ಬೆಂಗಳೂರಿನಲ್ಲಿ ನೋಟ್ 4 ಬ್ಲಾಸ್ಟ್ ಆಗಿದ್ದು ನಿಜಾನಾ..? ಇಲ್ಲಿದೆ ಎಕ್ಸ್‌ಕ್ಲೂಸಿವ್ ಸುದ್ದಿ.!

Written By:

  ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬೆಂಗಳೂರಿನ ಅಂಗಡಿಯೊಂದರಲ್ಲಿ ಬ್ಲಾಸ್ಟ್ ಆಗಿತ್ತು ಎನ್ನವ ಸುದ್ದಿಯೊಂದು ಮಿಂಚಿನಂತೆ ರಾಷ್ಟ್ರದಾದ್ಯಂತ ಸದ್ದು ಮಾಡಿತ್ತು, ಎಲ್ಲಾ ರಾಷ್ಟ್ರೀಯಾ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಮಾಧ್ಯಮಗಳು ಈ ಬಗ್ಗೆ ವರದಿಯನ್ನು ಪ್ರಕಟಿಸಿದ್ದವು, ಇದರೊಂದಿಗೆ ವಿಡಿಯೋವೊಂದನ್ನು ಸಹ ಬಿತ್ತರಿಸಿದ್ದವು.

  ಬೆಂಗಳೂರಿನಲ್ಲಿ ನೋಟ್ 4 ಬ್ಲಾಸ್ಟ್ ಆಗಿದ್ದು ನಿಜಾನಾ..? ಇಲ್ಲಿದೆ ಎಕ್ಸ್‌ಕ್ಲೂಸಿವ್

  ಓದಿರಿ: ಬೆಂಗಳೂರಲ್ಲಿ ಬ್ಲಾಸ್ಟ್ ಆಯ್ತು ಶಿಯೋಮಿ ರೆಡ್‌ಮಿ 4: ಇಲ್ಲಿದೇ ನೋಡಿ ಮೊಬೈಲ್ ಹತ್ತಿಉರಿದ ವಿಡಿಯೋ..!!

  ಆದರೆ ಇಂದು ಶಿಯೋಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿದೆ ಎನ್ನುವ ಸುದ್ದಿಯೂ ಸುಳ್ಳು ಎಂದು ನ್ಯೂಸ್ 18 ಸೇರಿದಂತೆ ರಾಷ್ಟ್ರೀಯಾ ಮಾಧ್ಯಮಗಳು ವರದಿ ಮಾಡಿದ್ದು, ಈ ವಿಡಿಯೋ ಬಹಳ ಹಿಂದೆ ಯೂಟ್ಯೂಬಿನಲ್ಲಿ ನಲ್ಲಿ ಎಂಬುದನ್ನು ಸಾಕ್ಷಿ ಸಮೇತ ಪ್ರಕಟಿಸಿದ್ದವು. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಸಂಗ್ರಹಿಸಿದ ಗಿಜ್‌ಬಾಟ್, ಘಟನೆ ನಡೆದ ಮಳಿಗೆ ಮತ್ತು ಪೋನ್ ಮಾರಾಟ ಮಾಡಿದ ವ್ಯಕ್ತಿಯನ್ನು ಸಂದರ್ಶಿಸಿ ನೋಟ್ 4 ಬ್ಲಾಸ್ಟ್ ಆಗಿದ್ದು ಸತ್ಯ ಎಂಬ ಅಂಶವನ್ನು ಎತ್ತಿ ಹಿಡಿದಿದೆ.

  ಓದಿರಿ: ಇದಕ್ಕಿಂತ ಚಿಕ್ಕದಾದ- ಉತ್ತಮವಾದ ಫೋನ್ ಇನ್ನೊಂದಿಲ್ಲ..!!

