Just In
Don't Miss
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- News
ರಾಯಚೂರು: ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ, ಕಾಲೇಜು ಪ್ರಾಂಶುಪಾಲರ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ
- Movies
Shrirastu Shubhamasthu: ಭಯದಲ್ಲಿರುವ ಅಭಿಗೆ ಸಮಾಧಾನ ಹೇಳಿದ ಶಾರ್ವರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸ್ಆಪ್ ಕೂಡ ಹ್ಯಾಕ್ ಆಗುತ್ತಿದೆಯೇ?..ಇಸ್ರೇಲ್ ಸೈಬರ್ ಹೇಳುತ್ತಿದೆ ಶಾಕಿಂಗ್ ಸತ್ಯ!!
ಇಷ್ಟು ದಿನ ಫೇಸ್‌ಬುಕ್ ಅನ್ನು ಬೆನ್ನು ಬಿಡದಂತೆ ಕಾಡಿದ್ದ ಹ್ಯಾಕರ್‌ಗಳ ಕಾಟ ಈಗ ವಾಟ್ಸ್ಆಪ್ ಮೇಲೆ ಬಿದ್ದಂತಿದೆ. ಇತ್ತೀಚಿಗಷ್ಟೇ ಫೇಸ್‌ಬುಕ್ ಮೇಲೆ ಹ್ಯಾಕ್ ಆದ ಬೆನ್ನಲ್ಲಿಯೇ ವಾಟ್ಸ್‌ಆಪ್ ಆಪ್ ಅನ್ನು ಕೂಡ ಹ್ಯಾಕ್ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ಹಾಗಾಗಿ, ಈಗ ವಾಟ್ಸ್ಆಪ್ ಕೂಡ ಸೇಫ್ ಅಲ್ಲವೆ? ಎಂಬ ಪ್ರಶ್ನೆಯೊಂದು ಹುಟ್ಟಿದೆ.!
ಹೌದು, ವಾಟ್ಸ್ಆಪ್ನ್ನು ಹ್ಯಾಕ್ ಮಾಡಲಾಗುತ್ತಿರುವ ವಿಷಯ ಮಾಧ್ಯಮಗಳಲ್ಲಿ ಪ್ರಸ್ತಾಪವಾಗುತ್ತಿದ್ದು, ಇಸ್ರೇಲ್ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಾಧಿಕಾರ ಇಸ್ರೇಲ್ ಸರ್ಕಾರಕ್ಕೆ ಈ ಕುರಿತಾದ ಮುನ್ನೆಚ್ಚರಿಕೆ ನೀಡಿದೆ ಎನ್ನಲಾಗಿದೆ. ಇಸ್ರೇಲ್ ರಾಷ್ಟ್ರೀಯ ಸೈಬರ್ ಭದ್ರತಾ ಪ್ರಾಧಿಕಾರವು ಹೊಸ ರೀತಿಯ ವಾಟ್ಸಪ್ ಹ್ಯಾಕಿಂಗ್ನ್ನು ಪತ್ತೆ ಹಚ್ಚಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ZDNet ವರದಿಯ ಪ್ರಕಾರ, ಮೊಬೈಲ್ ಸರ್ವೀಸ್ ಪ್ರೊವೈಡರ್ ಅನ್ನು ಬಳಸಿ ವಾಟ್ಸ್‌ಆಪ್ ಅನ್ನು ಹ್ಯಾಕ್ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಹ್ಯಾಕರ್‌ಗಳು ವಾಯ್ಸ್ಮೇಲ್ನ್ನು ಹೆಚ್ಚಾಗಿ ಬಳಸುತ್ತಿರುವವರನ್ನು ಗುರಿಯಾಗಿಸಿಕೊಂಡಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಹಾಗಾದರೆ, ಏನಿದು ಶಾಕಿಂಗ್ ಸ್ಟೋರಿ? ನಮ್ಮ ಸುರಕ್ಷತೆ ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಇಸ್ರೇಲ್ ಅಧಿಕಾರಿಗಳು ಹೇಳಿದೇನು?
ಇತ್ತೀಚಿನ ದಿನಗಳಲ್ಲಿ ವಾಟ್ಸ್ಆಪ್ ಹ್ಯಾಕಿಂಗ್ ಪ್ರಕ್ರಿಯೆಗಳು ಹೆಚ್ಚಾಗಿವೆಯಂತೆ. ಹೀಗಾಗಿ ಇಸ್ರೇಲ್ನ ಮಾಹಿತಿ ಏಜೆನ್ಸಿ ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದು, ವಾಟ್ಸ್ಆಪ್ ಪಾಸ್ವರ್ಡ್ಗಳನ್ನು ಕಠಿಣಗೊಳಿಸುವ ಮೂಲಕ ಹ್ಯಾಕಿಂಗ್ ಪ್ರಕ್ರಿಯೆಯನ್ನು ತಡೆಗಟ್ಟಲು ಸಾರ್ವಜನಿಕರಿಗೆ ಸೂಚಿಸಿದೆ ಮತ್ತು ಸರ್ಕಾರಕ್ಕೆ ಈ ಕುರಿತಾದ ಮುನ್ನೆಚ್ಚರಿಕೆ ನೀಡಿದೆ ಎಂದು ವರದಿ ಹೇಳಿದೆ.

