30,000 ಗೆಲ್ಲಬೇಕಾ?- ಈ ಸ್ಪರ್ಧೆಯಲ್ಲಿ ಭಾಗವಹಿಸಿ!

By Gizbot Bureau
|

ಯುಐಡಿಎಐ, ಆಧಾರ್‌ನ ಪ್ರಾಧಿಕಾರವು ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಇದರ ಅಡಿಯಲ್ಲಿ ಸ್ಪರ್ಧಿಗಳು ಆಧಾರ್‌ಗೆ ಸಂಬಂಧಿಸಿದ ಯಾವುದೇ ಆನ್‌ಲೈನ್ ಸೇವೆಯ ಕುರಿತು ಕಿರು ವೀಡಿಯೊ ಟ್ಯುಟೋರಿಯಲ್ ಮಾಡಿ ಮತ್ತು ಅದನ್ನು ಯುಐಡಿಎಐಗೆ ಕಳುಹಿಸಬೇಕು. ಒಟ್ಟು 48 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತದೆ.

30,000 ಗೆಲ್ಲಬೇಕಾ?- ಈ ಸ್ಪರ್ಧೆಯಲ್ಲಿ ಭಾಗವಹಿಸಿ!

ಇದಲ್ಲದೆ ಯುಐಡಿಎಐ ಎಲ್ಲಾ ನಮೂದುಗಳಿಂದ ಮೂರು ಅತ್ಯುತ್ತಮ ಬಹುಮಾನಗಳಿಗೆ ನಗದು ಬಹುಮಾನವನ್ನು ಸಹ ನೀಡುತ್ತದೆ. ಪ್ರಥಮ ಸ್ಥಾನ ಪಡೆದವರಿಗೆ ರೂ. 30,000 ನಗದು ಬಹುಮಾನ ನೀಡಿದರೆ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ರೂ. 20,000 ಮತ್ತು ರೂ. 10,000 ನಗದು ಬಹುಮಾನ ನೀಡಲಾಗುತ್ತದೆ. ಫಲಿತಾಂಶಗಳನ್ನು ಆಗಸ್ಟ್ 31 ರ ಮೊದಲು ಯುಐಡಿಎಐನ ಅಧಿಕೃತ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ವಿಷಯದ ಬಗ್ಗೆ ಇತರೆ ಕೆಲವು ವಿವರಗಳನ್ನು ಈ ಕೆಳಗೆ ಪರಿಶೀಲಿಸಿ.

ಯಾರು ಭಾಗವಹಿಸಬಹುದು?

ಯಾರು ಭಾಗವಹಿಸಬಹುದು?

ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಕೂಡ ಮೈ ಆಧಾರ್ ಆನ್ ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು.ಯಾರ ಬಳಿ ಸರಿಯಾದ ಆಧಾರ್ ಕಾರ್ಡ್ ವಿವರಗಳಿವೆಯೋ ಅವರು ಭಾಗವಹಿಸಬಹುದು.ಜೂನ್ 18 ರಿಂದ ಇದು ಆರಂಭವಾಗಿದ್ದು ಜುಲೈ 8 ರ ಮಧ್ಯರಾತ್ರಿ 23:59 IST ವರಗೆ ನಿಮ್ಮ ವೀಡಿಯೋ ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ನಿಮ್ಮ ಆದಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರ ಲಿಂಕ್ ಆಗಿರಬೇಕು. ಒಂದು ವೇಳೆ ಬ್ಯಾಂಕ್ ಖಾತೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿಲ್ಲದೇ ಇದ್ದಲ್ಲಿ ಅಗಸ್ಟ್ 31 ರ ಒಳಗೆ ಲಿಂಕ್ ಮಾಡಿಕೊಳ್ಳುವುದಕ್ಕೆ ಅವಕಾಶಿರುತ್ತದೆ.

ಕೆಲವು ವಯಕ್ತಿಕ ಮಾಹಿತಿಗಳನ್ನು ನೀವು ನೀಡಬೇಕಾಗುತ್ತದೆ. ಇಮೇಲ್ ನ ಆಧಾರ್ ಆನ್ ಲೈನ್ ಟ್ಯುಟೋರಿಯಲ್ ನಲ್ಲಿ ನಿಮ್ಮ ಶಾರ್ಟ್ ವೀಡಿಯೋ ಬಗ್ಗೆ ಈ ವಿವರಗಳನ್ನು ಸಲ್ಲಿಸಬೇಕು. ಇದು ನಿಮ್ಮ ಆಧಾರ್ ಕಾರ್ಟ್ ನಲ್ಲಿರುವಂತೆಯೇ ಹೆಸರು, ಮೊಬೈಲ್ ನಂಬರ್, ಕಾಂಟ್ಯಾಕ್ಟ್ ಅಡ್ರೆಸ್, ಮತ್ತು ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೋ ಇಲ್ಲವೋ ಎಂಬ ವಿವರ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಈ ಸರ್ಧೆಯ ಭಾಗವಾಗುವುದು ಹೇಗೆ?

