ನೀವು ಟೆಲಿಗ್ರಾಮ್‌ ಬಳಕೆದಾರರೇ.. ಈ ಹೊಸ ಫೀಚರ್ಸ್‌ ಕಡೆ ಕಣ್ಣಾಯಿಸಿ!

|

ಇನ್‌ಸ್ಟಂಟ್‌ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಾಪ್‌, ಮೆಸೆಂಜರ್‌, ವೈಬರ್‌ ನಂತೆಯೇ ಟೆಲಿಗ್ರಾಮ್‌ ಕೂಡ ಪ್ರಮುಖವಾಗಿದ್ದು, ದೊಡ್ಡ ಪ್ರಮಾಣದ ಫೈಲ್‌ ರವಾನೆಗೆ ಸಹಕಾರಿಯಾಗಲಿದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಈಗಾಗಲೇ ಸಾಕಷ್ಟು ನವೀಕರಣ ಪ್ರಕ್ರಿಯೆಗಳು ಜರುಗಿದ್ದವು. ಇದೀಗ ಹೊಸ ಮತ್ತೆ ಆಕರ್ಷಕ ಫೀಚರ್ಸ್‌ ಅನಾವರಣ ಮಾಡುವ ಮೂಲಕ ಬಳಕೆದಾರರಿಗೆ ಟೆಲಿಗ್ರಾಮ್ ಹ್ಯಾಪಿ ನ್ಯೂಸ್‌ ನೀಡಿದೆ.

ಫೀಚರ್ಸ್‌

ಹೌದು, ಈ ಟೆಲಿಗ್ರಾಮ್‌ ಆಪ್‌ ಫೀಚರ್ಸ್‌ಗೆ ಹೆಚ್ಚು ಮಾರುಹೋಗಿರುವವರು ಭಾರತೀಯರೇ. ಜನವರಿ ಮತ್ತು ಆಗಸ್ಟ್ 2022 ರ ನಡುವೆ ಸರಿಸುಮಾರು 70 ಮಿಲಿಯನ್ ಭಾರತೀಯರು ಈ ಆಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ. ಅದರಂತೆ 24 ಮಿಲಿಯನ್ ಇನ್‌ಸ್ಟಾಲ್‌ನೊಂದಿಗೆ ರಷ್ಯಾ ಎರಡನೇ ಸ್ಥಾನದಲ್ಲಿದ್ದರೆ ಯುಎಸ್‌ನಲ್ಲಿ 20 ಮಿಲಿಯನ್ ಇನ್‌ಸ್ಟಾಲ್‌ ಆಗಿದೆ. ಇಷ್ಟೆಲ್ಲಾ ಜನಪ್ರಿಯತೆ ಪಡೆದಿರುವ ಈ ಆಪ್‌ಗಳ ಹೊಸ ಫೀಚರ್ಸ್‌ಗಳ ಕಡೆಗೂ ಕಣ್ಣಾಯಿಸೋಣ.

ಸೈನ್ ಅಪ್ ಮಾಡಲು ಸಿಮ್‌ ಅಗತ್ಯವಿಲ್ಲ

ಸೈನ್ ಅಪ್ ಮಾಡಲು ಸಿಮ್‌ ಅಗತ್ಯವಿಲ್ಲ

ಇನ್ಮುಂದೆ ನೀವು ಟೆಲಿಗ್ರಾಮ್‌ನಲ್ಲಿ ಸೈನ್ ಅಪ್ ಮಾಡಲು ಯಾವುದೇ ಸಿಮ್ ಕಾರ್ಡ್ ಅಗತ್ಯವಿಲ್ಲ. ನೀವು ಸಿಮ್ ಕಾರ್ಡ್ ಇಲ್ಲದೆ ಟೆಲಿಗ್ರಾಮ್ ಖಾತೆಯನ್ನು ಹೊಂದಬಹುದು ಮತ್ತು ಫ್ರಾಗ್ಮೆಂಟ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ಬ್ಲಾಕ್‌ಚೈನ್-ಚಾಲಿತ ಅನಾಮಧೇಯ ಸಂಖ್ಯೆಗಳನ್ನು ಬಳಸಿಕೊಂಡು ಲಾಗ್ ಇನ್ ಪ್ರಕ್ರಿಯೆ ನಡೆಸಬಹುದಾಗಿದೆ.

