Subscribe to Gizbot

ಭೂಮಿಯ ಮೇಲೆ ಜನ್ಮತಾಳಿರುವ ಮತ್ತೊಂದು ಮಂಗಳ ಗ್ರಹ

Written By:

ಅದೇನಾದ್ರು ಆಗ್ಲಿ 2025 ನೇ ಇಸವಿಗೆ ಮಂಗಳ ಗ್ರಹಕ್ಕೆ ಕಾಲಿಡಲೇ ಬೇಕು ಅಂತ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತ ವಿಜ್ಞಾನಿಗಳು ಪಾಪ ಸರಿಯಾಗಿ ನಿದ್ರೇನು ಮಾಡದೇ ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ. ಮಂಗಳ ಗ್ರಹದಲ್ಲಿ ನೀರು ಇದಿಯೋ ಇಲ್ವೋ, ಆಕ್ಸಿಜನ್‌ ಸಿಗುತ್ತೋ ಇಲ್ವೋ, ಹೀಗೆ ಹಲವು ಸಂಶೋಧನೆಗಳನ್ನು ನಡೆಸುವುದರಲ್ಲಿ ನಿರತರಾಗಿದ್ದಾರೆ. ಮಂಗಳ ಗ್ರಹದಲ್ಲಿ ಸರಿಯಾಗಿ ಎಲ್ಲಾ ಮೂಲ ಸೌಕರ್ಯಗಳ ಬಗ್ಗೆ ಅನ್ವೇಷಣೆ ಮಾಡುಲು ಆಗುತ್ತೋ ಇಲ್ವೋ ಅದು ಎರಡನೇ ಮಾತು.

ಆದ್ರೆ ಈಗ ಸಂತೋಷದ ವಿಷಯ ಏನಪ್ಪಾ ಅಂದ್ರೆ, ನಾಸಾ ವಿಜ್ಞಾನಿಗಳು ಈಗ ಭೂಮಿ ಮೇಲೆಯೇ ಮಂಗಳ ಗ್ರಹದಂತ ಒಂದು ಉಷ್ಟ ಸ್ಥಳ( ಒಣಗಿದ) ವನ್ನು ಅನ್ವೇಷಣೆ ಮಾಡಿದ್ದಾರೆ. ಆ ಸ್ಥಳದ ವಿಶೇಷತೆ ಏನು ಎಂಬುದನ್ನು ಇಂದಿನ ಲೇಖನದಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಂಗಳ ಗ್ರಹದಂತ ಒಣಗಿದ ಸ್ಥಳ ಭೂಮಿ ಮೇಲೆ

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ನಾಸಾ ವಿಜ್ಞಾನಿಗಳು ಭೂಮಿಯ ಮೇಲೆಯೇ ಮಂಗಳ ಗ್ರಹದ ವಾತಾವರಣವನ್ನು ಹೊಂದಿರುವ ಉಷ್ಣ ಪ್ರದೇಶವನ್ನು ಅನ್ವೇಷಣೆ ಮಾಡಿದ್ದಾರೆ. ಇದರಿಂದ ಜೀವಿಸುವ ಮಿತಿಗಳು, ಮಂಗಳ ಗ್ರಹಕ್ಕೆ ಕಳುಹಿಸಲು ತಂತ್ರಜ್ಞಾನ ಪತ್ತೆ ಹಾಗೂ ಇನ್ನು ಮುಂತಾದ ಅನ್ವೇಷಣೆಗೆ ಸಹಾಯವಾಗಲಿದೆ ಎನ್ನಲಾಗಿದೆ.

ಅಟಕೆಮಾ ಮರುಭೂಮಿ

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ಅಂದಹಾಗೆ ಮಂಗಳ ಗ್ರಹದ ವಾತಾವರಣ ಹೊಂದಿರುವ ಪ್ರದೇಶ ಅಟಕೆಮಾ ಮರುಭೂಮಿ. ಇದು ದಕ್ಷಿಣ ಅಮೇರಿಕದ ಚಿಲಿ ಪ್ರದೇಶದಲ್ಲಿದೆ. 105.000 ಚದರ ಪ್ರದೇಶ ಭೂ ವಿಸ್ತೀರ್ಣ ಹೊಂದಿದೆ.

ಅಟಕೆಮಾ ಮರುಭೂಮಿ ವಿಶೇಷತೆ

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ಅತಿಯಾದ ಒಣಗಿದ ಪ್ರದೇಶ, ಅತಿ ಕಡಿಮೆ ನೀರು, ತೀವ್ರ ನೇರಳಾತೀತ ವಿಕಿರಣ ಹೊಂದಿರುವ ಪ್ರದೇಶವಾಗಿದೆ.

