ಟಾಟಾಸ್ಕೈ ಸೆಟ್‌ಅಪ್‌ ಬಾಕ್ಸ್‌ ಮಲ್ಟಿಟಿವಿ ಕನೆಕ್ಷನ್ ಪ್ರೈಸ್‌ ಮಾಹಿತಿ ಇಲ್ಲಿದೆ!

|

ದೇಶದ ಡಿಟಿಎಚ್‌ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟಾಟಾಸ್ಕೈ ಸಂಸ್ಥೆಯು ಇತ್ತೀಚಿಗಷ್ಟೆ ಹಲವು ಹೊಸ ಆಫರ್ ಘೋಷಿಸಿದೆ. ಈ ಸಂಸ್ಥೆಯು ಹೆಚ್‌ಡಿ ಮತ್ತು ಎಸ್‌ಡಿ ಸೆಟ್‌ಅಪ್‌ ಬಾಕ್ಸ್‌ಗಳ ಜೊತೆಗೆ ಟಾಟಾಸ್ಕೈ ಬಿಂಜ್ ಪ್ಲಸ್‌ ಆಂಡ್ರಾಯ್ಡ್‌ STB ಸಹ ಹೊಂದಿದೆ. ಈ ಮೂರು ಮಾದರಿಯ ಸೆಟ್‌ಅಪ್‌ ಬಾಕ್ಸ್‌ಗಳು ಗ್ರಾಹಕರನ್ನು ಸೆಳೆದಿದ್ದು, ಭಿನ್ನ ಶ್ರೇಣಿಯ ಪ್ರೈಸ್‌ಟ್ಯಾಗ್‌ ಹೊಂದಿವೆ.

 ಟಾಟಾಸ್ಕೈ ಸಂಸ್ಥೆಯು

ಹೌದು, ಟಾಟಾಸ್ಕೈ ಸಂಸ್ಥೆಯು ಹೆಚ್‌ಡಿ ಮತ್ತು ಎಸ್‌ಡಿ ಸೆಟ್‌ಅಪ್‌ ಬಾಕ್ಸ್‌ಗಳ ಜೊತೆಗೆ ಟಾಟಾಸ್ಕೈ ಬಿಂಜ್ ಪ್ಲಸ್‌ ಮಾದರಿಯ ಸೆಟ್‌ಅಪ್ ಬಾಕ್ಸ್‌ ಆಯ್ಕೆ ನೀಡಿದೆ. ಆಕರ್ಷಕ ದರದಲ್ಲಿ ಈ ಸೆಟ್‌ಅಪ್‌ ಬಾಕ್ಸ್‌ಗಳನ್ನು ಪರಿಚಯಿಸಿದ್ದು, ಗ್ರಾಹಕರನ್ನು ಸೆಳೆದಿದೆ. ಹಾಗೆಯೇ ದೊಡ್ಡ ಮನೆಗಳಲ್ಲಿ ಮಲ್ಟಿಟಿವಿ ಸೆಟ್‌ಅಪ್‌ ಕನೆಕ್ಷನ್ ಒದಗಿಸುವ ಸೌಲಭ್ಯ ಹೊಂದಿದ್ದು, ಹಾಗೂ ರಿಯಾಯಿತಿ ಪ್ರೈಸ್‌ಟ್ಯಾಗ್ ಆಯ್ಕೆ ಸಹ ನೀಡಿದೆ. ಆ ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯೋಣ.