ಚಾಟ್‌ಗಳ ಡಿಲೀಟ್‌ ಪ್ರಕ್ರಿಯೆ ಇನ್ನಷ್ಟು ಸುಲಭ

ಚಾಟ್‌ಗಳ ಡಿಲೀಟ್‌ ಪ್ರಕ್ರಿಯೆ ಇನ್ನಷ್ಟು ಸುಲಭ

ಟೆಲಿಗ್ರಾಮ್‌ನಲ್ಲಿ ಈ ಹಿಂದೆ ನೀವೇ ಹಸ್ತಚಾಲಿತಾಗಿ ಸಂದೇಶ ಅಳಿಸಬೇಕಿತ್ತು. ಆದರೆ ಇನ್ಮುಂದೆ ಎಲ್ಲಾ ಹೊಸ ಚಾಟ್‌ಗಳಲ್ಲಿನ ಸಂದೇಶಗಳನ್ನು ಸ್ವಯಂಚಾಲಿತವಾಗಿ ಡಿಲೀಟ್‌ ಮಾಡಲು ಆಟೋ ಡಿಲೀಟ್‌ ಟೈಮರ್‌ ಆಯ್ಕೆ ನೀಡಲಾಗಿದೆ. ಈ ಮೂಲಕ ಆಟೋಮ್ಯಾಟಿಕ್‌ ಆಗಿ ನಿಮಗೆ ಬೇಡವೆನಿಸಿದ ಚಾಟ್‌ಗಳು ಟೆಲಿಗ್ರಾಮ್‌ನಿಂದ ಕಣ್ಮರೆಯಾಗುತ್ತವೆ.

ಗ್ರೂಪ್‌ನಲ್ಲಿ ಹೊಸ ಫೀಚರ್ಸ್

ಗ್ರೂಪ್‌ನಲ್ಲಿ ಹೊಸ ಫೀಚರ್ಸ್

ಗ್ರೂಪ್‌ಗಳಲ್ಲಿ ಟಾಪಿಕ್ಸ್‌ ಸಂಬಂಧ ಹೊಸ ಫೀಚರ್ಸ್‌ ನೀಡಲಾಗಿದೆ. 100 ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರ ಗುಂಪುಗಳಿಗೆ ಟಾಪಿಕ್ಸ್‌ ಫೀಚರ್ಸ್‌ ಲಭ್ಯವಾಗುತ್ತದೆ. ಇದರಲ್ಲಿ ಪಿನ್ ಮಾಡಿದ ಟಾಪಿಕ್ಸ್‌ ಹೊಂದಬಹುದಾಗಿದ್ದು, ಪ್ರತಿ ಟಾಪಿಕ್ಸ್‌ ಅನಿಯಮಿತ ಪಿನ್ ಮಾಡಿದ ಮೆಸೆಜ್‌ಗಳನ್ನು ಬೆಂಬಲಿಸುತ್ತದೆ.

ಸ್ಪ್ಯಾಮ್ ವಂಚನೆಯ ವಿರುದ್ಧ ಸಮರ

ಸ್ಪ್ಯಾಮ್ ವಂಚನೆಯ ವಿರುದ್ಧ ಸಮರ

ಸ್ಪ್ಯಾಮ್, ವಂಚನೆ ವಿರುದ್ಧ ಹೋರಾಡಲು ಹೊಸ 'ಅಗ್ರೆಸಿವ್‌ ಮೋಡ್' ಆಯ್ಕೆಯನ್ನು ನೀಡಲಾಗಿದೆ. ಇದು 200 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಗುಂಪುಗಳ ನಿರ್ವಾಹಕರು ಸ್ವಯಂಚಾಲಿತ ಸ್ಪ್ಯಾಮ್ ಫಿಲ್ಟರ್‌ಗಳಿಗಾಗಿ ಹೊಸ ಅಗ್ರೆಸಿವ್‌ ಮೋಡ್ ಅನ್ನು ಆನ್ ಮಾಡುವ ಮೂಲಕ ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದಾಗಿದೆ.

