ಗೂಗಲ್‌ಗೆ ಅನ್ನು ವಿಭಜಿಸಬೇಕು ಎಂದು ಪಟ್ಟುಹಿಡಿದ ಮಾಧ್ಯಮ ಸಂಸ್ಥೆ!..ಏಕೆ ಗೊತ್ತಾ?

|

ವಿಶ್ವದೆಲ್ಲೆಡೆ ಅಧಿಪತ್ಯ ಸಾಧಿಸಿರುವ ಗೂಗಲ್ ಮೇಲೆ ಮಾಧ್ಯಮ ಸಂಸ್ಥೆಗಳು ತಿರುಗಿಬೀಳುತ್ತಿವೆ. ಇತ್ತೀಚಿಗಷ್ಟೇ ಹಲವು ಮಾಧ್ಯಮ ಸಂಸ್ಥೆಗಳು ಗೂಗಲ್ ಏಕಪಕ್ಷೀಯ ನಿರ್ಧಾರವನ್ನು ಪ್ರತಿಭಟಿಸಿದ ನಂತರ, ಇದೀಗ ಮಾಧ್ಯಮ ಕ್ಷೇತ್ರದ ದೈತ್ಯ ಸಂಸ್ಥೆಗಳಾದ ರೂಪರ್ಟ್ ಮರ್ಡೋಕ್ ಒಡೆತನದ ನ್ಯೂಸ್‌ ಕಾರ್ಪ್ ಮತ್ತು ಗೂಗಲ್‌ ನಡುವಣ ಸಂಘರ್ಷ ತಾರಕಕ್ಕೇರಿದೆ.

ಆನ್‌ಲೈನ್‌ ಸರ್ಚ್ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿ ಗೂಗಲ್‌ ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಮೂಲಕ, ಗ್ರಾಹಕರಿಗೆ, ಪ್ರಕಾಶಕರ ಮತ್ತು ಜಾಹೀರಾತುದಾರ ಹಿತಾಸಕ್ತಿಗೆ ಗೂಗಲ್ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದಕ್ಕೆ ಪರಿಹಾರವಾಗಿ ಆಸ್ಟ್ರೇಲಿಯಾದಲ್ಲಿ ಗೂಗಲ್ ಅನ್ನು ವಿಭಜಿಸಬೇಕಾಗಿ ನ್ಯೂಸ್‌ ಕಾರ್ಪ್ ಸಂಸ್ಥೆ ಕೋರಿದೆ.

ಗೂಗಲ್‌ಗೆ ಅನ್ನು ವಿಭಜಿಸಬೇಕು ಎಂದು ಪಟ್ಟುಹಿಡಿದ ಮಾಧ್ಯಮ ಸಂಸ್ಥೆ!..ಏಕೆ ಗೊತ್ತಾ?

ಈ ಬಗ್ಗೆ ಆಸ್ಟ್ರೇಲಿಯಾದ ಪ್ರಾಧಿಕಾರಕ್ಕೆ ನ್ಯೂಸ್‌ ಕಾರ್ಪ್ ದೂರು ಸಲ್ಲಿಸಿದ್ದು, ಕಾನೂನು ಬಾಹಿರವಾಗಿ ಆನ್‌ಲೈನ್‌ ಮತ್ತು ತಂತ್ರಜ್ಞಾನ ಸೇವೆಗಳಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿ ತನ್ನ ಏಕಸ್ವಾಮ್ಯವನ್ನು ಗೂಗಲ್ ಕಂಪೆನಿ ದುರುಪಯೋಗಪಡಿಸಿಕೊಳ್ಳುತ್ತಿರುವದರಿಂದ ಆಸ್ಟ್ರೇಲಿಯಾದಲ್ಲಿನ ಗೂಗಲ್‌ ಕಂಪನಿಯನ್ನು ವಿಭಜಿಸಬೇಕು ಎಂದು ನ್ಯೂಸ್‌ ಕಾರ್ಪ್ ಪ್ರತಿಪಾದಿಸಿದೆ.

ಕಳೆದ ವಾರ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ಎಲಿಜೆಬೆತ್ ವಾರ್ರೆನ್ ಸಹ ಅಮೆಜಾನ್‌, ಗೂಗಲ್‌, ಫೇಸ್‌ಬುಕ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಈ ಮೂರು ಕಂಪನಿಗಳು ಸಮಾಜದಲ್ಲಿ ಹಿಡಿತ ಸಾಧಿಸುತ್ತಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಾದವನ್ನೇ ಮುಂದಿಟ್ಟುಕೊಂಡು ನ್ಯೂಸ್‌ ಕಾರ್ಪ್ ಹೋರಾಟಕ್ಕಿಳಿದಿದೆ.

ಗೂಗಲ್‌ಗೆ ಅನ್ನು ವಿಭಜಿಸಬೇಕು ಎಂದು ಪಟ್ಟುಹಿಡಿದ ಮಾಧ್ಯಮ ಸಂಸ್ಥೆ!..ಏಕೆ ಗೊತ್ತಾ?

ರೂಪರ್ಟ್ ಮರ್ಡೋಕ್ ಒಡೆತನದ ಆಸ್ಟ್ರೇಲಿಯಾ ಕಂಪನಿ ನ್ಯೂಸ್‌ ಕಾರ್ಪ್ ಬ್ರಿಟನ್‌ನ ನ್ಯೂಸ್‌ ಕಾರ್ಪ್ ಅಂಗ ಸಂಸ್ಥೆಯಾಗಿದ್ದು, ವಾಲ್‌ಸ್ಟ್ರೀಟ್‌ ಜರ್ನಲ್‌, ಫಾಕ್ಸ್‌ ನ್ಯೂಸ್‌ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳನ್ನು ಹಲವು ದೇಶಗಳಲ್ಲಿ ಇದು ಹೊಂದಿದೆ. ಷೇರು ವಿಕ್ರಯ ಗಂಭೀರವಾದ ಕ್ರಮ. ಆದರೆ, ಗೂಗಲ್‌ ವಿಷಯದಲ್ಲಿ ಇದು ಅಗತ್ಯವಾಗಿದೆ ಎಂದು ಸಂಸ್ಥೆ ಹೇಳಿದೆ.

Best Mobiles in India

English summary
The Australian arm of Rupert Murdoch’s News Corp has called on the country’s competition regulator to break up Google. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X