ಈ ಸರ್ಧೆಯ ಭಾಗವಾಗುವುದು ಹೇಗೆ?

ನೀವು ಬಯಸಿದ್ದಲ್ಲಿ ನೀವು ಒಂದು ಶಾರ್ಟ್ ವೀಡಿಯೋ ತಯಾರಿಸಬೇಕು ಅಥವಾ ಯಾವುದೇ ಆಧಾರ್ ಆನ್ ಲೈನ್ ಸೇವೆಯ ಬಗ್ಗೆ ಒಂದು ಅನಿಮೇಟೆಡ್ ವೀಡಿಯೋ ಕೂಡ ಆಗಿರಬಹುದು.

15 ವಿಭಿನ್ನ ಕೆಟಗರಿಯ ವೀಡಿಯೋಗಳನ್ನು ಕಳುಹಿಸುವುದಕ್ಕೆ ಪ್ರಾಧಿಕಾರವು ಅವಕಾಶವನ್ನು ನೀಡಿದೆ. ನೀವು ಯಾವುದನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಬಹುದು. ಆಧಾರ್ ಚೆಕ್, ಅಪ್ ಡೇಟ್ ಅಡ್ರೆಸ್ ಆನ್ ಲೈನ್ ಇತ್ಯಾದಿ.

30 ರಿಂದ 120 ಸೆಕೆಂಡ್ ಇರುವ ವೀಡಿಯೋ ಆಗಿರಬೇಕು ಮತ್ತು ನೀವು ಆಯ್ಕೆ ಮಾಡಿದ ಸೇವೆಯ ಸಂಪೂರ್ಣ ವಿವರವನ್ನು ಅದು ನೀಡಬೇಕು. ನೀವು ಗೆಲ್ಲಬೇಕು ಎಂಬ ಬಗ್ಗೆ ಹಲವು ಬಾರಿ ವೀಡಿಯೋ ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ಕೇವಲ ವಯಕ್ತಿಕ ಎಂಟ್ರಿಯನ್ನು ಮಾತ್ರವೇ ಪರಿಗಣಿಸಲಾಗುತ್ತದೆಯೇ ಹೊರತು ತಂಡವಾಗಿ ಎಂಟ್ರಿ ಮಾಡಿದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಒರಿಜಿನಲ್ ವೀಡಿಯೋ ಆಗಿರಬೇಕು. ಇತರೆ ಎಲ್ಲೂ ಪ್ರಕಟವಾಗಿರದ ವೀಡಿಯೋವನ್ನು ಮಾತ್ರವೇ ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ಸ್ಪರ್ಧೆಯ ದಿನಾಂಕದ ಒಳಗೆ ಕಳುಹಿಸಲಾಗಿರುವ ವೀಡಿಯೋವನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ವೀಡಿಯೋ ಸೆಂಡ್ ಮಾಡುವುದು ಹೇಗೆ?

ವೀಡಿಯೋ ಸೆಂಡ್ ಮಾಡುವುದು ಹೇಗೆ?

ವೀಡಿಯೋ ಟ್ಯುಟೋರಿಯಲ್ ನ್ನು ಯುಟ್ಯೂಬ್ ಅಥವಾ ಗೂಗಲ್ ಡ್ರೈವ್ ಅಥವಾ ಇತರೆ ಯಾವುದೇ ಫೈಲ್ ಶೇರಿಂಗ್ ಫ್ಲ್ಯಾಟ್ ಫಾರ್ಮ್ ಗಳು ಉದಾಹರಣೆಗೆ ವಿಟ್ರಾನ್ಸ್ಫರ್, ಡ್ರಾಪ್ ಬಾಕ್ಸ್ ಇತ್ಯಾದಿಗಳ ಮೂಲಕ ಅಪ್ ಲೋಡ್ ಮಾಡಬಹುದು. ವೀಡಿಯೋ ಲಿಂಕ್ ಸಹಿತ ಈ ಇಮೇಲ್ ಐಡಿಗೆ ಮೇಲ್ ಕಳುಹಿಸಬೇಕು. media.division@uidai.net.in. ವೀಡಿಯೋ MP4, MPEG, MPV, WMV, FLV ಮತ್ತು AVI ವೀಡಿಯೋ ಫಾರ್ಮೆಟ್ ನಲ್ಲಿ ಬೇಕಿದ್ದರೂ ಇರಬಹುದು. ಪ್ರಮುಖವಾಗಿರುವ ಅಂಶವೇನೆಂದರೆ FHD 1080p ಅಥವಾ ಅದಕ್ಕಿಂತ ಹೆಚ್ಚಿರುವ ಜೊತೆಗೆ ಉತ್ತಮ ಸೌಂಡ್ ಕ್ವಾಲಿಟಿ ಇರುವ ವೀಡಿಯೋಗಳಿಗೆ ಹೆಚ್ಚು ಪ್ರಾಶಸ್ತ್ಯ ಲಭಿಸುತ್ತದೆ.

Best Mobiles in India

Read more about:
English summary
UIDAI, the authority for Aadhaar is hosting a new contest for those who have the Aadhaar card called My Aadhaar Online Contest.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X