಜಾಗತಿಕ ಸರಣಿ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಆದರೆ ಭಾರತದಲ್ಲಿ ಎಕ್ಸಿನೋಸ್‌ ಆವೃತ್ತಿಯಲ್ಲಿಯೇ ಬಿಡುಗಡೆಯಾಗಲಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23ಅಲ್ಟ್ರಾ ಫೋನ್‌ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ.

ಪಿಕ್ಸೆಲ್ 8

ಪಿಕ್ಸೆಲ್ 8

ಇನ್ನು ಮುಂದಿನ ವರ್ಷ ಬಿಡುಗಡೆಯಾಗುವ ಪ್ರಮುಖ ಫೋನ್‌ಗಳ ಸಾಲಿಗೆ ಗೂಗಲ್‌ ಪಿಕ್ಸೆಲ್ 8 ಸರಣಿಯು ಕೂಡ ಸೇರಿದೆ. ಇನ್ನು ಗೂಗಲ್‌ ಪಿಕ್ಸೆಲ್ 8 ಕ್ಯಾಮೆರಾ ಹೊಸ HDR ತಂತ್ರವನ್ನು ಅಳವಡಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ. ಇದರಿಂದ ಹೆಚ್ಚು ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಲು ಅವಕಾಶ ಸಿಗಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಟೆನ್ಸರ್‌ G3 ಪ್ರೊಸೆಸರ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ಸಾದ್ಯತೆಯಿದೆ. ಆದರೆ ಇದರ ಕ್ಯಾಮೆರಾ ಪಿಕ್ಸೆಲ್‌ ಸಾಮರ್ಥ್ಯದ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸ್ಮಾರ್ಟ್‌ಫೋನ್‌ ದಿನಾಂಕ ಹತ್ತಿರ ವಾದಂತೆ ಇದರ ಇನ್ನಷ್ಟು ಮಾಹಿತಿ ಬಹಿರಂಗವಾಗಲಿದೆ ಎಂದು ಹೇಳಲಾಗಿದೆ.

Best Mobiles in India

English summary
Much-awaited smartphone launches are due in 2023

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X