ನೆಟ್‌ಫ್ಲಿಕ್ಸ್ ನಲ್ಲಿ ಇತ್ತೀಚೆಗೆ ಘೋಷಿಸಿದ ಪ್ಲ್ಯಾನ್‌ ಕಾಣಿಸುತ್ತಿಲ್ಲವೇ?..ಇಲ್ಲಿದೆ ಕಾರಣ!

|

ಹೌದು, ಕೆಲವು ಬಳಕೆದಾರರು ನೆಟ್‌ಫ್ಲಿಕ್ಸ್‌ಗೆ ಚಂದಾದಾರರಾಗಲು ಪ್ರಯತ್ನಿಸಿದಾಗ ಜಾಹೀರಾತು-ಮುಕ್ತ ಪ್ಲ್ಯಾನ್‌ ಕಂಡು ಬಂದಿಲ್ಲ. ಇದರಿಂದಾಗಿ ಈ ಪ್ಲ್ಯಾನ್‌ ಅನ್ನು ನೆಟ್‌ಫ್ಲಿಕ್ಸ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಬದಿಗೆ ಸರಿಸಿದೆಯಾ ಎಂಬ ಪ್ರಶ್ನೆ ಮೂಡತೊಡಗಿದೆ. ಹಾಗಿದ್ರೆ, ಈ ಜಾಹೀರಾತು-ಮುಕ್ತ ಪ್ಲ್ಯಾನ್‌ ಎಂದರೇನು?, ಇದರ ಚಂದಾದಾರಿಕೆಯಲ್ಲಿ ಏನೆಲ್ಲಾ ವೀಕ್ಷಿಸಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಚಂದಾದಾರ

ಹೌದು, ಕೆಲವು ಬಳಕೆದಾರರು ನೆಟ್‌ಫ್ಲಿಕ್ಸ್‌ಗೆ ಚಂದಾದಾರರಾಗಲು ಪ್ರಯತ್ನಿಸಿದಾಗ ಜಾಹೀರಾತು-ಮುಕ್ತ ಪ್ಲ್ಯಾನ್‌ ಕಂಡು ಬಂದಿಲ್ಲ. ಇದರಿಂದಾಗಿ ಈ ಪ್ಲ್ಯಾನ್‌ ಅನ್ನು ನೆಟ್‌ಫ್ಲಿಕ್ಸ್ ತನ್ನ ಪ್ಲಾಟ್‌ಫಾರ್ಮ್‌ನಿಂದ ಬದಿಗೆ ಸರಿಸಿದೆಯಾ ಎಂಬ ಪ್ರಶ್ನೆ ಮೂಡತೊಡಗಿದೆ. ಹಾಗಿದ್ರೆ, ಈ ಜಾಹೀರಾತು-ಮುಕ್ತ ಪ್ಲ್ಯಾನ್‌ ಎಂದರೇನು?, ಇದರ ಚಂದಾದಾರಿಕೆಯಲ್ಲಿ ಏನೆಲ್ಲಾ ವೀಕ್ಷಿಸಬಹುದು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ

ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ

ನೆಟ್‌ಫ್ಲಿಕ್ಸ್ ಗೆ ಪ್ರವೇಶ ಪಡೆಯಲು ಹಲವಾರು ರೀತಿಯ ಚಂದಾದಾರಿಕೆ ಪ್ಲ್ಯಾನ್‌ಗಳು ಇವೆ. ಅದರಲ್ಲಿ ಜಾಹೀರಾತು-ಮುಕ್ತ ಪ್ಲ್ಯಾನ್‌ ಸಹ ಒಂದು. ಆದರೆ, ಇದನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಚಂದಾದಾರಿಕೆ ವಿಭಾಗದಲ್ಲಿ ಈ ಆಯ್ಕೆ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ಇದು ತಾಂತ್ರಿಕ ಸಮಸ್ಯೆಯೇ ಅಥವಾ ಈ ಪ್ಲ್ಯಾನ್‌ ಏನಾದರೂ ಬದಲಾವಣೆ ಆಗಬಹುದೇ ಎಂಬುದರ ಬಗ್ಗೆ ನೆಟ್‌ಫ್ಲಿಕ್ಸ್‌ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ಕೆಲವು ವಾರಗಳ ಹಿಂದಷ್ಟೇ ಈ ಪ್ಲ್ಯಾನ್‌ ಘೋಷಣೆ ಮಾಡಲಾಗಿತ್ತು

