ಹೊಸ ವರ್ಷಕ್ಕೆ ಪ್ರೀತಿಪಾತ್ರರಿಗೆ ಗಿಫ್ಟ್‌ ನೀಡಬೇಕೇ?... ಇಲ್ಲಿದೆ ನೋಡಿ ಲಿಸ್ಟ್‌!

|

ಭಾರತದಲ್ಲಿ ಹೊಸ ವರ್ಷ ಎಂಬುದು ಒಂದು ವಿಶೇಷ ಸಂಗತಿ. ಎಲ್ಲರ ಬಾಳಲ್ಲೂ ಹೊಸತನ ಇರಲಿ ಎನ್ನುವುದೂ ಸಹ ಎಲ್ಲರ ಆಶಯ. ಇದಕ್ಕಾಗಿಯೇ ಪ್ರೀತಿ ಪಾತ್ರರಿಗೆ ಹಾಗೂ ಕುಟುಂಬದವರಿಗೆ ಇಷ್ಟವಾದ ಉಡುಗೊರೆಯನ್ನೂ ಹೊಸ ವರ್ಷ ಹಾಗೂ ಸಂಕ್ರಾಂತಿಗೆ ಕೊಡಲಾಗುತ್ತದೆ. ಇದು ಕೆಲವು ಕಡೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಇದಕ್ಕಾಗಿಯೇ ಕೆಲವು ಇ-ಕಾಮರ್ಸ್‌ ತಾಣಗಳು ನಿಮಗೆ ವೇದಿಕೆ ಒದಗಿಸಿವೆ.

ಹೊಸ ವರ್ಷ

ಹೌದು, ಹೊಸ ವರ್ಷಕ್ಕೆ ನೀವೇನಾದರೂ ಉಡುಗೊರೆ ಕೊಡಬೇಕು ಅದರಲ್ಲೂ ಸ್ಮಾರ್ಟ್ ಡಿವೈಸ್‌ಗಳನ್ನೇ ಕೊಡಬೇಕು ಎಂಬ ಆಲೋಚನೆ ಇದ್ದರೆ ಖಂಡಿತಾ ಈ ಲೇಖನ ಸಹಕಾರಿಯಾಗಲಿದೆ. ಸ್ಮಾರ್ಟ್‌ ಡಿವೈಸ್‌ಗಳನ್ನು ಯಾವಾಗಲು ಬಳಕೆ ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ಸದಾ ಕಾಲ ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ. ಈ ಕಾರಣಕ್ಕೆ ಪ್ರಮುಖ ಇ-ಕಾಮರ್ಸ್‌ ತಾಣದಲ್ಲಿ ಹೆಚ್ಚಿನ ಡಿಸ್ಕೌಂಟ್‌ ಪಡೆದುಕೊಂಡಿರುವ ಡಿವೈಸ್‌ಗಳ ಬಗ್ಗೆ ವಿವರ ನೀಡಿದ್ದೇವೆ ಓದಿರಿ.

ಆಪಲ್‌ ಐಫೋನ್ 14

ಆಪಲ್‌ ಐಫೋನ್ 14

ಹಣ ಎಷ್ಟಾದರೂ ಸರಿ ಪ್ರೀತಿ ಪಾತ್ರರಿಗೆ ಅತ್ಯುತ್ತಮ ಉಡುಗೊರೆ ನೀಡಬೇಕು ಎಂದುಕೊಂಡರೆ ಆಪಲ್‌ ಐಫೋನ್ 14 ಉತ್ತಮವಾಗಿದೆ. ಅದರಲ್ಲೂ ಈ ಡಿವೈಸ್‌ ಅಮೆಜಾನ್‌ನಲ್ಲಿ ಆಫರ್‌ ಪಡೆದುಕೊಂಡಿದ್ದು, 77,490 ರೂ. ಗಳಿಗೆ ಖರೀದಿ ಮಾಡಬಹುದು. ಈ ಫೋನ್ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಆಪಲ್‌ A15 ಬಯೋನಿಕ್ ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಲಿದೆ.

ಆಪಲ್ ವಾಚ್ ಸೀರಿಸ್‌ SE

ಆಪಲ್ ವಾಚ್ ಸೀರಿಸ್‌ SE

ಆಪಲ್ ವಾಚ್ ಸೀರಿಸ್‌ SE ಸಹ ಉಡುಗೊರೆ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಿದೆ. ಅಮೆಜಾನ್‌ನಲ್ಲಿ ಇದು ನಿಮಗೆ 30,900 ರೂ. ಗಳ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಇನ್ನು ಈ ವಾಚ್‌ ದೈನಂದಿನ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲಿದೆ. ಐಫೋನ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಲಾದ ಫಿಟ್‌ನೆಸ್ ಆಪ್‌ನಲ್ಲಿ ಪ್ರಗತಿಯನ್ನು ವಿಶ್ಲೇಷಿಸಲು ಅನುಮತಿಸುತ್ತದೆ. ಜೊತೆಗೆ ತುರ್ತು SOS, ಫಾಲ್ ಡಿಟೆಕ್ಷನ್ ಫೀಚರ್ಸ್‌ ಹೊಂದಿದೆ.

ಒನ್‌ಪ್ಲಸ್ ಬಡ್ಸ್ Z2

ಒನ್‌ಪ್ಲಸ್ ಬಡ್ಸ್ Z2

ಒನ್‌ಪ್ಲಸ್ ಬಡ್ಸ್ Z2 ಅನ್ನು ಕೈಗೆಟಕುವ ದರದಲ್ಲಿ ಖರೀದಿ ಮಾಡಿ ನಿಮ್ಮ ಆತ್ಮೀಯರಿಗೆ ನೀಡಬಹುದು. ಇದನ್ನು ಅಮೆಜಾನ್‌ನಲ್ಲಿ 4,999 ರೂ. ಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬಡ್ಸ್‌ಗಳು 11mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಉತ್ತಮ ಸೌಂಡ್‌ ಕ್ವಾಲಿಟಿ ನೀಡಲಿವೆ. ಹಾಗೆಯೇ ನೀರು ಮತ್ತು ಬೆವರು ನಿರೋಧಕವಾಗಿದ್ದು, ಆಕರ್ಷಕ ಶೈಲಿ ಗಮನ ಸೆಳೆಯುತ್ತದೆ.

 ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ S6 ಲೈಟ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್‌ S6 ಲೈಟ್‌

ನಿಮ್ಮ ಆತ್ಮೀಯರು ಏನಾದರೂ ಪುಸ್ತಕ ಪ್ರಿಯರಾದರೆ ಆಥವಾ ಸಿನಿಮಾ ಪ್ರಿಯರಾದರೆ ಈ ಉಡುಗೊರೆ ನೀಡಬಹುದು. ಇದು ಅಮೆಜಾನ್‌ನಲ್ಲಿ 37,999 ರೂ.ಗಳಲ್ಲಿ ಲಭ್ಯವಿದೆ. ಈ ಡಿವೈಸ್‌ 12.4 ಇಂಚಿನ WQXGA ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 700 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 10,090mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ನಥಿಂಗ್ ಫೋನ್ (1)

ನಥಿಂಗ್ ಫೋನ್ (1)

ನಥಿಂಗ್ ಫೋನ್ (1) ಸಹ ಅತ್ಯುತ್ತಮ ಉಡುಗೊರೆಯಲ್ಲಿ ಒಂದಾಗಿದೆ. ಇದನ್ನು ನೀವು ಫ್ಲಿಪ್‌ಕಾರ್ಟ್‌ನಲ್ಲಿ 27,999 ರೂ.ಗಳಿಗೆ ಖರೀದಿ ಮಾಡಬಹುದು. ಈ ಫೋನ್‌ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 778+ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, 6.55 ಇಂಚಿನ ಫುಲ್‌ HD+ OLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿದ್ದು, ರಿಯರ್‌ನಲ್ಲಿ ಎರಡು 50MP ಸೆನ್ಸರ್‌ ಇರುವುದು ವಿಶೇಷ.

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ವಾಚ್

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ವಾಚ್

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ವಾಚ್‌ಗೆ ಈ ಎರಡೂ ಪ್ರಮುಖ ಇ-ಕಾಮರ್ಸ್‌ ತಾಣದಲ್ಲಿ ಆಕರ್ಷಕ ಬೆಲೆ ನಿಗದಿ ಮಾಡಲಾಗಿದೆ. ಈ ವಾಚ್‌ ಗೂಗಲ್‌ನ ನ ವೇರ್‌ ಓಎಸ್‌ ನಿಂದ ಚಾಲಿತವಾಗುತ್ತದೆ. ಹಾಗೆಯೇ ಸ್ಕ್ರಾಚ್-ನಿರೋಧಕ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ ಆಯ್ಕೆ ಹೊಂದಿದ್ದು, ಆಕರ್ಷಕವಾಗಿದೆ.

ಪೋರ್ಟಬಲ್ ವಾಯರ್‌ಲೆಸ್‌ ಸ್ಪೀಕರ್

ಪೋರ್ಟಬಲ್ ವಾಯರ್‌ಲೆಸ್‌ ಸ್ಪೀಕರ್

ನಿಮ್ಮ ಆತ್ಮೀಯರು ಸಂಗೀತ ಪ್ರಿಯರಾಗಿದ್ದರೆ ಬೋಟ್‌ನ ಸ್ಟೋನ್ 1450 ಪೋರ್ಟಬಲ್ ವಾಯರ್‌ಲೆಸ್ ಸ್ಪೀಕರ್ ಅನ್ನು ಉಡುಗೊರೆಯಾಗಿ ನೀಡಬಹುದು. ಈ ಡಿವೈಸ್‌ ಅಮೆಜಾನ್‌ನಲ್ಲಿ 3,999 ರೂ. ಗಳ ಬೆಲೆ ಹೊಂದಿದ್ದು, 40 ವ್ಯಾಟ್ RMS ಸೌಂಡ್‌ ಫೀಚರ್ಸ್‌ ಆಯ್ಕೆ ಪಡೆದಿದೆ.

ಸೋಲಸ್ ವಿಡಿಯೋ ಡೋರ್ ಫೋನ್

ಸೋಲಸ್ ವಿಡಿಯೋ ಡೋರ್ ಫೋನ್

ಗೋದ್ರೇಜ್ ಸೆಕ್ಯುರಿಟಿ ಸೊಲ್ಯೂಷನ್ಸ್‌ನ ಸೋಲಸ್ ವಿಡಿಯೋ ಡೋರ್ ಫೋನ್ ಅನ್ನು ನೀವು ಉಡುಗೊರೆಯಾಗಿ ನೀಡಿದರೆ ಪಡೆದುಕೊಂಡವರು ತುಂಬಾನೆ ಖುಷಿ ಪಡುತ್ತಾರೆ. ಈ ಡಿವೈಸ್‌ಅನ್ನು ಅನ್ನು6,899 ರೂ. ಗಳಿಗೆ ಖರೀದಿ ಮಾಡಬಹುದು. ಇದು 7 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 120 ಡಿಗ್ರಿಗಳಷ್ಟು ವಿಶಾಲ ಕೋನದ ಪ್ರದೇಶವನ್ನು ಸೆರೆಹಿಡಿಯುತ್ತದೆ.

ಮಲ್ಟಿಕಲರ್ ಸ್ಮಾರ್ಟ್ ಎಲ್ಇಡಿ ಸ್ಟ್ರಿಪ್ ಕಿಟ್

ಮಲ್ಟಿಕಲರ್ ಸ್ಮಾರ್ಟ್ ಎಲ್ಇಡಿ ಸ್ಟ್ರಿಪ್ ಕಿಟ್

ಯಾರಿಗೆ ಉಡುಗೊರೆ ನೀಡಬೇಕು ಎಂದುಕೊಂಡಿದ್ದೀರೋ ಅವರು ಏನಾದರೂ ಹೊಸ ಮನೆಯಲ್ಲಿ ವಾಸವಿದ್ದರೆ ಅಥವಾ ಅವರ ಮನೆಯ ಅಂದವನ್ನು ಹೆಚ್ಚಿಗೆ ಮಾಡಲು ನೀವು ಮುಂದಾದರೆ ಈ ಉಡುಗೊರೆ ಆಯ್ಕೆ ಉತ್ತಮವಾಗಿರಲಿದೆ. ಇದು ಅಮೆಜಾನ್‌ನಲ್ಲಿ 1,999 ರೂ. ಗಳಿಗೆ ಲಭ್ಯವಿದೆ. ಹಾಗೆಯೇ 5 ಮೀಟರ್ ಉದ್ದವನ್ನು ಹೊಂದಿದ್ದು, ಇದು ಅಮೆಜಾನ್‌ ಎಕೋ ಮತ್ತು ಗೂಗಲ್‌ ಅಸಿಸ್ಟೆಂಟ್‌ಗೆ ಬೆಂಬಲ ನೀಡುತ್ತದೆ.

ಮ್ಯಾಗ್ನೆಟಿಕ್ ವಾಯರ್‌ಲೆಸ್‌ ಚಾರ್ಜರ್

ಮ್ಯಾಗ್ನೆಟಿಕ್ ವಾಯರ್‌ಲೆಸ್‌ ಚಾರ್ಜರ್

ಮ್ಯಾಗ್ನೆಟಿಕ್ ವಾಯರ್‌ಲೆಸ್‌ ಚಾರ್ಜರ್ ಒಂದು ವಿಭಿನ್ನ ಹಾಗೂ ಇತ್ತೀಚೆಗೆ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಡಿವೈಸ್‌ ಆಗಿದೆ. ಇದನ್ನು ಅಮೆಜಾನ್‌ನಲ್ಲಿ 1,249ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರಿಂದ ಐಫೋನ್ 13 ಸರಣಿ, ಐಫೋನ್ ಪ್ರೊ ಮ್ಯಾಕ್ಸ್ 13/12/11, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21, S20, ನೋಟ್‌ 10, ಎಡ್ಜ್‌ ನೋಟ್‌ 20 ಅಲ್ಟ್ರಾ, S10, ಮತ್ತು ಏರ್‌ಪಾಡ್ಸ್‌ ಪ್ರೊ ಅನ್ನು ಚಾರ್ಜ್‌ ಮಾಡಬಹುದಾಗಿದೆ.

Best Mobiles in India

English summary
New Year 2023 : 10 top gadgets that you can gift your loved ones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X