ಮೂರನೇ ತ್ರೈಮಾಸಿಕದಲ್ಲಿ 2.4 ಮಿಲಿಯನ್ ಚಂದಾದಾರರನ್ನು ಪಡೆದ ನೆಟ್‌ಫ್ಲಿಕ್ಸ್!

|

ಜಗತ್ತಿನ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್ ಪ್ರಮುಖ ಸ್ಥಾನ ಪಡೆದಿದೆ. ಅದರಲ್ಲೂ ಕೊರೊನಾ ನಂತರದ ಸಮಯದಲ್ಲಿ ಹೆಚ್ಚಿನ ಜನರು ನೆಟ್‌ಫ್ಲಿಕ್ಸ್‌ಗೆ ಮುಗಿಬಿದಿದ್ದರೂ ನಂತರ ಮತ್ತೇ ಮಿಲಿಯನ್‌ಗಟ್ಟಲೆ ಚಂದಾದಾರರನ್ನು ಕಳೆದುಕೊಂಡಿತ್ತು. ಈ ಕಾರಣಕ್ಕೆ ನೆಟ್‌ಫ್ಲಿಕ್ಸ್ ವಿವಿಧ ಪ್ಲಾನ್‌ಗಳ್ನು ಪರಿಚಯಿಸಿ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಮುಂದುವರೆದ ಭಾಗವಾಗಿ ಈಗ ಜಾಗತಿಕವಾಗಿ 2.4 ಮಿಲಿಯನ್ ಬಳಕೆದಾರರನ್ನು ಗಳಿಸಿಕೊಂಡಿದೆ.

ಮಿಲಿಯನ್

ಹೌದು, 2.4 ಮಿಲಿಯನ್ ಚಂದಾದಾರರಲ್ಲಿ ಮೂರನೇ ತ್ರೈಮಾಸಿಕದಲ್ಲಿಯೇ (Q3 2022) 1.43 ಮಿಲಿಯನ್ ಹೊಸ ಬಳಕೆದಾರರನ್ನು ಪಡೆದುಕೊಂಡಿದೆ. ಅದರಲ್ಲೂ ಸಹ ಏಷ್ಯಾ-ಪೆಸಿಫಿಕ್ ಭಾಗದ ಬಳಕೆದಾರರು ಹೆಚ್ಚಾಗಿದ್ದಾರೆ. ಈ ಮೂಲಕ ವಿಡಿಯೋ ಸ್ಟ್ರೀಮಿಂಗ್‌ ಓಟಿಟಿ ಪ್ಲಾಟ್‌ಫಾರ್ಮ್‌ ಬರೋಬ್ಬರಿ 223 ಮಿಲಿಯನ್ ಬಳಕೆದಾರರನ್ನು ಪಡೆದಂತಾಗಿದೆ.

ಜಾಹೀರಾತು

ಈ ಕಂಪೆನಿಯು ಜಾಹೀರಾತು ಬೆಂಬಲಿತ ಅಗ್ಗದ ಯೋಜನೆಗಳನ್ನು ಪ್ರಾರಂಭಿಸಿದ ನಂತರ ಹೆಚ್ಚಾಗಿ ಬಳಕೆದಾರರನ್ನು ಪಡೆದುಕೊಳ್ಳುತ್ತಿದೆ. ಇದು 2022 ರ ಆರಂಭಿಕ ಸಮಯದಲ್ಲಿ ಉಂಟಾದ ಹಿನ್ನೆಡೆಯನ್ನು ಮೆಟ್ಟಿ ನಿಲ್ಲುವಲ್ಲಿ ಸಹಕಾರಿಯಾಗಿದೆ. ಇದರ ನಡುವೆ ಇಷ್ಟು ಚಂದಾರದಾರರನ್ನು ಸೆಳೆಯಲು ಕಾರಣವಾದ ಪ್ರಮುಖ ಶೋಗಳನ್ನು ಸಹ ಪಟ್ಟಿ ಮಾಡಿದೆ.

