ಜಬ್ರಾ ಎವೋಲ್ವ್ 2 TWS ಅನಾವರಣ; ಒಂದೇ ಸಮಯದಲ್ಲಿ ಎರಡು ಡಿವೈಸ್‌ಗೆ ಕನೆಕ್ಟ್‌ ಆಯ್ಕೆ!

|

ಜಬ್ರಾ (Jabra) ಕಂಪೆನಿಯು ಆಡಿಯೋ ಉಪಕರಣಗಳಲ್ಲಿ ಪರಿಣತಿ ಹೊಂದಿರುವ ಬ್ರಾಂಡ್‌ಗಳಲ್ಲಿ ಇದೂ ಒಂದಾಗಿದೆ. ಪ್ರಸ್ತುತ ಈ ಕಂಪೆನಿ ಆಕರ್ಷಕವಾದ ಹಾಗೂ ವಿವಿಧ ಫೀಚರ್ಸ್‌ ಇರುವ ವಾಯರ್‌ಲೆಸ್‌ ಡಿವೈಸ್‌, ಇಯರ್‌ಬಡ್ಸ್‌ ಹಾಗೂ ಇಯರ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬರುತ್ತಿದೆ. ಇದರ ಭಾಗವಾಗಿಯೇ ಈಗ ಹೊಸ ಜಬ್ರಾ ಎವೋಲ್ವ್ 2 (Jabra Evolve 2 TWS) ಇಯರ್‌ಬಡ್ಸ್‌ಗಳನ್ನು ಅನಾವರಣ ಮಾಡಲಾಗಿದ್ದು, ಈ ಬಡ್ಸ್‌ಗಳನ್ನು ವರ್ಚುವಲ್ ಮೀಟಿಂಗ್ ಉದ್ದೇಶಕ್ಕಾಗಿಯೇ ತಯಾರು ಮಾಡಲಾಗಿದೆ.

ಜಬ್ರಾ ಕಂಪೆನಿ

ಹೌದು, ಜಬ್ರಾ ಕಂಪೆನಿಯ ಈ ಹೊಸ ಜಬ್ರಾ ಎವೋಲ್ವ್ 2 ಇಯರ್‌ಬಡ್ಸ್‌ ಅನ್ನು ಜೂಮ್ ಹಾಗೂ ಮೈಕ್ರೋಸಾಫ್ಟ್ ಟೀಮ್‌ಗಳನ್ನು ಒಳಗೊಂಡಂತೆ ಪ್ರಮುಖ ವರ್ಚುವಲ್ ಮೀಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರವಾಗಿರಿಸಿಕೊಂಡು ರೂಪಿಸಲಾಗಿದೆ. ಈ ಮೂಲಕ ನೀವು ಯಾವುದೇ ಅಡಚಣೆಯ ಶಬ್ಧವಿಲ್ಲದೆ ಆರಾಮವಾಗಿ ಮೀಟಿಂಗ್‌ನಲ್ಲಿ ಭಾಗಿಯಾಗಬಹುದು. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಬೆಲೆಯ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಹೈಬ್ರಿಡ್, ರಿಮೋಟ್ ಕೆಲಸ ಮಾಡುವವರಿಗೆ ಸೂಕ್ತ