ಕೆಲವು ವಾರಗಳ ಹಿಂದಷ್ಟೇ ಈ ಪ್ಲ್ಯಾನ್‌ ಘೋಷಣೆ ಮಾಡಲಾಗಿತ್ತು

ಪ್ರಮುಖ ವಿಷಯ ಎಂದರೆ ಕೊರೊನಾ ನಂತರ ಹಲವಾರು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಬೆಳೆಯತೊಡಗಿದ ಹಿನ್ನೆಲೆ ಇತರೆ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಸ್ಪರ್ಧೆಗೆ ಇಳಿಯುವುದು ನೆಟ್‌ಫ್ಲಿಕ್ಸ್‌ಗೆ ಅನಿವಾರ್ಯವಾಗಿತ್ತು. ಹೀಗಾಗಿ ಕೆಲವು ವಾರಗಳ ಹಿಂದಷ್ಟೇ ಜಾಹೀರಾತು-ಮುಕ್ತ ಪ್ಲ್ಯಾನ್‌ಘೋಷಣೆ ಮಾಡಿತ್ತು. ಈ ಮೂಲಕ ಹಲವಾರು ಜನರು ಇದಕ್ಕೆ ಚಂದಾದಾರಿಕೆ ಸಹ ಪಡೆದುಕೊಂಡಿದ್ದರು.

ಯಾಕಾಗಿ ಈ ಪ್ಲ್ಯಾನ್‌ ಕಾಣಿಸಿಕೊಳ್ಳುತ್ತಿಲ್ಲ?

ಯಾಕಾಗಿ ಈ ಪ್ಲ್ಯಾನ್‌ ಕಾಣಿಸಿಕೊಳ್ಳುತ್ತಿಲ್ಲ?

ಕೆಲವು ವರದಿಗಳ ಪ್ರಕಾರ ನೆಟ್‌ಫ್ಲಿಕ್ಸ್‌ನಿಂದ ಮತ್ತೆ ಹೊಸದಾಗಿ ಕೆಲವು ಪ್ಲ್ಯಾನ್‌ಗಳನ್ನು ಘೋಷಣೆ ಮಾಡಲಾಗುತ್ತಿದ್ದು, ಅವುಗಳ ಪ್ರಚಾರದ ಉದ್ದೇಶದಿಂದ ಹಾಗೂ ಆ ಹೊಸ ಪ್ಲ್ಯಾನ್‌ಗಳಿಗೆ ಗ್ರಾಹಕರನ್ನು ಚಂದಾದಾರನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದಾಗಿ ಈ ಹಳೆಯ ಜಾಹೀರಾತು-ಮುಕ್ತ ಪ್ಲ್ಯಾನ್‌ ಅನ್ನು ಮರೆಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಬ್ಲಾಗ್‌

ಇನ್ನು ಟೆಕ್ನೋ ಬ್ಲಾಗ್‌ ಪ್ರಕಾರ, ನೆಟ್‌ಫ್ಲಿಕ್ಸ್‌ ವೆಬ್‌ಸೈಟ್‌ನಲ್ಲಿ ಇನ್ನು ಮುಂದೆ ಬೇಸಿಕ್ಸ್‌ ವಿತ್‌ ಆಡ್ಸ್‌, ಸ್ಟ್ಯಾಂಡರ್ಡ್‌ ಹಾಗೂ ಪ್ರೀಮಿಯಂ ಪ್ಲ್ಯಾನ್‌ಗಳು ಮಾತ್ರ ಕಾಣಿಸಿಕೊಳ್ಳುತ್ತವೆ ಎಂದು ವರದಿ ಮಾಡಿದೆ. ಆದರೆ ನೆಟ್‌ಫ್ಲಿಕ್ಸ್ ಈ ಪ್ಯಾಕ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಿಲ್ಲ. ಬದಲಾಗಿ ಸಣ್ಣ ಲಿಂಕ್ ಅಡಿಯಲ್ಲಿ ಮರೆ ಮಾಡಲಾಗಿದೆ. ಬಳಕೆದಾರರು ಈ ಪ್ಯಾಕ್‌ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪುಟದಲ್ಲಿನ ಸಣ್ಣ ಲಿಂಕ್‌ನಲ್ಲಿ ಇರುವುದರಿಂದ ಇದು ಸಾಮಾನ್ಯ ಬಳಕೆದಾರರಿಗೆ ಬೇಗನೆ ಗೋಚರಿಸುವುದಿಲ್ಲ ಎಂದು ಉಲ್ಲೇಖಿಸಿದೆ.

