ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದ ನೆಟ್‌ಫ್ಲಿಕ್ಸ್‌! ಪಾಸ್‌ವರ್ಡ್‌ ಶೇರ್‌ ಮಾಡುದ್ರೂ ಬೀಳುತ್ತೆ ಶುಲ್ಕ!

|

ನೆಟ್‌ಫ್ಲಿಕ್ಸ್‌ ಬಳಸುವ ಚಂದಾದಾರರು ಈ ಸ್ಟೋರಿಯನ್ನು ಓದಲೇಬೇಕು. ನೆಟ್‌ಫ್ಲಿಕ್ಸ್‌ ಅಕೌಂಟ್‌ನ ಪಾಸ್‌ವರ್ಡ್‌ಗಳನ್ನು ಸ್ನೇಹಿತರಿಗೆ ಶೇರ್‌ ಮಾಡುವ ಮುನ್ನ ಯೋಚಿಸಬೇಕಾಗುತ್ತದೆ. ಏಕೆಂದರೆ ನೆಟ್‌ಫ್ಲಿಕ್ಸ್ ಇದೀಗ ತನ್ನ ಗ್ರಾಹಕರು ಪಾಸ್‌ವರ್ಡ್‌ಗಳನ್ನು ಬೇರೆಯವರಿಗೆ ಶೇರ್‌ ಮಾಡಿದರೆ ಶುಲ್ಕ ವಿಧಿಸಲಿದೆ. ಈಗಾಗಲೇ ತನ್ನ ನೀತಿಯಲ್ಲಿ ಬದಲಾವಣೆಯನ್ನು ಘೋಷಿಸಿರುವ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಶೇರ್‌ಗೆ ಶುಲ್ಕ ವಿಧಿಸುವುದಕ್ಕೆ ಮುಂದಾಗಿದೆ.

ನೆಟ್‌ಫ್ಲಿಕ್ಸ್

ಹೌದು, ನೆಟ್‌ಫ್ಲಿಕ್ಸ್ ಬಳಸುವ ಗ್ರಾಹಕರು ಇನ್ಮುಂದೆ ತಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಬೇರೆಯವರಿಗೆ ಶೇರ್‌ ಮಾಡುವುದಕ್ಕೆ ಶುಲ್ಕ ಕಟ್ಟಬೇಕಾಗುತ್ತದೆ. ಇದರಿಂದ ಪಾಸ್‌ವರ್ಡ್‌ ಶೇರ್‌ ಮಾಡುವುದನ್ನು ತಪ್ಪಿಸಬೇಕು ಅನ್ನೊದು ನೆಟ್‌ಫ್ಲಿಕ್ಸ್‌ನ ಪ್ಲಾನ್‌ ಆಗಿದೆ. ಇದಕ್ಕಾಗಿ ಹೆಚ್ಚಿನ ಜನರೊಂದಿಗೆ ಪಾಸ್‌ವರ್ಡ್‌ ಹಂಚಿಕೊಳ್ಳಲು ಬಯಸಿದರೆ ಹೆಚ್ಚುವರಿ ಹಣವನ್ನು ಪಾವತಿಸಬೇಕು ಎಂದು ಹೇಳಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ ಈ ನಿರ್ಧಾರಕ್ಕೆ ಬರಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಇದೀಗ ಪಾಸ್‌ವರ್ಡ್‌ ಶೇರ್‌ ಮಾಡಿದರೂ ಶುಲ್ಕ ವಿಧಿಸುವುದಕ್ಕೆ ಮುಂದಾಗಿದೆ. ಇದರಿಂದ ಒಂದೇ ಚಂದಾದಾರಿಕೆ ಪ್ಲಾನ್‌ನಲ್ಲಿ ಸ್ನೇಹಿತರೆಲ್ಲರೂ ನೆಟ್‌ಫ್ಲಿಕ್ಸ್‌ ಪ್ರವೇಶಿಸುವುದು ತಪ್ಪಲಿದೆ. ಅಲ್ಲದೆ ಪಾಸ್‌ವರ್ಡ್‌ ಶೇರ್‌ಗೆ ಶುಲ್ಕ ಪಾವತಿಸಬೇಕಾದರೆ ಯಾರೂ ಕೂಡ ಪಾಸ್‌ವರ್ಡ್‌ ಶೇರ್‌ ಮಾಡುವುದಿಲ್ಲ. ಇದರಿಂದ ಬೇರೆಯವರು ಕೂಡ ನೆಟ್‌ಫ್ಲಿಕ್ಸ್‌ ಪ್ರವೇಶಿಸಬೇಕಾದರೆ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗ ಚಂದಾದಾರರ ಸಂಖ್ಯೆ ಕೂಡ ಹೆಚ್ಚಾಗಲಿದೆ ಅನ್ನೊದು ನೆಟ್‌ಫ್ಲಿಕ್ಸ್‌ನ ಪ್ಲ್ಯಾನ್‌ ಆಗಿದೆ.

