ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ ಹೊಂದಿರುವ ಫೋನ್‌ಗಳ ಬಗ್ಗೆ ನಿಮಗೆಷ್ಟು ಗೊತ್ತು?.. ಇಲ್ಲಿದೆ ವಿವರ

|

ಕೆಲವು ದಿನಗಳ ಹಿಂದೆಯಷ್ಟೇ ಅನಾವರಗೊಂಡ ಹೊಸ ಸ್ನಾಪ್‌ಡ್ರಾಗನ್ 8 ಜನ್ 2 ಬಗ್ಗೆ ಟೆಕ್‌ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅದರಲ್ಲೂ ನಮ್ಮ ಸ್ಮಾರ್ಟ್‌ಫೋನ್‌ಗಳು ಹೊಸ ಪ್ರೊಸೆಸರ್‌ ಪಡೆಯುತ್ತಿವೆ ಎಂದು ಒಪ್ಪೋ, ಮೊಟೊರೊಲಾ ಹಾಗೂ ಒನ್‌ಪ್ಲಸ್‌ ಸೇರಿದಂತೆ ಇತರೆ ಬ್ರ್ಯಾಂಡ್‌ಗಳು ಮಾಹಿತಿ ನೀಡುತ್ತಾ ಈಗಾಗಲೇ ಗ್ರಾಹಕರನ್ನು ಸೆಳೆಯುವಲ್ಲಿ ಮುಂದಾಗಿವೆ. ಆದರೆ, ಈ ಹೊಸ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ಗೆ ಏನೆಲ್ಲ ಬಲ ನೀಡಲಿದೆ ಎಂಬ ಬಗ್ಗೆ ನಿಮಗೇನಾದರೂ ಗೊತ್ತಾ?

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಗೆ ಪ್ರೊಸೆಸರ್‌ ಬಹು ಮುಖ್ಯ. ಅದರಲ್ಲೂ ಹಲವಾರು ರೀತಿಯ ಪ್ರೊಸೆಸರ್‌ಗಳು ಲಭ್ಯವಿದ್ದು, ಕ್ವಾಲ್ಕಮ್‌ನ ಪ್ರೊಸೆಸರ್‌ಗಳು ಸದ್ಯಕ್ಕೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿವೆ. ಅದರಂತೆ 2023 ರಲ್ಲಿ ಪ್ರೀಮಿಯಂ ಆಂಡ್ರಾಯ್ಡ್ ಫೋನ್‌ಗಳೊಂದಿಗೆ ಬರಬಹುದಾದ ಎಂಟು ಪ್ರಮುಖ ಫೀಚರ್ಸ್‌ಗಳನ್ನ ನಾವು ಇಲ್ಲಿ ವಿವರಿಸಿದ್ದೇವೆ ನೋಡಿ.

ಉತ್ತಮ ಸಿಪಿಯು ಕಾರ್ಯಕ್ಷಮತೆ

ಉತ್ತಮ ಸಿಪಿಯು ಕಾರ್ಯಕ್ಷಮತೆ

ಸ್ನಾಪ್‌ಡ್ರಾಗನ್ 8 ಜನ್ 2 ಒಂದು ಆಕ್ಟಾ ಕೋರ್ ಚಿಪ್ ಆಗಿದ್ದು, ಹೊಸ ಟ್ರೈ-ಕ್ಲಸ್ಟರ್ ಆರ್ಕಿಟೆಕ್ಚರ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಇದರಲ್ಲಿ 1x ಕಾರ್ಟೆಕ್ಸ್ X3 ಪ್ರೈಮ್ ಕೋರ್ 3.2GHz, 3x ಕಾರ್ಟೆಕ್ಸ್ A715 ಪರ್ಫಾರ್ಮೆನ್ಸ್ ಕೋರ್‌ 2.8GHz ಹಾಗೂ 4x ಕೋರ್‌ಟೆಕ್ಸ್‌ A510 ಎಫೀಸೈನ್ಸಿ at 2.8GHz ನಲ್ಲಿ ಕ್ಲಾಕ್ ಮಾಡಲಾಗಿದೆ. ಪ್ರೈಮ್ ಕೋರ್‌ಗಳ ಈ ಹೆಚ್ಚಿನ ಗಡಿಯಾರದ ವೇಗವು ಉತ್ತಮ ಸಿಪಿಯು ಕಾರ್ಯಕ್ಷಮತೆಯನ್ನು ಒದಗಿಸಲಿದೆ.

