ಕೊರೊನಾ ಆತಂಕ; ಈ ಡಿವೈಸ್‌ ಬಳಕೆ ಮೂಲಕ ಕೊರೊನಾದಿಂದ ದೂರ ಇರಿ!

|

ಜಾಗತಿಕವಾಗಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಹಾಗೆಯೇ ಭಾರತದ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್‌ ಕಡ್ಡಾಯ ಮಾಡಲಾಗಿದ್ದು, ಕೊರೊನಾದಿಂದ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಆದರೆ ಸರ್ಕಾರವೇನೋ ಎಚ್ಚರಿಕೆಯಿಂದ ಇರಿ ಎಂದು ಹೇಳಿದೆ. ಆದರೆ, ಆ ಆದೇಶ ಪಾಲಿಸಿದರಷ್ಟೇ ಸಾಲದು ಬದಲಾಗಿ ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಹಲವಾರು ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಈ ಮೂಲಕ ನೀವು ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.

ಕೊರೊನಾ

ಹೌದು, ಕೊರೊನಾ ಏನಾದರೂ ವಕ್ಕರಿಸಿದರೆ ಜನರನ್ನು ಇನ್ನಿಲ್ಲದಂತೆ ಕಾಡುತ್ತದೆ. ಹೊಸ ವರ್ಷದ ಜೊತೆಗೆ ಮತ್ತೆ ಕೊರೊನಾದ ಆತಂಕ ಎಲ್ಲರಲ್ಲೂ ಮನೆಮಾಡಿದ್ದು, ಇದನ್ನು ಪೂರ್ವದಲ್ಲಿಯೇ ಮಟ್ಟಹಾಕಲು ಕೆಲವು ಡಿವೈಸ್‌ಗಳನ್ನು ನಿಮಗೆ ಸೂಚಿಸುತ್ತಿದ್ದೇವೆ. ಈ ಮೂಲಕ ಕೊರೊನಾದಿಂದ ನೀವು ದೂರ ಇರುವುದಲ್ಲದೇ ನಿಮ್ಮ ಕುಟುಂಬದವರನ್ನೂ ಸಹ ಕಾಪಾಡಿಕೊಳ್ಳಬಹುದು. ಹಾಗಿದ್ರೆ ಯಾವೆಲ್ಲಾ ಡಿವೈಸ್‌ಗಳಿಂದ ಏನೆಲ್ಲಾ ಪ್ರಯೋಜನ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪಲ್ಸ್ ಆಕ್ಸಿಮೀಟರ್

ಪಲ್ಸ್ ಆಕ್ಸಿಮೀಟರ್

ರಕ್ತದಲ್ಲಿನ ಆಮ್ಲಜನಕದ ಮಟ್ಟದಲ್ಲಿನ ಕುಸಿತವು ಕೊರೊನಾ ಸೋಂಕಿನ ಸೂಚಕಗಳಲ್ಲಿ ಒಂದಾಗಿದ್ದು, ಪಲ್ಸ್ ಆಕ್ಸಿಮೀಟರ್ SpO2 ಮಟ್ಟವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಈ ಮೂಲಕ ವೈದ್ಯಕೀಯ ಆರೈಕೆಯ ಅಗತ್ಯವಿದೆಯೇ ಎಂದು ತಿಳಿದುಕೊಳ್ಳಬಹುದು. ಇದರ ಬೆಲೆ 500 ರೂ.ಗಳಿಂದ ಆರಂಭವಾಗಿ 2,500 ರೂ. ಗಳ ವರೆಗೂ ಇದೆ.