  ಈ ಹಿನ್ನಲೆಯಲ್ಲಿ ನೋಟ್ 4 ಬ್ಲಾಸ್ಟ್ ಸಂಬಂಧಿಸಿದಂತೆ ಸಂಪೂರ್ಣ ಸತ್ಯ ಸಂಗತಿಯನ್ನು ಗಿಜ್‌ಬಾಟ್ ಓದುಗರಿಗೆ ನೀಡಲಾಗಿದೆ. ಗಿಜ್ ಬಾಟ್ ಯಾವ ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸಿತು ಎಂಬದನ್ನು ವಿವರವಾಗಿ ತಿಳಿಸಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಮೊದಲಿಗೆ ಪ್ರಕರಣದ ಕುರಿತು:

  ನಿನ್ನೆ ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನ್ ಬ್ಲಾಸ್ಟ್ ಆಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಮೊದಲಿಗೆ ವಿಷಯವನ್ನ ನಮ್ಮ ಓದುಗರಿಗೆ ತಿಳಿಸಿದ ನಂತರ ಹಾಗೂ ಸುದ್ದಿಯೂ ಸುಳ್ಳು ಎಂಬ ವರದಿ ಬಂದ ನಂತರದಲ್ಲಿ ನಮಗೆ ಸಿಕ್ಕ ಮಾಹಿತಿ ಮತ್ತು ಪೋಟೋ ಗಳನ್ನು ಅವಲೋಕಿಸಿ ಘಟನೆ ನಡೆದ ಅಂಗಡಿಯ ಮಾಹಿತಿಯನ್ನು ಸಂಗ್ರಹಿಸಲಾಯಿತು.

  ಪೂರ್ವಿಕಾ ಮಳಿಗೆಯಲ್ಲಿ ನಡೆದ ಘಟನೆ:

  ಈ ಮೊಬೈಲ್ ಬ್ಲಾಸ್ಟ್ ಸಂಭವಿಸಿದ್ದು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಕೈಕುಂದ್ರಾಹಳ್ಳಿಯ ಪೂರ್ವಿಕಾ ಮೊಬೈಲ್ ಮಾರಾಟ ಮಳಿಗೆಯಲ್ಲಿ, ಈ ವಿಷಯ ತಿಳಿದೊಡನೆ ಮಳಿಗೆಯ ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಘಟನೆಯ ಸಂಪೂರ್ಣ ವಿವರ ಮತ್ತು ಮೊಬೈಲ್ ಮಾರಾಟ ಮಾಡಿದ ವ್ಯಕ್ತಿಯನ್ನು ಮಾತನಾಡಿಸಲಾಯಿತು.

  ರೆಡ್‌ಮಿ ನೋಟ್ 4 ಬ್ಲಾಸ್ಟ್ ಆಗಿದ್ದು ಸತ್ಯ, ಘಟನೆ ನಡೆದ್ದು ಜೂನ್ 1 ರಂದು:

  ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿರುವುದು ಸತ್ಯ. ಈ ಘಟನೆ ನಡೆದಿರುವುದು ಜೂನ್ 1 ರಂದು, ಅದುವೇ ಮಧ್ಯಾಹ್ನ 1:50 ರ ಸಮಯದಲ್ಲಿ. ಗ್ರಾಹರೊಬ್ಬರಿಗೆ 3GB -32GB ಆವೃತ್ತಿಯ ರೆಡ್‌ಮಿ ನೋಟ್ 4 ಫೋನ್ ಅನ್ನು ಮಾರಾಟ ಮಾಡಿದ ನಂತರ ಅಂಗಡಿಯ ಸಿಬ್ಬಂದಿ ಮೊಬೈಲ್ ಬಾಕ್ಸ್ ಓಪನ್ ಮಾಡಿ ಸಿಮ್ ಕಾರ್ಡ್ ಹಾಕಿ ಪೋನ್ ಆನ್ ಮಾಡುತ್ತಿದಂತೆ ಮೊಬೈಲ್ ಬ್ಲಾಸ್ಟ್ ಆಗಿದೆ. ಈ ವಿಷಯವನ್ನು ಪೋನ್ ಮಾರಾಟ ಮಾಡಿದ ವ್ಯಕ್ತಿಯೇ ದೂರವಾಣಿಯಲ್ಲಿ ಗಿಜ್‌ಬಾಟ್ ನೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ್ದಾರೆ.