ನೆಟ್‌ಫ್ಲಿಕ್ಸ್‌ನ ಯಶಸ್ವಿ ಶೋಗಳ ವಿವರ

ನೆಟ್‌ಫ್ಲಿಕ್ಸ್‌ನ ಯಶಸ್ವಿ ಶೋಗಳ ವಿವರ

ಮಾನ್‌ಸ್ಟರ್: ದಿ ಜೆಫ್ರಿ ದಹ್ಮರ್ ಸ್ಟೋರಿ, ಸ್ಟ್ರೇಂಜರ್ ಥಿಂಗ್ಸ್ ಎಸ್ 4, ಎಕ್ಸ್ಟ್ರಾರ್ಡಿನರಿ ಅಟಾರ್ನಿ ವೂ, ದಿ ಗ್ರೇ ಮ್ಯಾನ್, ಪರ್ಪಲ್ ಹಾರ್ಟ್ಸ್ ಶೋಗಳು ಸಾರ್ವಕಾಲಿಕ ಅತ್ಯುತ್ತಮ ಶೋ ನೀಡುವ ಚಿತ್ರಗಳಾಗಿವೆ ಎಂದು ನೆಟ್‌ಫ್ಲಿಕ್ಸ್‌ ಉಲ್ಲೇಖಿಸಿದೆ.

ನೆಟ್‌ಫ್ಲಿಕ್ಸ್‌

ಪ್ರಮುಖವಾಗಿ ಮೂರನೇ ತ್ರೈಮಾಸಿಕದಲ್ಲಿಯೇ ಗ್ರಾಹಕರು ಹೆಚ್ಚಾಗಲು ಕಾರಣ ಗುರುತಿಸಿರುವ ನೆಟ್‌ಫ್ಲಿಕ್ಸ್‌, ಸ್ಟ್ರೇಂಜರ್ ಥಿಂಗ್ಸ್ S4 ಗೆ ಅದರ ಕ್ರೆಡಿಟ್‌ ನೀಡಿದೆ. ಈ ಶೋ ನಿಂದ 1.35 ಶತಕೋಟಿ ಗಂಟೆಗಳ ವೀಕ್ಷಣೆ ಆಗಿದೆಯಂತೆ. ಇದುವರೆಗೂ ಪ್ರಸಾರವಾದ ಆಂಗ್ಲ ಭಾಷೆಯ ಶೋಗಳಲ್ಲಿ ಇದೊಂದೇ ಇಷ್ಟು ವೀಕ್ಷಣೆ ಪಡೆದಿದೆ ಎಂದು ಹೆಮ್ಮೆಪಟ್ಟಿದೆ.

ಸ್ಯಾಂಡ್‌ಮ್ಯಾನ್

ಇದರ ನಂತರ ಆಗಸ್ಟ್‌ನಲ್ಲಿ ದಿ ಸ್ಯಾಂಡ್‌ಮ್ಯಾನ್ ಇದೇ ರೀತಿಯ ಹೆಚ್ಚಿನ ವೀಕ್ಷಣೆ ಪಡೆದು ಜನಪ್ರಿಯಗೊಂಡಿದೆ. ಇದು ಬರೋಬ್ಬರಿ 351 ಮಿಲಿಯನ್ ಗಂಟೆಗಳ ವೀಕ್ಷಣೆಯನ್ನು ಪಡೆದಿದೆ. ಅದರಲ್ಲೂ ಈ ಶೋಗೆ ವಿಶೇಷವಾದ ಅಭಿಮಾನಿಗಳು ಹಾಗೂ ವಿಮರ್ಶಕರು ಇದ್ದಾರೆ ಎಂದು ತಿಳಿಸಿದೆ. ಇದರ ನಡುವೆ ತ್ರೈಮಾಸಿಕದ ಅಂತ್ಯದ ವೇಳೆಗೆ ಐದನೇ ಸರಣಿಯ ಕೋಬ್ರಾ ಕೈ ಶೋ ಅನ್ನು ಪ್ರಸಾರ ಮಾಡಲಾಗಿದ್ದು, ಅದೂ ಸಹ 270 ಮಿಲಿಯನ್ ಗಂಟೆಗಳ ವೀಕ್ಷಣೆ ಪಡೆದಿದೆ. ಇನ್ನುಳಿದಂತೆ ಮಾನ್ಸ್ಟರ್: ದಿ ಜೆಫ್ರಿ ದಹ್ಮರ್ ಸ್ಟೋರಿ 824 ಮಿಲಿಯನ್ ಗಂಟೆಗಳ ವೀಕ್ಷಣೆ ಪಡೆದಿದ್ದು, ನೆಟ್‌ಫ್ಲಿಕ್ಸ್‌ನ ಎರಡನೇ ಅತಿದೊಡ್ಡ ಇಂಗ್ಲಿಷ್ ಸರಣಿಯಾಗಿದೆ.