ಈ ಪ್ಯಾಕ್‌ನ ಪ್ರಯೋಜನ ಏನು?

ಈ ಪ್ಯಾಕ್‌ನ ಪ್ರಯೋಜನ ಏನು?

ಬೇಸಿಕ್ ವಿತ್ ಜಾಹೀರಾತು ಪ್ಲ್ಯಾನ್‌ನಲ್ಲಿ 720p/HD ವಿಡಿಯೋಗಳನ್ನು ವೀಕ್ಷಣೆ ಮಾಡುವ ಅವಕಾಶ ನೀಡಲಾಗಿದ್ದು, ಇದರಲ್ಲಿ ಚಲನಚಿತ್ರ ಅಥವಾ ಸೀರಿಸ್‌ ವೀಕ್ಷಣೆ ಮಾಡುವಾಗ ಗಂಟೆಗೆ 4 ರಿಂದ 5 ನಿಮಿಷಗಳ ಜಾಹೀರಾತುಗಳಷ್ಟೇ ಕಾಣಿಸಿಕೊಳ್ಳುತ್ತವೆ. ಈ ಸೌಲಭ್ಯದಿಂದ ಬಳಕೆದಾರರಿಗೆ ಕಡಿಮೆ ಹಣದಲ್ಲಿ ನೆಟ್‌ಫ್ಲಿಕ್ಸ್‌ ಗೆ ಎಂಟ್ರಿಯಾಗಲು ಸಹಕಾರ ನೀಡುತ್ತದೆ. ಹಾಗೆಯೇ ದುಬಾರಿ ಬೆಲೆಯ ಪ್ಯಾಕ್‌ಗಳ ನಡುವೆ ಈ ಹೊಸ ಪ್ಯಾಕ್‌ ಹೊಸ ಬಳಕೆದಾರರನ್ನು ಆಕರ್ಷಿಸಿತ್ತು.

ನೆಟ್‌ಫ್ಲಿಕ್ಸ್

ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ನೆಟ್‌ಫ್ಲಿಕ್ಸ್ ಪ್ರಪಂಚದ ಕೆಲವು ಭಾಗಗಳಲ್ಲಿ ಮಾತ್ರ ಬೇಸಿಕ್ ವಿತ್ ಜಾಹೀರಾತುಗಳ ಪ್ಯಾಕ್‌ ಅನ್ನು ಪ್ರಾರಂಭಿಸಿದ್ದು, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೋ, ಸ್ಪೇನ್, ಯುಕೆ ಮತ್ತು ಯುಎಸ್‌ನಲ್ಲಿನ ಜನರು ಮಾತ್ರ ಇದನ್ನು ಬಳಕೆ ಮಾಡುತ್ತಿದ್ದರು. ಕಾಲಾನಂತರ ಭಾರತದಲ್ಲೂ ಈ ಪ್ಲ್ಯಾನ್‌ ಪರಿಚಯಿಸಲು ಯೋಜಿಸಲಾಗಿತ್ತು. ಆದರೆ, ಈಗಾಗಲೇ ಭಾರತದಲ್ಲಿ 179 ರೂ. ಗಳ ಅಗ್ಗದ ದರದಲ್ಲಿ ಮಾಸಿಕ ಪ್ಯಾಕ್‌ ನೀಡುತ್ತಿದೆ.

Best Mobiles in India

English summary
Netflix may discontinued basic ad-free Pack.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X