  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ:

  ಈ ಪ್ರಕರಣವು ನಡೆದಿದೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿ ಎನ್ನುವಂತೆ ಬೆಳಂದೂರು ಠಾಣೆಯಲ್ಲಿ ರೆಡ್‌ಮಿ ನೋಟ್ 4 ಫೂರ್ವಿಕ ಮೊಬೈಲ್ ಮಾರಾಟ ಮಳಿಗೆಯಲ್ಲಿ ಬ್ಲಾಸ್ಟ್ ಆಗಿದೆ ಎಂದು ದೂರ ಸಹ ದಾಖಲಿಸಿದರುವುದಾಗಿ ಅಂಗಡಿಯ ಸಿಬ್ಬಂದಿ ಗಿಜ್‌ಬಾಟ್ ಗೆ ತಿಳಿಸಿದ್ದಾರೆ. (ಈ ಕುರಿತು ಠಾಣೆಯನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ನಡೆಸಲಾಯಿತಾದರು ಸಂಪರ್ಕ ಸಾಧ್ಯವಾಗಲಿಲ್ಲ)

  ಶಿಯೋಮಿ ಕಂಪನಿಗೂ ತಿಳಿಸಲಾಗಿದೆ:

  ಫೂರ್ವಿಕಾ ಮಳಿಗೆಯಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿದೆ ಎಂದು ಶಿಯೋಮಿ ಕಂಪನಿ ಗಮನಕ್ಕೂ ತರಲಾಗಿದೆ ಎಂದು ಫೂರ್ವಿಕಾ ಸಿಬ್ಬಂದಿ ತಿಳಿಸಿದ್ದಾರೆ.

  ಅಧಿಕೃತ ಪ್ರಕಟಣೆ ಇಲ:

  ಆದರೆ ಈ ಕುರಿತಂತೆ ಕಂಪನಿ ಕಡೆಯಿಂದ ಯಾವುದೇ ಮಾಹಿತಿಯೂ ದೊರೆತಿಲ್ಲ ಎನ್ನಲಾಗಿದೆ. ಅಲ್ಲದೇ ತನ್ನ ಸ್ಮಾರ್ಟ್‌ಪೋನ್ ಸಾರ್ವಜನಿಕ ಸ್ಥಳಲ್ಲಿ ಬ್ಲಾಸ್ಟ್ ಆಗಿದೆ ಎನ್ನುವ ಸಣ್ಣ ಅಧಿಕೃತ ಪ್ರಕಟಣೆಯನ್ನು ಶಿಯೋಮಿ ಕಂಪನಿ ನೀಡಿಲ್ಲ.

  ಬದಲಿ ಸ್ಮಾರ್ಟ್‌ಫೋನ್ ಸಿಕ್ಕಿಲ್ಲ:

  ಘಟನೆಯಲ್ಲಿ ಹೊಸ ಸ್ಮಾರ್ಟ್‌ಫೋನ್ ಕಳೆದುಕೊಂಡ ಗ್ರಾಹಕರಿಗೆ ನೂತನ ಫೋನ್ ಇನ್ನು ನೀಡಿಲ್ಲ. ಸದ್ಯ ಬ್ಲಾಸ್ಟ್ ಆಗಿರುವ ಸ್ಮಾರ್ಟ್‌ಫೋನ್ ಅನ್ನು ಶಿಯೋಮಿ ಕಂಪನಿಗೆ ಕಳುಹಿಸಲಾಗಿದ್ದು, ಅಲ್ಲಿಂದ ಬದಲಿ ಸ್ಮಾರ್ಟ್‌ಫೋನ್ ದೊರೆತಿಲ್ಲ ಎನ್ನಲಾಗಿದೆ.

  ಘಟನೆ ನಡೆದಿರುವುದು ಸತ್ಯ, ವಿಡಿಯೋ ಬಗ್ಗೆ ತಿಳಿದಿಲ್ಲ..!!

  ಫೂರ್ವಿಕಾ ಮಳಿಗೆಯಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗಿರುವ ಘಟನೆಯೂ 100ಕ್ಕೆ 100ರಷ್ಟು ಸತ್ಯವಾಗಿದ್ದು, ಆದರೆ ಈ ಕುರಿತಂತೆ ಹರಿದಾಡುತ್ತಿರುವ ವಿಡಿಯೋ ಕುರಿತ ವಿವರ ತಿಳಿದಿಲ್ಲ. ಈ ಕುರಿತು ಫೂರ್ವಿಕಾ ಮಳಿಗೆಯ ಸಿಬ್ಬಂದ್ದಿಯನ್ನು ವಿಚಾರಿಸಿದಲ್ಲಿ ಯಾವುದೇ ವಿಡಿಯೋ ಕ್ಲಿಪ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  recently a Xiaomi Redmi 4 caught fire in a shop when the shopkeeper tried to open the SIM tray of the phone. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more