ಶೋಗಳು

ಉತ್ತಮ ಯಶಸ್ಸನ್ನು ಗಳಿಸಿರುವ ಶೋಗಳ ಪಟ್ಟಿಯಲ್ಲಿ ಇಂಗ್ಲಿಷ್ ಹೊರತುಪಡಿಸಿ ಸ್ಕ್ವಿಡ್ ಗೇಮ್ (ಕೊರಿಯನ್), ಎಕ್ಸ್ಟ್ರಾರ್ಡಿನರಿ ಅಟಾರ್ನಿ ವೂ (ಕೊರಿಯನ್) ಪ್ರಮುಖ ಸ್ಥಾನ ಪಡೆದುಕೊಂಡಿವೆ. ಇದರ ಜೊತೆಗೆ ನಾರ್ಕೊ-ಸೇಂಟ್ಸ್ (ಕೊರಿಯನ್), ಸಿಂಟೋನಿಯಾ (ಬ್ರೆಜಿಲಿಯನ್) ಮತ್ತು ದಿ ಎಂಪ್ರೆಸ್ (ಜರ್ಮನ್) ಶೋಗಳು ಪ್ರತಿವಾರ 28 ದೇಶಗಳಲ್ಲಿ ಪ್ರಸಾರವಾಗಲಿವೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್‌ನ ಸಹಾಯಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೀಡ್ ಹೇಸ್ಟಿಂಗ್ಸ್, ನಾವು ಸಕಾರಾತ್ಮಕತೆಗೆ ಮರಳಿದ್ದೇವೆ. ಅದರಲ್ಲೂ ಕಂಟೆಂಟ್, ಮಾರ್ಕೆಟಿಂಗ್, ಜಾಹೀರಾತು ಬೆಂಬಲಿತ ಕಡಿಮೆ ದರದ ಪ್ಲಾನ್ ಮೇಲೆ ನಮ್ಮ ಗಮನ ಕೇಂದ್ರೀಕರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜಾಹೀರಾತು ಬೆಂಬಲಿತ ನೆಟ್‌ಫ್ಲಿಕ್ಸ್ ಪ್ಲಾನ್

ಜಾಹೀರಾತು ಬೆಂಬಲಿತ ನೆಟ್‌ಫ್ಲಿಕ್ಸ್ ಪ್ಲಾನ್

ಇನ್ನು ನೆಟ್‌ಫ್ಲಿಕ್ಸ್ ನಲ್ಲಿ ಇದ್ದ ಹೆಚ್ಚಿನ ಚಂದಾದಾರಿಕೆ ದರ ಹಾಗೂ ಶೋಗಳ ಆಧಾರದಲ್ಲಿ ಮೊದಲ ತ್ರೈಮಾಸಿಕದಲ್ಲಿ ಸುಮಾರು 2,00,000 ಚಂದಾದಾರರನ್ನು ಹಾಗೂ ಈ ವರ್ಷದ ಆರಂಭದ ಎರಡನೇ ತ್ರೈಮಾಸಿಕದಲ್ಲಿ ಸುಮಾರು ಒಂದು ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡು ಕಂಗೆಟ್ಟಿತ್ತು. ಈ ನಷ್ಟದಿಂದ ಹೊರಬರಲು ಯೋಚಿಸುತ್ತಿದ್ದ ಸಮಯದಲ್ಲಿ ಕಂಪನಿಯು ಪುಟಿದೇಳಲು ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿತ್ತು.

 ಬೇಸಿಕ್ ವಿತ್ ಆಡ್ಸ್

ಈ ಕ್ರಮಗಳ ಭಾಗವಾಗಿ ಇತ್ತೀಚೆಗೆ ಬೇಸಿಕ್ ವಿತ್ ಆಡ್ಸ್ ಪ್ಲಾನ್‌ ಅನ್ನು ಪ್ರಾರಂಭಿಸಿತ್ತು. ಈ ಪ್ಲಾನ್‌ ಪ್ರಕಾರ ಯುಎಸ್‌ನಲ್ಲಿ $6.99 (ಅಂದಾಜು 575ರೂ.) ಗಳನ್ನು ಪಾವತಿ ಮಾಡಬೇಕಿದೆ. ಹಾಗೆಯೇ ಇದೇ ಪ್ಲಾನ್‌ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೋ, ಸ್ಪೇನ್, ಯುಕೆಗೆ ವಿಸ್ತರಿಸಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಈ ಪ್ಲಾನ್ ಇತರ ದೇಶಗಳಲ್ಲಿಯೂ ಆರಂಭವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
Netflix is one of the leading OTT platforms in the world. Meanwhile, Netflix gained 2.4 million subscribers in the third quarter.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X