ಪಾಸ್‌ವರ್ಡ್

ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್ ಶೇರ್‌ ಮಾಡುವುದಕ್ಕೆ ಕಡಿವಾಣ ಹಾಕಲು ಪೆರು, ಚಿಲಿ ಮತ್ತು ಕೋಸ್ಟರಿಕಾದಲ್ಲಿ ಈಗಾಗಲೇ ಪರೀಕ್ಷೆಯನ್ನು ಕೂಡ ನಡೆಸಿದೆ. ಆದರೆ, ಪಾಸ್‌ವರ್ಡ್ ಶೇರ್‌ ಅನ್ನು ತಡೆಯುವ ಕಂಪನಿಯ ಪ್ರಯತ್ನವು ಯೋಜಿಸಿದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನಲಾಗಿದೆ. ಆದರೆ, ಹೆಚ್ಚಿನ ನೆಟ್‌ಫ್ಲಿಕ್ಸ್‌ ಗ್ರಾಹಕರು ಪಾಸ್‌ವರ್ಡ್ ಶೇರ್‌ ಮಾಡಿದ್ದಕ್ಕೆ ಶುಲ್ಕ ವಿಧಿಸಿದಾಗ ಬಳಕೆದಾರರು ತಮ್ಮ ಚಂದಾದಾರಿಕೆಯನ್ನೇ ರದ್ದುಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.ಸದ್ಯ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಶೇರ್‌ಗೆ ಶುಲ್ಕ ವಿಧಿಸುವುದನ್ನು ಜಾರಿ ಮಾಡಿರುವುದರ ಬಗ್ಗೆ ಜನರಿಗೆ ಅಧಿಕೃತವಾಗಿ ತಿಳಿಸಲಾಗಿಲ್ಲ. ಕೆಲವು ಬಳಕೆದಾರರು ಇನ್ನೂ ಕೂಡ ತಮ್ಮ ಖಾತೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ನೆಟ್‌ಫ್ಲಿಕ್ಸ್‌ನ ಹೊಸ ನೀತಿ ಭಾರತಕ್ಕೂ ಅನ್ವಯಿಸುತ್ತದೆಯೇ?

ನೆಟ್‌ಫ್ಲಿಕ್ಸ್‌ನ ಹೊಸ ನೀತಿ ಭಾರತಕ್ಕೂ ಅನ್ವಯಿಸುತ್ತದೆಯೇ?

ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೆಯನ್ನು ತಡೆಯಲು ಯೋಜಿಸಿದೆ. ಈ ನೀತಿ ಪ್ರಸ್ತುತ ಪೆರು, ಚಿಲಿ ಮತ್ತು ಕೋಸ್ಟರಿಕಾದಲ್ಲಿ ಮಾತ್ರ ಮಾಡಲಾಗುತ್ತಿದೆ. ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಹೊಸ ನೀತಿಯು ಭಾರತ ಸೇರಿದಂತೆ ಇತರ ದೇಶಗಳಿಗೆ ಇನ್ನು ಬಂದಿಲ್ಲ. ಆದರೆ ಶೀಘ್ರದಲ್ಲೇ ಈ ನೀತಿ ಭಾರತಕ್ಕೂ ಕೂಡ ಕಾಲಿಡಲಿದೆ ಎನ್ನಲಾಗಿದೆ.

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಬದಲಾಯಿಸುವುದು ಹೇಗೆ?

ನಿಮ್ಮ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪ್ಲಾನ್‌ ಅನ್ನು ಅಪ್‌ಗ್ರೇಡ್ ಮಾಡಲು ಅಥವಾ ಡೌನ್‌ಗ್ರೇಡ್ ಮಾಡಲು ನೀವು ಪ್ಲಾನ್‌ ಮಾಡಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ನೆಟ್‌ಫ್ಲಿಕ್ಸ್ ಅಪ್ಲಿಕೇಶನ್ ತೆರೆಯಿರಿ ಮತ್ತು ಲಾಗಿನ್ ಮಾಡಿ
ಹಂತ:2 ನಂತರ ಮೆನುವಿನಲ್ಲಿ "ಖಾತೆಗಳು" ವಿಭಾಗಕ್ಕೆ ಹೋಗಿ
ಹಂತ:3 ಇದರಲ್ಲಿ "ಪ್ಲಾನ್‌ ಡಿಟೇಲ್ಸ್‌" ವರ್ಗದ ಅಡಿಯಲ್ಲಿ, ನೀವು "ಚೇಂಜ್‌ ಪ್ಲಾನ್‌" ಆಯ್ಕೆಯನ್ನು ನೋಡುತ್ತೀರಿ
ಹಂತ:4 ಈಗ ನಿಮ್ಮ ಆದ್ಯತೆಯ ಪ್ಲಾನ್‌ಗಳನ್ನು ಆಯ್ಕೆಮಾಡಿ ಮತ್ತು "ಕಂಟಿನ್ಯೂ" ಕ್ಲಿಕ್ ಮಾಡಿ
ಹಂತ:5 ಅಂತಿಮವಾಗಿ, "ಸೇವ್‌ ಆಂಡ್‌ ಅಪ್ಡೇಟ್‌" ಕ್ಲಿಕ್ ಮಾಡಿ ಮತ್ತು ನೀವು ಬಯಸಿದ ಪ್ಲಾನ್‌ಗೆ ಬದಲಾಗಿ.
ನೆಟ್‌ಫ್ಲಿಕ್ಸ್‌ನಲ್ಲಿ ನೀವು ನಿಮ್ಮ ಯೋಜನೆಯನ್ನು ಅಪ್‌ಗ್ರೇಡ್ ಮಾಡಿದ್ದರೆ, ಅದು ತಕ್ಷಣವೇ ಕಾರ್ಯಗತಗೊಳ್ಳುತ್ತದೆ

Best Mobiles in India

Read more about:
English summary
Netflix has started charging its customers for sharing passwords

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X