ರಕ್ತದೊತ್ತಡ ಮಾನಿಟರ್

ರಕ್ತದೊತ್ತಡ ಮಾನಿಟರ್

ಯಾವುದೇ ಆಸ್ಪತ್ರೆಗೆ ಹೋದರೂ ಈಗ ರಕ್ತದ ಒತ್ತಡವನ್ನು ಪರೀಕ್ಷೆ ಮಾಡುತ್ತಾರೆ. ಆದರೆ ನೀವೇ ಈ ಸಂಬಂಧ ಡಿವೈಸ್‌ ಒಂದನ್ನು ಖರೀದಿ ಮಾಡಿದರೆ ಪೂರ್ವದಲ್ಲಿಯೇ ಕೊರೊನಾದಿಂದ ಎಚ್ಚೆತ್ತುಕೊಳ್ಳಬಹುದು. ಇನ್ನು ಸಾಮಾನ್ಯ ರಕ್ತದೊತ್ತಡವು 80-120 mm Hg ವ್ಯಾಪ್ತಿಯಲ್ಲಿರುತ್ತದೆ. ಹಾಗೆಯೇ ಉತ್ತಮ ರಕ್ತದೊತ್ತಡ ಮಾನಿಟರ್‌ಗೆ 2,000 ರೂ. ನಿಂದ 3,000 ರೂ. ಗಳ ಬೆಲೆ ಇರುತ್ತದೆ.

ಐಆರ್ ಥರ್ಮಾಮೀಟರ್

ಐಆರ್ ಥರ್ಮಾಮೀಟರ್

ಕೊರೊನಾ ವಿಷಯದಲ್ಲಿ ಅವಶ್ಯಕವಾದ ಡಿವೈಸ್‌ ಎಂದರೆ ಅದು ಐಆರ್ ಥರ್ಮಾಮೀಟರ್. ಇದರ ಮೂಲಕ ದೇಹದ ಉಷ್ಣತೆಯನ್ನು 1 ರಿಂದ 2 ಇಂಚು ದೂರದಿಂದಲೇ ಅಳೆಯಬಹುದು. ಹೀಗಾಗಿ ನೀವು ಯಾರನ್ನೂ ಸ್ಪರ್ಶಿಸದೆ ಪರೀಕ್ಷೆ ಮಾಡಲಾಗುವುದರಿಂದ ಸೋಂಕಿನ ಹೆಚ್ಚಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಇದರ ಬೆಲೆ 900 ರೂ, ಗಳಿಂದ ಪ್ರಾರಂಭವಾಗುತ್ತವೆ.

ಗ್ಲುಕೋಮೀಟರ್

ಗ್ಲುಕೋಮೀಟರ್

ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಪತ್ತೆಹಚ್ಚಲು ಗ್ಲುಕೋಮೀಟರ್ ಅವಶ್ಯಕ. ಎಲ್ಲರಿಗೂ ಗ್ಲುಕೋಮೀಟರ್ ಅಗತ್ಯವಿರುವುದಿಲ್ಲ. ಆದಾಗ್ಯೂ, ಮಧುಮೇಹ ರೋಗಿಗಳಿಗೆ ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪತ್ತೆಹಚ್ಚಲು ಇದು ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಈ ಡಿವೈಸ್‌ನ ಬೆಲೆ 500 ರೂ. ಗಳಿಂದ ಆರಂಭವಾಗುತ್ತದೆ.

ಆಮ್ಲಜನಕ ಸಾಂದ್ರಕ

ಆಮ್ಲಜನಕ ಸಾಂದ್ರಕ

ಆಮ್ಲಜನಕದ ಸಾಂದ್ರಕವು ನಾವು ಉಸಿರಾಡುವ ಗಾಳಿಯಿಂದ ಸಾರಜನಕ ಮತ್ತು ಇತರ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಆಮ್ಲಜನಕದ ಸಾಂದ್ರಕವನ್ನು ಖರೀದಿಸುವಾಗ ಎಚ್ಚರಿಕೆ ವಹಿಸಿ. ಇದು ಅಮೆಜಾನ್‌ನಲ್ಲಿ ಆಫರ್‌ ಬೆಲೆಯಲ್ಲಿ ಲಭ್ಯವಿದೆ.

ಪೋರ್ಟಬಲ್ ಆಕ್ಸಿಜನ್ ಡಬ್ಬಿ

ಪೋರ್ಟಬಲ್ ಆಕ್ಸಿಜನ್ ಡಬ್ಬಿ

ಪೋರ್ಟಬಲ್ ಆಮ್ಲಜನಕ ಡಬ್ಬಿಯು ತುರ್ತು ಪರಿಸ್ಥಿತಿಯಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆಯುವವರೆಗೆ ಉಸಿರಾಟದ ತೊಂದರೆಯನ್ನು ಪರಿಹರಿಸಿಕೊಳ್ಳಲು ಅತ್ಯಗತ್ಯ ಸಾಧನವಾಗಿದೆ. ಆದರೆ ಇದು ಕೇವಲ ಕೆಲವು ಸಮಯಕ್ಕೆ ಮಾತ್ರ ಬಳಕೆ ಮಾಡಬಹುದಾಗಿದೆ ಎಂಬುದು ನಿಮ್ಮ ಗಮನಕ್ಕಿರಲಿ.