ಹೈಬ್ರಿಡ್, ರಿಮೋಟ್ ಕೆಲಸ ಮಾಡುವವರಿಗೆ ಸೂಕ್ತ

ಪ್ರಮುಖವಾಗಿ ಈ ಇಯರ್‌ಬಡ್ಸ್‌ ನಾಯ್ಸ್‌ಕ್ಯಾನ್ಸಲಿಂಗ್‌ ಫೀಚರ್ಸ್‌ ಅನ್ನು ಪಡೆದುಕೊಂಡಿವೆ. ಅದೂ ಸಹ ಉತ್ತಮ ಮಟ್ಟದಲ್ಲಿ. ಈ ಮೂಲಕ ನೀವು ಸ್ಪಷ್ಟವಾದ ಕರೆಯನ್ನು ಕೇಳಲು ಅಥವಾ ಕರೆ ಮಾಡಲು ಈ ತಂತ್ರಜ್ಙಾನ ಸಹಾಯಕವಾಗಲಿದೆ. ಅದರಲ್ಲೂ ಹೈಬ್ರಿಡ್ ಮತ್ತು ರಿಮೋಟ್ ಕೆಲಸ ಮಾಡುವವರಿಗೆ ಇದು ಅತ್ಯಾನುಕೂಲವಾಗಿದ್ದು, ಮೀಟಿಂಗ್‌ಗಳಲ್ಲಿ ಉತ್ತಮ ಅನುಭವ ನೀಡಲಿದೆ.

ಎವೋಲ್ವ್ ಸರಣಿ

ಎವೋಲ್ವ್ ಸರಣಿ

ಇನ್ನು ಈ ಇಯರ್‌ಬಡ್ಸ್‌ಗಳು ಎವೋಲ್ವ್ ಸರಣಿಯ ಸುಧಾರಿತ ಡಿವೈಸ್‌ ಆಗಿದೆ. ಹಾಗೆಯೇ ಜೂಮ್ ಮತ್ತು ಮೈಕ್ರೋಸಾಫ್ಟ್ ಟೀಮ್‌ಗಳಂತೆಯೇ ಇನ್ನೂ ಹತ್ತಾರು ವರ್ಚುವಲ್ ಮೀಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಗುರಿಯಾಗಿಸಿಕೊಂಡು ಈ ಎವಾಲ್ವ್ 2 ಇಯರ್‌ಬಡ್‌ಗಳನ್ನು ಅನಾವರಣ ಮಾಡಲಾಗಿದೆ. ಯಾಕೆಂದರೆ ಇವು ಅಡ್ಡಿಪಡಿಸುವ ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡಲು ಹಾಗೂ ಸ್ಪಷ್ಟವಾದ ಕರೆಗಳನ್ನು ಸಕ್ರಿಯಗೊಳಿಸುವ ಕೆಲಸ ಮಾಡುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ.

ಮಲ್ಟಿಪಾಯಿಂಟ್ ಕನೆಕ್ಟಿವಿಟಿ

ಮಲ್ಟಿಪಾಯಿಂಟ್ ಕನೆಕ್ಟಿವಿಟಿ

ಈ ಜಬ್ರಾ ಎವೋಲ್ವ್ 2 ಇಯರ್‌ಬಡ್ಸ್‌ ಮಲ್ಟಿಸೆನ್ಸರ್ ವಾಯ್ಸ್ ತಂತ್ರಜ್ಞಾನವನ್ನು ನೀಡಲಿದ್ದು, ಇದಕ್ಕಾಗಿ ಹಲವು ಮೈಕ್‌ಗಳ ಆಯ್ಕೆಯನ್ನು ಪಡೆದುಕೊಂಡಿವೆ. ಹಾಗೆಯೇ ಇದರಲ್ಲಿನ ಅಲ್ಗಾರಿದಮ್‌ ಕರೆ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಇದರ ಮತ್ತೊಂದು ಪ್ರಮುಖ ಫೀಚರ್ಸ್‌ ಎಂದರೆ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಆಯ್ಕೆ. ಅಂದರೆ ಒಂದೇ ಸಮಯದಲ್ಲಿ ಎರಡು ವಿಭಿನ್ನ ಡಿವೈಸ್‌ಗಳಿಗೆ ಇದನ್ನು ಸಂಪರ್ಕಿಸಿಕೊಳ್ಳಬಹುದಾಗಿದೆ.