ವಾಟ್ಸ್ಆಪ್ ಹ್ಯಾಕ್ ಆಗುತ್ತಿದೆಯೇ?
ZDNet ವರದಿಯ ಪ್ರಕಾರ,ಮೊಬೈಲ್ ಸರ್ವೀಸ್ ಪ್ರೊವೈಡರ್ ಅನ್ನು ಬಳಸಿ ವಾಟ್ಸ್‌ಆಪ್ ಅನ್ನು ಹ್ಯಾಕ್ ಮಾಡಲಾಗುತ್ತಿದೆ. ಹ್ಯಾಕರ್‌ಗಳು ವಾಯ್ಸ್ಮೇಲ್ನ್ನು ಹೆಚ್ಚಾಗಿ ಬಳಸುತ್ತಿರುವವರನ್ನು ಗುರಿಯಾಗಿಸಿಕೊಂಡಿದ್ದು, ಯಾರೂ ಡಿಫಾಲ್ಟ್ ಪಾಸ್ವರ್ಡ್ ಬದಲಿಸಿರುವುದಿಲ್ಲವೋ ಅವರೇ ಹ್ಯಾಕರ್ಗಳಿಗೆ ಶಿಕಾರಿಗಳಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹ್ಯಾಕ್ ಆಗುತ್ತಿರುವುದು ಹೇಗೆ?
ವಾಟ್ಸ್ಆಪ್ ಬಳಸುತ್ತಿರುವ ವ್ಯಕ್ತಿಯ ಫೋನ್ ನಂಬರ್ ಕದಿಯುವ ಹ್ಯಾಕರ್‌ಗಳು, ನಂತರ ಆ ನಂಬರ್‌ನಿಂದ ಮತ್ತೊಂದು ಖಾತೆಗೆ ವೆರಿಫೈ ಮಾಡಲು ಪ್ರಯತ್ನಿಸುತ್ತಾನೆ. ಈ ವೇಳೆ, ಹ್ಯಾಕರ್ ತಪ್ಪಾದ ಕೋಡ್ವೊಂದನ್ನು ನಮೂದಿಸುತ್ತಾನೆ. ಹಲವಾರು ತಪ್ಪು ಕೋಡ್ಗಳನ್ನು ನಮೂದಿಸಿ ಬಳಕೆದಾರನಿಗೆ ವಾಟ್ಸ್ಆಪ್ ಮೂಲಕ ವಾಯ್ಸ್ ಮೇಲ್ ಮೂಲಕ ಪಾಸ್ವರ್ಡ್ ಪಡೆಯುತ್ತಾನೆ.

