ಬಳಕೆದಾರರ ಅನುಕೂಲಕ್ಕಾಗಿ ಹೊಸ ಫೀಚರ್ಸ್‌ ಪರಿಚಯಿಸಿದ ನೆಟ್‌ಫ್ಲಿಕ್ಸ್‌!

|

ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಅಪ್ಲಿಕೇಶನ್‌ಗಳಿಗೆ ಪೈಪೋಟಿ ನೀಡುವುದಕ್ಕಾಗಿ ಹಲವು ಜನಪ್ರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ನೆಟ್‌ಫ್ಲಿಕ್ಸ್ ತನ್ನ ಅಪ್ಲಿಕೇಶನ್‌ನಲ್ಲಿ ಹೊಸ ಬಟನ್ ಟು ಥಂಬ್ಸ್ ಅಪ್ ಬಟನ್ ಅನ್ನು ಪರಿಚಯಿಸಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ತನ್ನ ಬಳಕೆದಾರರಿಗೆ ಟು ಥಂಬ್ಸ್‌ ಅಪ್‌ ಬಟನ್‌ ಸೇರಿಸಿದೆ. ಇದನ್ನು ಥಂಬ್ಸ್ ಡೌನ್ ಮತ್ತು ಥಂಬ್ಸ್ ಅಪ್ ಬಟನ್ ಜೊತೆಗೆ ಇರಿಸಲಾಗುತ್ತದೆ. ಇನ್ನು ಟು ಥಂಬ್ಸ್ ಅಪ್ ಬಟನ್ ಮೂಲಕ ವೀಕ್ಷಕರು ತಾವು ವೀಕ್ಷಿಸಿದ ಚಲನಚಿತ್ರ ಅಥವಾ ವೆಬ್‌ಸಿರೀಸ್‌ ಲೈಕ್‌ ಆಗಿದೆಯಾ ಇಲ್ಲವಾ ಅನ್ನೊದನ್ನು ವ್ಯಕ್ತಪಡಿಸಲು ಬಳಸಬಹುದು. ಇನ್ನುಳಿದಂತೆ ಈ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ ಬಳಕೆದಾರರಿಗೆ ಟು ಥಂಬ್ಸ್‌ ಅಪ್‌ ಬಟನ್‌ ಪರಿಚಯಿಸಿದೆ. ಇದರಿಂದ ಬಳಕೆದಾರರು ನಿಜವಾಗಿಯೂ ಇಷ್ಟಪಟ್ಟ ಟೈಟಲ್‌ಗಳು, ಇಷ್ಟ ಪಡದ ಟೈಟಲ್‌ಗಳ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಸುಲಭವಾಗಲಿದೆ. ಆದ್ದರಿಂದ, ಬಳಕೆದಾರರು ಇಷ್ಟ ಪಡುವ ಕಂಟೆಂಟ್‌ ಹೇಗಿರಲಿದೆ ಅನ್ನೊದನ್ನ ತಿಳಿಯುವುದಕ್ಕೆ ಈ ವೈಶಿಷ್ಟ್ಯವನ್ನು ನಿರ್ಮಿಸಿದ್ದೇವೆ ಹಾಗೂ ಅದನ್ನು ಪರೀಕ್ಷಿಸಿದ್ದೇವೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ.

ನೆಟ್‌ಫ್ಲಿಕ್ಸ್‌

ಇನ್ನು ನೀವು ಕೂಡ ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ಶಿಫಾರಸುಗಳನ್ನು ಉತ್ತಮಗೊಳಿಸಲು ಟು ಥಂಬ್ಸ್ ಅಪ್ ಅನ್ನು ಪರಿಗಣಿಸಬಹುದು. ಥಂಬ್ಸ್ ಅಪ್ ಮಾಡುವುದು ನೀವು ಇಷ್ಟ ಪಟ್ಟ ಕಂಟೆಂಟ್‌ ಅನ್ನು ತೋರಿಸಲಿದೆ. ಹಾಗೆಯೇ ನೀವು ಥಂಬ್ಸ್‌ ಡೌನ್‌ ಮಾಡಿದರೆ ನಿಮಗೆ ಯಾವ ಮಾದರಿಯ ಕಂಟೆಂಟ್‌ ಇಷ್ಟ ಇಲ್ಲ ಅನ್ನೊದು ನಮಗೆ ತಿಳಯಲಿದೆ. ಆದ್ದರಿಂದ ನಾವು ಇದೇ ರೀತಿಯ ಶಿಫಾರಸುಗಳನ್ನು ಮಾಡಲು ಈ ಪ್ರತಿಕ್ರಿಯೆಯನ್ನು ಬಳಸುತ್ತೇವೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ.

ಟು ಥಂಬ್ಸ್ ಅಪ್

ಇದಲ್ಲದೆ ಟು ಥಂಬ್ಸ್ ಅಪ್ ಆಯ್ಕೆಯು ನೆಟ್‌ಫ್ಲಿಕ್ಸ್‌ನಲ್ಲಿ ವೈಯಕ್ತೀಕರಣಕ್ಕೆ ಹೋಗುತ್ತದೆ. ಇದು ನೀವು ಏನು ವೀಕ್ಷಿಸಿದ್ದೀರಿ, ನೀವು ಏನನ್ನು ಇಷ್ಟಪಟ್ಟಿದ್ದೀರಿ, ನೀವು ಇಷ್ಟಪಡದಿರುವುದನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಅಂದರೆ ಟು ಥಂಬ್ಸ್ ಅಪ್ ಕೇವಲ ಇನ್ನೊಂದು ಇನ್‌ಪುಟ್ ಆಗಿರಲಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ನೀವು ಲೈಕ್‌ ಮಾಡುವ ಫೈವ್‌ ಸ್ಟಾರ್‌ ಆಯ್ಕೆಯನ್ನು 2017 ರಲ್ಲಿಯೇ ಕೈಬಿಟ್ಟಿದೆ. ಆದರೆ ಇದೀಗ ಬಳಕೆದಾರರಿಗೆ ಥಂಬ್ಸ್ ಅಪ್ ಮತ್ತು ಡೌನ್ ಮೆನುವನ್ನು ಪರಿಚಯಿಸಿದೆ. ಈ ಮೂಲಕ ತಾವು ಲೈಕ್‌ ಮಾಡುವ ವೀಡಿಯೋಗಳಗೆ ಥಂಬ್ಸ್‌ ಆಪ್‌ ಮಾಡುವ ಆಯ್ಕೆ ನೀಡಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಆಡಿಯೋ ಭಾಷೆ ಬದಲಾಯಿಸುವುದು ಹೇಗೆ?

ನೆಟ್‌ಫ್ಲಿಕ್ಸ್‌ನಲ್ಲಿ ಆಡಿಯೋ ಭಾಷೆ ಬದಲಾಯಿಸುವುದು ಹೇಗೆ?

ಹಂತ 1: ನೀವು ನೆಟ್‌ಫ್ಲಿಕ್ಸ್‌ ಬಳಸುವ ಕಂಪ್ಯೂಟರ್ ಅಥವಾ ಮೊಬೈಲ್ ಬ್ರೌಸರ್‌ನಲ್ಲಿ, Netflix.com ಗೆ ಸೈನ್ ಇನ್ ಮಾಡಿ.

ಹಂತ 2: ನಂತರ ನಿಮ್ಮ ಮ್ಯಾನೇಜ್‌ ಪ್ರೊಫೈಲ್ಸ್‌ ಆಯ್ಕೆಯನ್ನು ಆರಿಸಿ.

ಹಂತ 3: ಇದರಲ್ಲಿ ನಿಮ್ಮ ಪ್ರೊಫೈಲ್ ಅನ್ನು ಆಯ್ಕೆ ಮಾಡಿ.

ಹಂತ 4: ಇದರಲ್ಲಿ ನೀವು ನಿಮ್ಮ ಆಡಿಯೋ ಲ್ಯಾಂಗ್ವೇಜ್ ಅನ್ನು ಬದಲಾಯಿಸಿ.

ಹಂತ 5: ಇದೀಗ ನಿಮ್ಮ ಕಾರ್ಯಕ್ರಮಗಳನ್ನು ನಿಮ್ಮ ಆದ್ಯತೆಯ ಆಡಿಯೊದೊಂದಿಗೆ ಮತ್ತೆ ಪ್ಲೇ ಮಾಡಲು ಪ್ರಯತ್ನಿಸಿ.

ಒಂದು ವೇಳೆ ನೀವು ಬಯಸಿದ ಕಾರ್ಯಕ್ರಮ ನಿಮ್ಮ ಆದ್ಯತೆಯ ಆಡಿಯೋ ಲ್ಯಾಂಗ್ವೇಜ್ ಅಲ್ಲಿ ಪ್ಲೇ ಆಗದಿದ್ದರೆ, ಅದು ನಿಮ್ಮ ಭಾಷೆಯಲ್ಲಿ ಆ ಕಾರ್ಯಕ್ರಮ ಇಲ್ಲ ಅನ್ನೊದನ್ನ ಗಮನಿಸಬೇಕಾಗುತ್ತದೆ.

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಮೊಬೈಲ್ ಮೂಲಕ ನೆಟ್‌ಫ್ಲಿಕ್ಸ್ ಪ್ರೈಮರಿ ಲ್ಯಾಂಗ್ವೇಜ್ ಅನ್ನು ಬದಲಾಯಿಸುವುದು ಹೇಗೆ?

ಹಂತ 1: ನಿಮ್ಮ ಮೊಬೈಲ್‌ನಲ್ಲಿ Netflix.com ಗೆ ಭೇಟಿ ನೀಡಿ.
ಹಂತ 2: ನಂತರ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
ಹಂತ 3: ಸೈನ್ ಇನ್ ಮಾಡಿದ ನಂತರ, ನಿಮ್ಮ ಅಕೌಂಟ್‌ ಮೇಲೆ ಟ್ಯಾಪ್ ಮಾಡಿ.
ಹಂತ 4: ನಂತರ ಪ್ರೊಫೈಲ್ ಮತ್ತು ಪೇರೇಂಟ್ಸ್‌ ಕಂಟ್ರೋಲ್‌ ಅನ್ನು ಸ್ಕ್ರಾಲ್ ಮಾಡಿ, ಇದರಲ್ಲಿ ನಿಮ್ಮ ಪ್ರೊಫೈಲ್ ಪಕ್ಕದಲ್ಲಿರುವ ಡ್ರಾಪ್-ಡೌನ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಹಂತ 5: ಇದರಲ್ಲಿ ಲ್ಯಾಗ್ವೇಂಜ್‌ ಪಕ್ಕದಲ್ಲಿ ಇರುವ ಚೇಂಜ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ 6: ಹೊಸ ಪೇಜ್‌ನಲ್ಲಿ ಸ್ಮಾಲ್‌ ಸರ್ಕಲ್‌ ಟ್ಯಾಪ್‌ ಮಾಡಿ ಮತ್ತು ನಿಮ್ಮ ಲ್ಯಾಗ್ವೇಂಜ್‌ ಅನ್ನು ಆಯ್ಕೆ ಮಾಡಿ.
ಹಂತ 7: ಭಾಷೆಯನ್ನು ಆಯ್ಕೆ ಮಾಡಿದ ನಂತರ, ಪೇಜ್‌ ಅನ್ನು ಸ್ಕ್ರೋಲ್ ಮಾಡುವ ಮೂಲಕ ಮತ್ತು ಸೇವ್‌ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಲ್ಯಾಗ್ವೇಂಜ್‌ ಬದಲಾಗಲಿದೆ.

Best Mobiles in India

Read more about:
English summary
Netflix is rolling out a new button on its app. The streaming giant has introduced a two thumbs up button that would be placed alongside the thumbs down and the thumbs up button.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X