ಅಡ್ಜಸ್ಟಬಲ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್

ಅಡ್ಜಸ್ಟಬಲ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್

ಈ ಇಯರ್‌ಬಡ್ಸ್‌ ಅಡ್ಜಸ್ಟಬಲ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಫೀಚರ್ಸ್‌ ಅನ್ನು ಪಡೆದುಕೊಂಡಿದ್ದು, ವೃತ್ತಿಪರರು ಮೀಟಿಂಗ್‌ನಲ್ಲಿದ್ದಾಗ ಅಥವಾ ಕರೆ ಮಾಡುವಾಗ ಆದ್ಯತೆಗೆ ಅನುಗುಣವಾಗಿ ANC ಅನ್ನು ಕಸ್ಟಮೈಸ್ ಮಾಡಬಹುದಾಗಿದೆ.

ಪಿಸಿಗೆ ಪ್ಲಗ್‌ ಮಾಡಿ

ಪಿಸಿಗೆ ಪ್ಲಗ್‌ ಮಾಡಿ

ಹಾಗೆಯೇ ಈ ಎಲ್ಲಾ ಫೀಚರ್ಸ್‌ ಜೊತೆಗೆ ಈ ಡಿವೈಸ್‌ ಅನ್ನು ನೀವು ಪ್ಲಗ್‌ ಆಂಡ್‌ ಪ್ಲೇ ಮೂಲಕ ಪಿಸಿಗೆ ಪ್ಲಗ್ ಮಾಡಬಹುದು. ಈ ಮೂಲಕ 20 ಮೀಟರ್ ವರೆಗಿನ ವಾಯರ್‌ಲೆಸ್‌ ಶ್ರೇಣಿಯನ್ನು ಇದು ಪಡೆಯಲಿದ್ದು, ನಿಮ್ಮ ಪಿಸಿಯಿಂದ ನೀವು ದೂರ ಹೋದರೂ ಸಂಪರ್ಕ ಕಡಿತಗೊಳ್ಳುವುದಿಲ್ಲ.

ಹೈಬ್ರಿಡ್

ಉದ್ಯೋಗಿಗಳು ಈಗ ಹೈಬ್ರಿಡ್ ಕೆಲಸದಲ್ಲಿ ತೊಡಗಿದ್ದಾರೆ. ಅದರಂತೆ ಸಾಂಕ್ರಾಮಿಕ ಪೂರ್ವದ ಸಮಯಕ್ಕಿಂತ ಈಗ ಹೆಚ್ಚು ಈ ರೀತಿಯ ಕೆಲಸಗಳಿಗೆ ಹೊಂದಿಕೊಂಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಹೊಸ ಕೊಡುಗೆಯಾದ ಜಬ್ರಾ ಎವಾಲ್ವ್2 ಬಡ್ಸ್ ಅನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ ಎಂದು ದಕ್ಷಿಣ ಏಷ್ಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪೀಟರ್ ಜಯಶೀಲನ್ ಮತ್ತು ಜಾಬ್ರಾದ ಸಾರ್ವಜನಿಕ ವಲಯದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಈ ಡಿವೈಸ್‌ನ ಬೆಲೆ

ಭಾರತದಲ್ಲಿ ಈ ಡಿವೈಸ್‌ನ ಬೆಲೆ

ಈ ಹೊಸ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಆರಂಭಿಕ ಕೊಡುಗೆಯಾಗಿ 39,122 ರೂ. ಗಳಿಗೆ ನಿಗದಿ ಮಾಡಲಾಗಿದೆ. ಹಾಗೆಯೇ ಈ ತಿಂಗಳ ಅಂತ್ಯದ ವೇಳೆಗೆ ಜಬ್ರಾ ಹಾಗೂ ಇತರೆ ಆನ್‌ಲೈನ್ ಹಾಗೂ ರಿಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಇಯರ್‌ಬಡ್ಸ್‌ ಕ್ಲಾಸಿಕ್ ಬ್ಲಾಕ್‌ ಬಣ್ಣದಲ್ಲಿ ಕಂಡುಬರುತ್ತದೆ.

Best Mobiles in India

Read more about:
English summary
New earbuds Jabra Evolve 2 TWS launch; convenient for Hybrid, remote workers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X