ಹೊಸ ಅಡ್ರೆನೋ ಜಿಪಿಯು

ಹೊಸ ಅಡ್ರೆನೋ ಜಿಪಿಯು

ಈ ಪ್ರೊಸೆಸರ್‌ ಹೊಸ ಅಡ್ರಿನೊ ಜಿಪಿಯು ಆಯ್ಕೆಯನ್ನು ಪಡೆದುಕೊಂಡಿದ್ದು, 25% ವರೆಗೆ ಹೆಚ್ಚಿನ ಉತ್ತಮ ಗೇಮಿಂಗ್ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ರೇ ಟ್ರೇಸಿಂಗ್ ಬೆಂಬಲ ಇರುವುದರಿಂದ ಉತ್ತಮವಾದ ಹೆಚ್ಚು ವಿವರವಾದ ಗ್ರಾಫಿಕ್ಸ್ ಕ್ವಾಲಿಟಿಗೆ ಬೆಂಬಲ ನೀಡುತ್ತದೆ.

ಡ್ಯುಯಲ್ 5G+5G ಮೋಡ್

ಡ್ಯುಯಲ್ 5G+5G ಮೋಡ್

ಹೊಸ ಪ್ರೊಸೆಸರ್‌ನಲ್ಲಿ ಕಂಡುಬರುವ ಆಕರ್ಷಕ ಫೀಚರ್ಸ್‌ ಎಂದರೆ ಅದುವೇ ಡ್ಯುಯಲ್ ಸಿಮ್ 5G ಬೆಂಬಲ. ಅಂದರೆ, ನೀವು ಎರಡೂ ಸ್ಲಾಟ್‌ನಲ್ಲಿ ಎರಡು 5G ಸಿಮ್‌ಗಳಲ್ಲಿ ಹಾಕಬಹುದಾಗಿದ್ದು, ಎರಡನ್ನೂ ಒಂದೇ ಸಮಯದಲ್ಲಿ ಸಕ್ರಿಯ ಮಾಡಬಹುದಾಗಿದೆ.

ಇತ್ತೀಚಿನ ವೈ-ಫೈ ಆವೃತ್ತಿ

ಇತ್ತೀಚಿನ ವೈ-ಫೈ ಆವೃತ್ತಿ

ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ ನ ವೈ-ಫೈ ಪ್ರಮುಖವಾಗಿ ಏಳು ಮಾನದಂಡಗಳನ್ನು ಹೊಂದಿದೆ. ಅದರಂತೆ ಭವಿಷ್ಯದ ಸ್ಮಾರ್ಟ್‌ಫೋನ್‌ಗಳು ಈ ಫೀಚರ್ಸ್‌ ಅನ್ನು ಪಡೆಯಲಿದ್ದು, ಇದು 320MHz ಚಾನಲ್ ಬ್ಯಾಂಡ್‌ವಿಡ್ತ್ ಅನ್ನು ಬೆಂಬಲಿಸುತ್ತದೆ. ಇದು ವಿಶಾಲವಾದ ಚಾನಲ್ ಮತ್ತು ಉತ್ತಮ ಶ್ರೇಣಿಯನ್ನು ಬೆಂಬಲಿಸುತ್ತದೆ. ಜೊತೆಗೆ 40Gbps ವೇಗ ಇದರಿಂದ ಲಭ್ಯವಾಗಲಿದೆ.

ಡ್ಯುಯಲ್ ಬ್ಲೂಟೂತ್ ಕನೆಕ್ಟಿವಿಟಿ

ಡ್ಯುಯಲ್ ಬ್ಲೂಟೂತ್ ಕನೆಕ್ಟಿವಿಟಿ

ಸ್ನಾಪ್‌ಡ್ರಾಗನ್ 8 ಜನ್ 2 ಡ್ಯುಯಲ್ ಬ್ಲೂಟೂತ್ ತಂತ್ರಜ್ಞಾನವನ್ನು ಹೊಂದಿದ್ದು, ಡಿವೈಸ್‌ಗಳಲ್ಲಿ ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಬ್ಲೂಟೂತ್ ಸಂಪರ್ಕವನ್ನು ಈ ಮೂಲಕ ಪಡೆಯಬಹುದಾಗಿದೆ. ಈ ಮೂಲಕ ಬಳಕೆದಾರರು ಬ್ಲೂಟೂತ್ ಸಾಧನಗಳಿಗೆ ಉತ್ತಮ ಶ್ರೇಣಿಯ ಸಂಪರ್ಕ ಪಡೆಯಬಹುದು.

