ಭಾರತೀಯರ ಪಾಲಿಗೆ ಇದು ನಿಜಕ್ಕೂ ಅಘಾತಕಾರಿ ಸುದ್ದಿ! ಮೈಮರೆತ್ರೆ ನಿಮಗೂ ತಪ್ಪಿದ್ದಲ್ಲ!

|

ಡೇಟಾ ಪ್ರೈವೆಸಿ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಹ್ಯಾಕರ್ಸ್‌ಗಳ ದಾಳಿ ತಪ್ಪಿದ್ದಲ್ಲ. ಸೈಬರ್‌ ಕ್ರೈಮ್‌ಗಳ ವಿರುದ್ದ ಎಷ್ಟೇ ಕ್ರಮ ಕೈಗೊಂಡರೂ ಕೂಡ ಹ್ಯಾಕರ್ಸ್‌ಗಳ ಆಟಕ್ಕೆ ಕಡಿವಾಣ ಬಿದ್ದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಇಡೀ ಭಾರತೀಯರೆಲ್ಲರೂ ಬೆಚ್ಚಿಬೀಳುವಂತೆ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಅದೆನೆಂದರೆ ಆರು ಲಕ್ಷಕ್ಕೂ ಹೆಚ್ಚು ಭಾರತೀಯರ ಡೇಟಾವನ್ನು ಬಾಟ್ ಮಾರುಕಟ್ಟೆಯಲ್ಲಿ ಮಾರಾಟಮಾಡಲಾಗಿದೆ. ಇದರಲ್ಲಿ ಒಬ್ಬ ಭಾರತೀಯರನ ಡೇಟಾದ ಬೆಲೆ ಕೇವಲ 490ರೂ.ಗಳಿಗೆ ಮಾರಾಟ ಮಾಡಲಾಗಿದೆ.

ಜೊತೆಗೆ

ಹೌದು, ಈ ಸುದ್ದಿಯನ್ನು ನೋಡಿದ ಮೇಲೆ ನಿಮಗೆ ನಿಜಕ್ಕೂ ಅಚ್ಚರಿಯ ಜೊತೆಗೆ ಆತಂಕ ಉಂಟಾಗುವುದು ಸಹಜ. ಏಕೆಂದರೆ ಸೈಬರ್‌ ಸೆಕ್ಯುರಿಟಿ ನೀಡಿರುವ ವರದಿಯ ಪ್ರಕಾರ ಬಾಟ್ ಮಾರುಕಟ್ಟೆಯಲ್ಲಿ ಕದ್ದ ಡೇಟಾವನ್ನು ಮಾರಾಟ ಮಾಡಲಾಗ್ತಿದೆ. ಇಲ್ಲಿ ಮಾರಾಟವಾಗ್ತಿರುವ ಡೇಟಾದಲ್ಲಿ 12% ಡೇಟಾ ಭಾರತೀಯರದ್ದು ಎನ್ನಲಾಗಿದೆ. ಹಾಗಾದ್ರೆ ಡೇಟಾ ಕದ್ದು ಮಾರಾಟ ಮಾಡ್ತಿರೋರು ಯಾರು? ಹ್ಯಾಕರ್ಸ್‌ಗಳಿಗೆ ಭಾರತೀಯರೇ ಟಾರ್ಗೆಟ್‌ ಯಾಕೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆನ್‌ಲೈನ್‌

ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಬಳಕೆದಾರರ ಡೇಟಾವನ್ನು ಕದ್ದು ಬಾಟ್ ಮಾರುಕಟ್ಟೆಗಳಲ್ಲಿ ಮಾರಾಟಮಾಡುವುದು ಹೊಸತೇನಲ್ಲ. ಆದರೆ ಇದೀಗ ಬಹಿರಂಗವಾಗಿರುವ ವರದಿಯನ್ನು ನೋಡಿದ್ರೆ ಭಾರತೀಯರಾದ ನಾವು ಇನ್ನಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಏಕೆಂದರೆ ಬಾಟ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಡೇಟಾದಲ್ಲಿ 12% ಡೇಟಾ ಭಾರತೀಯರಿಗೆ ಸೇರಿದೆ ಅನ್ನೊದು ಅಘಾತಕಾರಿ ಸುದ್ದಿಯಾಗಿದೆ. ಅದರಲ್ಲೂ ಪ್ರತಿಯೊಬ್ಬ ಭಾರತೀಯನ ಡೇಟಾದ ಬೆಲೆ ಕೇವಲ 490 ರೂಪಾಯಿ ಎನ್ನಲಾಗ್ತಿದೆ.