ಮಲಗಿರುವ ವೇಳೆ ಹ್ಯಾಕ್ ಆಗುತ್ತದೆ.!
ವೆರಿಫೈ ಮಾಡಲು ಪ್ರಯತ್ನಿಸುವಾಗ ಹ್ಯಾಕರ್ ತಪ್ಪಾದ ಕೋಡ್ವೊಂದನ್ನು ನಮೂದಿಸುವುದು ಏಕೆಂದರೆ, ಸರಿಯಾದ ಕೋಡ್ ಒತ್ತಿದರೆ ನಿಜವಾದ ಬಳಕೆದಾರನಿಗೆ ಹೋಗಿರುತ್ತದೆ.ಆದರೆ, ಫೋನ್ ಬಳಕೆದಾರನು ಮೊಬೈಲ್ನಿಂದ ದೂರವಿದ್ದಾಗ ಅಥವಾ ಮಲಗಿರುವ ವೇಳೆ ಹ್ಯಾಕರ್‌ಗಳು ವಾಯ್ಸ್ಮೇಲ್ ಮೂಲಕ ಪಾಸ್ವರ್ಡ್ನ್ನು ಸುಲಭವಾಗಿ ಪಡೆದಿರುತ್ತಾರೆ.

ಡಿಫಾಲ್ಟ್ ಪಿನ್ ಹ್ಯಾಕ್
ಹ್ಯಾಕರ್‌ಗಳು ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಡಿಫಾಲ್ಟ್ನಲ್ಲಿರುವ ಬಳಕೆದಾರರ ಖಾತೆಯ ಪಿನ್ಗಳನ್ನು ಹ್ಯಾಕ್ ಮಾಡುತ್ತಾರೆ (ಸಾಮಾನ್ಯವಾಗಿ 0000 ಅಥವಾ 1234 ಪಾಸ್ವರ್ಡ್ ಇರುತ್ತದೆ) ಈ ರೀತಿ ಒಂದು ಬಾರಿ ಪಾಸ್ವರ್ಡ್ ಅನ್ನು ರಿಕವರ್ ಮಾಡುವ ಮೂಲಕ ವಾಟ್ಸ್ಆಪ್ಗಳನ್ನು ಹ್ಯಾಕ್ ಮಾಡಬಹುದಾಗಿದೆ.

ಹ್ಯಾಕ್ ಮಾಡಿದರೆ ಪ್ರಯೋಜನವೇನು?
ಹ್ಯಾಕರ್‌ಗಳು ಈ ರೀತಿಯಾಗಿ ಹ್ಯಾಕ್ ಮಾಡಿದ ಅಕೌಂಟ್ಗಳನ್ನು ಹ್ಯಾಕರ್‌ಗಳು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿದೆ. ಒಂದು ವೇಳೆ ಬಳಕೆದಾರರ ಖಾಸಾಗಿ ಮಾಹಿತಿಗಳು ಏನಾದರೂ ವಾಟ್ಸ್ಆಪ್‌ನಲ್ಲಿ ಸಿಕ್ಕರ ಮತ್ತಷ್ಟು ಸಂಕಷ್ಟವನ್ನು ವಾಟ್ಸ್ಆಪ್ ಬಳಕೆದಾರ ಅನುಭವಿಸಬಹುದು.

ಎಚ್ಚರಿಕೆವಹಿಸುವ ಅವಶ್ಯಕತೆಯಿದೆ.!
ಕೇವಲ ಒಂದು ವಾರದ ಹಿಂದೆಯಷ್ಟೇ ಡಾರ್ಕ್ ವೆಬ್‌ನಲ್ಲಿ ಫೇಸ್‌ಬುಕ್ ಬಳಕೆದಾರರ ಲಾಗಿನ್ ಐಡಿ ಮತ್ತು ಪಾಸ್ವರ್ಡ್ನ್ನು ಖದೀಮರು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತನಿಖಾ ವರದಿಯೊಂದು ತಿಳಿಸಿತ್ತು. ಇದೀಗ ವಾಟ್ಸ್ಆಪ್ ಕೂಡ ಹ್ಯಾಕಿಂಗ್ಗೆ ಒಳಗಾಗುತ್ತಿರುವುದರಿಂದ ಬಳಕೆದಾರ ತನ್ನ ವಾಟ್ಸ್‌ಆಪ್ ಬಗ್ಗೆ ಎಚ್ಚರಿಕೆವಹಿಸಿದರೆ ಒಳ್ಳೆಯದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470