499ರೂ.ಗಳಿಗೆ 1 ಲಕ್ಷವನ್ನು ಕಳೆದುಕೊಂಡ ಭೂಪ! ಅಷ್ಟಕ್ಕೂ, ಆತ ಮಾಡಿದ್ದೇನು?

|

ಆನ್‌ಲೈನ್‌ನಲ್ಲಿ ಸೈಬರ್‌ ವಂಚಕರಿಂದ ಮೋಸ ಹೋಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಸೈಬರ್‌ ವಂಚಕರ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದರೂ ಕೂಡ ಜನರು ವಂಚಕರ ಜಾಲಕ್ಕೆ ಸುಲಭವಾಗಿ ಸಿಲುಕಿಕೊಂಡು ಹಣ ಕಳೆದುಕೊಳ್ಳುತ್ತಾರೆ. ಇದೀಗ ಇಂತಹದ್ದೆ ಹೊಸ ಸೈಬರ್‌ ವಂಚನೆ ಪ್ರಕರಣ ಮುಂಬೈನಲ್ಲಿ ನಡೆದಿದೆ. ಆದರೆ ಈ ಪ್ರಕರಣದಲ್ಲಿ ಆಗಿರುವ ವಂಚನೆಯ ಬಗ್ಗೆ ಕೇಳಿದರೆ ನೀವು ಕೂಡ ಕ್ಷಣಕಾಲ ಯೋಚಿಸೋದು ಗ್ಯಾರಂಟಿ. ಯಾಕಂದರೆ ಈತ ಕೇವಲ 499ರೂ.ಗಳಿಗೆ ಬದಲಾಗಿ 1 ಲಕ್ಷವನ್ನು ಕಳೆದುಕೊಂಡಿದ್ದಾನೆ.

ಒಟಿಟಿ

ಹೌದು, ಮುಂಬೈ ಮೂಲದ ವ್ಯಕ್ತಿಯೊಬ್ಬ ಒಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ಚಂದಾದರಿಕೆಯನ್ನು ಅಪ್ಡೇಟ್‌ ಮಾಡಲು ಹೋಗಿ 1 ಲಕ್ಷವನ್ನು ಕಳೆದುಕೊಂಡಿದ್ದಾರೆ. ಸ್ಕ್ಯಾಮರ್‌ಗಳು ಕಳುಹಿಸಿದ ಇಮೇಲ್‌ ಜಾಲಕ್ಕೆ ಬಲಿಯಾಗಿ ಈ ರೀತಿ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ಸ್ಕ್ಯಾಮರ್‌ಗಳು ಸಂದೇಶಗಳ ಮೂಲಕ ಮಾಲ್‌ವೇರ್‌ ಲಿಂಕ್‌ಗಳನ್ನು ಕಳುಹಿಸಿ ಯಾಮಾರಿಸುವುದು ವರದಿಯಾಗಿದೆ. ಆದರೆ ನೆಟ್‌ಫ್ಲಿಕ್ಸ್‌ ಹೆಸರಿನಲ್ಲಿ 1 ಲಕ್ಷ ರೂಪಾಯಿ ವಂಚಿಸಿರುವುದು ಇದೇ ಮೊದಲ ಭಾರಿ ಎನ್ನಬಹುದಾಗಿದೆ.

ಪ್ಲಾಟ್‌ಫಾರ್ಮ್‌

ನಿಜ, ಒಟಿಟಿ ಪ್ಲಾಟ್‌ಫಾರ್ಮ್‌ ಚಂದಾದಾರಿಕೆಯನ್ನು ಅಪ್ಡೇಟ್‌ ಮಾಡುವ ಮುನ್ನ ನೀವು ಕೂಡ ಕ್ಷಣ ಕಾಲ ಯೋಚಿಸುವುದು ಉತ್ತಮ. ಯಾವುದೇ ಮೇಲ್‌ ನೋಡಿ ಚಂದಾದಾರಿಕೆ ನವೀಕರಣ ಮಾಡುವ ಬದಲು, ಒಟಿಟಿ ಪ್ಲಾಟ್‌ಫಾರ್ಮ್‌ಗೆ ಹೋಗಿ ಚಂದಾದಾರಿಕೆಯ ಅಂತ್ಯದ ವಿವರ ತಿಳಿಯುವುದು ಉತ್ತಮ. ಯಾಕಂದ್ರೆ ಮುಂಬೈ ಮೂಲದ 74 ವರ್ಷದ ವ್ಯಕ್ತಿಯೊಬ್ಬರು ಕೇವಲ ತಮ್ಮ ಮೇಲ್‌ನಲ್ಲಿ ಬಂದ ಸಂದೇಶ ನೋಡಿ 1 ಲಕ್ಷವನ್ನು ಕಳೆದುಕೊಂಡಿದ್ದಾರೆ.

