Subscribe to Gizbot

ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

Posted By:

ಮೈಕ್ರೋಬ್ಲಾಗಿಂಗ್‌ನಲ್ಲಿ ಅತೀ ಜನಪ್ರಿಯವಾದ ತಾಣ ಟ್ವೀಟರ್‌. ಟ್ವೀಟರ್‌ನಲ್ಲಿ ಪ್ರತಿದಿನ 170 ಬಿಲಿಯನ್‌ ಟ್ವೀಟ್‌ಗಳು ಹರಿದಾಡುತ್ತಿವೆಯಂತೆ. 218 ಮಿಲಿಯನ್‌ ಬಳಕೆದಾರನ್ನು ಹೊಂದಿರುವ ಟ್ವೀಟರ್‌ ಇಂದು ವಿಶ್ವದ ನಂಬರ್‌ ಒನ್‌ ಮೈಕ್ರೋಬ್ಲಾಗಿಂಗ್‌ ತಾಣವಾಗಿದೆ.

ಟ್ವೀಟರ್‌ನ್ನು ಜುಲೈ 5,2006ರಂದು ಬಿಜ್ ಸ್ಟೋನ್(@biz),ಇವಾನ್ ವಿಲಿಯಮ್ಸ್(@ev)ಮತ್ತು ಜ್ಯಾಕ್ ಡಾರ್ಸೆ(@jack) ಸ್ಥಾಪಿಸಿದರು.ಸೆಲೆಬ್ರಿಟಿಗಳು,ರಾಜಕಾರಣಿಗಳು ಕಂಪೆನಿಗಳ ಜೊತೆಗೆ ಅಭಿಮಾನಿಗಳು ಸುಲಭವಾಗಿ ಟ್ವೀಟರ್‌ನಲ್ಲಿ ಸಂವಹನ ಮಾಡಬಹುದಾದ್ದರಿಂದ ಟ್ವೀಟರ್‌ ಇಂದು ದೊಡ್ಡ ಕಂಪೆನಿಯಾಗಿ ಬೆಳೆದಿದೆ.ಹೀಗಾಗಿ ಮುಂದಿನ ದಿನಗಳಲ್ಲಿ ಕಂಪೆನಿಗೆ ಸಾರ್ವ‌ಜನಿಕರು ಬಂಡವಾಳ ಹೂಡಬಹುದು ಎಂದು ಟ್ವೀಟರ್‍ ಸಹ ಸಂಸ್ಥಾಪಕ ಜ್ಯಾಕ್‌ ಜ್ಯಾಕ್ ಡಾರ್ಸೆ ಮೊನ್ನೆಯಷ್ಟೆ ಪ್ರಕಟಿಸಿದ್ದಾರೆ.ಹೀಗಾಗಿ ಟ್ವೀಟರ್‌ನ ಕೆಲವು ಸ್ವಾರಸ್ಯಕರ ಮಾಹಿತಿಗಳು ಇಲ್ಲಿವೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ವಿಶ್ವದ ಪ್ರಪ್ರಥಮ ಟ್ವೀಟರ್‌ ಹೋಟೆಲ್‌ ಹೇಗಿದೆ ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

1

ಟ್ವೀಟರ್‌ ಸಹ ಸಂಸ್ಥಾಪಕ ಜ್ಯಾಕ್ ಡಾರ್ಸೆ ಮೊತ್ತ ಮೊದಲ ಟ್ವೀಟ್‌ ಮಾಡಿದ ವ್ಯಕ್ತಿ.ಪ್ರಥಮ ಟ್ವೀಟರ್‌ನ ಸಂದೇಶ ಹೀಗಿತ್ತು'just setting up my twttr'

ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

2


ಟ್ವೀಟರ್‌ನಲ್ಲಿ ಅತೀ ಹೆಚ್ಚು ಫಾಲೋವರ್‌‌ಗಳಿರುವ ಜನಪ್ರಿಯ ವ್ಯಕ್ತಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ. ಮೂರು ಕೋಟಿಗೂ ಅಧಿಕ ಮಂದಿ ಬರಾಕ್‌ ಒಬಾಮರನ್ನು ಫಾಲೋ ಮಾಡುತ್ತಿದ್ದಾರೆ.

3


ಟ್ವೀಟರ್‌ನಲ್ಲಿ ಅತೀ ಹೆಚ್ಚು ಬಾರಿ ಟ್ವೀಟ್‌ ಆಗಿರುವ ಸಂದೇಶ'Four more years'. ಇಲ್ಲಿಯವರಗೆ 7,92,050 ಹೆಚ್ಚು ಮಂದಿ ಒಬಾಮ ಕಳುಹಿಸಿದ ಟ್ಟೀಟ್‌ನ್ನು ರಿ ಟ್ವೀಟ್‌ ಮಾಡಿದ್ದಾರೆ.

ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

4


200ಮಿಲಿಯನ್‌ಗಿಂತಲೂ ಅಧಿಕ ಮಂದಿ ಟ್ವೀಟರ್‌ನ್ನು ಸಕ್ರೀಯವಾಗಿ ಬಳಸುತ್ತಿದ್ದಾರೆ. ಶೇ.80 ಮಂದಿ ತನ್ನ ಮೊಬೈಲ್‌ ಮೂಲಕವೇ ಟ್ವೀಟ್‌ ಮಾಡುತ್ತಿದ್ದಾರೆ.

ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

5

ಈಗ ಇರುವ ಟ್ವೀಟರ್‍ ಅಕೌಂಟ್‌ನಲ್ಲಿ 2 ಕೋಟಿ ನಕಲಿ ಟ್ವೀಟರ್‌ ಅಕೌಂಟ್‌‌ ಇರಬಹುದು ಎಂದು ಹೇಳಲಾಗುತ್ತಿದೆ.

ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

6


ಒಂದು ವಿಷಯದ ಬಗ್ಗೆ ಎಲ್ಲ ಜನರಿಗೆ ಸುಲಭವಾಗಿ ತಿಳಿಯುವಂತೆ ಬಳಸಲಾಗುತ್ತಿರುವ ಹ್ಯಾಶ್‌ಟ್ಯಾಗ್‌(#)ನ್ನು ಅಗಸ್ಟ್‌ 2007ರಂದು ಟ್ವೀಟರ್‌ ಪರಿಚಯಿಸಿತ್ತು.

ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

7


ಟ್ವೀಟರ್‌ನ ಕೇಂದ್ರ ಕಛೇರಿ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿದ್ದರೂ ನ್ಯೂಯಾರ್ಕ್‌ ಚಿಕಾಗೋ,ಲಾಸ್‌ ಎಂಜಲಿಸ್‌‌ ಮತ್ತು ವಾಷಿಂಗ್‌ಟನ್‌ನಲ್ಲಿ ತನ್ನ ಸಹ ಕಛೇರಿಯನ್ನು ತೆರೆದಿದೆ.

ಟ್ವೀಟರ್‌ ಸ್ವಾರಸ್ಯಕರ ಮಾಹಿತಿಗಳು

8


ಟ್ವೀಟರ್‌ನ ಒಟ್ಟು ಸಂಪತ್ತಿನ ಮೌಲ್ಯ 10 ಬಿಲಿಯನ್‌ ಡಾಲರ್‌ ಇರಬಹುದು ಎಂದು ಅಂದಾಜಿಸಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot