ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್‌ಫ್ಲಿಕ್ಸ್!

|

ಪ್ರಮುಖ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ವಿವಿಧ ಆಯ್ಕೆಗಳ ಮೂಲಕ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಇದರ ಭಾಗವಾಗಿಯೇ ಹಲವಾರು ಪ್ಲ್ಯಾನ್‌ಗಳನ್ನೂ ಸಹ ಘೋಷಣೆ ಮಾಡಲಾಗಿದೆ. ಇದೆಲ್ಲದರ ನಡುವೆ ಈಗ ನೆಟ್‌ಫ್ಲಿಕ್ಸ್ ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್‌ ಅನ್ನು ಪರಿಚಯಿಸಿದೆ.

 ಕಿಡ್ಸ್ ಮಿಸ್ಟರಿ ಬಾಕ್ಸ್ ಫೀಚರ್ಸ್ ಪರಿಚಯಿಸಿದ ನೆಟ್‌ಫ್ಲಿಕ್ಸ್!

ಹೌದು, ಹೆಸರೇ ಸೂಚಿಸುವಂತೆ ಕಿಡ್ಸ್ ಮಿಸ್ಟರಿ ಬಾಕ್ಸ್(Kids Mystery Box) ನಲ್ಲಿ ದಿನನಿತ್ಯವೂ ಹೊಸತನ ಲಭ್ಯವಾಗಲಿದೆ. ಹಾಗೆಯೇ ಇದರಲ್ಲಿ ಬಾಸ್ ಬೇಬಿ: ಬ್ಯಾಕ್ ಇನ್ ದಿ ಕ್ರಿಬ್, ಬ್ಯಾಕ್ ಟು ದಿ ಔಟ್‌ಬ್ಯಾಕ್
ಸೇರಿದಂತೆ ಇನ್ನಿತರೆ ಶೋಗಳನ್ನು ವೀಕ್ಷಣೆ ಮಾಡಬಹುದು. ಹಾಗಿದ್ರೆ, ಆಂಡ್ರಾಯ್ಡ್‌ ಬಳಕೆದಾರರು ಈ ಹೊಸ ಸೌಲಭ್ಯವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ 'ಕಿಡ್ಸ್ ಮಿಸ್ಟರಿ ಬಾಕ್ಸ್' ಸೌಲಭ್ಯವನ್ನು ಜಾಗತಿಕವಾಗಿ ಆಂಡ್ರಾಯ್ಡ್ ಡಿವೈಸ್‌ಗಳಿಗೆ ನೀಡಲಾಗಿದ್ದು, ಈ ಮೂಲಕ ಮಕ್ಕಳು ತಮ್ಮ ನೆಚ್ಚಿನ ಸರಣಿಗಳು ಮತ್ತು ಚಲನಚಿತ್ರಗಳನ್ನು ಅನ್ವೇಷಿಸಲು ಇದು ಸಹಾಯ ಮಾಡಲಿದೆ. ಇದರಿಂದ ಮಕ್ಕಳಿಗೆ ಹೆಚ್ಚಿನ ವಿನೋದ ಉಂಟಾಗಲಿದ್ದು, ಇದೊಂದು ಸುರಕ್ಷಿತ ಪ್ರಕ್ರಿಯೆ ಆಗಿರುವುದು ಸಹ ಪೋಷಕರಿಗೆ ಸಂತಸದ ವಿಷಯವಾಗಿದೆ.

ನೆಟ್‌ಫ್ಲಿಕ್ಸ್ ಕಿಡ್ಸ್ ಮಿಸ್ಟರಿ ಬಾಕ್ಸ್ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯ
ಈ ಮಿಸ್ಟರಿ ಬಾಕ್ಸ್ ಫೀಚರ್ಸ್‌ ಬಳಕೆದಾರರಿಗೆ ಹೊಸ ಕಂಟೆಂಟ್ ಅನ್ನು ಸರ್ಚ್‌ ಮಾಡಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಈ ಮಿಸ್ಟರಿ ಬಾಕ್ಸ್‌ನಲ್ಲಿರುವ ಕಂಟೆಂಟ್ ಪ್ರತಿದಿನವೂ ಬದಲಾಗಲಿದ್ದು, ಈ ಮೂಲಕ ದಿನನಿತ್ಯವೂ ಹೊಸ ಕಂಟೆಂಟ್‌ಗಳ ಮೂಲಕ ಮಕ್ಕಳು ಮಸ್ತ್‌ ಎಂಜಾಯ್‌ ಮಾಡಬಹುದಾಗಿದೆ. ಆದರೆ, ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ.

 ಕಿಡ್ಸ್ ಮಿಸ್ಟರಿ ಬಾಕ್ಸ್ ಫೀಚರ್ಸ್ ಪರಿಚಯಿಸಿದ ನೆಟ್‌ಫ್ಲಿಕ್ಸ್!

ಇದರೊಂದಿಗೆ ಬಾಸ್ ಬೇಬಿ: ಬ್ಯಾಕ್ ಇನ್ ದಿ ಕ್ರಿಬ್, ಬ್ಯಾಕ್ ಟು ದಿ ಔಟ್‌ಬ್ಯಾಕ್, ಅದಾ ಟ್ವಿಸ್ಟ್, ಸೈಂಟಿಸ್ಟ್ ಸೇರಿದಂತೆ ಇನ್ನೂ ಹೆಚ್ಚಿನ ಜನಪ್ರಿಯ ಶೋಗಳು ಈ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯ ಇವೆ. ಹಾಗಿದ್ರೆ, ಈ ಮಿಸ್ಟರಿ ಬಾಕ್ಸ್‌ ಅನ್ನು ಹೇಗೆ ಬಳಕೆ ಮಾಡಬಹುದು ಎಂಬ ಬಗ್ಗೆ ಇಲ್ಲಿ ವಿವರಿಸಿದ್ದೇವೆ ಗಮನಿಸಿ.

ಹಂತ 1
ಮೊದಲು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ನೆಟ್‌ಫ್ಲಿಕ್ಸ್ ಓಪನ್‌ ಮಾಡಿ, ನಂತರ ಮಕ್ಕಳ ಪ್ರೊಫೈಲ್‌ಗೆ ಲಾಗಿನ್ ಮಾಡಿ. ಇದಾದ ಬಳಿಕ ಪ್ರಮುಖ ಪೇಜ್‌ನ ಮೇಲ್ಭಾಗದಲ್ಲಿ ಮೆಚ್ಚಿನ ಪಟ್ಟಿ(Favorites Row) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದನ್ನು ಗಮನಿಸಿ.

ಹಂತ 2
ಇದಾದ ನಂತರ ಇಷ್ಟಪಡುವ ಪಾತ್ರಗಳು, ಶೋಗಳು ಮತ್ತು ಚಲನಚಿತ್ರಗಳೊಂದಿಗೆ ಬೇಕಾದ ಕಂಟೆಂಟ್‌ ಅನ್ನು ಸರ್ಚ್‌ ಮಾಡಲು ಇದು ಸಹಕಾರ ನೀಡಲಿದೆ. ಇದಾದ ಬಳಿಕ ನ್ಯೂ ಫಾರ್‌ ಯೂ ಎಂಬ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಇದು ನಿಮಗೆ ಹೊಸ ಕಂಟೆಂಟ್‌ ಅನ್ನು ಪತ್ತೆ ಮಾಡಲು ಹೆಚ್ಚಿನ ಅನುಕೂಲ ನೀಡಲಿದೆ.

ಮಕ್ಕಳಿಗಾಗಿ ಶಿಫಾರಸು ಮಾಡಲಾದ ಮುಂದಿನ ಶೋ ಅಥವಾ ಚಲನಚಿತ್ರವನ್ನು ಬಹಿರಂಗಪಡಿಸುವ ಆಶ್ಚರ್ಯ ಮತ್ತು ಸಂತೋಷವನ್ನು ಇಷ್ಟಪಡುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ನೆಟ್‌ಫ್ಲಿಕ್ಸ್‌ ಈ ವೇಳೆ ತಿಳಿಸಿದೆ. ಇದೆಲ್ಲದರ ಜೊತೆಗೆ ಮಕ್ಕಳಿಗೆ ಮನರಂಜನಾತ್ಮಕ ಶಿಕ್ಷಣ ನೀಡುತ್ತಾ ಬರುತ್ತಿರುವ ಈ ಪ್ಲಾಟ್‌ಫಾರ್ಮ್‌ ಜುಲೈ 2021 ರಲ್ಲಿ ಕಿಡ್ಸ್ ಟಾಪ್ 10 ರೋ ಹಾಗೂ ಕಿಡ್ಸ್ ರೀಕ್ಯಾಪ್ ಇಮೇಲ್ಸ್‌ ಅನ್ನು ಪರಿಚಯಿಸಿತ್ತು. ಇದೀಗ ಕಿಡ್ಸ್ ಮಿಸ್ಟರಿ ಬಾಕ್ಸ್ ಈ ಸಾಲಿಗೆ ಸೇರಿಕೊಂಡಿದ್ದು, ಮಕ್ಕಳು, ಪೋಷಕರಿಗೆ ವಿಶೇಷ ಅನುಭವ ಸಿಗಲಿದೆ.

 ಕಿಡ್ಸ್ ಮಿಸ್ಟರಿ ಬಾಕ್ಸ್ ಫೀಚರ್ಸ್ ಪರಿಚಯಿಸಿದ ನೆಟ್‌ಫ್ಲಿಕ್ಸ್!

ಇದರೊಂದಿಗೆ ನೆಟ್‌ಫ್ಲಿಕ್ಸ್ ತನ್ನ ಐಒಎಸ್ ಆಪ್‌ ಅನ್ನು ನವೀಕರಿಸಿದ್ದು, ಈಗ ಹೊಸ ಬಿಲ್‌ಬೋರ್ಡ್ ಲೇಔಟ್, ಕಾರ್ಡ್ ಪರಿವರ್ತನೆಗಳು, ಪ್ರೊಫೈಲ್ ಡಿಸ್‌ಪ್ಲೇಗಳಂತಹ ಅನಿಮೇಷನ್ ಮತ್ತು ಇನ್ನೂ ಹೆಚ್ಚಿನ ಆಯ್ಕೆಗಳನ್ನು ಈ ಮೂಲಕ ನಿಡುತ್ತಿದೆ. ಆದರೆ, ಆಂಡ್ರಾಯ್ಡ್ ಬಳಕೆದಾರರು ರೀತಿಯ ಸೌಲಭ್ಯವನ್ನು ಯಾವಾಗ ಪಡೆಯಲಿದ್ದಾರೆ ಎಂಬುದರ ಬಗ್ಗೆ ಕಂಪೆನಿ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

Best Mobiles in India

English summary
Netflix has introduced Kids Mystery Box to Android devices. New types of children's content will be available in these features. We have explained how to login to this Kids Mystery Box.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X