ಮಾಲ್‌ವೇರ್‌ಗಳ

ಡೇಟಾ ಕದಿಯುವ ಮಾಲ್‌ವೇರ್‌ಗಳ ಸಂಖ್ಯೆ ಇಂದು ಹೆಚ್ಚಿನ ಪ್ರಮಾಣದಲ್ಲಿದೆ. ಎಷ್ಟೇ ಎಚ್ಚರಿಕೆ, ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡರೂ ಮಾಲ್‌ವೇರ್‌ಗಳಿಗೆ ಕಡಿವಾಣ ಬಿದ್ದಿಲ್ಲ. ಒಂದು ರೂಪದಲ್ಲಿ ಮಾಯವಾಗಿ ಮತ್ತೊಂದು ಅವತಾರದಲ್ಲಿ ಬರುವ ಈ ಮಾಲ್‌ವೇರ್‌ಗಳು ನಿಮ್ಮ ಡೇಟಾವನ್ನು ನಿರಂತರವಾಗಿ ಕದಿಯುತ್ತಿವೆ. ಇದರ ಪರಿಣಾಮ ಬಾಟ್ ಮಾರುಕಟ್ಟೆಯಲ್ಲಿ ಭಾರತೀಯರ ಡೇಟಾ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗ್ತಿದೆ. ಇದರಲ್ಲಿ ನಿಮ್ಮ ಡೇಟಾ ಕೂಡ ಸೇರಿರಬಹುದು, ಇನ್ನಾದರೂ ನೀವು ಎಚ್ಚೆತ್ತುಕೊಳ್ಳಬೇಕಾಗುತ್ತದೆ.

ಕದ್ದು

ಸದ್ಯ ಕನಿಷ್ಠ 6 ಲಕ್ಷ ಭಾರತೀಯರ ಡೇಟಾವನ್ನು ಕದ್ದು ಬಾಟ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗಿದೆ. ಇದರಲ್ಲಿ ಒಬ್ಬ ಭಾರತೀಯನ ಡಿಜಿಟಲ್ ಡೇಟಾದ ಸರಾಸರಿ ಬೆಲೆ ಸುಮಾರು 490 ರೂಪಾಯಿ ಎಂಬ ಸುದ್ದಿಯನ್ನು ಸೈಬರ್-ಸೆಕ್ಯುರಿಟಿ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಸೈಬರ್‌ ಸೆಕ್ಯುರಿಟಿ ಸಂಶೋಧನೆಯ ಪ್ರಕಾರ ಬಾಟ್‌ಗಳ ಮಾರುಕಟ್ಟೆಯ ಎಲ್ಲಾ ಡೇಟಾದ ಶೇಕಡಾ 12 ರಷ್ಟು ಭಾರತೀಯರಾಗಿದ್ದು, ಪ್ರಪಂಚದಲ್ಲಿ ಭಾರತೀಯರ ಡೇಟಾ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗ್ತಿದೆ.

ಬಾಟ್

ಇನ್ನು ಬಾಟ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲಾ ಡೇಟಾಗಳು ಕೂಡ ಕದ್ದಿರುವ ಡೇಟಾ ಆಗಿದೆ. ಹ್ಯಾಕರ್‌ಗಳು ತಾವು ಕದ್ದಿರುವ ಡೇಟಾವನ್ನು ಮಾರಾಟ ಮಾಡುತ್ತಾರೆ. ಬಳಕೆದಾರರ ಲಾಗಿನ್‌ಗಳು, ಕುಕೀಗಳು, ಡಿಜಿಟಲ್ ಫಿಂಗರ್‌ಪ್ರಿಂಟ್‌ಗಳು, ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ಮಾಹಿತಿಯನ್ನು ಒಳಗೊಂಡಿರುವ ಡೇಟಾವನ್ನು ಮಾರಾಟ ಮಾಡುತ್ತಾರೆ. ಈ ರೀತಿಯ ಮಾರಾಟದಿಂದ ಈಗಾಗಲೇ ಐದು ಮಿಲಿಯನ್ ಜನರ ಮೇಲೆ ದುಷ್ಪರಿಣಾಮ ಬೀರಿದೆ ಎಂಬ ವರದಿ ಕೂಡ ಇದೆ.

ಡೇಟಾದಲ್ಲಿ

ಬಾಟ್‌ ಮಾರುಕಟ್ಟೆಯಲ್ಲಿ ಸೇಲ್‌ ಆಗಿರುವ ಡೇಟಾದಲ್ಲಿ ಕನಿಷ್ಠ 26.6 ಮಿಲಿಯನ್ ಕದ್ದ ಲಾಗಿನ್‌ಗಳು ಕಂಡುಬಂದಿವೆ. ಇದರಲ್ಲಿ 720,000 ಗೂಗಲ್ ಲಾಗಿನ್‌ಗಳು, 654,000 ಮೈಕ್ರೋಸಾಫ್ಟ್ ಲಾಗಿನ್‌ಗಳು ಮತ್ತು 647,000 ಫೇಸ್‌ಬುಕ್ ಲಾಗಿನ್‌ಗಳು ಸೇರಿವೆ. ಇದರ ಜೊತೆಗೆ, 667 ಮಿಲಿಯನ್ ಕುಕೀಗಳು, 81 ಸಾವಿರ ಡಿಜಿಟಲ್ ಫಿಂಗರ್‌ಪ್ರಿಂಟ್‌ಗಳು, 538 ಸಾವಿರ ಆಟೋ ಫೀಲ್‌ ಫಾರ್ಮ್‌ಗಳು, ಸ್ಕ್ರೀನ್‌ಶಾಟ್‌ಗಳು ಮತ್ತು ವೆಬ್‌ಕ್ಯಾಮ್ ಸ್ನ್ಯಾಪ್‌ಗಳನ್ನು ಕೂಡ ಸೇರಿವೆ.

Best Mobiles in India

Read more about:
English summary
Nearly 6 lakh Indians Data have been stolen and sold on bot markets

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X