ನೆಬ್ಯುಲೈಜರ್ ಯಂತ್ರ

ನೆಬ್ಯುಲೈಜರ್ ಯಂತ್ರ

ನೆಬ್ಯುಲೈಸರ್ ಯಂತ್ರದ ಮೂಲಕ ತ್ವರಿತವಾಗಿ ಶ್ವಾಸಕೋಶಕ್ಕೆ ಆಮ್ಲಜನಕವನ್ನು ಕಳುಹಿಸಬಹುದಾಗಿದೆ. ಇದು ಸ್ಟೀಮರ್‌ಗಿಂತ ಭಿನ್ನವಾಗಿ ಕೆಲಸ ಮಾಡಲಿದ್ದು, ನೆಬ್ಯುಲೈಜರ್ ಶೀತ ಆವಿಯನ್ನು ನೀಡುತ್ತದೆ. ಈ ಡಿವೈಸ್‌ 1,500 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ.

ಸ್ಟೀಮರ್

ಸ್ಟೀಮರ್

ಮುಖ್ಯವಾಗಿ ಶೀತ ಮತ್ತು ಕೆಮ್ಮನ್ನು ಗುಣಪಡಿಸಲು ಇದನ್ನು ಬಳಕೆ ಮಾಡಲಾಗುತ್ತದೆ. ಸ್ಟೀಮರ್ ಬಿಸಿ ಆವಿಯನ್ನು ನೀಡುವ ಮೂಲಕ ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಈ ಡಿವೈಸ್‌ 400 ರೂ.ಗಳ ಆರಂಭಿಕ ಬೆಲೆಯೊಂದಿಗೆ ಲಭ್ಯವಾಗುತ್ತದೆ.

ಸ್ವಯಂ-ಶುಚಿಗೊಳ್ಳುವ ಮಾಸ್ಕ್‌

ಸ್ವಯಂ-ಶುಚಿಗೊಳ್ಳುವ ಮಾಸ್ಕ್‌

ಈಗಂಗತೂ ಎಲ್ಲಾ ಕಡೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ನೀವು ಸ್ವಯಂ-ಶುಚಿಗೊಳ್ಳುವ ಮಾಸ್ಕ್‌ಗಳನ್ನು ಖರೀದಿ ಮಾಡಿದರೆ ಒಳಿತು. ಯಾಕೆಂದರೆ ಇವು ಬ್ಯಾಕ್ಟೀರಿಯಾ ವಿರೋಧಿ ಲೇಪನದೊಂದಿಗೆ ಪ್ಯಾಕ್ ಆಗಿವೆ. ಇವುಗಳನ್ನು ಮರುಬಳಕೆ ಮಾಡಬಹುದು ಹಾಗೆಯೇ ವೈದ್ಯಕೀಯ ತ್ಯಾಜ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉಸಿರಾಟದ ವ್ಯಾಯಾಮ ಡಿವೈಸ್‌

ಉಸಿರಾಟದ ವ್ಯಾಯಾಮ ಡಿವೈಸ್‌

ಉಸಿರಾಟದ ವ್ಯಾಯಾಮವು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಶ್ವಾಸಕೋಶದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಶ್ವಾಸಕೋಶದ/ಉಸಿರಾಟದ ವ್ಯಾಯಾಮ ಮಾಡುವವರು ರಕ್ತದಲ್ಲಿ ಹಾರ್ಮೋನ್‌ಗಳ ಪರಿಚಲನೆಯನ್ನು ಹೆಚ್ಚಿಸಬಹುದು ಮತ್ತು ಇದು ಹೃದಯ, ಮೆದುಳು ಮತ್ತು ಶ್ವಾಸಕೋಶಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

Best Mobiles in India

English summary
New Covid-19 pandemic ; 10 health gadgets to keep at home.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X