ನೆಟ್‌ಫ್ಲಿಕ್ಸ್‌ಗೆ ಬಿಗ್‌ ಶಾಕ್‌! ಚಂದಾದಾರರ ಸಂಖ್ಯೆಯಲ್ಲಿ ಭಾರಿ ಕುಸಿತ!

|

ನೆಟ್‌ಫ್ಲಿಕ್ಸ್‌ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ತನ್ನ ಬಳಕೆದಾರರಿಗೆ ವಿಶೇಷ ಚಂದಾದಾರಿಕೆ ಪ್ಲಾನ್‌ಗಳನ್ನು ನೀಡುವ ಸ್ಟ್ರೀಮಿಂಗ್‌ ಸೇವೆಯನ್ನು ನೀಡುತ್ತಿದೆ. ಆದರೆ ಇದೇ ಮೊದಲ ಬಾರಿಗೆ ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ ಚಂದಾದಾರರ ಸಂಖ್ಯೆಯಲ್ಲಿ ಕುಸಿತವನ್ನು ಅನುಭವಿಸಿದೆ ಎಂದು ಹೇಳಲಾಗಿದೆ. ನೆಟ್‌ಫ್ಲಿಕ್ಸ್‌ ಕಂಪನಿಯು ತನ್ನ ಮೊದಲ ತ್ರೈಮಾಸಿಕದಲ್ಲಿ 200,000 ಚಂದಾದಾರರನ್ನು ಕಳೆದುಕೊಂಡಿದೆ ಎಂದು ವರದಿಯಾಗಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ 2022ರ ಮೊದಲ ತ್ರೈಮಾಸಿಕದಲ್ಲಿ ಬಿಗ್‌ ಶಾಕ್‌ ಎದುರಿಸಿದೆ. ತನ್ನ ಚಂದಾದಾರನ್ನು ಹೆಚ್ಚಳ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಕುಸಿತವನ್ನು ಅನುಭವಿಸಿದೆ. ಅಂದರೆ ಬರೋಬ್ಬರಿ 2.5 ಮಿಲಿಯನ್ ಚಂದಾದಾರರನ್ನು ಸೇರಿಸುವ ಅದರ ಮುನ್ಸೂಚನೆಗಿಂತ ಕಡಿಮೆಯಾಗಿದೆ. ಇನ್ನು ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ರಷ್ಯಾದಲ್ಲಿ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ 700,000 ಸದಸ್ಯರನ್ನು ಕಳೆದುಕೊಂಡಿದೆ. ಹಾಗಾದ್ರೆ ನೆಟ್‌ಫ್ಲಿಕ್ಸ್‌ ಚಂದಾದಾರರನ್ನು ಕಳೆದುಕೊಳ್ಳುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ಇದೇ ಮೊದಲ ಭಾರಿಗೆ ಚಂದಾದಾರರ ಸಂಖ್ಯೆಯಲ್ಲಿ ಕುಸಿತವನ್ನು ಅನುಭವಿಸಿದೆ. ಇದಕ್ಕೆ ನೆಟ್‌ಫ್ಲಿಕ್ಸ್‌ ತೆಗೆದುಕೊಂಡ ಕೆಲವು ನಿರ್ಧಾರಗಳೇ ಕಾರಣ ಎಂದು ಹೇಳಲಾಗಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ್ದರಿಂದ ನೆಟ್‌ಫ್ಲಿಕ್ಸ್‌ ತನ್ನ ಸೇವೆಯನ್ನು ರಷ್ಯಾದಲ್ಲಿ ಸ್ಥಗಿತಗೊಳಿಸಿದೆ. ಇದರ ಪರಿಣಾಮವಾಗಿ ಸಾಕಷ್ಟು ಚಂದಾದಾರನ್ನು ಕಳೆದುಕೊಂಡಿದೆ.ಇದರ ಪರಿಣಾಮವಾಗಿ ವಾಲ್ ಸ್ಟ್ರೀಟ್ ನೆಟ್‌ಫ್ಲಿಕ್ಸ್‌ನ ಸ್ಟಾಕ್ ಅನ್ನು 26% ರಷ್ಟು ಹಿಂದೆ ಹಾಕುವ ಮೂಲಕ ಮುನ್ನಡೆ ಸಾಧಿಸಿದೆ. ಅಂದರೆ ವಾಲ್‌ಸ್ಟ್ರೀಟ್‌ ನೆಟ್‌ಫ್ಲಿಕ್ಸ್‌ ಅನ್ನು ಕೂಡ ಮೀರಿಸಿದೆ. ಇದರ ಪರಿಣಾಮವಾಗಿ ನೆಟ್‌ಫ್ಲಿಕ್ಸ್ ಇದೀಗ ಜಾಹೀರಾತುಗಳೊಂದಿಗೆ ಕಡಿಮೆ-ಬೆಲೆಯ ಆವೃತ್ತಿಯನ್ನು ನೀಡುವುದರ ಬಗ್ಗೆ ಯೋಚಿಸುವಂತೆ ಮಾಡಿದೆ.