ತಾತ್ಕಾಲಿಕ QR ಕೋಡ್‌

ತಾತ್ಕಾಲಿಕ QR ಕೋಡ್‌

ನಿಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸಲು ಬಯಸದಿದ್ದರೆ ಫೋನ್‌ ಸಂಖ್ಯೆ ಬದಲಾಗಿ ತಾತ್ಕಾಲಿಕ QR ಕೋಡ್ ರಚಿಸಿಕೊಳ್ಳಬಹುದು. ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಗ್ರೂಪ್‌ಗೆ ಅಥವಾ ನಿಮ್ಮ ಸಂಪರ್ಕಕ್ಕೆ ಅವರು ಸೇರಿಕೊಳ್ಳಬಹುದು.

ಎಮೋಜಿ ಸರ್ಚ್‌ ಆಯ್ಕೆ

ಎಮೋಜಿ ಸರ್ಚ್‌ ಆಯ್ಕೆ

ಎಮೋಜಿ ಹುಡುಕಾಟದ ಫೀಚರ್ಸ್‌ ಅನ್ನು ಐಓಎಸ್‌ ಬಳಕೆದಾರರಿಗೆ ನೀಡಲಾಗಿದೆ. ಐಫೋನ್‌ಗಳಲ್ಲಿ ಟೆಲಿಗ್ರಾಮ್ ಬಳಕೆದಾರರು ಎಮೋಜಿ ಹುಡುಕಾಟದ ಫೀಚರ್ಸ್‌ ಬಳಕೆ ಮಾಡಬಹುದು. ಇನ್ನು ಈಗಾಗಲೇ ಆಂಡ್ರಾಯ್ಡ್‌ನಲ್ಲಿ ಈ ಫೀಚರ್ಸ್‌ ಅನ್ನು ಪರಿಚಯಿಸಲಾಗಿತ್ತು.

ಆಂಡ್ರಾಯ್ಡ್ ಬಳಕೆದಾರರು ಸ್ಟೋರೇಜ್ ಪರಿಶೀಲಿಸಬಹುದು

ಆಂಡ್ರಾಯ್ಡ್ ಬಳಕೆದಾರರು ಸ್ಟೋರೇಜ್ ಪರಿಶೀಲಿಸಬಹುದು

ಆಂಡ್ರಾಯ್ಡ್ ಬಳಕೆದಾರರು ಈಗ ವಿವರವಾದ ಸ್ಟೋರೇಜ್‌ ಸಾಮರ್ಥ್ಯವನ್ನು ಪರಿಶೀಲಿಸಬಹುದು. ಟೆಲಿಗ್ರಾಮ್ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಸ್ಟೋರೇಜ್‌ ಬಳಕೆಯ ಪೇಜ್‌ ಅನ್ನು ಮರುವಿನ್ಯಾಸಗೊಳಿಸಿದ್ದು, ನಿಮ್ಮ ಡಿವೈಸ್‌ನಲ್ಲಿ ಪ್ರತಿ ಚಾಟ್ ಎಷ್ಟು ಸ್ಟೋರೇಜ್‌ ಬಳಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.

ಕಸ್ಟಮ್ ಎಮೋಜಿಗಳು

ಕಸ್ಟಮ್ ಎಮೋಜಿಗಳು

ಟೆಲಿಗ್ರಾಮ್‌ನಲ್ಲಿ ಹೆಚ್ಚು ಕಸ್ಟಮ್ ಎಮೋಜಿಗಳು ಆಯ್ಕೆ ನೀಡಲಾಗಿದೆ. ಈ ಮೂಲಕ 10 ಕಸ್ಟಮ್ ಎಮೋಜಿ ಪ್ಯಾಕ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಿದಂತಾಗಿದೆ. ಆದರೆ ಇವುಗಳು ಟೆಲಿಗ್ರಾಮ್ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ಕಸ್ಟಮೈಸ್ ಎಮೋಜಿ ಪ್ರತಿಕ್ರಿಯೆ

ಕಸ್ಟಮೈಸ್ ಎಮೋಜಿ ಪ್ರತಿಕ್ರಿಯೆ

ಇನ್ನುಮುಂದೆ ಯಾರೊಂದಿಗಾದರೂ ಮೆಸೆಜ್ ಮಾಡುವಾಗ ಈ ಕಸ್ಟಮೈಸ್ ಎಮೋಜಿಗಳನ್ನು ಬಳಕೆ ಮಾಡಿಕೊಂಡು ಪ್ರತಿಕ್ರಿಯೆ ನೀಡಬಹುದು. ಈ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದಾಗಿದೆ.

Best Mobiles in India

English summary
New Telegram features: auto-deletion of chat, No-SIM signup and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X