ನೆಟ್‌ಫ್ಲಿಕ್ಸ್‌

ಮುಂಬೈ ಮೂಲದ ವ್ಯಕ್ತಿಗೆ ಮೊದಲಿಗೆ ನೆಟ್‌ಫ್ಲಿಕ್ಸ್‌ ಮೇಲ್‌ ಮಾದರಿಯ ಒಂದು ಮೇಲ್‌ ಬಂದಿದೆ. ಇದರಲ್ಲಿ ನಿಮ್ಮ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಅಂತ್ಯವಾಗಿದೆ, ಇದನ್ನು ನವೀಕರಿಸಲು ಕೂಡಲೇ 499ರೂ.ಗಳ ಪ್ಲಾನ್‌ ಅನ್ನು ರೀಚಾರ್ಜ್‌ ಮಾಡುವಂತೆ ಹೇಳಿದೆ. ಇದಕ್ಕಾಗಿ ತಮ್ಮ ಬ್ಯಾಂಕ್‌ ಖಾತೆಯ ವಿವರಗಳು ಹಾಗೂ ಒಟಿಪಿ ಹಂಚಿಕೊಳ್ಳುವಂತೆ ಹೇಳಲಾಗಿದೆ. ಮೇಲ್‌ ಮಾದರಿಯನ್ನು ನೋಡಿದ ವ್ಯಕ್ತಿ ಬ್ಯಾಂಕ್‌ ಖಾತೆಯ ವಿವರಗಳು ಹಾಗೂ ಒಟಿಪಿಯನ್ನು ಹಂಚಿಕೊಂಡಿದ್ದಾರೆ. ಕುಡಲೇ ಸ್ಕ್ಯಾಮರ್‌ಗಳು, ಅವರ ಖಾತೆಯಂದ ಒಂದು ಲಕ್ಷ ಹಣವನ್ನು ಎಗರಿಸಿದ್ದಾರೆ.

ಲಿಂಕ್

ಇನ್ನು ವಂಚಕರು ಕಳುಹಿಸಿದ ಇಮೇಲ್‌ನಲ್ಲಿ 499ರೂ. ಪಾವತಿ ಮಾಡಲು ಲಿಂಕ್ ಅನ್ನು ಸಹ ಒದಗಿಸಿದೆ. ಇದರ ಬಗ್ಗೆ ಯೋಚಿಸದ ವ್ಯಕ್ತಿ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ತನ್ನ ಎಲ್ಲಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿದ್ದಾರೆ. 1.22 ಲಕ್ಷ ಪಾವತಿಗಾಗಿ ಅವರ ಮೊಬೈಲ್ ಫೋನ್‌ನಲ್ಲಿ ಒನ್ ಟೈಮ್ ಪಾಸ್‌ವರ್ಡ್ ಬಂದಿದೆ. ಕೇವಲ 499 ರೂ ಪಾವತಿಸಬೇಕು ಎಂದು ಇಮೇಲ್‌ನಲ್ಲಿ ಹೇಳಿದ್ದರೂ, ಒಟಿಪಿಯನ್ನು 1 ಲಕ್ಷ ರೂ.ಗೆ ಕಳುಹಿಸಲಾಗಿದೆ. ಆದರೆ ಇದ್ಯಾವುದನ್ನು ಗಮನಿಸಿದ ವ್ಯಕ್ತಿ ಹಣ ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲ 1.22 ಲಕ್ಷ ಪಾವತಿ ಮಾಡದೇ ಇದ್ದಲ್ಲಿ 8 ಅನ್ನು ಒತ್ತುವಂತೆ ಬ್ಯಾಂಕ್‌ನಿಂದ ಕರೆ ಬಂದಾಗಲೇ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ.

ಪೊಲೀಸ್‌

ಮೋಸ ಹೋಗಿರುವುದು ಬೆಳಕಿಗೆ ಬಂದ ತಕ್ಷಣ ಆತ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಆದರೆ ಇಲ್ಲಿಯವರೆಗೆ ಸೈಬರ್‌ ವಂಚಕರು ಸಿಕ್ಕಿ ಬಿದ್ದಿರುವ ಬಗ್ಗೆ ಯಾಉದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ನೆಟ್‌ಫ್ಲಿಕ್ಸ್‌ ಬಳಸುವ ಬಳಕೆದಾರರು ಯಾವುದೇ ಅಧಿಕೃತ ಕಂಪನಿಯು ನಿಮ್ಮ OTP ಅನ್ನು ಮೇಲ್ ಮೂಲಕ ಹಂಚಿಕೊಳ್ಳಲು ನಿಮ್ಮನ್ನು ಕೇಳುವುದಿಲ್ಲ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಇಂತಹ ಮೇಲ್‌ಗಳ ಬಂದರೆ ಅವುಗಳನ್ನು ಸ್ಕಿಪ್‌ ಮಾಡುವುದು ಸೂಕ್ತವಾಗಿದೆ.

Best Mobiles in India

Read more about:
English summary
Mumbai-based man lost over 1 Lakh with scammers masquerading as Netflix

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X