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಆರಂಭಿಕ ಸೆಟ್‌ಅಪ್ ಬಾಕ್ಸ್‌ ಮಾಡೆಲ್ ಆಗಿದೆ. ಈ ಸೆಟ್‌ಅಪ್ ಬಾಕ್ಸ್‌ ಬೆಲೆಯು 1,499ರೂ. ಆಗಿದ್ದು, ಮಲ್ಟಿಟಿವಿ ಕನೆಕ್ಷನ್ ದರವು 1,399ರೂ.ಗಳು ಆಗಿದೆ. ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವಿಡಿ ಕ್ವಾಲಿಟಿಯ ವಿಡಿಯೊ ಗುಣಮಟ್ಟ ಪಡೆದಿರುತ್ತದೆ. ಆಡಿಯೊ ಗುಣಮಟ್ಟವು ಸಿಡಿ ಕ್ವಾಲಿಟಿಯಲ್ಲಿರುತ್ತದೆ. ವಿವಿಧ ಚಾನೆಲ್ ಲಿಸ್ಟ್‌ ಇದ್ದು, ಗ್ರಾಹಕರು ಅವರಿಷ್ಟದ ಚಾನಲ್‌ ಗುಚ್ಛ ಆಯ್ಕೆ ಮಾಡಿಕೊಳ್ಳಬಹುದು.

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌

ಟಾಟಾಸ್ಕೈ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ 1080i ವಿಡಿಯೊ ಕ್ವಾಲಿಟಿ ಹೊಂದಿರುವುದರೊಂದಿಗೆ, 16:9 ಅನುಪಾತ ರಚನೆ ಇರುತ್ತದೆ. ಜೊತೆಗೆ ಡಾಲ್ಬಿ ಸರೌಂಡ್‌ ಸೌಂಡ್‌ ಸೌಲಭ್ಯವನ್ನು ಹೊಂದಿರುತ್ತದೆ. vivid ಕಲರ್‌ ಸೌಲಭ್ಯ ಪಡೆದಿದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿ ಇದ್ದರೇ ಹೆಚ್‌ಡಿ ಸೆಟ್‌ಟಾಪ್‌ ಆಯ್ಕೆಯೇ ಉತ್ತಮ. ಆರಂಭಿಕ ಬೆಲೆಯು 1499ರೂ. ಆಗಿದ್ದು, ಮಲ್ಟಿಟಿವಿ ಕನೆಕ್ಷನ್ ಬೆಲೆಯು 1199ರೂ. ಆಗಿದೆ.

ಟಾಟಾಸ್ಕೈ ಬಿಂಜ್ ಪ್ಲಸ್

ಟಾಟಾಸ್ಕೈ ಬಿಂಜ್ ಪ್ಲಸ್

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌, ಸಾಮಾನ್ಯ ಡಿಟಿಎಚ್ ಸೆಟ್‌ಟಾಪ್‌ಗಳಿಗಿಂತ ಭಿನ್ನವಾಗಿದೆ. ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ ಇಂಟರ್ನೆಟ್ ಆಧಾರಿತ ಸೇವೆಗಳು ದೊರೆಯುತ್ತವೆ. ಗೂಗಲ್ ಪ್ಲೇ ಸ್ಟೋರ್ ಸೌಲಭ್ಯ ಇರುತ್ತದೆ ಹಾಗೂ ಅಸಿಸ್ಟಂಟ್ ಅಸಿಸ್ಟಂಟ್ ಆಧಾರಿತ ವಾಯಿಸ್ ಸರ್ಚ್ ಆಯ್ಕೆಯು ಒಳಗೊಂಡಿರುತ್ತದೆ. ಹೀಗಾಗಿ ಸೆಟ್‌ಟಾಪ್‌ ಬಾಕ್ಸ್‌ ಅನ್ನು ವಾಯಿಸ್‌ ಮೂಲಕವೇ ನಿಯಂತ್ರಣ ಮಾಡಬಹುದಾಗಿದೆ. ಇದರ ಬೆಲೆಯು 3999ರೂ.ಗಳಾಗಿದ್ದು, ಆರು ತಿಂಗಳು OTT ಕಂಟೆಂಟ್ ಚಂದಾದಾರಿಕೆ ದೊರೆಯಲಿದೆ.

Best Mobiles in India

English summary
Tata Sky allows its customers to get Multi TV connections.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X