ಸಂಕಷ್ಟದಲ್ಲಿದ್ದ 'ಆರ್‌ಕಾಂ' ಆಸ್ತಿ ಖರೀದಿಸಿದ ಮುಖೇಶ್ ಅಂಬಾನಿ!!..ಜಿಯೋಗೆ ಏನು ಲಾಭ?

ರಿಲಯನ್ಸ್ ಕಮ್ಯೂನಿಕೇಶನ್ಸ್ ಆಸ್ತಿಯನ್ನು ಖರೀದಿಸುವ ಒಪ್ಪಂದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸಹಿಹಾಕಿರುವುದಾಗಿ ರಿಲಯನ್ಸ್ ಕಮ್ಯೂನಿಕೇಷನ್ ಗುರುವಾರ ತಿಳಿಸಿದೆ.

|

45 ಸಾವಿರ ಕೋಟಿ ರೂ. ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗುವ ಭಯದಲ್ಲಿದ್ದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ಸ್ ಸ್ಪೆಕ್ಟ್ರಂ ಟವರ್, ಆಪ್ಟಿಕಲ್ ಫೈಬರ್ ನೆಟ್‍ವರ್ಕ್ ಮತ್ತು ಇತರೆ ಎಲ್ಲಾ ವೈರ್‌ಲೆಸ್‌ ಸಂಪತ್ತನ್ನು ಖರೀದಿಸಲು ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ ಮುಂದಾಗಿದ್ದಾರೆ.!!

ರಿಲಯನ್ಸ್ ಕಮ್ಯೂನಿಕೇಶನ್ಸ್ ಆಸ್ತಿಯನ್ನು ಖರೀದಿಸುವ ಒಪ್ಪಂದಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸಹಿಹಾಕಿರುವುದಾಗಿ ರಿಲಯನ್ಸ್ ಕಮ್ಯೂನಿಕೇಷನ್ ಗುರುವಾರ ತಿಳಿಸಿದೆ. ಹಾಗಾದರೆ, ಎರಡೂ ಕಂಪೆನಿಗಳ ನಡುವೆ ಆಗಿರುವ ಒಪ್ಪಂದಗಳೇನು? ಆರ್‌ಕಾಂ ಭವಿಷ್ಯವೇನು? ಇದರಿಂದ ಜಿಯೋಗೆ ಏನು ಲಾಭ? ಎಂಬುದನ್ನು ಮುಂದೆ ತಿಳಿಯಿರಿ.!!

ಧೀರೂಭಾಯಿ ಜನ್ಮದ ಗಿಫ್ಟ್?

ಧೀರೂಭಾಯಿ ಜನ್ಮದ ಗಿಫ್ಟ್?

ಆರ್‌ಕಾಂಗೆ ಸೇರಿದ ಸಂಪತ್ತು ಮಾರಾಟ ಮಾಡಿ ಬ್ಯಾಂಕ್‌ಗಳ 40 ಸಾವಿರ ಕೋಟಿ ರೂ. ಸಾಲವನ್ನು ಪಾವತಿ ಮಾಡಲಾಗುವುದು ಎಂದು ಅನಿಲ್ ಅಂಬಾನಿ ಹೇಳಿದ್ದರು. ಅದಾದ ಎರಡು ದಿನಗಳಲ್ಲಿಯೇ ರಿಲಯನ್ಸ್ ಸ್ಥಾಪಕ ಧೀರೂಭಾಯಿ ಅಂಬಾನಿ ಅವರ 85 ಜನ್ಮ ದಿನಾಚರಣೆ ಸಂದರ್ಭದಲ್ಲಿಯೇ ಅನಿಲ್ ಅಣ್ಣ ಮುಖೇಶ್ ತಮ್ಮನ ಕೈಡಿದಿದ್ದಾರೆ.!!

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
25 ಸಾವಿರ ಕೋಟಿ ಒಪ್ಪಂದ?

25 ಸಾವಿರ ಕೋಟಿ ಒಪ್ಪಂದ?

ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗುವ ಭಯದಲ್ಲಿದ್ದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ಸ್ ವೈರ್‌ಲೆಸ್‌ ಸಂಪತ್ತಿಗೆ ಜಿಯೋ 23 ಸಾವಿರ ಕೋಟಿ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ. ಆದರೆ, ಈ ಬಗ್ಗೆ ಆರ್‌ಕಾಮ್ ಸಂಸ್ಥೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.!!

ಆರ್‌ಕಾಂ ಇನ್ನು ಇರೊಲ್ಲಾ!!

ಆರ್‌ಕಾಂ ಇನ್ನು ಇರೊಲ್ಲಾ!!

ಬಹುವರ್ಷದಿಂದ ನಷ್ಟದಲ್ಲಿರುವ ಆರ್‌ಕಾಂ ಏರ್‌ಸೆಲ್ ಕಂಪೆನಿಯನ್ನು ಖರೀದಿಸಲು ಪ್ರಯತ್ನಿಸಿ ಸೋತಿತ್ತು. ನಂತರ 2ಜಿ ಸೇವೆಯನ್ನು ಸ್ಥಗಿತ ಗೊಳಿಸಿ ಲಾಭಕರವಾದ 4ಜಿ ಸೇವೆಯನ್ನು ಮಾತ್ರ ನೀಡಲಾಗುವುದು ಎಂದು ಹೇಳಿದ್ದ ಆರ್‌ಕಾಂ ಇದೀಗ ತನ್ನ ಬಹುತೇಕ ಆಸ್ತಿ ಮಾರಿಕೊಂಡು ಕೊನೆಯ ಹಂತಕ್ಕೆ ಬಂದುನಿಂತಿದೆ.!!

ಜಿಯೋಗೂ ಲಾಭ ಇದೆ!!

ಜಿಯೋಗೂ ಲಾಭ ಇದೆ!!

ಕೇವಲ ಒಂದು ವರ್ಷದ ಹಿಂದೆಯಷ್ಟೆ ಟೆಲಿಕಾಂಗೆ ಕಾಲಿಟ್ಟ ಜಿಯೋಗೆ ಈಗಾಗಲೇ 16 ಕೋಟಿ ಗ್ರಾಹಕರಿದ್ದಾರೆ. ಆರ್‌ಕಾಂ ಸೇರಿದ ಸಂಪತ್ತು ಖರೀದಿಯಿಂದ ತನ್ನ ಮನೆ ಮನೆಗಳಿಗೆ ಫೈಬರ್, ವೈಯರ್‍ಲೆಸ್ ಸೇವೆ ಮತ್ತು ಉದ್ಯಮ ಸೇವೆ ವಿಸ್ತರಿಸಲು ಸಹಾಯವಾಗಲಿದೆ ಎಂದು ಜಿಯೋ ತಿಳಿಸಿದೆ.!!

ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?ಫೇಸ್‌ಬುಕ್ ಖಾತೆಗೆ ಆಧಾರ್ ಲಿಂಕ್!!?..ಇದಕ್ಕೆ ಫೇಸ್‌ಬುಕ್ ಹೇಳಿದ್ದೇನು ಗೊತ್ತಾ?

Best Mobiles in India

English summary
Market circles are pegging the deal size at roughly Rs 24,000 crore . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X