ಭಾರತದ 21 ವರ್ಷದ ಯುವಕನಿಗೆ ಗೂಗಲ್‌ನಿಂದ 1.2 ಕೋಟಿ ರೂ. ಸಂಬಳದ ಕೆಲಸ!!

|

ಪ್ರತಿಭೆಗಳಿಗೆ ದೊಡ್ಡ ವೇದಿಕೆಯನ್ನು ಒದಗಿಸುವಲ್ಲಿ ಯಾವಾಗಲೂ ಮುಂದಿರುವ ಪ್ರಖ್ಯಾತ ಸರ್ಚ್ ಎಂಜಿನ್ ಕಂಪೆನಿ ಗೂಗಲ್‌ನಿಂದ ಮುಂಬಯಿನ 21 ವರ್ಷದ ಯುವಕನಿಗೆ 1.2 ಕೋಟಿ ರೂ. ಸಂಬಳದ ಆಫರ್ ನೀಡಿದೆ. ಮುಂಬಯಿನ ಮಿರಾ ರಸ್ತೆಯಲ್ಲಿರುವ ಶ್ರೀ ಎಲ್‌ಆರ್‌ ತಿವಾರಿ ಇಂಜಿನಿಯರಿಂಗ್‌ ಕಾಲೇಜ್‌ನ ವಿದ್ಯಾರ್ಥಿ ಅಬ್ದುಲ್ಲಾ ಖಾನ್‌ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ.

ಹೌದು, ಸ್ಪರ್ಧಾತ್ಮಕ ಪ್ರೋಗ್ರಾಮ್‌ಗೆ ಸಂಬಂಧಿಸಿದಂತೆ 21 ವರ್ಷದ ಯುವಕನ ಪ್ರೊಫೈಲ್‌ ನೋಡಿ ಗೂಗಲ್‌ ಕಂಪೆನಿ ಸಂದರ್ಶನಕ್ಕೆ ಆಹ್ವಾನಿಸಿತ್ತು. ಈ ಸ್ಪರ್ಧಾತ್ಮಕ ಪ್ರೋಗ್ರಾಮ್‌ ಆಹ್ವಾನವನ್ನು ಸುಮ್ಮನೆ ವಿನೋದಕ್ಕಾಗಿ ಸ್ವೀಕರಿಸಿದ್ದ ಎಲ್‌ಆರ್‌ ತಿವಾರಿ ಇಂಜಿನಿಯರಿಂಗ್‌ ಕಾಲೇಜ್‌ನ ವಿದ್ಯಾರ್ಥಿ ಅಬ್ದುಲ್ಲಾ ಖಾನ್‌ ಕೋಟಿ ರೂ. ಸಂಬಳದ ನೌಕರಿ ಗಿಟ್ಟಿಸಿಕೊಂಡಿದ್ದಾನೆ.

ಭಾರತದ 21 ವರ್ಷದ ಯುವಕನಿಗೆ ಗೂಗಲ್‌ನಿಂದ 1.2 ಕೋಟಿ ರೂ. ಸಂಬಳದ ಕೆಲಸ!!

ಶ್ರೀ ಎಲ್‌ಆರ್‌ ತಿವಾರಿ ಇಂಜಿನಿಯರಿಂಗ್‌ ಕಾಲೇಜ್‌ನಲ್ಲ ಅಂತಿಮ ಬಿಇ ಓದುತ್ತಿರುವ 21 ವರ್ಷದ ವಿದ್ಯಾರ್ಥಿ ಅಬ್ದುಲ್ಲಾ ಖಾನ್‌ಗೆ ಗೂಗಲ್‌ 1.2 ಕೋಟಿ ರೂ. ಸಂಬಳದ ಆಫರ್ ನಿಡಿದ್ದು, ವಾರ್ಷಿಕ ಬೇಸಿಕ್ ಸ್ಯಾಲರಿ 54.5 ಲಕ್ಷ ರೂ. ಇದೆ. ನಾಲ್ಕು ವರ್ಷಗಳ ವರೆಗೆ ಶೇ.15ರಷ್ಟು ಬೋನಸ್‌ ಮತ್ತು 58.9 ಲಕ್ಷ ರೂ.ಗಳ ಸ್ಟಾಕ್‌ ಆಪ್ಶನ್‌ ಸ್ಯಾಲರಿ ಪ್ಯಾಕೇಜ್‌ನಲ್ಲಿ ಸೇರಿದೆ.

ಆನ್‌ಲೈನ್‌ ಸಂದರ್ಶನದ ನಂತರ ಖಾನ್‌ನನ್ನು ಅಂತಿಮ ಸಂದರ್ಶನಕ್ಕೆ ಹಾಜರಾಗುವಂತೆ ಗೂಗಲ್‌ ಕಳೆದ ತಿಂಗಳು ಲಂಡನ್‌ ಕಚೇರಿಗೆ ಆಹ್ವಾನಿಸಿತ್ತು.ನಂತರ ನಾನು ವಿನೋದಕ್ಕಾಗಿ ಆ ಸ್ಪರ್ಧಾತ್ಮಕ ಪ್ರೋಗ್ರಾಮ್‌ಗಳಲ್ಲಿ ಭಾಗವಹಿಸಿದ್ದೆ. ಆದರೆ, ಗೂಗಲ್‌ನಿಂದ ಇಂತಹ ದೊಡ್ಡ ಉದ್ಯೋಗದ ಆಫರ್ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಅಬ್ದುಲ್ಲಾ ಖಾನ್‌ ತಿಳಿಸಿದ್ದಾನೆ.

ಭಾರತದ 21 ವರ್ಷದ ಯುವಕನಿಗೆ ಗೂಗಲ್‌ನಿಂದ 1.2 ಕೋಟಿ ರೂ. ಸಂಬಳದ ಕೆಲಸ!!

ಪದವಿ ಮುಗಿಯುವುದರೊಳಗೆ ಗೂಗಲ್‌ನಿಂದ ದೊಡ್ಡ ಮೊತ್ತದ ಸಂಬಳದ ನೌಕರಿ ಸಿಕ್ಕಿದ್ದು ಖುಷಿ ನೀಡಿದೆ. ಗೂಗಲ್‌ನ ಲಂಡನ್‌ ಕಚೇರಿಯಲ್ಲಿ ನಾನು ಉದ್ಯೋಗ ನಿರ್ವಹಿಸಲಿದ್ದು, ಇದು ಮತ್ತಷ್ಟು ಹೆಚ್ಚು ಕಲಿಕೆಗೆ ಸಹಕಾರಿಯಾಗಿದೆ. ಗೂಗಲ್‌ನಲ್ಲಿ ಉದ್ಯೋಗ ಪಡೆಯಲು ಪೋಷಕರು ಮತ್ತು ಶಿಕ್ಷಕರು ನನಗೆ ನೀಡಿದ ಪ್ರೋತ್ಸಾಹವೇ ಕಾರಣ ಎಂದು ಅಬ್ದುಲ್ಲಾ ಖಾನ್‌ ಹೇಳಿದ್ದಾರೆ.

Best Mobiles in India

Read more about:
English summary
Mumbai boy Abdullah Khan (21) landed a job at Google's London office, for a ... His six-figure package includes the base salary of Rs 54.5 lak. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X