ನೆಟ್‌ಫ್ಲಿಕ್ಸ್‌

ಈಗಾಗಲೇ ನೆಟ್‌ಫ್ಲಿಕ್ಸ್‌ ಪ್ರತಿಸ್ಪರ್ಧಿಗಳಾದ HBO ಮ್ಯಾಕ್ಸ್ ಮತ್ತು ಡಿಸ್ನಿ + ನಿಂದ ಇದೇ ರೀತಿಯ ಕೊಡುಗೆಗಳನ್ನು ನೀಡುವ ಮೂಲಕ ಯಶಸ್ಸನ್ನು ಸಾಧಿಸಿವೆ. ಸದ್ಯ ನೆಟ್‌ಫ್ಲಿಕ್ಸ್‌ನ ಮೊದಲ ತ್ರೈಮಾಸಿಕ ಆದಾಯವು 10% ರಷ್ಟಿದೆ. "ಅಮೆಜಾನ್.ಕಾಮ್, ವಾಲ್ಟ್ ಡಿಸ್ನಿಯಂತಹ ಮಾಧ್ಯಮ ಕಂಪನಿಗಳು ಹೊಸ ರೀತಿಯಲ್ಲಿ ಚಂದಾದಾರನ್ನು ಆಕರ್ಷಿಸುತ್ತಿರುವುದರ ಪರಿಣಾಮವನ್ನು ಕೂಡ ನೆಟ್‌ಫ್ಲಿಕ್ಸ್‌ ಎದುರಿಸುತ್ತಿದೆ. ಇದು ನೆಟ್‌ಫ್ಲಿಕ್ಸ್‌ ತನ್ನ ಬಳಕೆದಾರರನ್ನು ಕಳೆದುಕೊಳ್ಳುವಂತೆ ಮಾಡಿದೆ. ಅಲ್ಲದೆ ಹೊಸ ಮಾದರಿಯ ಯೋಜನೆಗಳನ್ನು ಪರಿಚಯಿಸಲೇಬೇಕಾದ ಸನ್ನಿವೇಶಕ್ಕೆ ನೆಟ್‌ಫ್ಲಿಕ್ಸ್‌ ಸಿಲುಕಿಕೊಂಡಿದೆ.

ನೆಟ್‌ಫ್ಲಿಕ್ಸ್‌

ಇದರ ನಡುವೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಟಿವಿ ವೀಕ್ಷಣೆಯ ಪಾಲಿನಲ್ಲಿ ನೆಟ್‌ಫ್ಲಿಕ್ಸ್‌ ಸ್ಥಾನ ಸ್ಥಿರವಾಗಿದೆ ಎಂದು ನೆಟ್‌ಫ್ಲಿಕ್ಸ್ ಹೇಳಿದೆ. ಆದರೆ ಯುನೈಟೆಡ್ ಸ್ಟೇಟ್ಸ್‌ನಂತಹ ಪ್ರಬುದ್ಧ ಮಾರುಕಟ್ಟೆಗಳಲ್ಲಿ ಬೆಳವಣಿಗೆ ನಿಧಾನವಾಗುತ್ತಿದ್ದಂತೆ, ನೆಟ್‌ಫ್ಲಿಕ್ಸ್ ಪ್ರಪಂಚದ ಇತರ ಭಾಗಗಳ ಮೇಲೆ ಹೆಚ್ಚು ಗಮನಹರಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಸ್ಥಳೀಯ ಭಾಷೆಯ ವಿಷಯದಲ್ಲಿ ಹೂಡಿಕೆ ಮಾಡಲು ಶುರುಮಾಡಿದೆ. ಇದು ನೆಟ್‌ಫ್ಲಿಕ್ಸ್‌ ಅನ್ನು ಮತ್ತೆ ಚಂದಾದಾರನ್ನು ಸೆಳೆಯುವಂತೆ ಮಾಡಲಿದೆಯಾ ಅನ್ನೊದನ್ನ ಕಾದು ನೋಡಬೇಕಿದೆ.

ಸ್ಟ್ರೀಮಿಂಗ್

ಇನ್ನು ಸ್ಟ್ರೀಮಿಂಗ್ ಸೇವೆಗಳು ಗ್ರಾಹಕರನ್ನು ಮನರಂಜಿಸುವ ಮನರಂಜನೆಯ ಏಕೈಕ ರೂಪವಲ್ಲ. ಮಾರ್ಚ್ ಅಂತ್ಯದಲ್ಲಿ ಬಿಡುಗಡೆಯಾದ ಡೆಲಾಯ್ಟ್‌ ಸಮೀಕ್ಷೆಯ ಪ್ರಕಾರ 14 ರಿಂದ 25 ರ ವಯಸ್ಸಿನ ಗ್ರಾಹಕರು, ಮನೆಯಲ್ಲಿ ಚಲನಚಿತ್ರಗಳು ಅಥವಾ ಟೆಲಿವಿಷನ್ ಸರಣಿಗಳನ್ನು ವೀಕ್ಷಿಸುವುದಕ್ಕಿಂತ ಹೆಚ್ಚು ಆನ್‌ಲೈನ್‌ ಗೇಮ್‌ ಆಡುತ್ತಾರೆ. ಅಲ್ಲದೆ ಮಿಲೇನಿಯಲ್ ಗ್ರಾಹಕರು ಸ್ಟ್ರೀಮಿಂಗ್‌ನಲ್ಲಿ ಚಲನಚಿತ್ರಗಳು ಅಥವಾ ಪ್ರದರ್ಶನಗಳನ್ನು ವೀಕ್ಷಿಸುವುದಕ್ಕಿಂತ ಟಿಕ್‌ಟಾಕ್ ಮತ್ತು ಯೂಟ್ಯೂಬ್‌ನಂತಹ ಬಳಕೆದಾರರು ಕ್ರಿಯೆಟ್‌ ಮಾಡಿದ ಶಾರ್ಟ್‌ ವೀಡಿಯೊಗಳನ್ನು ವೀಕ್ಷಿಸಲು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎಂದು ಹೇಳಲಾಗಿದೆ.

Best Mobiles in India

Read more about:
English summary
Netflix is loosing subscribers, might offer cheaper plans with ads to increase customer base

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X