200MP ವರೆಗಿನ ಸೆನ್ಸರ್‌

200MP ವರೆಗಿನ ಸೆನ್ಸರ್‌

ಈ ಪ್ರೊಸೆಸರ್‌ ಆಯ್ಕೆ ಪಡೆದಿರುವ ಸ್ಮಾರ್ಟ್‌ಫೋನ್‌ಗಳು 200MP ವರೆಗಿನ ಸೆನ್ಸರ್‌ಗೆ ಬಂಬಲ ನೀಡಲಿವೆ. ರಿಯಲ್‌ ಟೈಮ್‌ ಇಮೇಜ್ ಪ್ರೊಸೆಸಿಂಗ್ ಆಯ್ಕೆ ಇದರಿಂದ ಲಭ್ಯವಾಗಲಿದ್ದು, ಚಿಪ್‌ಸೆಟ್ ಕಾಗ್ನಿಟಿವ್ ISP ಆಯ್ಕೆಯನ್ನು ಪಡೆದಿರಲಿದೆ. ಹಾಗೆಯೇ ಈ ಚಿಪ್ ಸ್ಯಾಮ್‌ಸಂಗ್‌ನ 200MP ISOCELL HP3 ಸೆನ್ಸರ್‌ನ ಹೊಸ ಕ್ಯಾಮೆರಾ ಹಾರ್ಡ್‌ವೇರ್‌ಗೂ ಬೆಂಬಲ ನೀಡಲಿದೆ.

ಬಿಲ್ಟ್ ಇನ್‌ ಪ್ರಾದೇಶಿಕ ಆಡಿಯೊ ಹಾಗೂ ಹೆಡ್‌ ಟ್ರ್ಯಾಕಿಂಗ್ ಬೆಂಬಲ

ಬಿಲ್ಟ್ ಇನ್‌ ಪ್ರಾದೇಶಿಕ ಆಡಿಯೊ ಹಾಗೂ ಹೆಡ್‌ ಟ್ರ್ಯಾಕಿಂಗ್ ಬೆಂಬಲ

ಈ ಫೀಚರ್ಸ್‌ ಪ್ರಾದೇಶಿಕ ಆಡಿಯೊ ಹಾಗೂ ಹೆಡ್ ಟ್ರ್ಯಾಕಿಂಗ್‌ಗೆ ಪ್ರಾದೇಶಿಕ ಬೆಂಬಲವನ್ನು ನೀಡಲಿದ್ದು, ಸ್ಮಾರ್ಟ್‌ಫೋನ್‌ಗಳು ಮತ್ತು TWS ಇಯರ್‌ಬಡ್‌ಗಳಲ್ಲಿ ಉತ್ತಮ ಆಡಿಯೋ ಅನುಭವವನ್ನು ಪಡೆಯಬಹುದಾಗಿದೆ.

ಸುಧಾರಿತ AI ಕಾರ್ಯಕ್ಷಮತೆ

ಸುಧಾರಿತ AI ಕಾರ್ಯಕ್ಷಮತೆ

ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಸುಧಾರಿತ AI ಸಂಸ್ಕರಣೆಯನ್ನು ತರುತ್ತವೆ. ಏಕೆಂದರೆ ಈ ಚಿಪ್ ಈಗ ಕಂಪೆನಿಯ ಅತ್ಯಾಧುನಿಕ AI ಎಂಜಿನ್ ಅನ್ನು ಹೊಂದಿದ್ದು, ಬಹು ಭಾಷಾ ಅನುವಾದ ಹಾಗೂ AI ಆಧಾರಿತ ಕ್ಯಾಮೆರಾ ಫೀಚರ್ಸ್‌ಗಳಿಗೆ ಉತ್ತಮ ಬೆಂಬಲ ನೀಡುತ್ತದೆ.

Best Mobiles in India

English summary
There is a lot of discussion in the tech sector about the new Snapdragon 8 Gen 2 processor that was unveiled just a few days ago. Meanwhile, 8 new features available for premium Android phones have been detailed!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X