ಮಂಗಳ ಗ್ರಹದಲ್ಲಿ ಜೀವಿಸುವ ಅನುಭವ

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ನಾಸಾ ಸಂಶೋಧಕರ ಪ್ರಕಾರ "ಅಟಕೆಮಾ ಮರುಭೂಮಿಯಲ್ಲಿ ಜೀವಿಸಿದರೆ ಮಂಗಳ ಗ್ರಹದಲ್ಲೇ ಜೀವಿಸುವ ಅನುಭವ ನಿಜವಾಗಿಯೂ ಆಗುತ್ತದೆ ಎಂದು ಅಭಿಪ್ರಾಯ ಪಡೆಲಾಗಿದೆ.

 ಅಟಕೆಮಾ ಸಂಶೋಧನೆ

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ಪ್ರಸ್ತುತದಲ್ಲಿ "ಅಟಕಾಮಾ ರೋವರ್ ಆಸ್ಟ್ರೋಬಯಾಲಾಜಿ ಡ್ರಿಲ್ಲಿಂಗ್ ಅಧ್ಯಯನ (AIRADS) ಯೋಜನೆಯ" ಮೊದಲ ಹಂತದ ಯೋಜನೆ ರೂಪಿಸಲಾಗಿದ್ದು, ಮುಂದಿನ ತಿಂಗಳು ಅಟಕೆಮಾ ಮರುಭೂಮಿಯ ಕಾರ್ಯಕ್ಷೇತ್ರ(fiele work) ಅಧ್ಯಯನ ಮಾಡಲಾಗುವುದು ಎನ್ನಲಾಗಿದೆ.

ಮಂಗಳ ಗ್ರಹದಂತೆಯೇ ಇಲ್ಲೂ ಮಣ್ಣು

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ಅತಿಯಾದ ಒಣಗಿದ ಮಣ್ಣನ್ನು ಹೊಂದಿರುವ ಅಟಕೆಮಾ ಮರುಭೂಮಿಯ ಮಣ್ಣು 'ಮಂಗಳ ಗ್ರಹದ" ಮಣ್ಣಂತೆಯೇ ಇದೆ ಎನ್ನಲಾಗಿದೆ.

ಡಾ|| ಬ್ರಿಯನ್‌ ಗ್ಲಾಸ್‌

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ಅಟಕಾಮಾ ರೋವರ್ ಆಸ್ಟ್ರೋಬಯಾಲಾಜಿ ಡ್ರಿಲ್ಲಿಂಗ್ ಅಧ್ಯಯನ (AIRADS) ಯೋಜನೆಯ ಪ್ರಮುಖ ಅನ್ವೇಷಣೆ ವಿಜ್ಞಾನಿ ಡಾ|| ಬ್ರಿಯನ್‌ ಗ್ಲಾಸ್. ಅಲ್ಲದೇ ಈ ಯೋಜನೆಯಲ್ಲಿ 20 ಕ್ಕೂ ಹೆಚ್ಚು ವಿಜ್ಞಾನಿಗಳು ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

ಸಂಶೋಧನೆ

ಮಂಗಳ ಗ್ರಹದಂತ ಸ್ಥಳ ಭೂಮಿ ಮೇಲೆ

ಮಂಗಳ ಗ್ರಹವು ತಣ್ಣನೆಯ ಮತ್ತು ಉಷ್ಟ ವಾತಾವರಣ ಎರಡನ್ನು ಹೊಂದಿದ್ದು, ಅಟಕೆಮಾ ಪ್ರದೇಶದಲ್ಲಿ ಸಂಶೋಧನೆ ನಡೆಸಿದರೆ, ಮಂಗಳ ಗ್ರಹದಲ್ಲಿ ಜೀವಿಸಲು ಸಾಮರ್ಥ್ಯವನ್ನು ವೃದ್ದಿಸಿಕೊಳ್ಳಲು ಸಹಾಯವಾಗುತ್ತದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಾಸಾ ರೋವರ್‌ನಿಂದ ಮಂಗಳ ಗ್ರಹದಲ್ಲಿ ಪಿಸ್ತೂಲು ಪತ್ತೆ

ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ

ದಕ್ಷಿಣ ಭಾರತದ ಅಚ್ಚರಿಯನ್ನು ಸ್ಪೇಸ್‌ನಿಂದ ಕಂಡ ಗಗನಯಾತ್ರಿ

ಗಿಜ್‌ಬಾಟ್

ಗಿಜ್‌ಬಾಟ್

ಭೇಟಿ ನೀಡಿ ಗಿಜ್‌ಬಾಟ್ ಫೇಸ್‌ಬುಕ್‌ ಪೇಜ್‌
ನಿರಂತರ ಟೆಕ್ನಾಲಜಿ ಲೇಖನಗಳನ್ನು ಕನ್ನಡ ಗಿಜ್‌ಬಾಟ್‌'ನಲ್ಲಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nasa Found Mars-like place on Earth. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot